POLICE BHAVAN KALABURAGI

POLICE BHAVAN KALABURAGI

31 March 2012

GULBARGA DIST REPORTED CRIME

ಕಳ್ಳತನ ಪ್ರಕರಣ:

ಅಶೋಕ ನಗರ ಪೊಲೀಸ್ ಠಾಣೆ: ಶ್ರೀ ನಾಗಣ್ಣ ತಂದೆ ಬಸವಂತರಾವ ಬಿರಾದಾರ ಸಾ: ಕವಲಗಾ(ಕೆ) ತಾ||ಗುಲಬರ್ಗಾರವರು ನಾವು ದಿನಾಂಕ 28/03/2012 ರಂದು ನನ್ನ ಅಳಿಯನ ಮದುವೆ ಕಾರ್ಯಕ್ರಮಕ್ಕಾಗಿ ಗುಲಬರ್ಗಾದ ಅಪ್ಪಾಸಾಬ ಬಿರಾದಾರ ಕರುಣೇಶ್ವರ ನಗರ ಗುಲಬರ್ಗಾಕ್ಕೆ ಬಂದಿದ್ದು, ಮಧ್ಯರಾತ್ರಿ 12 ಗಂಟೆಯವರೆಗೆ ಮದುವೆ ಕಾರ್ಯಕ್ರಮದ ಕೆಲಸವನ್ನು ಮಾಡಿ ಮನೆಯಲ್ಲಿ ಹೆಣ್ಣುಮಕ್ಕಳು ಇರುವುದ್ದರಿಂದ ಮನೆಯ ಮಾಳಿಗೆಯ ಮೇಲೆ ಮಲಗುವಾಗ ನನ್ನ ಪ್ಯಾಂಟ ಶರ್ಟ ಬಿಚ್ಚಿ ಲುಂಗಿ ಹಾಕಿಕೊಂಡು ಪ್ಯಾಂಟಶರ್ಟ ತೆಲೆ ದಿಂಬು ಇಟ್ಟುಕೊಂಡಿರುತ್ತೆನೆ. ದಿನಾಂಕ 29/03/2012 ರಂದು ಬೆಳಗಿನ ಜಾವ 4 ಗಂಟೆಗೆ ನನ್ನ ಹೆಂಡತಿ ಬಂದು ಎಬ್ಬಿಸಿದಾಗ ನನ್ನ ಪ್ಯಾಂಟ ಶರ್ಟ ಇರಲಿಲ್ಲ. ಅದರಲ್ಲಿಟ್ಟಿದ 3 ತೊಲೆ ಬಂಗಾರದ ಮಂಗಳಸೂತ್ರ ಅ:ಕಿ 75000/- ರೂ , ನಗದು ಹಣ 2000/- ರೂ ಮತ್ತು ಒಂದು ನೊಕಿಯಾ ಮೊಬೈಲ ಫೋನ ಸೀಮ ನಂ. 9972868832 ಅ:ಕಿ:500 ರೂ ನೇದ್ದವುಗಳನ್ನು ಯಾರೋ ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ. ನನ್ನ ಅಳಿಯನ ಮದುವೆ ಕಾರ್ಯಕ್ರಮ ಮುಗಿಸಿಕೊಂಡು ಬರಲು ದೂರು ಕೊಡುವದಕ್ಕೆ ತಡವಾಗಿರುತ್ತದೆ. ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ:27/2012 ಕಲಂ. 457, 380 ಐಪಿಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.

GULBARGA DIST REPORTED CRIMES

ಹಲ್ಲೆ ಪ್ರಕರಣ:
ಮಾದನ ಹಿಪ್ಪರಗಾ ಪೊಲೀಸ್ ಠಾಣೆ :
ಶ್ರೀ.ಲಕ್ಷ್ಮಣ ತಂದೆ ಅಣ್ಣಪ್ಪ ತಳಕೇರಿ ಸಾ:ಭೀಮಪೂರ ರವರು ನಾನು ಸುಮಾರು 4 ತಿಂಗಳ ಹಿಂದೆ ಹೊಲದ ಮಾಲಿಕರಾದ ಆಣ್ಣಪ್ಪ ತಂದೆ ಬಸವಂತಪ್ಪ ಶಹಾಪೂರೆ ಇವರಲ್ಲಿ ದುಡಿಯಲು ಇದ್ದಾಗ ನಮ್ಮ ಗ್ರಾಮದ ಜಾಫರ್ ಅಲಿ ತಂದೆ ಮುಕ್ತುಂಸಾಬ ಸಿಕ್ಕಲಗಾರ ಇತನು ನೇಗಿಲು ಹೊಡೆವುವ ಪಾಳಾ ತಗೆದುಕೊಂಡು ಹೋಗಿರುತ್ತಾನೆ . ದಿನಾಂಕ; 30/03/2012 ರಂದು ರಾತ್ರಿ 8 ಗಂಟೆಗೆ ಸುಮಾರಿಗೆ ನಾನು ಜಾಪರ ಅಲಿ ರವರ ಮನೆಗೆ ಹೋಗಿ ತೆಗೆದುಕೊಂಡು ಹೋದ ಪಾಳವನ್ನು ಕೂಡು ಅಂತಾ ಕೇಳಿದಕ್ಕೆ ಅವನು ಒಮ್ಮಲೆ ಸಿಟ್ಟಿಗೆ ಬಂದು ಎದೆಯ ಮೇಲಿನ ಅಂಗಿ ಹಿಡಿದು, ಕೈಯಿಂದ ಕಪಾಳದ ಮೇಲೆ ಹೊಡೆದು ಅವಾಚ್ಯ ಶಬ್ದಗಳಿಂದ ಬೈದು ಅಲ್ಲಿಯೆ ಬಿದ್ದ ಚೂಪು ಕಲ್ಲು ತಗೆದುಕೊಂಡು ನನ್ನ ತಲೆಯ ಮದ್ಯೆ ಬಾಗದಲ್ಲಿ ಹೊಡೆದಿದ್ದರಿಂದ ರಕ್ತಗಾಯ ವಾಗಿರುತ್ತದೆ, ಮತ್ತು ಜಾತಿ ನಿಂದನೆ ಮಾಡಿರುತ್ತಾನೆ. ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ 12/2012 ಕಲಂ 323,324,341, 504, 506 ಐಪಿಸಿ ಮತ್ತು 3 (1)(10) ಎಸ್,ಸಿ,ಎಸ್,ಟಿ ಎಕ್ಟ 1989 ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.

30 March 2012

GULBARGA DIST REPORTED CRIMES

ಆಳಂದ ಪೊಲೀಸ್ ರಿಂದ ಕೊಲೆ ಕೇಸಿನ ಆರೋಪಿಗಳ ಬಂಧನ:
ಆಳಂದ ಪೊಲೀಸ್ ಠಾಣೆ ಹದ್ದಿಯ ಪೈಕಿ ಹೊದಲೂರ ಗ್ರಾಮದ ಕಬ್ಬಿನ ಗದ್ದೆಯಲ್ಲಿ ಒಬ್ಬ ಅನಾಮದೇಯ 30 ವರ್ಷ ವಯಸ್ಸಿನ ಮನುಷ್ಯನನ್ನು ಕೊಲೆ ಮಾಡಿ ಬಿಸಾಡಿದ್ದು, ಈ ಪ್ರಕರಣ ತನಿಖೆ ಕುರಿತು ಜಿ.ಎಸ್. ಉಡಗಿ ಸಿಪಿಐ ಆಳಂದ ಇವರು ತನಿಖೆಯನ್ನು ಕೈಗೊಂಡಿದ್ದು, ಮೃತನಾದ ಭೀಮಾಶಂಕರ ತಂದೆ ಗುರುಲಿಂಗಪ್ಪ ಗಂಟೆ ಸಾ: ದರ್ಗಾ ಶಿರೂರ ಅಂತಾ ಗೊತ್ತಾಗಿದ್ದು, ಡಿ.ಎಸ.ಪಿ ಆಳಂದ ಎಸ್. ಬಿ. ಸಾಂಭ ರವರ ಮಾರ್ಗದರ್ಶನದಲ್ಲಿ ಒಂದು ತನಿಖಾ ತಂಡ ರಚಿಸಿದ್ದು, ಅದರಲ್ಲಿ ವಿಜಯಕುಮಾರ ಪಿ.ಎಸ್.ಐ ಆಳಂದ, ಮೈನೋದ್ದಿನ ಹೆಚ.ಸಿ. 134, ಚಂದ್ರಶೇಖರ, ಮಹಿಬೂಬಶೇಖ ಸಿಪಿಸಿ ರವರೆಲ್ಲ ಮುಂಬೈಯಲ್ಲಿರುವ ಗಂಗಾರಾಮ ಚವ್ಹಾಣ ಸಾ: ಮೋಘಾ, ಮತ್ತು ಸುನೀಲ ಕಾಳೆ ಸಾ: ರಾಜವಾಳ, ಇವರಿಬ್ಬರನ್ನು ದಸ್ತಗಿರಿ ಮಾಡಿ ಕೊಲೆ ಮಾಡಲು ಉಪಯೋಗಿಸಿದ ಆಯುಧಗಳನ್ನು ವಶಪಡಿಸಿಕೊಂಡಿರುತ್ತಾರೆ.ಆರೋಪಿತರು ಮೃತ ಭೀಮಾಶಂಕರ ಇವರಿಗೆ 20 ಸಾವಿರ ರೂಪಾಯಿ ಕೊಡುವುದು ಇದ್ದು, ಹಣ ಕೊಡುತ್ತೇವೆ ಎಂದು ಹೇಳಿ ಆಳಂದ ಪಟ್ಟಣಕ್ಕೆ ಕರೆಯಿಸಿ, ಭೀಮಾಶಂಕರ ಇವನನ್ನು ಕಲ್ಲಿನಿಂದ ಹೊಡೆದು ಕೊಲೆ ಮಾಡಿ ಗೊಣಿ ಚೀಲದಲ್ಲಿ ಹಾಕಿ ಕೊಲೆ ಮುಚ್ಚಿ ಹಾಕುವ ಉದ್ದೇಶದಿಂದ ಹೊದಲೂರ ಗ್ರಾಮದ ಕಬ್ಬಿನ ಗದ್ದೆಯಲ್ಲಿ ಒಗೆದು ಬಂದಿದ್ದರು. ಕೊಲೆ ಆರೋಪಿಗಳನ್ನು ಪತ್ತೆ ಮಾಡಿದಕ್ಕೆ ಅಧಿಕಾರಿ ಮತ್ತು ಸಿಬ್ಬಂದಿಯವರಿಗೆ ಇಲಾಖಾ ವತಿಯಿಂದ ಬಹುಮಾನವನ್ನು ಘೋಸಿಸಲಾಗಿದೆ.
ನಿಂಬರ್ಗಾ ಪೊಲೀಸ್ ಠಾಣೆ ಗುನ್ನೆ ನಂ: 23/2012 ನೇದ್ದರ ರ ಕೋಲೆ ಆರೋಪಿ ಬಂದನ: ನಿಂಬರ್ಗಾ ಠಾಣೆ ಗುನ್ನೆ ನಂ. 23/2012 ಕಲಂ. 302, 201 ಐಪಿಸಿ ಕೇಸಿನಲ್ಲಿ ಭೀಮರಾಯ ತಂದೆ ವೀರಭದ್ರಪ್ಪ ಮಲಶೆಟ್ಟಿ ಇತನಿಗೆ ದಿನಾಂಕ:26/3/2012 ರಂದು ರಾತ್ರಿ ಕೊಲೆ ಮಾಡಲಾಗಿದ್ದು, ಸದರಿಯವನಿಗೆ ಅದೇ ಊರಿನ ಭೀಮರಾಯ ಪೊಲೀಸ ಪಾಟೀಲ ಇವರ ಎರಡನೆಯ ಹೆಂಡತಿಯೊಂದಿಗೆ ಅನೈತಿಕ ಸಂಬಂಧ ಹೊಂದಿದ್ದಾನೆಂದು ಸಂಶಯಪಟ್ಟು ಸದರಿ ಭೀಮರಾಯ ಪೊಲೀಸ್ ಪಾಟೀಲ ತನ್ನ ಸಂಗಡಿಗರೊಂದಿಗೆ ಹರಿತವಾದ ಆಯುಧದಿಂದ ಹೊಡೆದು ಕೊಲೆ ಮಾಡಿದ್ದಾನೆಂದು ದಸ್ತಗಿರಿ ಮಾಡಲಾಗಿದೆ, ನಿಂಬರ್ಗಾ ಪೊಲೀಸ್ ಠಾಣೆಯ ಪಿ.ಎಸ.ಐ ಎಸ್.ಎಸ್. ದೊಡ್ಡಮನಿ ಹಾಗು ಅವರ ಸಿಬ್ಬಂದಿ ವರ್ಗದವರಿಗೆ ಮತ್ತು ಸಿಪಿಐ ಆಳಂದ ಜಿ.ಎಸ್. ಉಡಗಿ ರವರಿಗೆ ಇಲಾಖಾ ವತಿಯಿಂದ ಶ್ಲಾಘಿಸಲಾಗಿದೆ.
ಅಪಘಾತ ಪ್ರಕರಣ:
ಹೆಚ್ಚುವರಿ ಸಂಚಾರಿ ಪೊಲೀಸ್ ಠಾಣೆ:
ಶ್ರೀ ಮಹಮದ ವಾಸಿಮ ಆಕ್ರಮ ತಂದೆ ಶೇಖ ಅಲಿ ಸಾ ರಹಿಮತ ನಗರ ಮಜೀದ ಹತ್ತಿರ ಹಳೆ ಜೇವರ್ಗಿ ರಸ್ತೆ ಗುಲಬರ್ಗಾ ರವರು ನಾನು ದಿನಾಂಕ: 30-03-2012 ರಂದು ಮಧ್ಯರಾತ್ರಿ 00=30 ಗಂಟೆಯ ಸುಮಾರಿಗೆ ಹಳೆ ಜೇವರ್ಗಿ ಅಂಡರ ಬ್ರೀಜ ದಿಂದ ಹನುಮಾನ ತಾಂಡಾ ರೋಡಿನಲ್ಲಿ ಬರುವ ಆರ್ಮಿ ಕ್ವಾಟರ್ಸ ಹತ್ತಿರ ನನ್ನ ಮೋಟಾರ ಸೈಕಲ ನಂ: ಕೆಎ 32 ವಿ-6897 ನೇದ್ದರ ಮೇಲೆ ಹೋಗುತ್ತಿದ್ದಾಗ ಎದುರಿನಿಂದ ಒಬ್ಬ ಮೋಟಾರ ಸೈಕಲ್ ಸವಾರನು ತನ್ನ ಮೋಟಾರ ಸೈಕಲನ್ನು ಅತೀವೇಗವಾಗಿ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ಡಿಕ್ಕಿ ಪಡಿಸಿ ಗಾಯ ಗೊಳಿಸಿ ಮೋಟಾರ ಸೈಕಲ್ ಸಮೇತ ಹೊರಟು ಹೋಗಿರುತ್ತಾನೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 38/2012 ಕಲಂ 279, 337, ಐಪಿಸಿ ಸಂಗಡ 187 ಐಎಮವಿ ಆಕ್ಟ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.

GULBARGA DIST REPORTED CRIME

ಜೂಜಾಟ ಪ್ರಕರಣ:
ಗುಲಬರ್ಗಾ ಗ್ರಾಮೀಣ ಠಾಣೆ:
ದಿನಾಂಕ 29-03-12 ರಂದು ರಾತ್ರಿ 7-30 ಗಂಟೆ ಸುಮಾರಿಗೆ ಮಾನ್ಯ ಎಸ್.ಪಿ. ಗುಲಬರ್ಗಾ ರವರ ಆದೇಶ ಪ್ರಕಾರ ನಗರದ ಹಮಾಲ ಕಾಲೋನಿ ಸುಲ್ತಾನಪೂರ ರೋಡಿಗೆ ಇರುವ ಬಾಬುರಾವ ಜಾಧವ ಶೆಡ್ಡನಲ್ಲಿ ಶ್ರೀ ಚೇತನಕುಮಾರ ಪ್ರೊ. ಐ.ಪಿ.ಎಸ್. ರವರು ಮತ್ತು ಶ್ರೀ ಅಸ್ಲಂ ಬಾಷಾ ಪೊಲೀಸ ಇನ್ಸಪೆಕ್ಟರ ಡಿ.ಎಸ್.ಬಿ.ಘಟಕ ಗುಲಬರ್ಗಾರವರು ಮತ್ತು ಪಂಚ ಜನರು ಹಾಗೂ ಸಿಬ್ಬಂದಿ ಜನರು ಕೂಡಿಕೊಂಡು ದಾಳಿ ಮಾಡಿ ಅಂದರ ಬಾಹರ ಇಸ್ಪೇಟ ಜೂಜಾಟ್ ಆಡುತ್ತಿದ್ದ ಶ್ರೀಶೈಲ ತಂದೆ ರಾಮಚಂದ್ರಪ್ಪ ಗುಬ್ಬಿ ಸಾ ಕಪನೂರ ಸಂಗಡ ಇನ್ನೂ 37 ಜನರು ಒಟ್ಟು 38 ಜನರನ್ನು ವಶಕ್ಕೆ ತೆಗೆದುಕೊಂಡು ಅವರಿಂದ ಇಸ್ಪೇಟ ಜೂಜಾಟಕ್ಕೆ ಸಂಬಂಧಿಸಿದ ನಗದು ಹಣ 1, 61, 723-50 ಪೈಸೆ 52 ಇಸ್ಪೇಟ ಎಲೆಗಳು ಹಾಗೂ ನಾಲ್ಕು ಪ್ಲಾಸ್ಟಿಕ ಟೇಬಲಗಳನ್ನು ಜಪ್ತಿ ಮಾಡಿಕೊಂಡಿರುತ್ತಾರೆ, ಜಪ್ತಿ ಪಂಚನಾಮೆ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 98/2012 ಕಲಂ 79, 80 ಕೆ.ಪಿ. ಆಕ್ಟ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.

29 March 2012

GULBARGA DIST REPORTED CRIMES

ಮನೆ ಕಳ್ಳತನ ಮಾಡಿದ ಕಳ್ಳರ ಬಂದನ

ಗುಲಬರ್ಗಾ ನಗರದ ಎಮ್.ಆರ್.ಎಮ್.ಸಿ ಎದುರುಗಡೆ ಸುಂದರ ನಗರ ಬಡಾವಣೆಯ ಮನೆ ನಂ:8-611/1, ಸುಂದರ ನಗರ ಬಢಾವಣೆಯ ಮನೆ ನಂ:2-811/6ಎ ಸುಂದರ ನಗರ ಢೋರ ಗಲ್ಲಿ ಗುಲಬರ್ಗಾ, ನಗರ ಆರೋಗ್ಯ ಕೇಂದ್ರ ಮಕ್ತಂಪೂರ ಗುಲಬರ್ಗಾದಲ್ಲಿ ಕಳ್ಳತನವಾಗಿದ್ದರಿಂದ ಬ್ರಹ್ಮಪೂರ ಪೊಲೀಸ ಠಾಣೆ ಗುನ್ನೆ ನಂ: ಗುನ್ನೆ ನಂ: 294/10 ಕಲಂ: 454, 457, 380 ಐ.ಪಿ.ಸಿ, ಗುನ್ನೆ ನಂ: 224/11 ಕಲಂ: 457, 380 ಐ.ಪಿ.ಸಿ, 208/11 ಕಲಂ: 457, 380 ಐ.ಪಿ.ಸಿ ಮತ್ತು ಗುನ್ನೆ ನಂ: 184/11 ಕಲಂ: 457 380 ಐ.ಪಿ.ಸಿ ಪ್ರಕರಣಗಳು ದಾಖಲಾಗಿರುತ್ತವೆ. ತನಿಖೆಯ ಕಾಲಕ್ಕೆ ಮಾನ್ಯ ಪ್ರವೀಣ ಮಧುಕರ ಪವಾರ ಐ.ಪಿ.ಎಸ್ ಎಸ್.ಪಿ ಗುಲಬರ್ಗಾ, ಮಾನ್ಯ ಕಾಶಿನಾಥ ತಳಕೇರಿ ಹೆಚ್ಚುವರಿ ಎಸ್.ಪಿ ಗುಲಬರ್ಗಾ ಹಾಗೂ ಮಾನ್ಯ ಭೂಷಣ ಜಿ ಬೊರಸೆ ಐ.ಪಿ.ಎಸ್ ಸಹಾಯಕ ಪೊಲೀಸ ಅಧೀಕ್ಷಕರು () ಉಪ-ವಿಭಾಗ ಗುಲಬರ್ಗಾರವರ ಮಾರ್ಗದರ್ಶನದಲ್ಲಿ ಶರಣಬಸವೇಶ್ವರ ಪಿ.ಐ ಬ್ರಹ್ಮಪೂರ ಪೊಲೀಸ ಠಾಣೆ ರವರು, ಅಪರಾಧ ವಿಭಾಗದ ಸಿಬ್ಬಂದಿಯವರಾದ ಮಾರುತಿ ಎ.ಎಸ್.ಐ, ಬಸವರಾಜ ಹೆಚ್.ಸಿ, ಗಜೇಂದ್ರ, ಮಹಾಂತೇಶ, ರಾಜಕುಮಾರ, ಸುಧಾಕರ ಸಿಪಿಸಿ ರವರು ಬ್ರಹ್ಮಪೂರ ಪೊಲೀಸ ಠಾಣೆ ಗುನ್ನೆ ನಂ: 224/11 ರಲ್ಲಿ ಕಳೆದು ಹೋದ ಒಂದು ನೋಕಿಯಾ ಮೊಬೈಲನ ಕಾಲ ಡಿಟೇಲ್ಸ ಸಹಾಯದಿಂದ ಆರೋಪಿತರಾದ ಶ್ರೀನಿವಾಸ ತಂದೆ ಸಿದ್ರಾಮ ಉಪಾದ್ಯ, ವಯ|| 19 ವರ್ಷ, || ಮಹಾನಗರ ಪಾಲಿಕೆಯಲ್ಲಿ ಕೆಲಸ, ಸಾ|| ಬಾಪೂನಗರ ಗುಲಬರ್ಗಾ, ಅರ್ಜುನ ತಂದೆ ವಿಜಯ ಕಾಂಬಳೆ, ವಯ|| 18 ವರ್ಷ, || ಪಾರಿವಾಳ ಸಾಕಣೆ ಕೆಲಸ, ಸಾ|| ಬಾಪೂನಗರ ಗುಲಬರ್ಗಾ ರವರನ್ನು ಬಂದಿಸಿರುತ್ತಾರೆ. ಆರೋಪಿತರಿಂದ ಮೇಲೆ ದಾಖಲಾದ ಗುನ್ನೆಗಳಲ್ಲಿ ಕಳೆದು ಹೋದ 14 ಗ್ರಾಂ ಬಂಗಾರದ ಚೈನ ಅ||ಕಿ|| 20,000/-, 5 ಗ್ರಾಂ ಬಂಗಾರದ ಹರಳಿನ ಉಂಗುರ ಅ||ಕಿ|| 10,000/-, 4.5 ಗ್ರಾಂ ಬಂಗಾರದ ಉಂಗುರ ಅ||ಕಿ|| 10,000/-, ಒಂದು ನೊಕಿಯಾ ಮೊಬೈಲ ಅ||ಕಿ|| 3000/-, ಅರ್ದ ಗ್ರಾಂ ಬಂಗಾರದ 6 ಉಂಗುರ ಮತ್ತು 1 ಮಾಸಿಯ ಎರಡು ಉಂಗುರ ಅ||ಕಿ|| 10,000/-, 6) ಬೆಳ್ಳಿಯ ಬಳೆ, ಚೈನ್, ಮತ್ತು ಲಿಂಗದ ಕಾಯಿ ಅಂದಾಜು 3 ತೊಲೆ ಅ||ಕಿ|| 1000/- ಹಾಗೂ ಒಂದು ಕುಕ್ಕರ ಅ||ಕಿ|| 150/- ಬೆಳೆವುಳ್ಳ ವಸ್ತುಗಳನ್ನು ಜಪ್ತ ಮಾಡಿಕೊಂಡು ಆರೋಪಿತರನ್ನು ನ್ಯಾಯಾಂಗ ಬಂಧನಕ್ಕೆ ಕಳುಹಿಸಿರುತ್ತಾರೆ.

ಅಪಘಾತ ಪ್ರಕರಣ:

ಶಹಾಬಾದ ನಗರ ಪೊಲೀಸ ಠಾಣೆ: ಶ್ರೀ ಶಿವಕುಮಾರ ತಂದೆ ಅಣವೀರಪ್ಪಾ ಕುಸನೂರ ಸಾ: ದೇವನ ತೇಗನೂರ ರವರು ನಾನು ಮತ್ತು ನಮ್ಮೂರ ಶಿವರಾಜ ತಂದೆ ಮಹಾಂತಪ್ಪಾ ಚಿತ್ತಾಫೂರ ಇಬ್ಬರು ಕೂಡಿಕೊಂಡು ದಿನಾಂಕ: 28/03/2012 ರಂದು ಹೀರೊ ಹೊಂಡಾ ಸ್ಪ್ಲೇಂಡರ ಆರ್.ಟಿ. ಓ ಆಫೀಸ ಗುಲ್ಬರ್ಗಾ ದಲ್ಲಿ ಪಾಸಿಂಗ ಮಾಡಿಸಲು ಹೋಗಿ ಮರಳಿ ಊರಿಗೆ ಬರುತ್ತಿರುವಾಗ ಭಂಕೂರ ಎ.ಬಿ.ಎಲ್. ಬಸ ನಿಲ್ದಾಣ ಹತ್ತಿರ ಶಿವರಾಜ ಇತನು ದ್ವಿ-ಚಕ್ರ ವಾಹನವನ್ನು ಅತೀವೇಗ ಮತ್ತು ನಿಷ್ಕಾಳಜಿತನದಿಂದ ಚಲಾಯಿಸಿದ್ದರಿಂದ ಮೋಟಾರ ಸೈಕಲ ಸ್ಕೀಡ್ ಆಗಿ ಬಿದ್ದಿದ್ದರಿಂದ ನನಗೆ ರಕ್ತಗಾಯವಾಗಿದ್ದು ಮತ್ತು ಶಿವರಾಜ ಎಡ ಕಪಾಳಕ್ಕೆ ಮತ್ತು ಎಡಗಣ್ಣಿಗೆ , ಎಡಗೈಗೆ , ತುಟಿಗೆ ರಕ್ತಗಾಯವಾಗಿದ್ದು ಇರುತ್ತದೆ. ದ್ವಿ-ಚಕ್ರ ವಾಹನದ ಟೆಂಪರರಿ ನಂಬರ ಕೆ.ಎ-32/ಟಿಆರ್-5998 ನೀಡಿರುತ್ತಾರೆ. ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 31/2012 ಕಲಂ 279,337 338 ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.

ಕಳ್ಳತನ ಪ್ರಕರಣ:

ಸ್ಟೇಷನ ಬಜಾರ ಪೊಲೀಸ ಠಾಣೆ: ಶ್ರೀಮತಿ ಸತ್ಯಮ್ಮ ಗಂಡ ಬಕ್ಕಣ್ಣ ರೆಡ್ಡಿ ಸಾ|| ಇಂದಿರಾ ನಗರ ಗುಲಬರ್ಗಾ ರವರು ನಾನು ದಿನಾಂಕ:15.03.2012 ರಂದು ರಾತ್ರಿ ನಮ್ಮ ಮನೆ ಕೀಲಿ ಹಾಕಿಕೊಂಡು ನಮ್ಮ ಮನೆಯವರೆಲ್ಲರೂ ಅಂಗಡಯಲ್ಲಿಯೆ ಇದ್ದೆವು ಬೆಳಿಗ್ಗೆ ಮನೆಗೆ ಬಂದು ನೋಡಲು ಯಾರೋ ಕಳ್ಳರೂ ಮನೆಗೆ ಹಾಕಿದ ಕಿಲಿ ಮುರಿದು ಮನ್ನೆಯಲ್ಲಿಟ್ಟದ್ದ ಬಂಗಾರ, ಬೆಳ್ಳಿ ಆಣರಣಗಳು, ದೇವಿ ನಗರದ ಪ್ಲಾಟಿನ ದಾಖಲಾತಿಗಳು (ಕಿವಾಲ) ನಗದು ಹಣ 500/- ರೂಪಾಯಿಗಳು, ಮತ್ತು ಹಳೆ ಮೋಬಾಯಿಗಳು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ಗುನ್ನೆ ನಂ: 37/2012 ಕಲಂ 457, 380 ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.

GULBARGA DIST REPORTED CRIMES

ಅಪಘಾತ ಪ್ರಕರಣ:
ಹೆಚ್ಚುವರಿ ಸಂಚಾರಿ ಪೊಲೀಸ್ ಠಾಣೆ:
ಶ್ರೀಮತಿ ದೇವಮ್ಮ ಗಂಡ ಅಮೃತಪ್ಪಾ ಸಾವಳಗಿ ಸಾ ಕಪನೂರ ರವರು ನಾನು ದಿನಾಂಕ: 28-03-2012 ರಂದು 4=00 ಗಂಟೆಗೆ ಸುಮಾರಿಗೆ ಜಗತ ಸರ್ಕಲ್ ದಿಂದ ಎಸ್.ವಿ.ಪಿ.ಪಟೇಲ ಸರ್ಕಲ್ ಮೇನ್ ರೋಡಿನಲ್ಲಿ ಬರುವ ಲಾಹೋಟಿ ಪೆಟ್ರೋಲ್ ಪಂಪ ಹತ್ತಿರ ರೋಡಿನ ಮೇಲೆ ಅಟೋರೀಕ್ಷಾ ನಂ: ಕೆಎ-32 ಬಿ-2239 ನೇದ್ದರ ಚಾಲಕ ಸಲೀಮಮಿಯಾ ಇತನು ತನ್ನ ಅಟೋವನ್ನು ಅತಿವೇಗವಾಗಿ ಮತ್ತು ಅಲಕ್ಷತನದಿಂದ ಚಲಾಯಿಸಿ ಅಟೋರೀಕ್ಷಾ ಪಲ್ಟಿಮಾಡಿ ಅಟೋದಲ್ಲಿ ಪ್ರಯಾಣ ಮಾಡುತ್ತಿದ್ದ ನನಗೆ ಭಾರಿಗಾಯ ಗೊಳಿಸಿರುತ್ತಾನೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 38/2012 ಕಲಂ 279, 338 ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಮಂಗಳ ಸೂತ್ರ ದರೋಡೆ ಪ್ರಕರಣ:
ಸ್ಟೇಶನ ಬಜಾರ ಠಾಣೆ:
ಶ್ರೀಮತಿ ವಿನೋದಾ ಗಂಡ ಬಕ್ಕಾರೆಡ್ಡಿ ಸಾ: ಆನಂದ ನಗರ ಗುಲಬರ್ಗಾ ರವರು ನಾನು ದಿನಾಂಕ 28-03-12 ರಂದು 2000 ಗಂಟೆಗೆ ಮನೆಯಿಂದ ಕಸ ಚೆಲ್ಲಲು ಹೊರಗಡೆ ಬಂದಾಗ ಒಬ್ಬ ಮನುಷ್ಯನು ಮೊಟರ ಸೈಕಲ ಮೇಲೆ ಬಂದವನೆ ಕೊರಳಿಗೆ ಕೈ ಹಾಕಿ ಮಂಗಳ ಸೂತ್ರ ಕಿತ್ತುಕೊಂಡಿದ್ದು ಅದರಲ್ಲಿಯ ತಾಳಿಗಳು ಮಾತ್ರ ಕೆಳಗೆ ಬಿದ್ದಿದ್ದು ಉಳಿದ ಮೂರು ತೊಲಿ ಬಂಗಾರದ ಚೈನು ದೋಚಿಕೊಂಡು ಹೋಗಿರುತ್ತಾನೆ, ಅದರ ಅ.ಕಿ 84,000=00 ರೂಪಾಯಿ ಆಗುತ್ತದೆ ಅಂತಾ ದೂರು ಸಲ್ಲಿಸಿದ ಸಾರಾಂಶದ ಮೆಲಿಂದ ಠಾಣೆ ಗುನ್ನೆ ನಂ 36/12 ಕಲಂ 392 ಐಪಿಸಿ ಪ್ರಕಾರ ಪ್ರಕರಣ ದಾಲು ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಕೊಲೆ ಪ್ರಕರಣ:
ಸೇಡಂ ಪೊಲೀಸ ಠಾಣೆ:
ಶ್ರೀಮತಿ, ಗೋದಾವರಿ ಗಂಡ ನರಸಪ್ಪ ಜೋಗಿ ಸಾ ರಂಜೋಳ ಇವರು ನಾನು ಮನೆಯಲ್ಲಿದ್ದಾಗ ನನ್ನ ಮೂರನೆಯ ಮಗಳಾದ ನರಸಮ್ಮ ವ 15 ವರ್ಷ ಇವಳು ತನ್ನ (ಅಜ್ಜಿ) ಆಯಿ ಬಾಲಮ್ಮ ನ ಮನೆಗೆ ಹೋಗಿ ವಾಪಸ ಓಡುತ್ತಾ ನಮ್ಮ ಮನೆಗೆ ಬಂದು ತಿಳಿಸಿದ್ದೆನಂದರೆ, “ ನಾನು ನಮ್ಮ ಆಯಿ ಬಾಲಮ್ಮ ಇವರ ಮನೆಗೆ ಈಗ ಮಧ್ಯಾನ ಮೂರು ಗಂಟೆಯ ಸುಮಾರಿಗೆ ಹೋದಾಗ (ಅಜ್ಜಿ) ಆಯಿ ಮನೆಯ ಹೊರಗೆ ಕಟ್ಟೆಯ ಮೇಲೆ ಕುಳಿತಾಗ ಮಾವನಾದ ಬಾಬು ತಂದೆ ಕಾಶಪ್ಪ ಜೋಗಿ ಸಾ ಕಸ್ತೂರಿಪಲ್ಲಿ ಇವನು ನನ್ನ ಹೆಸರಿಗೆ ಮನೆ ಮಾಡು ಅಂತಾ ಜಗಳ ತೆಗೆದು ನಾನು ಅಜ್ಜಿಯ ಮನೆಯ ಹತ್ತಿರ ಇದ್ದಾಗ ನನಗೆ ನೋಡಿ ಅಜ್ಜಿಗೆ ಮನೆಯೊಳಗೆ ಎಳೆದುಕೊಂಡು ಹೋಗಿ ಬಾಗಿಲು ಮುಚ್ಚಿರುತ್ತಾನೆ ನಾನು ಎಷ್ಟು ಒದರಿದರೂ ಬಾಗಿಲು ತೆರೆದಿರುವುದಿಲ್ಲ ಆದ್ದರಿಂದ ನೀನು ಬಾ ಅಂತಾ ನನಗೆ ತಿಳಿಸಿದ್ದರಿಂದ ನಾನು ಮತ್ತು ನನ್ನ ಮಗಳಾದ ನರಸಮ್ಮ ಹೋಗಿ ನೋಡಲಾಗಿ ನಮ್ಮ ಅಳಿಯ ಬಾಬು ಇತನು ಬಾಗಿಲು ತೆರೆದು ಹೊರಗೆ ಬಂದು ಅಲ್ಲಿಂದ ಓಡಿ ಹೋದನು, ಎಲ್ಲರೂ ಕೂಡಿ ಮನೆಯೊಳಗೆ ಹೋಗಿ ನೋಡಲಾಗಿ ನಮ್ಮ ಅತ್ತೆ ಮನೆಯಲ್ಲಿ ಎಲ್ಲಾ ಕಡೆ ಹುಡುಕಾಡಿದರೂ ಸಹ ಕಾಣಲಿಲ್ಲ. ಆಗ ನಾನು ಪಡಸಾಲೆಯಲ್ಲಿದ್ದ ಕಟ್ಟಿಗೆಯ ಮಂಚದ ಕೆಳಗೆ ನೋಡಲಾಗಿ ನಮ್ಮ ಅತ್ತೆ ಬಾಲಮ್ಮ ಇವಳ ಶವ ಇತ್ತು, ಅವಳ ಬಲಗೈ ಮುಂಗೈಗೆ ರಕ್ತಗಾಯ,ಎಡಗಾಲಿನ ಮೊಳಕಾಲಿಗೆ,ಎಡ ಕುತ್ತಿಗೆಯ ಹತ್ತಿರ ತರಚಿದ ಗಾಯ ಹಾಗು ಕುತ್ತಿಗೆಗೆ ಸುತ್ತಲು ಕಂದು ಗಟ್ಟಿದ ಗಾಯ ಕಂಡು ಬಂತು, ನಮ್ಮ ಅಳಿಯನಾದ ಬಾಬು ಇತನು ತನಗೆ ಊರಲ್ಲಿದ್ದ ಮನೆ ಹೆಸರಿಗೆ ಮಾಡಿಕೊಡಬೇಕು ಅಂತಾ ಆಗಾಗ ಬಂದು ಜಗಳ ಮಾಡುತ್ತಿದ್ದನು.ಅದಕ್ಕೆ ನಮ್ಮ ಅತ್ತೆ ಒಪ್ಪದ ಕಾರಣ ಅವಳಿಗೆ ಜಗಳ ತೆಗೆದು ಮನೆಯೊಳಗೆ ಒಯ್ದು ಕೈಯಿಂದ ಕುತ್ತಿಗೆ ಹಿಚುಕಿ,ಉಸಿರು ಗಟ್ಟಿಸಿ ಕೊಲೆ ಮಾಡಿ ಸಾಕ್ಷಿ ನಾಶ ಮಾಡುವ ಉದ್ದೇಶದಿಂಧ ಮಂಚದ ಕೆಳಗೆ ಹಾಕಿ ಕೌದಿ ಮುಚ್ಚಿ ಹೋಗಿರುತ್ತಾನೆ.ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ: 68/2012 ಕಲಂ, 302,201 ಐ,ಪಿ,ಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.

28 March 2012

GULBARGA DIST REPORTED CRIMES

ಅಪಘಾತ ಪ್ರಕರಣ:

ಸೇಡಂ ಪೊಲೀಸ ಠಾಣೆ: ಶ್ರೀ. ಶಿವಾನಂದ ತಂದೆ ಸಾಯಬಣ್ಣ ಹೊಸಮನಿ ಸಾ:ಕಲಕಂಬ ಗ್ರಾಮ, ತಾ:ಸೇಡಂ ರವರು ನಾವು ಮೂರು ಜನ ಅಣ್ಣ-ತಮ್ಮಂದಿರಿದ್ದು, ನನ್ನ ತಮ್ಮನಾದ ಲಿಂಗಾನಂದ @ ವಿಜಯಕುಮಾರ ತಂದೆ ಸಾಬಣ್ಣ ಹೊಸಮನಿ ವಯ:33 ವರ್ಷ, ದಿನಾಂಕ:27-03-2012 ರಂದು ಬೆಳಿಗ್ಗೆ 8-00 ಗಂಟೆಗೆ ವಿ.ಸಿ.ಎಫ್. ಫ್ಯಾಕ್ಟರಿ ಕೆಲಸಕ್ಕೆ ಮೋಟಾರ ಸೈಕಲ ನಂಬರ ಕೆಎ-26.ಜೆ-6740 ನೇದ್ದರ ಮೇಲೆ ಹೋಗಿರುತ್ತಾನೆ. ದಿನಾಂಕ:28-03-2012 ರಂದು ಬೆಳಿಗ್ಗೆ 7-30 ಗಂಟೆಯ ಸುಮಾರಿಗೆ ನನ್ನ ತಮ್ಮ ದೇವಾನಂದ ಹೊಸಮನಿ ಮತ್ತು ಊರಿನ ಜನರು ಒಂದು ಆಟೋ ಟಂಟಂ ದಲ್ಲಿ ಕುಳಿತುಕೊಂಡು ಸೇಡಂಕ್ಕೆ ಹೋಗುವಾಗ ಸೇಡಂ-ಯಾದಗಿರಿ ಮುಖ್ಯ ರಸ್ತೆಯ ಮೇಲೆ ರಾಮಲಿಂಗ್ ಕುರಬುರ ರವರ ಹೊಲದ ಬಾಂದಾರಿಯಲ್ಲಿ ರಸ್ತೆಯ ಎಡಗಡೆ ನಮ್ಮ ಮೋಟಾರು ಸೈಕಲ್ ನೋಡಿ ಗುರುತಿಸಿ ಅಲ್ಲಿಬಿದ್ದ ವ್ಯಕ್ತಿಗೆ ನೋಡಲಾಗಿ ಅವನು ನನ್ನ ತಮ್ಮ ಲಿಂಗಾನಂದ @ ವಿಜಯಕುಮಾರ ಇವನ ತಲೆಯ ಬಲಗಡೆ ಹಾಗೂ ಬಲಗಾಲ ಮೊಳಕಾಲಿಗೆ ಭಾರಿ ರಕ್ತಗಾಯವಾಗಿ ರಸ್ತೆ ಅಪಘಾತ ಹೊಂದಿ ಸ್ಥಳದಲ್ಲಿ ಮೃತಪಟ್ಟು ಬಿದ್ದಿದ್ದು. ಯಾರೋ ತಮ್ಮ ವಾಹನವನ್ನು ಅತೀವೇಗ ಹಾಗೂ ನಿಷ್ಕಾಳಜಿತನದಿಂದ ನಡೆಯಿಸಿ ನನ್ನ ತಮ್ಮನ ಮೋಟಾರ ಸೈಕಲ್ ಗೆ ಡಿಕ್ಕಿ ಪಡಿಸಿದ್ದರಿಂದ ಸ್ಥಳದಲ್ಲಿಯೇ ಮೃತಪಟ್ಟಿರುತ್ತಾನೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ:67/2012 ಕಲಂ. 279, 304(ಎ) ಐಪಿಸಿ ಸಂಗಡ 187 ಐ.ಎಮ್.ವ್ಹಿ. ಆಕ್ಟ್ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.

ವರದಕ್ಷಿಣೆ ಕಿರುಕುಳ ಪ್ರಕರಣ:

ಮಹಿಳಾ ಪೊಲೀಸ ಠಾಣೆ:ಶ್ರೀಮತಿ ರೀಜವಾನ ಬೇಗಂ ಗಂಡ ಸಲೀಮ್ @ ಜವೀದ ವ: 20 ವರ್ಷ ಉ: ಎಕ್ಬಾಲ ಕಾಲೋನಿ ಎಮ್.ಎಸ್.ಕೆ ಮಿಲ್ ಗುಲಬರ್ಗಾರವರು ನನ್ನ ಮದುವೆಯು ಸಲಿಂ @ ಜಾವೀದ ವ: 30 ವರ್ಷ ಉ: ಆಟೋ ಚಾಲಕ ಸಾ||ಯಕಬಾಲ ಕಾಲೋನಿ ಗುಲಬರ್ಗಾ ಇತನ ಜೋತೆ ಧರ್ಮ ಸಂಪ್ರದಾಯದಂತೆ ಮದುವೆಯಾಗಿದ್ದು, ಮದುವೆಯಾದಾಗಿನಿಂದ ನನ್ನ ಗಂಡನು ಕುಡಿದು ಬಂದು ಹೊಡೆ ಬಡೆ ಮಾಡಿ ತವರು ಮನೆಯಿಂದ ಬಂಗಾರ ತೆಗೆದುಕೊಂಡು ಬಾ ಅಂತಾ ಹಿಂಸೆ ನೀಡುತ್ತಿರುತ್ತಾನೆ, ದಿನಾಂಕ:07.03.2012 ರಂದು ಸಾಯಂಕಾಲ 6-00 ಗಂಟೆಯ ಸುಮಾರಿಗೆ ನನ್ನ ಗಂಡ , ಅತ್ತೆಯಾದ ಅಮೀರಾಬಿ. ಮಾವನಾದ, ಬಾಸುಮಿಯಾ, ಮೈದುನರಾದ ವಾಜೀದ, ಸಾಜೀದ, ನಾದಿನಿಯರಾದ ರೇಷ್ಮಾ , ಆಸ್ಮಾ ಇವರೆಲ್ಲರೂ ಸೇರಿ ಹೊಡೆ ಬಡೆ ಮಾಡಿ ಮಾಡಿರುತ್ತಾರೆ. ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ. 28/2012 ಕಲಂ. 498(ಎ), 506, ಸಂ. 149 ಐ.ಪಿ.ಸಿ ಪ್ರಕಾರ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ. .

GULBARGA DIST

ಆರು (6) ಜನ ಸರಗಳ್ಳರ ಬಂಧನ, ಸುಮಾರು 10 ಲಕ್ಷ ರೂ ಮೌಲ್ಯದ ಬಂಗಾರದ ಆಭರಣಗಳು, ಹಾಗೂ ಮೋಟಾರ ಸೈಕಲಗಳ ವಶ .
ಗುಲಬರ್ಗಾ ನಗರದಲ್ಲಿ ಘಟಿಸಿದ ಸ್ವತ್ತಿನ ಪ್ರಕರಣಗಳಲ್ಲಿನ ಆರೋಪಿತ ಪತ್ತೆ ಕುರಿತು ಮಾನ್ಯ ಶ್ರೀ ಮಹಮ್ಮದ ವಜೀರ ಅಹ್ಮದ ಐ.ಪಿ.ಎಸ್ ಐ.ಜಿ.ಪಿ ಸಾಹೇಬರು ಈಶಾನ್ಯ ವಲಯ ಗುಲಬರ್ಗಾ ಹಾಗೂ ಶ್ರೀ ಪ್ರವೀಣ ಮದುಕರ ಪವಾರ ಐಪಿಎಸ್ ಎಸ್.ಪಿ. ಗುಲಬರ್ಗಾ, ಮಾನ್ಯ ಅಪರ ಎಸ್.ಪಿ ಶ್ರೀ ಕಾಶಿನಾಥ ತಳಕೇರಿ ಶ್ರೀ ಭೂಷಣ ಭೋರಸೆ ಐಪಿಎಸ್ ಎ.ಎಸ್.ಪಿ ಗುಲಬರ್ಗಾ, ಶ್ರೀ ಎ.ಡಿ ಬಸಣ್ಣನವರ ಡಿ.ಎಸ್.ಪಿ ರವರ ಮಾರ್ಗದರ್ಶನದಲ್ಲಿ ನಿನ್ನೆ ದಿನಾಂಕ 27/3/2012 ರಂದು ಮದ್ಯಾಹ್ನ ವಿಶೇಷ ತನಿಖಾ ತಂಡದ ಆಧಿಕಾರಿಗಳಾದ ಶ್ರೀ ಚಂದ್ರಶೇಖರ ಬಿ.ಪಿ, ಡಿಜಿ ರಾಜಣ್ಣ, ಜೆ.ಹೆಚ್. ಇನಾಮದಾರ, ವಿಜಯ ಅಂಚಿ, ಟಿ.ಹೆಚ್. ಕರಿಕಲ್, ಪಂಡಿತ ಸಗರ, ಸಂಜೀವಕುಮಾರ, ಪ್ರದೀಪ ಕೊಳ್ಳಾ , ಮಾಣಿಕಸಿಂಗ ರಾಠೋಡ ಹಾಗೂ ಸಿಬ್ಬಂದಿ ಜನರು ಖಚಿತ ಭಾತ್ಮಿ ಮೇರೆಗೆ ನಗರದ ವಿರೇಂದ್ರ ಪಾಟೀಲ ಬಡಾವಣೆ ಜಿಡಿಎ ಕಾಲೋನಿ ಹತ್ತಿರ ಸಂಶಯಾಸ್ಪದವಾಗಿ ಮೋಟಾರ ಸೈಕಲಗಳ ಮೇಲೆ ತಿರುಗಾಡುತ್ತಿದ್ದವರ ಮೇಲೆ ಮಿಂಚಿನ ದಾಳಿ ಮಾಡಿ ಕುಖ್ಯಾತ ಸರಗಳ್ಳತನ ಮಾಡುವ ಜನರಾದ ಅರುಣ ತಂದೆ ಮೊಹನ ಆಡೆ ವಃ 24 ವರ್ಷ ಸಾ ಪಿಲ್ಟರ ಬೇಡ್ ತಾಂಡಾ ಗುಲಬರ್ಗಾ, ಲಕ್ಷ್ಮಿಕಾಂತ @ ಚಿನ್ಯಾ ತಂದೆ ರಮೇಶ ಕೌರವ ವಃ 20 ವರ್ಷ ಸಾ ಗಾಜಿಪುರ ಗುಲಬರ್ಗಾ, ಶರಣು ತಂದೆ ಶ್ರೀಮಂತ ತಳವಾಡ ವಃ 21 ವರ್ಷ ಸಾ ಮಕ್ತಮಪುರ ಗುಲಬರ್ಗಾ, ಮಲ್ಲು ತಂದೆ ಶಿವಶರಣಪ್ಪಾ ಉಪ್ಪಾರ ವಃ 18 ವರ್ಷ ಉಃ ವಿದ್ಯಾರ್ಥಿ ಸಾ ಗಾಜಿಪುರ ಗುಲಬರ್ಗಾ, ವಿಕ್ರಮ ತಂದೆ ಬಾನು ಪ್ರತಾಪಸಿಂಗ ವಃ 22 ವರ್ಷ ಸಾ ಗಾಜಿಪುರ ಗುಲಬರ್ಗಾ, ಚೇತನ್ ತಂದೆ ಮರಳಿಸಿದ್ದ ಜೇವರಗಿ ವಃ 19 ವರ್ಷ ಸಾ ಗಾಜಿಪುರ ಗುಲಬರ್ಗಾರವರನ್ನು ಬಂಧಿಸಿ ತನಿಖೆಗೆ ಒಳಪಡಿಸಿದಾಗ ಸದರಿಯವರು ಈಗ ಸುಮಾರು ಒಂದು ವರ್ಷದಿಂದ ಗುಲಬರ್ಗಾ ನಗರದ ಜಿಡಿಎ ಕಾಲೋನಿ, ಜಯ ನಗರ, ಕುಸನೂರ, ವೆಂಕಟೇಶ ನಗರ, ಜಗಜೀವನರಾಮ ನಗರ, ಬನಶಂಕರಿ ಕಾಲೋನಿ, ಕೊತಂಬರಿ ಲೇಔಟ, ರಾಘವೇಂದ್ರ ನಗರ, ವಿವೇಕಾನಂದ ನಗರ, ಮುಂತಾದ ಕಡೆ ಸರಗಳ್ಳತನ ಮತ್ತು ಸುಲಿಗೆ ಮಾಡಿರುವ ಬಗ್ಗೆ ತನಿಖೆ ಕಾಲಕ್ಕೆ ಒಪ್ಪಿಕೊಂಡಿರುತ್ತಾರೆ. ಆರೋಪಿತರ ವಶದಿಂದ ಸುಮಾರು 10 ಲಕ್ಷ ರೂಪಾಯಿ ಮೌಲ್ಯದ ಬಂಗಾರದ ಆಭರಣಗಳು, ಮೊಬಾಯಿಲ್ ಫೋನಗಳು, ಮತ್ತು ಸರಗಳ್ಳತನ ಮಾಡಲು ಬಳಸುತ್ತಿದ್ದ 3 ಮೂರು ಮೊಟಾರ ಸೈಕಲಗಳು ( 2 ಬಜಾಜ ಪಲ್ಸರ & ಒಂದು ಎಪ್.ಜೆಡ್) ಜಪ್ತು ಪಡಿಸಿಕೊಂಡು ವೈಜ್ಞಾನಿಕ ರೀತಿಯಲ್ಲಿ ತನಿಖೆ ಮುಂದುವರಿಸಿರುತ್ತಾರೆ. ಆರೋಪಿತರು ನಗರದ ಬೇರೆ ಬೇರೆ ಸ್ಥಳಗಳಲ್ಲಿ ಇನ್ನೂ ಸುಲಿಗೆ ಮಾಡಿರಬಹುದಾದ ಸಂಶಯ ಮೇರೆಗೆ ತನಿಖೆ ಮುಂದುವರೆದಿರುತ್ತದೆ. ಪರಾರಿಯಾಗಿರುವ ಇನ್ನೂ ಕೇಲವು ಆರೋಪಿತರ ತಪಾಸಣೆ ಕಾರ್ಯ ಮುಂದುವರೆದಿದೆ, ಮಹತ್ವದ ಸರಗಳ್ಳತನದ ಪ್ರಕರಣಗಳನ್ನು ಭೇಧಿಸಿದ ವಿಶೇಷ ತನಿಖಾ ತಂಡದ ಅಧಿಕಾರಿಗಳು ಹಾಗೂ ಸಿಬ್ಬಂದಿ ಜನರ ಕರ್ತವ್ಯವನ್ನು ಶ್ಲಾಘಿಸಿ ಇಲಾಖಾ ವತಿಯಿಂದ ಸೂಕ್ತ ಬಹುಮಾನವನ್ನು ಘೋಷಿಸಲಾಗಿದೆ.

Gulbarga Dist Reported Crimes

ಕಳ್ಳತನ ಪ್ರಕರಣ:
ಸ್ಟೇಷನ ಬಜಾರ ಪೊಲೀಸ ಠಾಣೆ:
ಶ್ರೀ ಅಮರನಾಥ ತಂದೆ ಗೋಪಾಲರಾವ್ ಸಾ: ಅಂಬೇಡ್ಕರ್ ಚೌಕ ಹತ್ತಿರ ಚಿಂಚೊಳ್ಳಿ ಹಾವ ಆರ್. ಎಸ್. ಪಪ್ಪು ವಕೀಲರ ಮನೆಯಲ್ಲಿ ಬಾಡಿಗೆ ನಾವು ಯುಗಾದಿ ಹಬ್ಬದ ಪ್ರಯುಕ್ತ ದಿ: 22/03/2012 ರಂದು ರೂಮಿನ ಕೀಲಿ ಹಾಕಿಕೊಂಡು ಊರಿಗೆ ಹೋಗಿದ್ದು, ನನ್ನ ಹಾಗೇಯೇ ನನ್ನ ಪಕ್ಕದ ರೂಮಿನಲ್ಲಿ ವಾಸವಾಗಿರುವ ಅವಿನಾಶ ತಂದೆ ಅಶೋಕ ಹೊಸಮನಿ ಇವರು ಸಹ ತಮ್ಮ ರೂಮಿಗೆ ಕೀಲಿ ಹಾಕಿಕೊಂಡು ದಿ : 22/03/2012 ರಂದು ರೂಮಿಗೆ ಕೀಲಿ ಹಾಕಿಕೊಂಡು ಊರಿಗೆ ಹೋಗಿದ್ದು ದಿ: 27/03/2012 ರಂದು ಮರಳಿ ಬಂದು ನೋಡಲಾಗಿ, ರೂಮಿನಲ್ಲಿದ್ದ ತೂಷಿಬಾ ಕಂಪನಿಯ ಲ್ಯಾಪಟಾಪ್ ಮತ್ತು ಸ್ಯಾಮಸಂಗ್ ಕ್ಯಾಮರಾ ಅ.ಕಿ. 34,000=00 ರೂ ಹಾಗೂ ಪಕ್ಕದ ರೂಮಿನಲ್ಲಿ ಒಂದು ಮೊಬೈಲ್ ಹಾಗೂ ಪ್ರಮೋಶನಲ್ ಮಟಿರಿಯಲ್ಸ ನೇದ್ದವುಗಳನ್ನು ರಾತ್ರಿ ವೇಳೆಯಲ್ಲಿ ಯಾರೊ ಕಳ್ಳರು ರೂಮಿಗೆ ಹಾಕಿದ ಕೀಲಿ ಮುರಿದು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ 35/2012 ಕಲಂ 457, 380 ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಹುಡಗ ಮತ್ತು ಹೆಣ್ಣು ಮಗಳು ಕಾಣೆಯಾದ ಬಗ್ಗೆ:
ಗುಲಬರ್ಗಾ ಗ್ರಾಮೀಣ ಠಾಣೆ:
ಶ್ರೀ ಹರಿರಾಮ ತಂದೆ ಶಂಕರು ಚವ್ಹಾಣ ಉ: ದೂರದರ್ಶನ ಕೇಂದ್ರ ಗುಲಬರ್ಗಾದಲ್ಲಿ ಸರ್ಕಾರಿ ನೌಕರ ಸಾಉದನೂರ ತಾಂಡಾ ತಾ:ಜಿ: ಗುಲಬರ್ಗಾ ಹಾ:ವ: ದೂರದರ್ಶನ ಕೇಂದ್ರ ವಸತಿ ಗೃಹ ಹುಮನಾಬಾದ ರಸ್ತೆ ಗುಲಬರ್ಗಾರವರು ನಮ್ಮ ದೂರದರ್ಶನ ಕೇಂದ್ರ ಕ್ವಾರ್ಟರ್ಸ ವಸತಿ ಗೃಹದಲ್ಲಿದ್ದ ನನ್ನ ಮಗಳು ಮೊಮ್ಮಕ್ಕಳು ಬಿಟ್ಟು ಮೈಯಲ್ಲಿ ಆರಾಮ ಇಲ್ಲದ ಕಾರಣ ಸೋಲಾಪುರಕ್ಕೆ ತೋರಿಸಿಕೊಂಡು ಬರಲು ಹೋಗಿದ್ದು, ರಾತ್ರಿ 9-30 ಗಂಟೆ ಸುಮಾರಿಗೆ ಮನೆಗೆ ಬಂದು ನೋಡಲಾಗಿ ಮನೆಯಲ್ಲಿ ಮಗಳು ವಿದ್ಯಾವತಿ ಗಂಡ ಪ್ರಕಾಶ ರಾಠೋಡ, ವ 28 ವರ್ಷ, ಗಣೇಶ ತಂದೆ ಪ್ರಕಾಶ ರಾಠೋಡ 6 ವರ್ಷ,ಕಾರ್ತಿಕ ತಂದೆ ಪ್ರಕಾಶ ರಾಠೋಡ 4 ವರ್ಷ ಸಾ: ಎಲ್ಲರೂ ಅರ್ಜುಣಗಿ ತಾ: ಆಫಜಲಪೂರ ಹಾ:ವ: ದೂರದರ್ಶನ ಕೇಂದ್ರ ವಸತಿ ಗೃಹ ಹುಮನಾಬಾದ ರಸ್ತೆ ಗುಲಬರ್ಗಾರವರು ಇರಲ್ಲಿಲ್ಲ, ಅಕ್ಕ ಪಕ್ಕ ಮತ್ತು ಸಂಬಂಧಿಕರಲ್ಲಿ ಹುಡುಕಾಡಿ ವಿಚಾರಿಸಲು ಯಾವುದೇ ಸುಳಿವು ಸಿಕ್ಕಿರುವುದಿಲ್ಲಾ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 97/2012 ಕಲಂ ಹೆಣ್ಣುಮಗಳು ಮತ್ತು ಹುಡುಗ ಕಾಣೆ ಬಗ್ಗೆ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಅಪಘಾತ ಪ್ರಕರಣ:
ಹೆಚ್ಚುವರಿ ಸಂಚಾರಿ ಪೊಲೀಸ್ ಠಾಣೆ :
ಶ್ರೀ ಮುಫೀರ ಮಿರ್ಜಾ ತಂದೆ ಹಸೀರ ಮಿರ್ಜಾ ವಯಾ:22 ವರ್ಷ ಉ:ವಿಧ್ಯಾರ್ಥಿ ಸಾ: ಸಿಂದ್ವ ತಾ:ಸಿಂದ್ವ ಜಿಲ್ಲಾ: ಬರವಾನಿ ರಾಜ್ಯಮಧ್ಯ ಪ್ರದೇಶ ರವರು ದಿನಾಂಕ 27-03-12 ರಂದು ಸಾಯಂಕಾಲ 5=30 ಗಂಟೆಯ ಸುಮಾರಿಗೆ ಸೆಂಟರ ಕಾಮತ ದಿಂದ ಆನಂದ ಹೊಟೇಲ ಕ್ರಾಸ್ ರೋಡಿನಲ್ಲಿ ಮೇಲೆ ಮೋಟಾರ ಸೈಕಲ್ ನಂಬರ: ಕೆಎ 32 ಆರ್ 2832 ನೇದ್ದನ್ನು ಅತಿವೇಗವಾಗಿ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ನನಗೆ ಡಿಕ್ಕಿ ಪಡಿಸಿ ಭಾರಿಗಾಯ ಗೊಳಿಸಿರುತ್ತಾನೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 37/2012 ಕಲಂ 279, 338 ಐಪಿಸಿ ಸಂಗಡ 187 ಐ.ಎಮ.ವಿ ಆಕ್ಟ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಅಪಘಾತ ಪ್ರಕರಣ:
ಮುದೋಳ ಠಾಣೆ:
ಮಹ್ಮದ ಇಬ್ರಾಹಿಂ ತಂದೆ ಬಾಸುಮಿಯಾ, ಮಹ್ಮದ ಯೂಸುಫ್ ತಂದೆ ಅಬ್ದುಲ್ ನಬಿ, ಮಹ್ಮದ ಜಿಲಾನಿ ತಂದೆ ಪೀರ ಅಹ್ಮದ, ಅಬ್ದುಲ್ ವಾಹಿದ್ ತಂದೆ ಅಬ್ದುಲ್ ಸತ್ತರ, ಮಹ್ಮದ ಅಬ್ದುಲ್ ತಂದೆ ಬಾಸುಮಿಯಾ ಮತ್ತು ನಾನು ಕೂಡಿಕೊಂಡು ದಿನಾಂಕ: 27-03-2012 ರಂದು ಸಾಯಂಕಾಲ 4-30 ಗಂಟೆಗೆ ಯಾನಾಗುಂದಿಯಿಂದ ಮೇದಕ ಗ್ರಾಮದ ಕಡೆಗೆ ಹೋಗುತ್ತಿದ್ದಾಗ ಹಿಂದಿನಿಂದ ಟಾಟಾ ಇಂಡಿಕಾ ಕಾರ ನಂ. ಎಪಿ-09, ಬಿಟಿ-7691 ನೇದ್ದರ ಚಾಲಕನಾದ ರಾಮರೆಡ್ಡಿ ತಂದೆ ಯಾದರೆಡ್ಡಿ ಈತನು ತನ್ನ ಕಾರನ್ನು ಅತೀವೇಗ ಹಾಗೂ ನಿಷ್ಕಾಳಜಿತನದಿಂದ ಓಡಿಸಿಕೊಂಡು ಬಂದು ನಡೆದುಕೊಂಡು ಹೊರಟಿದ್ದ ಮಹ್ಮದ ಇಬ್ರಾಹಿಂ ತಂದೆ ಬಾಸುಮಿಯಾ ಈತನಿಗೆ ಹಿಂದಿನಿಂದ ಡಿಕ್ಕಿ ಹೊಡೆದಿದ್ದು, ಡಿಕ್ಕಿ ಪಡಿಸಿದ ಪರಿಣಾಂ ಮಹ್ಮದ ಇಬ್ರಾಹಿಂಗೆ ಭಾರಿ ಗಾಯಗಳಾಗಿ ಸ್ಥಳದಲ್ಲಿಯೇ ಮೃತಪಟ್ಟಿದ್ದು ಕಾರ ಚಾಲಕನು ಕಾರನ್ನು ನಿಲ್ಲಿಸಿ ಓಡಿಹೋಗಿರುತ್ತಾನೆ ಅಂತಾ ಮಹ್ಮದ ಇಸ್ಮಾಯಿಲ್ ತಂದೆ ಅಬ್ದುಲ್ ನಬಿ ರವರು ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ. 31/2012 ಕಲಂ: 279, 304(ಎ) ಐಪಿಸಿ ಸಂ. 187 ಐ.ಎಮ್.ವಿ ಆಕ್ಟ್ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.

27 March 2012

GULBARGA DIST REPORTED CRIMES

ಕೊಲೆ ಪ್ರಕರಣ:
ನಿಂಬರ್ಗಾ ಪೊಲೀಸ ಠಾಣೆ:
ಶ್ರೀ ವೀರಭದ್ರಪ್ಪ ತಂದೆ ಭೀಮರಾವ ಮಲಶೆಟ್ಟಿ ಸಾ ದುತ್ತರಗಾಂವ ರವರು ನಮ್ಮ ತಂದೆಯಾದ ಭೀಮರಾವ ಇವರು ದಿನಾಂಕ 26/03/2012 ರಂದು ರಾತ್ರಿ ದೇವರ ಭಾವಿಯ ಹತ್ತಿರ ಸಂಡಾಸಕ್ಕೆ ಹೋದಾಗ ರಾತ್ರಿ 8-30 ಗಂಟೆಯಿಂದ 9-15 ಗಂಟೆಯ ಮಧ್ಯದ ಅವಧಿಯಲ್ಲಿ ಯಾರೋ ದುಷ್ಕರ್ಮಿಗಳು ಹರಿತವಾದ ಆಯುಧದಿಂದ ಕುತ್ತಿಗೆಯ ಬಲಭಾಗಕ್ಕೆ ಬಲವಾಗಿ ಹೊಡೆದು ಕೊಲೆ ಮಾಡಿರುತ್ತಾರೆ ಕೊಲೆ ಮಾಡಿದವರನ್ನು ಪತ್ತೆ ಹಚ್ಚಿ ಕಾನೂನು ಕ್ರಮ ಜರುಗಿಸಬೇಕು ಅಂತ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ. 23/2012 ಕಲಂ 302, 201 ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ .
ಕಳ್ಳತನ ಪ್ರಕರಣ:
ಗುಲಬರ್ಗಾ ಗ್ರಾಮೀಣ ಠಾಣೆ:
ಶ್ರೀ ಮಹ್ಮದ ಸೀರಾಜೋದ್ದಿನ ಪಟೇಲ್ ತಂದೆ ಗುಲಾಮ ಮೋಹೀಯೋದ್ದಿನ ಸಾ: ಖಮರ ಕಾಲೋನಿ ಗುಲಬರ್ಗಾರವರು ನನ್ನ ಹೆಸರಿನಲ್ಲಿ ಟಾಟಾ ಕಂಪನಿಯ TIPPER No. KA 32 B 1566 ನೇದ್ದು ಇದಕ್ಕೆ ಟಿಪ್ಪರ ಚಾಲಕನಾಗಿ ಲಾಲ ಅಹ್ಮದ ತಂದೆ ಪಾಶುಮಿಯ್ಯಾ ಸಾ: ಮುಸ್ಲಿಂ ಸಂಘ ಗುಲಬರ್ಗಾರವರು ಸುಮಾರು 4 ವರ್ಷಗಳಿಂದ ಚಾಳಕ ಅಂತಾ ಕೆಲಸ ಮಾಡುತ್ತಿದ್ದಾರೆ, ದಿನಾಲು ಕೆಲಸದ ಮುಗಿದ ಮೇಲೆ ನಮ್ಮ ಟಿಪ್ಪರರನ್ನು ಲಂಗಾರ ಹುನುಮಾನ ನಗರದ ಇಮ್ಮಾಮ ಸಾಬ ಇಟ್ಟಂಗಿ ಭಟ್ಟಿಯ ಖುಲ್ಲಾ ಜಾಗೆಯಲ್ಲಿ ನಿಲ್ಲಿಸುತ್ತಿದ್ದು ಅದೇ ರೀತಿ ದಿನಾಂಕ 25.03.2012 ರಂದು ಲಂಗಾರ ಹುನುಮಾನ ನಗರದಲ್ಲಿರುವ ಇಮ್ಮಾಮ ಸಾಬ ಇವರ ಭಟ್ಟಿಯಲ್ಲಿ ಟಿಪ್ಪರನ್ನು ನಿಲ್ಲಿಸಿ ಚಾಲಕನು ಮನೆಗೆ ಹೋಗಿ ಬೆಳಗ್ಗೆ 4.30 ಗಂಟೆಗೆ ಶಹಾಪೂರಕ್ಕೆ ಹೋಗಬೇಕಾಗಿರುವದರಿಂದ ಬಂದು ನೋಡಿದಾಗ ನಿಲ್ಲಿಸಿದ ಸ್ಥಳದಲ್ಲಿ TIPPER No. KA 32 B 1566 ಇರುವದಿಲ್ಲ ಅಂತಾ ಟಿಪ್ಪರ ಚಾಲಕ ಲಾಲ ಅಹ್ಮದ ಈತನು ಫೋನ ಮುಖಾಂತರ ತಿಳಿಸಿದನು ನಾನು ಸ್ಥಳಕ್ಕೆ ಬಂದು ನೋಡಲು ಸದರಿ ಸ್ಥಳದಲ್ಲಿ ಟಿಪ್ಪರ ಇರಲಿಲ್ಲಾ ಎಲ್ಲಾ ಕಡೆಗಳಲ್ಲಿ ಹುಡುಕಾಡಲಾಗಿ ಟಿಪ್ಪರ ಸಿಕ್ಕಿರುವದಿಲ್ಲ ಟಿಪ್ಪರ ಮಾದರಿ,2010,ಟಿಪ್ಪರ ಕಲರ್-ಬಿಳಿ & ಆರೇಜ್ ,ಚಸ್ಸಿಸ್ ನಂ:MAT373134A1804261,ಇಂಜೀನ್ ನಂ:697TC56AZY103412, ಅಂದಾಜು ಕಿಮ್ಮತ್ತು 10 ಲಕ್ಷ /- ರೂ ಆಗುತ್ತದೆ. ಕಾರಣ ಕಳೆದು ಹೋದ ನನ್ನ ಟಿಪ್ಪರ ಪತ್ತೆ ಮಾಡಿಕೊಡಬೇಕು ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ:96/2012 ಕಲಂ 379 ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಅಪಘಾತ ಪ್ರಕರಣ:
ಕಾಳಗಿ ಪೊಲೀಸ್ ಠಾಣೆ:
ಶ್ರೀ ದಸ್ತಗಿರಸಾಬ ತಂದೆ ಇಮಾಮ ಸಾಬ ಕೋಹಿರ ಉ ಕೂಲಿ ಕೆಲಸ ಸಾ ಗೋಟುರ ತಾ ಚಿತ್ತಾಪೂರರವರು ನಾನು ಮತ್ತು ನನ್ನ ಮಗಳಾದ ತಬಸುಮಾ ವಯ 18 ವರ್ಷ ಇಬ್ಬರೂ ಕೂಡಿಕೊಂಡು ದಿನಾಂಕ: 27/03/2012 ರಂದು ಮುಂಜಾನೆ 11-00 ಗಂಟೆಯ ಸುಮಾರಿಗೆ ಗೋಟೂರ ಗ್ರಾಮದಿಂದ ಕಾಳಗಿಗೆ ಹೋಗುವ ಕುರಿತು ಗೋಟೂರ ಗ್ರಾಮದ ಬಸ್ಸ ನಿಲ್ದಾಣದ ಎದುರಿಗೆ ಇರುವ ಸುವರ್ಣ ಗ್ರಾಮದ ಅಡಿಗಲ್ಲು ಕಟ್ಟೆಯ ಹತ್ತಿರ ಕುಳಿತ್ತಿದ್ದಾಗ ಮಹಿಂದ್ರಾ ಜೀಪ ನಂಬರ ಕೆಎ: 36. ಎಮ್: 6789 ನೇದ್ದರ ಚಾಲಕ ಗುರುಶಾಂತಪ್ಪಾ ತಂದೆ ಹಣಮಂತರಾವ ಮುತ್ತಗಿ ಸಾ ಗೋಟೂರ ಇತನು ಅತಿವೇಗ ಹಾಗು ನಿಷ್ಕಾಳಜಿತನದಿಂದ ಚಲಾಯಿಸಿಕೊಂಡು ಬಂದು ತಬಸುಮಾ ಇವಳಿಗೆ ಡಿಕ್ಕಿ ಪಡಿಸಿದ್ದು, ಉಪಚಾರ ಕುರಿತು ಕಾಳಗಿ ಸರ್ಕಾರಿ ಆಸ್ಪತ್ರೆಗೆ ತಂದು ಉಪಚಾರ ಮಾಡಿಸುವಷ್ಟರಲ್ಲಿ ತಬಸುಮಾ ಇವಳು ಮೃತ ಪಟ್ಟಿರುತ್ತಾಳೆ, ಮತ್ತು ನನಗೆ ಹಾಗು ಸುಲ್ತಾನ ಹಿಪ್ಪರಗಿ ರವರಿಗೆ ಸಾದಾ ಮತ್ತು ಭಾರಿಗಾಯಗಳಾಗಿರುತ್ತವೆ, ಅಪಘಾತಪಡಿಸಿದ ಚಾಲಕನು ತನ್ನ ವಾಹನವನ್ನು ಸ್ಥಳದಲ್ಲಿಯೇ ಬಿಟ್ಟು ಓಡಿ ಹೊಗಿರುತ್ತಾನೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 25/2012 ಕಲಂ 279, 337, 338, 304 (ಎ) ಸಂಗಡ 187 ಐ.ಎಮ.ವಿ ಆಕ್ಟ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಕೆ ಕೈಕೊಂಡಿರುತ್ತಾರೆ.

26 March 2012

GULBARGA DIST REPORTED CRIME

ಹಲ್ಲೆ ಪ್ರಕರಣ:
ನಿಂಬರ್ಗಾ ಪೊಲೀಸ ಠಾಣೆ:
ಬಸವರಾಜ ತಂದೆ ದಸ್ತಯ್ಯಾ ಗುತ್ತೆದಾರ ಸಾ ಭಟ್ಟರ್ಗಾ ಗ್ರಾಮರವರು ನಾನು 2009-2010 ನೇ ಸಾಲಿನಲ್ಲಿ ಉದ್ಯೋಗ ಖಾತ್ರಿ ಯೋಜನೆ ಅಡಿಯಲ್ಲಿ ದಂಗಾಪೂರ ಗ್ರಾಮ ಪಂಚಾಯತಿ ಕಾಮಗಾರಿಯ ಹಣವನ್ನು ಬಿಡುಗಡೆ ಮಾಡದಂತೆ ಎಮ.ಎಲ್.ಎ ರವರಿಗೆ ಶಿಪಾರಸ್ಸು ಮಾಡಿದ್ದಾನೆಂದು ತಪ್ಪು ತಿಳಿದು, ದಿನಾಂಕ 05/03/2012 ರಂದು ಗುಲಬರ್ಗಾದಲ್ಲಿ ನಾಗರಾಜನು ಹಲ್ಲೆ ಮಾಡಿದ್ದರಿಂದ ರಾಘವೆಂದ್ರ ನಗರ ಠಾಣೆಯಲ್ಲಿ ಪ್ರಕರಣ ದಾಖಲಿಗಿರುತ್ತದೆ. ಆ ದಿನದಿಂದಲೂ ನನಗೆ ಕೊಲೆ ಮಾಡಬೇಕೆಂದು ಹೊಂಚು ಹಾಕುತ್ತಾ ದಿನಾಂಕ 25/03/2012 ರಂದು ರಾತ್ರಿ 10-15 ಗಂಟೆ ಸುಮಾರಿಗೆ ಮೋಟಾರ ಸೈಕಲ ನಂ. ಕೆ.ಎ 32 ಎಸ್ 5557 ನೇದ್ದರ ಮೇಲೆ ನಾನು ನಿಂಬರ್ಗಾದಿಂದ ನಮ್ಮ ಗ್ರಾಮಕ್ಕೆ ನನ್ನ ಗೆಳೆಯನಾದ ಮಹಾಂತಪ್ಪ ಇವರೊಂದಿಗೆ ಹೋಗುತ್ತಿದ್ದಾಗ ನಿಂಬರ್ಗಾ ಗ್ರಾಮಕ್ಕೆ ನೀರು ಸರಬರಾಜು ಮಾಡುವ ಪಂಪ ಹೌಸ ಹತ್ತಿರ ರೋಡಿನ ಮೇಲೆ ನಾಗರಾಜ ಹಾಗೂ ಅವನೊಂದಿಗೆ ಇನ್ನೊಬ್ಬ ವ್ಯಕ್ತಿ ಸೇರಿ ಮೋಟಾರ ಸೈಕಲ ಮೇಲೆ ಬಂದು ನಮ್ಮನ್ನು ಅಡ್ಡಗಟ್ಟಿ ನಿಲ್ಲಿಸಿ ಅವಾಚ್ಯ ಶಬ್ದಗಳಿಂದ ಬೈದು ಕೊಲೆ ಮಾಡುವ ಉದ್ದೇಶದಿಂದ ಚಾಕುವಿನಿಂದ ಎಡಗೈ ಮೋಳಕೈ ಕೆಳಗೆ ಹೊಡೆದಿರುತ್ತಾನೆ, ಮತ್ತು ಅಪರಿಚಿತ ವ್ಯಕ್ತಿಯು ಕೈ ಮುಷ್ಟಿ ಮಾಡಿ ಮೂಗಿನ ಮೇಲೆ ಗುದ್ದಿ ಕೊಲೆಗೆ ಯತ್ನಿಸಿರುತ್ತಾನೆ. ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ. 22/2012 ಕಲಂ 323, 504, 341, 307, 34 ಐಪಿಸಿ ಪ್ರಕಾರ ಪ್ರಕರಣ ದಾಖಲಿಸಿ ತನಿಖೆ ಕೈಕೊಂಡಿರುತ್ತಾರೆ.

GULBARGA DIST REPORTED CRIMES

ಅಪಘಾತ ಪ್ರಕರಣ:
ಶಹಾಬಾದ ನಗರ ಪೊಲೀಸ ಠಾಣೆ:
ಶ್ರೀಮತಿ ಪಾರ್ವತಿ ಗಂಡ ವಿಶ್ವನಾತ ನಾಲವಾರ ಸಾ; ಎ.ಬಿ.ಎಲ್. ಹೌಸಿಂಗ ಸೊಸಾಯಿಟಿ ಶಾಂತನಗರ ಭಂಕೂರ ರವರು ನನ್ನ ಗಂಡ ವಿಶ್ವನಾಥ ಹಾಗೂ ವಿಜಯ ಸಾರಾಥಿ ರವರು ಕೂಡಿಕೊಂಡು ಹೂಂಡಾ ಎಕ್ಟಿವ್ ದ್ವಿಚಕ್ರ ನಂ: ಕೆ.ಎ-32/ಆರ್- 9753 ನೇದ್ದರ ಮೇಲೆ ದಿನಾಂಕ: 25/03/2012 ರಂದು ಮುಂಜಾನೆ ಎ.ಬಿ.ಎಲ್.ದಿಂದ ಶಹಾಬಾದಕ್ಕೆ ಹೋಗುತ್ತಿರುವಾಗ ಮಾರ್ಗ ಮದ್ಯದಲ್ಲಿ ಭೀಮಶಪ್ಪಾ ನಗರ ಹತ್ತಿರ ಇರುವ ರೋಡಿಗೆ ಹಾಕಿದ ಜಂಪಿನಲ್ಲಿ ವಿಜಯ ಸಾರಾಥಿ ಇತನು ನನ್ನ ದ್ವಿಚಕ್ರ ವಾಹನವನ್ನು ಅತೀವೇಗ ಮತ್ತು ನಿಷ್ಕಾಳಜಿತನ ಚಲಾಯಿಸಿಕೊಂಡು ಒಮ್ಮೇಲೆ ಬ್ರೇಕ್ ಹಾಕಿದ್ದರಿಂದ ಹಿಂದೆ ಕುಳಿತ ನನ್ನ ಗಂಡ ವಿಶ್ವನಾಥ ಕೆಳಗೆ ಬಿದ್ದು ಬಲ ಎದೆಗೆ ಬಾರಿ ಒಳಪೆಟ್ಟು ಮತ್ತು ಎಡಗೈ ಮೊಳಕೈಗೆ ರಕ್ತಗಾಯವಾಗಿದ್ದು. ಜಿಂಗಾಡೆ ಆಸ್ಪತ್ರೆಗೆ ಉಪಚಾರ ಕುರಿತು ಸೇರಿಕೆ ಮಾಡಿದ್ದು ಉಪಚಾರ ಹೊಂದುತ್ತಾ ಮೃತಪಟ್ಟಿರುತ್ತಾನೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ:30/2012 ಕಲಂ 279,304 [ಎ] ಐಪಿಸಿ ಸಂ 187 ಐ.ಎಂ.ವಿ ಆಕ್ಟ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಹಲ್ಲೆ ಪ್ರಕರಣ:
ಗ್ರಾಮೀಣ ಪೊಲೀಸ ಠಾಣೆ:
ಶ್ರೀ ಮೋಬಿನ ತಂದೆ ಮಶಾಕ ಪಟೇಲ ಸಾ: ತಾವರಗೇರಾ ಗ್ರಾಮ ತಾ:ಜಿ: ಗುಲಬರ್ಗಾರವರು ನಾನು ನಾಗೀ ಹೊಲದಲ್ಲಿ ಕ್ರಿಕೆಟ ಆಟ ಆಡಿ ಮುಗಿಸಿಕೊಂಡು ನನ್ನ ಗೆಳೆಯರೊಂದಿಗೆ ಮನೆಯ ಕಡೆಗೆ ಹೊರಟಾಗ ಬೀರಪ್ಪ ಗುಡಿ ಹತ್ತಿರ ಬಂದಾಗ ಮಲಕಪ್ಪ ತಂದೆ ಚಂದ್ರಕಾಂತ ಪೂಜಾರಿ ಈತನು ನನ್ನ ಹತ್ತಿರ ಬಂದು ಅವಾಚ್ಯವಾಗಿ ಬೈದು ಹೊಡೆ ಬಡೆ ಮಾಡಿರುತ್ತಾನೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 94/2012 ಕಲಂ 504, 324 ಐಪಿಸಿ ಪ್ರಕಾರ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.

25 March 2012

GULBARGA DIST REPORTED CRIMES


ಅತ್ಯಾಚಾರ ಪ್ರಕರಣ:
ಸುಲೇಪೇಟ ಪೊಲೀಸ್ ಠಾಣೆ:  ದಿನಾಂಕಃ 16/03/2012 ರಂದು ದಸ್ತಾಪೂರದ ಅತ್ತೆ ಮನೆಗೆ ಹೋಗಿದ್ದು, ಮಧ್ಯರಾತ್ರಿ ದಿನಾಂಕಃ 17/03/2012 ರಂದು ನಾನು ಸರಕಾರಿ ಶಾಲೆಯ ಹತ್ತೀರ ಬಹಿರ್ದೆಸೆಗೆ ಹೋಗುವ ಸಮಯದಲ್ಲಿ ಪರಮೇಶ್ವರ @ ಅಪ್ಪು ತಂದೆ ನಾಗಪ್ಪ ಡೋಣಿ ಸಾಃ ದಸ್ತಾಪೂರ ಇತನು ನನಗೆ ಚಾಕು ತೋರಿಸಿ ಜೀವ ಬೇದರಿಕೆ ಹಾಕಿ ಶಾಲೆಯ ಗ್ರೌಂಡ ಹತ್ತೀರ ಕರೆದುಕೊಂಡು ಹೋಗಿ ಜಬರಿ ಸಂಭೋಗ ಮಾಡಿ ದಿನಾಂಕಃ 18/03/2012 ರಂದು ಬೆಳಿಗ್ಗೆ 8:00 ಗಂಟೆಗೆ ಮದುವೆಯಾಗಲು ಪರಮೇಶ್ವರನೊಂದಿಗೆ ಸುಲೇಪೇಟ ಪೊಲೀಸ್ ಠಾಣೆಗೆ ಬರುತ್ತಿರುವಾಗ ದಾರಿಯಲ್ಲಿ ಅಮೃತ ವಾಹನ ಚಾಲಕ ಸರಕಾರಿ ಆಸ್ಪತ್ರೆ ಸುಲೇಪೇಟ ಮತ್ತು ಅವನ ಹೆಂಡತಿಯಾದ ಸುಬ್ಬಮ್ಮ ಇವರು ಬಂದು ಅವಳಿಗೆ ಯಾಕೆ ಮದುವೆಯಾಗುತ್ತಿ, ನಿನಗೆ ಬೇರೆ ಮದುವೆ ಮಾಡಿಸುತ್ತೆವೆ. ನಾವು ಏನು ಬಂದರು ನೋಡಿಕೊಳ್ಳುತ್ತೆವೆ ಅಂತಾ ಹೇಳಿರುತ್ತಾರೆ. ನಾಗಪ್ಪ ತಂದೆ ತಿಪ್ಪಣ್ಣ ಡೋಣಿ ಹಾಗೂ ಕಲಾವತಿ @ ನಾಗಮ್ಮಾ ಗಂಡ ನಾಗಪ್ಪ ಡೋಣಿ ಸಾಃ ದಸ್ತಾಪೂರ ಇವರು ನನ್ನ ಮಗ ಸರಕಾರಿ ನೌಕರಿಯಲ್ಲಿದ್ದಾನೆ 5 ತೊಲೆ ಬಂಗಾರ ಹಾಗೂ 2 ಲಕ್ಷ ರೂಪಾಯಿ ಒಂದು ಹಿರೋ ಹೊಂಡಾ ಮೋಟಾರ ಸೈಕಲ ಮತ್ತು ವರದಕ್ಷಿಣೆ ಕೊಟ್ಟರೆ ಮದುವೆ ಮಾಡಿಸುತ್ತೆವೆ ಅಂತಾ ಹೇಳಿರುತ್ತಾರೆ ಅಂತಾ ನೊಂದ ಯುವತಿ ದೂರು ಸಲ್ಲಿಸಿದ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣಾ ಗುನ್ನೆ ನಂ. 31/2012 ಕಲಂ. 506, 504, 376, 109 ಸಂ. 149 ಐಪಿಸಿ ಪ್ರಕಾರ ಪ್ರಕರಣ ದಾಖಲು ಮಾಡಿಕೊಂಡಿರುತ್ತಾರೆ.
ಜೂಜಾಟ ಪ್ರಕರಣ:
ಗುಲಬರ್ಗಾ ಗ್ರಾಮೀಣ ಠಾಣೆ: ದಿನಾಂಕ 24-03-12 ರಂದು ಸಂಜೆ 5-00 ಗಂಟೆ ಸುಮಾರಿಗೆ ವೈಭವ ಟ್ರಾನ್ಸಪೋರ್ಟ ಎದುರುಗಡೆ ಖುಲ್ಲಾ ಜಾಗೆಯಲ್ಲಿ ಪ್ರವೀಣ ತಂದೆ ರೇವಣಸಿದ್ಧಪ್ಪ ಕೋರವಾರ ವ:34 ಸಾ: ಕೈಲಾಸ ನಗರ ಗುಲಬರ್ಗಾ, ಪ್ರಶಾಂತ ತಂದೆ ಕಮಲಾಕರ ವೀರಶಟ್ಟಿ ವ:32 ವರ್ಷ ಸಾ: ಆರ್.ಎಸ್. ಕಾಲನಿ ಗುಲಬರ್ಗಾ, ಹಣಮಂತ ತಂದೆ ಕಲ್ಯಾಣಪ್ಪ ತೇಲಿ ವ:24 ವರ್ಷ ಸಾ: ಸೈಯ್ಯದ ಚಿಂಚೋಳಿ, ವಿರೇಶ ತಂದೆ ನಾಗಪ್ಪ ಬಡಿಗೇರ ವ:30 ವರ್ಷ ಸಾ: ಬಸವೇಶ್ವರ ಕಾಲನಿ ಗುಲ್ಬರ್ಗಾ,ಭೀಮಾಶಂಕರ ತಂದೆ ಶಾಮಣ್ಣಾ ಕೊರವಿ ವ:31ವರ್ಷ ಸಾ: ಬಸವೇಶ್ವರ ಕಾಲನಿ ಗುಲಬರ್ಗಾರವರು ದುಂಡಾಗಿ ಕುಳಿತುಕೊಂಡು ಇಸ್ಟೇಟ ಜೂಜಾಟ ಆಡುತ್ತಿದ್ದ ಬಗ್ಗೆ ಬಾತ್ಮಿ ಮೇರೆಗೆ ಪಿ.ಎಸ.ಐ ಮತ್ತು ಠಾಣೆಯ ಸಿಬ್ಬಂದಿಯವರು ಕೂಡಿಕೊಂಡು ಪಂಚರ ಸಮಕ್ಷಮ ದಾಳಿ ಮಾಡಿ ಆವರನ್ನು ವಶಕ್ಕೆ ತೆಗೆದುಕೊಂಡು ಅವರಿಂದ ನಗದು ಹಣ 8190/- ರೂ. ಮತ್ತು ಇಸ್ಪೇಟ ಎಲೆಗಳು ಜಪ್ತಿ ಮಾಡಿಕೊಂಡಿದ್ದರ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 92/2012 ಕಲಂ 87 ಕೆ.ಪಿ.ಆಕ್ಟ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಅಪಹರಣ ಪ್ರಕರಣ:
ಗುಲಬರ್ಗಾ ಗ್ರಾಮೀಣ ಠಾಣೆ: ಶ್ರೀ ಮಯೂರ ತಂದೆ ವಿಜಯಕುಮಾರ ಪುಕಾಳೇ ಸಾ|| ಪುಣಾಣಿ ಗಲ್ಲಿ ಗುಲಬರ್ಗಾರವರು ನಾನು ಮತ್ತು ನಸ್ರೀನ ಇವಳು ಬೇರೆ ಬೇರೆ ಜಾತಿಗೆ ಸೇರಿದವರಾಗಿದ್ದು, ನನ್ನ ಮತ್ತು ನಸ್ರೀನ ಇವರ ಮಧ್ಯೆ ಪ್ರೀತಿ ಬೆಳೆದು ದಿನಾಂಕ 22-01-2012 ರಂದು ಮನೆ ಬಿಟ್ಟು ಹೋಗಿ ದಿನಾಂಕ 31-01-2012 ರಂದು ಯಾದಗೀರ ಕೋರ್ಟ ಹಿಂದುಗಡೆಯಿರುವ ಲಕ್ಷ್ಮೀ ದೇವಸ್ಥಾನದಲ್ಲಿ ಮದುವೆ ಮಾಡಿಕೊಂಡಿರುತ್ತೆವೆ. ನಾವು ಮದುವೆಯಾಗುವದಕ್ಕೆ ಮನೆಯವರು ವಿರೋಧ ವ್ಯಕ್ತ ಪಡಿಸಿದ್ದು ಇರುತ್ತದೆ. ದಿನಾಂಕ 3-03-2012 ರಂದು ರಾತ್ರಿ 8-00 ಗಂಟೆ ಸುಮಾರಿಗೆ ಮುಕ್ತಾರ ಅತ್ತಾರ, ಪರವೀನ ತಂದೆ ಮುಕ್ತಾರ ಅತ್ತಾರ ಸಾ: ಇಬ್ಬರು ಶುಕ್ರವಾರ ಪೇಟ್ ಕೋಂಟಮ್ ಚೌಕ ಸೋಲಾಪೂರ ಮತ್ತು ಇತರರು ಮಾಹಾರಾಷ್ಟ ರಾಜ್ಯ ತನ್ನ ಮಗಳಾದ ನಸ್ರೀನ ಇವಳಿಗೆ ಮಾತಾಡುವದಿದೆ ಮತ್ತು ಭೇಟ್ಟಿಯಾಗುವದಿದೆ ಎಂದು ಹೇಳಿ ಗುಲಬರ್ಗಾದ ಮಸಾಪ್ತಿ ದರ್ಗಾ ಹತ್ತಿರ ಕರೆಯಿಸಿಕೊಂಡ ಮೇರೆಗೆ ನಾವು ಹೋದಾಗ ನಮ್ಮ ಜಾತಿ ಬೇರೆ ನಿಮ್ಮ ಜಾತಿ ಬೇರೆ ನಿಮ್ಮ ಮದುವೆ ಒಪ್ಪುದಿಲ್ಲಾವೆಂದು ಹೇಳಿ ನಸ್ರೀನ ಇವಳನ್ನು ಜಬರ ದಸ್ತಿಯಿಂದ ಟಾಟಾ ಸುಮೊದಲ್ಲಿ ಅಪಹರಿಸಿಕೊಂಡು ಹೋಗಿರುತ್ತಾರೆ. ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ:93/2012 ಕಲಂ 365 366 368 504 506 ಸಂಗಡ 34 ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.

ಕುಡಿತದ ಚಟಕ್ಕೆ ಬಲಿಯಾಗಿ ಆತ್ಮಹತ್ಯೆ ಮಾಡಿಕೊಂಡ ಪ್ರಕರಣ:

ಬ್ರಹ್ಮಪೂರ ಠಾಣೆ: ಶ್ರೀಮತಿ.ಕಮಲಾಬಾಯಿ ಗಂಡ ಸಿದ್ದಣ್ಣ ಚಾಣಕರ್, ಸಾ|| ಜಗತ ಗುಲಬರ್ಗಾ ರವರು ನನಗೆ 4 ಜನ ಹೆಣ್ಣು ಮಕ್ಕಳು ಪ್ರಕಾಶ ಅಂತಾ ಒಬ್ಬ ಗಂಡು ಮಗ ಇದ್ದು, 4 ಜನ ಹೆಣ್ಣು ಮಕ್ಕಳ ಮದುವೆ ಮಾಡಿದ್ದು, ಪ್ರಕಾಶ ಈತನಿಗೆ ಇನ್ನೂ ಮದುವೆಯಾಗಿರುವದಿಲ್ಲ. ಮಗ ಪ್ರಕಾಶ ಈತನು ಯಾವುದೇ ಕೆಲಸ ಮಾಡದೆ ಕುಡಿತದ ಚಟಕ್ಕೆ ಬಲಿಯಾಗಿದ್ದು, 7-8 ದಿವಸಗಳ ಹಿಂದೆ ಕುಡಿದ ಅಮಲಿನಲ್ಲಿ ಬಂದು ನೀವು ಹಣ ಕೊಡದೆ ಇದ್ದರೆ ನಾನು ಮೈಗೆ ಬೆಂಕಿ ಹಚ್ಚಿಕೊಂಡು ಆತ್ಮ ಹತ್ಯೆ ಮಾಡಿಕೊಳ್ಳುತ್ತೇನೆ ಅಂತಾ ಹೇಳಿದ್ದನು, ಈ ಹಿಂದೆಯು ಕೂಡ 2006 ನೇ ಸಾಲಿನಲ್ಲಿ ಮೈಗೆ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಳ್ಳಲು ಪ್ರಯತ್ನಿಸಿರುತ್ತಾನೆ , ದಿನಾಂಕ: 24/03/2012 ರಂದು ರಾತ್ರಿ 9:00 ಗಂಟೆಯ ಸುಮಾರಿಗೆ ನಾನು ನನ್ನ ಮಗಳು ಪೂರ್ಣಿಮಾ, ಮತ್ತು ಪ್ರೀಯಾ ಮೂರು ಜನರು ಕೂಡಿಕೊಂಡು ಮೆಲಗಡೆ ಮಹಡಿ ಕೋಣೆಯಲ್ಲಿ ಟಿ.ವ್ಹಿ ನೋಡುತ್ತಾ ಇದ್ದೇವು. ಕೆಳಗಡೆ ಅಡುಗೆ ಕೋಣೆಯಲ್ಲಿ ಹೊಗೆ ಬರುವದನ್ನು ನೋಡಿ ನಾವು ಮೂರು ಜನರು ಕೆಳಗೆ ಬಂದು ನೋಡಲು ನಮ್ಮ ಮಗ ಪ್ರಕಾಶ ಈತನು ಕೊರಳಿಗೆ ಮತ್ತು ಎರಡು ಕೈಗೆ ಹಗ್ಗ ಕಟ್ಟಿಕೊಂಡು ಮೈಮೇಲೆ ಸೀಮೆ ಎಣ್ಣೆ ಸುರಿದುಕೊಂಡು ಮೈಗೆ ಬೆಂಕಿಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುತ್ತಾನೆ. ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಯು.ಡಿ.ಆರ್ ನಂ:5/2012 ಕಲಂ: 174 ಸಿ.ಆರ್.ಪಿ.ಸಿ .ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ

24 March 2012

GULBARGA DIST REPORTED CRIMES

ಆಕಸ್ಮಿಕ ಬೆಂಕಿ ಅಪಘಾತ ಪ್ರಕರಣ:

ಕಮಲಾಪೂರ ಪೊಲೀಸ್ ಠಾಣೆ. ಶ್ರೀ. ಗಣಪತರಾವ ತಂದೆ ನಾಗಪ್ಪ ಸೋನಾನೆ ಸಾ||ಬೇಲೂರ [ಕೆ] ತಾ||ಜಿ|| ಗುಲಬರ್ಗಾರವರು ನಮ್ಮ ಹೊಲ ಬೇಲೂರ [ಕೆ] ಸೀಮಾಂತರದ ಸರ್ವೆ ನಂಬರ 81 ಇದ್ದು 12 ಪತ್ರಾಗಳನ್ನು ಹಾಕಿ ಮನೆ ಕಟ್ಟಿದ್ದು, ದಿನಾಂಕ:23-03-2012 ರಂದು ಮಧ್ಯಾಹ್ನ 2-00 ಗಂಟೆ ಸುಮಾರಿಗೆ ಮನೆಗೆ ಆಕಸ್ಮೀಕವಾಗಿ ಬೆಂಕಿ ತಗುಲಿ ಮನೆಯಲ್ಲಿಟ್ಟಿದ್ದ ಒಕ್ಕಲುತನದ ಸಾಮಾನುಗಳು ಮತ್ತು ಮನೆಯೊಳಗಿನ, ಹೊರಗಡೆ ನಿಲ್ಲಿಸಿದ್ದ ಎತ್ತಿನ ಗಾಡಿ,ಮನೆಯ ಹಿಂದೆ ಸಂಗ್ರಹಿಸಿ ಇಟ್ಟಿದ್ದು ಎರಡು ಗಾಡಿ ಜೋಳದ ಕಣಕಿ ಸುಟ್ಟು ಭಸ್ಮವಾಗಿ ಅಂದಾಜು ರೂ. 30000/- ನಾಶವಾಗಿರುತ್ತದೆ. ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಎಫ್.ಎ.ನಂ: 03/2012 ಕಲಂ ಆಕಸ್ಮೀಕ ಬೆಂಕಿ ಅಪಘಾತ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.

ಕಾಣೆಯಾದ ಪ್ರಕರಣ:

ನೆಲೋಗಿ ಪೊಲೀಸ್ ಠಾಣೆ:ಶ್ರೀ ದೇನು ತಂದೆ ಡಾಕು ರಾಠೋಡ ಸಾ||ಮಂದೇವಾಲ ತಾಂಡಾ ವರು ನನ್ನ ಮಗಳಾದ ಕವಿತಾಬಾಯಿ ವಯ: 16-17 ಇದ್ದು (ವರ್ಷ) ಇವಳು ದಿನಾಂಕ 15/03/2012 ರಂದು ರಾತ್ರಿ ಊಟ ಮಾಡಿ ಮಲಗಿಕೊಂಡಿದ್ದು, ರಾತ್ರಿ 11:00 ಗಂಟೆಯ ಸುಮಾರಿಗೆ ಕವಿತಾ ಇವಳು ಮನೆಯಲ್ಲಿ ಯಾರಿಗೂ ಹೇಳದೇ ಕೇಳದೇ ಮನೆ ಬಿಟ್ಟು ಹೋಗಿರುತ್ತಾಳೆ. ನಾವು ನಮ್ಮ ಸಂಬಂಧಿಕಕಡೆಗಳಲ್ಲಿ ಹುಡುಕಾಡಿದೆವು ಎಲ್ಲಿಯು ಪತ್ತೆಯಾಗಿರುವದಿಲ್ಲ. ನನ್ನ ಮಗಳಾದ ಕವಿತಾ ಇವಳ ಚೆಹರೆ ಪಟ್ಟಿಯ ಗುರುತುಗಳು ಹೆಸರು-ಕವಿತಾ, ಎತ್ತರ-5 ಅಡಿ ವಯಸ್ಸು- 16-17 , ತೆಳ್ಳನೆ ಮೈಕಟ್ಟು, ದುಂಡು ಮುಖ, ಗೋದಿ ಮೈಬಣ್ಣ, ಜಾತಿ- ಲಮಾಣಿ, ಮಾತನಾಡುವ ಭಾಷೆಗಳು- ಕನ್ನಡ, ಲಮಾಣಿ ಬಾಷೆ ಬಲ್ಲವಳಾಗಿರುತ್ತಾಳೆ, ಇವಳು ಕಪ್ಪು ಬಣ್ಣದ ನೈಟಿ ಹಾಕಿಕೊಂಡಿರುತ್ತಾಳೆ ಇವಳನ್ನು ಪತ್ತೆ ಮಾಡಿಕೊಡಲು ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ:35/2012 ಕಲಂ ಹುಡಗಿ ಕಾಣಿಯಾದ ಬಗ್ಗೆ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ. ಸದರಿಯವರ ಸುಳಿವು ಸಿಕ್ಕಲ್ಲಿ ಸಂಪರ್ಕಿಸಬೇಕಾದ ದೂರವಾಣಿ ಸಂಖ್ಯೆಗಳು: 08442-225033/ 08472-263604 ಮೋಬಾಯಿಲ್ ನಂ: 9480803562 ನೇದ್ದವುಗಳಿಗೆ ಸಂಪರ್ಕಿಸಲು ಕೋರಲಾಗಿದೆ,

GULBARGA DIST REPORTED CRIME

ಅಪಘಾತ ಪ್ರಕರಣ:

ಗ್ರಾಮೀಣ ಪೊಲೀಸ ಠಾಣೆ: ಶ್ರೀ ಶರಣಬಸಯ್ಯ ತಂದೆ ವೀರಯ್ಯ ಹಿರೇಮಠ ಸಾ||ಕಲ್ಲಹಂಗರಗಾ ತಾ||ಜಿ||ಗುಲಬರ್ಗಾರವರು ನನ್ನ ಮಗನಾದ ಕಾರ್ತೀಕ ವ:13 ವರ್ಷ ಇತನು ಉದನೂರ ರಿಂಗ ರೋಡ ಕ್ರಾಸಿನಲ್ಲಿ ಸೈಕಲ ಪಂಕ್ಚರ ಮಾಡಿಸಿಕೊಂಡು ಮನೆಯ ಕಡೆಗೆ ಸೈಕಲ ಮೇಲೆ ಬರುತ್ತಿರುವಾಗ ಹೈ ಕೋರ್ಟ ರಿಂಗ ರೋಡ ಕಡೆಯಿಂದ ಕೆ.ಎಸ್.ಅರ್.ಟಿ.ಸಿ. ಬಸ್ಸ ಕೆಎ 32 ಎಫ 1442 ನಾಗಪ್ಪ ಚಿಂಚೋಳಿ ಡಿಪೋ ರವರು ತೀವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ನನ್ನ ಮಗನ ಸೈಕಲಿಗೆ ಡಿಕ್ಕಿ ಹೊಡೆದಿದ್ದರಿಂದ ಭಾರಿ ರಕ್ತಗಾಯವಾಗಿ ಸ್ಥಳದಲ್ಲಿ ಮೃತಪಟ್ಟಿರುತ್ತಾನೆ. ಕಾರಣ ಕೆ.ಎಸ್.ಅರ್.ಟಿ.ಸಿ. ಬಸ್ಸ ಚಾಲಕನ ಮೇಲೆ ಕಾನೂನು ಕ್ರಮ ಜರುಗಿಸಬೇಕೆಂದು ಕೊಟ್ಟ ಹೇಳಿಕೆ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ. 90/2012 ಕಲಂ 279,304(ಎ) ಐಪಿಸಿ ಸಂಗಡ 187 ಎಂ.ವಿ.ಕ್ಟ ಪ್ರಕಾರ ಗುನ್ನೆ ದಾಖಲಿಸಿಕೊಂಡು ತನಿಖೆ ಕೈ ಕೊಂಡಿರುತ್ತಾರೆ.

23 March 2012

GULBARGA DIST REPORTED CRIME

ಹುಡಗ ಕಾಣೆಯಾದ ಬಗ್ಗೆ:
ರೋಜಾ ಪೊಲೀಸ್ ಠಾಣೆ:
ಶ್ರೀ ಅಸ್ಲಂ ಖಾನ ತಂದೆ ಮುಸ್ತಫಾ ಖಾನ ಪಠಾಣ ವಯ:27, ಉ:ಸಿರಾಮಿಕ್ ಟೈಲ್ಸ್ ವ್ಯಾಪಾರ ಜಾ:ಮುಸ್ಲಿಂ ಸಾ:ಮನೆ ನಂ.201 ನಿರಾಲಾ ಪಾರ್ಕ ಪಾಲೇಜ ತಾಜಿಬರೋಚ ಗುಜರಾತ ರಾಜ್ಯ ರವರು ನನ್ನ ಚಿಕ್ಕಪ್ಪನ ಮಗ ಅಶ್ರಾರ ತಂದೆ ಸಾಬೀರ ಖಾನ ಪಠಾಣ ಈತನು ದಿನಾಂಕ:05/03/2012 ರಂದು 5:00 ಪಿಎಮ್ ಕ್ಕೆ ವಿ.ಐ.ಪಿ ಹಾಸ್ಟೆಲ್ ದಿಂದ ಊರಿಗೆ ಹೋಗುತ್ತೇನೆ ಅಂತಾ ತನ್ನ ರೂಮಂಟ ಹುಡುಗನಿಗೆ ಹೇಳಿ ಗುಲಬರ್ಗಾದಿಂದ ಹೊರಟಿರುತ್ತಾನೆ. ಈ ವಿಷಯ ನಮಗೆ ದಿನಾಂಕ:11/03/2012 ರಂದು ಗೊತ್ತಾಗಿ ನಾನು ನನ್ನ ಚಿಕ್ಕಪ್ಪನ ಎಲ್ಲಾ ಸಂಬಂದಿಕರಲ್ಲಿ ಹುಡುಕಾಡಿದರೂ ಸಹ ಇಲ್ಲಿಯವರೆಗೆ ಪತ್ತೆಯಾಗಿರುವದಿಲ್ಲಾ, ನನ್ನ ಚಿಕ್ಕಪ್ಪನ ಮಗ ಸಿಗದೇ ಇರುವದರಿಂದ ಠಾಣೆಗೆ ಬಂದು ಇಂಗ್ಲೀಷನಲ್ಲಿ ಲಿಖಿತ ದೂರು ಸಲ್ಲಿಸಿರುತ್ತಾರೆ, ಕಾಣೆಯಾಗಿರುವ ಹುಡಗನ ಚಹರೆ ಪಟ್ಟಿ 5.5” ಇಂಚ ಎತ್ತರ,ತೆಳ್ಳನೆ ಮೈಕಟ್ಟು, ಸಾದಾ ಕೆಂಪು ಬಣ್ಣ, ಎಡಗೈ ಮುರಿದ್ದು, ಕೈಗೆ ರಾಡ ಹಾಕಿದ ಗುರುತುಗಳು ಇರುತ್ತವೆ, ಸದರಿಯವನು ಹಿಂದಿ, ಇಂಗ್ಲೀಷ, ಗುಜರಾತಿ ಭಾಷೆ ಬಲ್ಲವನಾಗಿರುತ್ತಾನೆ ಅಂತಾ ದೂರು ಸಲ್ಲಿಸಿದ ಅರ್ಜಿಯ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ.24/2012 ಕಲಂ ಮನುಷ್ಯ ಕಾಣಿಯಾದ ಬಗ್ಗೆ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ. ಇತನ ಬಗ್ಗೆ ಸುಳಿವು ಸಿಕ್ಕಲ್ಲಿ ಸಂಪರ್ಕಿಸಬೇಕಾದ ದೂರವಾಣಿ ಸಂಖ್ಯೆಗಳು:08472-263623/263604/263608 ಅಥವಾ ಮೊಬಾಯಿಲ್ ನಂ: 9480803550 ನೇದ್ದವುಗಳಿಗೆ ಸಂಪರ್ಕಿಸಲು ಕೋರಲಾಗಿದೆ.

GULBARGA DIST REPORTED CRIMES

ಅಪಘಾತ ಪ್ರಕರಣ:

ಹೆಚ್ಚುವರಿ ಸಂಚಾರಿ ಪೊಲೀಸ್ ಠಾಣೆ: ಶ್ರೀ ಜಗನ್ನಾಥ ತಂದೆ ನಿಲಕಂಠರಾವ ಮಾಲಿ ಪಾಟೀಲ ಸಾ: ಮನೆ ನಂ:2-910/66/30 ಜಯನಗರ ಗುಲಬರ್ಗಾ ರವರು ದಿನಾಂಕ 22-03-12 ರಂದು ಮಧ್ಯಾಹ್ನ ಗಂಟೆಯ ಸುಮಾರಿ ಜಿ.ಜಿ.ಹೆಚ್.ಸರ್ಕಲ್ ದಿಂದ ಆರ್.ಟಿ.ಓ.ಕ್ರಾಸ್ ರೋಡ ಮಧ್ಯ ಗುಮ್ಮಜ ಎದುರು ರೋಡಿನ ಮೇಲೆ ಆರೋಪಿ ಮೋಟಾರ ಸೈಕಲ್ ನಂ: ಕೆಎ 32 ಇಎ 4175 ನೇದ್ದನ್ನು ಅತಿವೇಗವಾಗಿ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ನಾನು ಕುಳಿತು ಹೋಗುತ್ತಿದ್ದ ಮೋಟಾರ ಸೈಕಲ್ ನಂ:ಕೆಎ 32 ಎಲ್ 9828 ನೇದ್ದಕ್ಕೆ ಹಿಂದಿನಿಂದ ಡಿಕ್ಕಿ ಪಡಿಸಿಗೊಳಿಸಿ ತನ್ನ ಮೋಟಾರ ಸೈಕಲ್ ಸಮೇತ ಓಡಿ ಹೋಗಿರುತ್ತಾನೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 35/2012 ಕಲಂ: 279,337 ಐ.ಪಿ.ಸಿ ಸಂ:187 ಐ.ಎಮ್.ವಿ.ಆಕ್ಟ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾನೆ,

ಹಲ್ಲೆ ಪ್ರಕರಣ:

ಗುಲಬರ್ಗಾ ಗ್ರಾಮೀಣ ಠಾಣೆ: ಶ್ರೀಮತಿ ಬೋರಮ್ಮಾ ಗಂಡ ಬಸವರಾಜ ಪಾಟೀಲ ಸಾ:ಔರಾದ ತಾ:ಜಿ:ಗುಲಬರ್ಗಾ ಹಾ||||ಬಿದ್ದಾಪುರ ಕಾಲೋನಿ ಗುಲಬರ್ಗಾರವರು ನಾನು ಇಮಾಮ ಪಟೇಲ @ ಸಿಕಂದರ ಇತನೊಂದಿಗೆ ಅನೈತಿಕ ಸಂಬಂಧ ಇಟ್ಟುಕೊಂಡಿದ್ದು, ಈ ವಿಷಯ ಆತನ ಮಗನಿಗೆ ಗೊತ್ತಾಗಿದ್ದು, ದಿನಾಂಕ 22-03-12 ರಂದು ಬೆಳಿಗ್ಗೆ 5-30 ಗಂಟೆ ಸುಮಾರಿಗೆ ನಾನು ನನ್ನ ಮನೆಯ ಮುಂದಿನ ಕಸ ಗೂಡಿಸುತ್ತಿರುವಾಗ ಎಂ.ಡಿ ಅಮೀರ ಇತನು ತನ್ನ ತಂದೆ ಜೊತೆ ಇಟ್ಟುಕೊಂಡ ಸಂಬಂಧ ಬಿಡು ಅಂತಾ ದ್ವೇಷದಿಂದ ಅವಾಚ್ಯವಾಗಿ ಬೈಯ್ದು ತನ್ನ ಹತ್ತಿರವಿದ್ದ ಚಾಕು ತೆಗೆದು ನನಗೆ ಎಡ ಕುತ್ತಿಗೆ ಮೇಲೆ, ಎದೆಯ ಮೇಲೆ ಎರಡು ಅಂಗೈಯ ಮತ್ತು ಮಣಿಕಟ್ಟಿನ ಮೇಲೆ ಹೊಡೆದು ಭಾರಿ ರಕ್ತಗಾಯಗೊಳಿಸಿ ಮರಣಾಂತಿಕ ಹಲ್ಲೆ ಮಾಡಿರುತ್ತಾನೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 89/2012 ಕಲಂ 504 307 ಐ.ಪಿ.ಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.