POLICE BHAVAN KALABURAGI

POLICE BHAVAN KALABURAGI

03 June 2013

GULBARGA DISTRICT REPORTED CRIME

ಹಲ್ಲೆ ಪ್ರಕರಣ:

ಸೇಡಂ ಪೊಲೀಸ್ ಠಾಣೆ:ದಿನಾಂಕ:02-06-2013 ರಂದು ಬೆಳಗ್ಗೆ 7-30 ಗಂಟೆ ಸುಮಾರಿಗೆ ಮನೆಯಿಂದ ನಮ್ಮೂರ ಬಸಣ್ಣ ದೇವರ ಗುಡಿಗೆ ಹೊರಟಿದ್ದಾಗ ಗುಡಿಯ ಹತ್ತಿರ ಕುಳಿತ್ತಿರುವ  ಜಗಪ್ಪ ತಂದೆ ಸಂಗಣ್ಣಾ ಬುಸನೂರ ಇವರು ಕರೆದು ಮಾತನಾಡಿಸುತ್ತಿರುವಾಗ ಪಕ್ಕದಲ್ಲಿಯೇ ಇದ್ದ ಭೀಮರಾಯ ಪಾಂಪೊರ ಇತನು ನನಗೆ ವಾರೆ ಗಣ್ಣಿನಿಂದ ನೋಡುತ್ತಿದ್ದನು. ಆಗ ನಾನು ಹೀಗೇಕೆ ನೋಡುತ್ತಿದ್ದಿ ಅಂತ ಕೇಳಿದಕ್ಕೆ ಅವನು ಅವಾಚ್ಯವಾಗಿ ಬೈದು ನೀನು ಕಾಂಗ್ರೇಸ್ ದವನು ನಾನು ಬಿ.ಜೆ.ಪಿ. ದವವನು ನಮಗೆ ಯ್ಯಾಕೆ ಮಾತಾಡುತ್ತಿ ಅಂತ ಬೈದು ಕೈಯಿಂದ ಹೊಡೆದು ಜಗಳ ಮಾಡುತ್ತಿದ್ದನು. ಅಷ್ಟರಲ್ಲಿ ಅಲ್ಲಿಯೇ ಪಕ್ಕದಲ್ಲಿಯೇ ಇದ್ದ ಆತನ ಮಕ್ಕಳಾದ ಹಣಮಂತ ತಂದೆ ಭೀಮರಾಯ ಪಾಂಪೊರ ಮತ್ತು ನರಸಪ್ಪ ತಂದೆ ಭೀಮರಾಯ ಪಾಂಪೊರ ರವರು ಬಂದು ಹೊಡೆದು ರಕ್ತ ಹಾಗೂ ಗುಪ್ತಗಾಯ ಮಾಡಿರುತ್ತಾರೆ ಅಂತ ಶ್ರೀ.ಜೀಕಪ್ಪ ತಂದೆ ಬಸಣ್ಣಾ ಗುಳ್ಳೇರ, ಸಾ:ನಾಚವಾರ ಗ್ರಾಮ ಇವರು ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ:138/2013 ಕಲಂ, 341, 323, 324, 504 ಸಂಗಡ 34 ಐಪಿಸಿ ಪ್ರಕಾರಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ. 

GULBARGA DISTRICT REPORTED CRIMES

ಅಪಘಾತ ಪ್ರಕರಣ:
ಫರತಬಾದ ಪೊಲೀಸ್ ಠಾಣೆ: ನಾನು ಮತ್ತು ನನ್ನ ಮಗ ನಿಂಗಪ್ಪಾ ಇಬ್ಬರು ದಿನಾಂಕ: 01-6-2013 ರಂದು ಮದ್ಯಾಹ್ನ 3.00 ಗಂಟೆ ಸುಮಾರಿಗೆ ನಮ್ಮೂರಿಗೆ ಹೋಗುವ ಸಲುವಾಗಿ ಫಿರೋಜಾಬಾದ ಗ್ರಾಮದಿಂದ ಶಾಹಾಬಾದ ಕ್ರಾಸಿಗೆ ಬಂದು ಜೇವರ್ಗಿ ಕಡೆಯಿಂದ ವಾಡಿಗೆ ಹೋಗುತ್ತಿರುವ ಕೆಎ-32 ಬಿ- 1769 ಕ್ರೊಜರ ಜೀಪ ಬಂದಿದ್ದು, ಅದರಲ್ಲಿ ಕುಳಿತುಕೊಂಡು ಶಾಹಾಬಾದ ಮಾರ್ಗವಾಗಿ ವಾಡಿಗೆ ಹೊರಟ್ಟಿದ್ದೆವು  ಜೀಪಿನಲ್ಲಿ ಡ್ರೈವರ ಮತ್ತು ಅವನ ಸಂಗಡ ಇನ್ನೊಬ್ಬನಿದ್ದನು. ಎರಡು ಕಿಲೋಮಿಟರ್ ನಂತರ ಜೀಪ ಚಾಲಕನು ತನ್ನ ಜೀಪನ್ನು ಅತಿವೇಗ ಮತ್ತು ಅಲಕ್ಷತನದಿಂದ ನಡೆಯಿಸಿ ಪಲ್ಟಿ ಮಾಡಿದ್ದರಿಂದ ನನಗೆ ಭಾರಿ ಗುಪ್ತಗಾಯ ಆಗಿರುತ್ತದೆ. ನನ್ನ ಮಗ ನಿಂಗಪ್ಪನಿಗೆ ಬಲಗೈ ಮುಂಡಿಗೆ ತೆರಚಿದ ಗಾಯವಾಗಿದ್ದು ಇರುತ್ತದೆ. ಜೀಪಿನ ಚಾಲಕನಿಗೆ ಮತ್ತು ಅವನ ಜೊತೆ ಇದ್ದವನಿಗೆ ಇಬ್ಬರಿಗೂ ತೆರಚಿದ ರಕ್ತಗಾಯಗಾಳಾಗಿರುತ್ತವೆ. ನನಗೆ ಮತ್ತು ನನ್ನ ಮಗ ನಿಂಗಪ್ಪನು ಇತನಿಗೆ ಜೇವರ್ಗಿ ಸರಕಾರಿ ಆಸ್ಪತ್ರೆ ಉಪಚಾರಕ್ಕೆ ತಗೆದುಕೊಂಡು ಹೋಗಿದ್ದು ಅಲ್ಲಿಂದ ಹೆಚ್ಚಿನ ಉಪಚಾರ ಕುರಿತು ಗುಲಬರ್ಗಾದ ಕಾಮರಡ್ಡಿ ಆಸ್ಪತ್ರೆಗೆ ತಂದು ಸೇರಿಕೆ ಮಾಡಿರುತ್ತಾರೆ ಅಂತಾ ದೊಡ್ಡಮ್ಮ ಗಂಡ ಸಂಜಿವೇಪ್ಪಾ ಯರಗೋಳ ಸಾ|| ಯರಗೋಳ ತಾ:ಜಿ: ಯಾದಗಿರ ರವರು ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 77/2013 ಕಲಂ:  279, 337, 338 ಐಪಿಸಿ & 187 ಐಎಂವಿ ಆಕ್ಟ್   ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಅಪಘಾತ ಪ್ರಕರಣ:
ಸಂಚಾರಿ ಪೊಲೀಸ್ ಠಾಣೆ:ದಿನಾಂಕ 21-05-2013 ರಂದು ಸಾಯಂಕಾಲ 7-30 ಗಂಟೆ ಸುಮಾರಿಗೆ ರೋಜಾ ಗೋಸ್ ಮಾರ್ಕೆಟ ಎದರುಗಡೆ ರೋಡಿನ ಮೇಲೆ ಉಮ್ಮೆ ಸುವೇಬಾ, ವಯಾ||6 ವರ್ಷ, ಇವಳು ನಡೆದುಕೊಂಡು ಹೋಗುತ್ತಿದ್ದಾಗ ಅರ್ಮದಾ ಜೀಪ ನಂ. ಎಮ್.ಎಚ್ 12 ವೈ.ಎ 6469 ನೇದ್ದರ ಚಾಲಕ ತನ್ನ ಜೀಪನ್ನು ಅತಿವೇಗ ಮತ್ತು ಅಲಕ್ಷತನದಿಂದ ಚಲಾಯಿಸಿ ನಡೆದುಕೊಂಡು ಹೋಗುತ್ತಿದ್ದ ಕು. ಉಮ್ಮೆ ಸುವೇಬಾ ಇವಳಿಗೆ ಡಿಕ್ಕಿ ಪಡಿಸಿ ಭಾರಿಗಾಯಗೊಳಿಸಿ ತನ್ನ ಜೀಪ ಸಮೇತ ಓಡಿ ಹೋಗಿರುತ್ತಾನೆ ಅಂತಾ ಶ್ರೀ ಅಶ್ರಫ ಅಲಿಖಾನ ತಂದೆ ಅಬ್ದುಲ ಅಜೀಜಖಾನ, ಸಾಃ ಚೋಟಾ ದೌಡಿ ಚೋಟಾ ರೋಜಾ ಗುಲಬರ್ಗಾ ರವರು ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ:32/2013 ಕಲಂ 279,338 ಐಪಿಸಿ ಸಂಗಡ 187 ಐ.ಎಮ್.ವಿ ಆಕ್ಟ  ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಕಳ್ಳತನ ಪ್ರಕರಣ:

ಅಶೋಕ ನಗರ ಪೊಲೀಸ್ ಠಾಣೆ: ನಾನು ದಿನಾಂಕ:02/06/2013 ರಂದು ಸಾಯಂಕಾಲ 5-40 ಗಂಟೆ ಸುಮಾರಿಗೆ ಅಫಜಲಪೂರದಿಂದ ಗುಲಬರ್ಗಾ ಶಾಂತಿನಗರ ನನ್ನ ಮನೆಗೆ ಬಂದು ನೋಡಲು ಕಂಪೌಂಡ ಗೇಟಿಗೆ ಬಾಗಿಲ ಕೊಂಡಿ ಮುರಿದಿರುತ್ತದೆ. ಒಳಗೆ ಹೋಗಿ ನೋಡಲು ಸಾಮಾನುಗಳು ಚಲ್ಲಾಪಿಲ್ಲಿಯಾಗಿ ಬಂದಿದ್ದು ಅಲಮಾರಿ ತೆರೆದಿದ್ದು ದಿನಾಂಕ:30/05/2013 ರಿಂದ 02/06/2013 ರ ಮಧ್ಯದ ಅವಧಿಯಲ್ಲಿ ಯಾರೋ ಕಳ್ಳರು ನನ್ನ ಮನೆಯ ಬಾಗಿಲ ಕೀಲಿ ಮುರಿದು ಅಲಮಾರಿಯಲ್ಲಿಟ್ಟಿದ್ದ ನಗದು ಹಣ 30,000/- ಬಂಗಾರದ ಜುಮಕಿ ಹೂ. ಹೀಗೆ ಒಟ್ಟು 15,000/- ರೂ ಬೇಲೆ ಬಾಳುವುದು ಹೀಗೆ ಒಟ್ಟು 45,000/- ರೂಪಾಯಿಗಳದ್ದು ಕಳವು ಮಾಡಿಕೊಂಡು ಹೋಗಿರುತ್ತಾರೆ ಅಂತಾ ಶ್ರೀ ಅಫ್ತಾಬ ತಂದೆ ಅಬ್ದುಲ್ ರಜಾಕ ಪಟೇಲ ಸಾ: ಎಲ್.ಐ.ಜಿ 165 ಶಾಂತಿ ನಗರ ಗುಲಬರ್ಗಾ ರವರು ದೂರು ಸಲ್ಲಿಸಿದ ಸಾರಾಂಶದ ಠಾಣೆ ಗುನ್ನೆ ನಂ. 89/2013 ಕಲಂ. 454,457,380 ಐಪಿಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಕೆ ಕೈಕೊಂಡಿರುತ್ತಾರೆ.