POLICE BHAVAN KALABURAGI

POLICE BHAVAN KALABURAGI

21 February 2015

Kalaburagi District Reported Crimes

ಹೆಣ್ಣುಮಕ್ಕಳಿಗೆ ಚುಡಾಯಿಸಿ ಜೀವದ ಬೇದರಿಕೆ ಹಾಕಿದ ಪ್ರಕರಣ :
ಜೇವರ್ಗಿ ಠಾಣೆ : ಶ್ರೀ ಭೀಮಣ್ಣಾ ತಂದೆ ಸಾಯಬಣ್ಣ ತಳವಾರ ಸಾ|| ಆಂದೋಲಾ  ರವರ  ಮಗಳಾದ ಶೈಲಾಶ್ರೀ ಮತ್ತು ಅವಳ ಗೇಳತಿಯರಾದ ರೇಖಾ, ಸಿದ್ದಮ್ಮ ಇವರೊಂದಿಗೆ ನಮ್ಮೂರ ಕೇನಾಲ್‌ನಲ್ಲಿ ಬಟ್ಟೆ ತೋಳೆದುಕೊಂಡು ನಮ್ಮೂರ ಯಲ್ಲಮ್ಮ ದೇವಸ್ಥಾನದ ಹತ್ತಿರ ಮರಳಿ ಮನೆಯ ಕಡೆಗೆ ಬರುತ್ತಿದ್ದಾಗ ನಮ್ಮೂರಿನವರಾದ ಶರೀಫ್ ತಂದೆ ಮಹ್ಮದ್ ಚಿತ್ತಾಪುರ ಮತ್ತು ಮೈನೊದ್ದಿನ್ ತಂದೆ ಮಹೀಬೂಬ ಕಟ್ಟಿಮನಿ ಇವರುಗಳು ಕೂಡಿಕೊಂಡು ನನ್ನ ಮಗಳಿಗೆ ಮತ್ತು ಅವಳ ಗೇಳತಿಯರಿಗೆ ಚುಡಾಯಿಸುವದು, ಅಶ್ಲೀಲ ಶಬ್ದಗಳಿಂದ ಕರೆಯುವದು, ನಮಗೆ ಕರೆಯುವದು ಮಾಡುತ್ತಿದ್ದು ಅಲ್ಲದೆ ಇನ್ನಿತರೆ ರೀತಿಯಿಂದ ಚುಡಾಯಿಸಿ ಮಾನಭಂಗ ಮಾಡಿದ್ದು ಮತ್ತು ಚುಡಾಯಿಸಿದ ವಿಷಯವನ್ನು ಮನೆಯಲ್ಲಿ ತಿಳಿಸಿದರ ಏ ಬೋಸಡೀಯರೆ ನಿಮಗೆ ಜೀವ ಸಹೀತ ಬೀಡುವದಿಲ್ಲ ಅಂತ ಜೀವದ ಬೇದರಿಕೆ ಹಾಕಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಜೇವರ್ಗಿ ಠಾಣೆಯಲ್ಲಿ ಪ್ರಕರಣ ದಾಖಲಗಿದೆ.
ಬೆಳೆ ನಾಶ ಮಾಡಿ ಜೀವದ ಬೇದರಿಕೆ ಹಾಕಿದ ಪ್ರಕರಣ :
ಕಮಲಾಪೂರ ಠಾಣೆ : ಶ್ರೀಮತಿ ಗಂಗಮ್ಮಾ ಗಂಡ ಸಿದ್ದಯ್ಯ ಮಠಪತಿ ಸಾ; ಡೋರ ಜಂಬಗಾ ಸಧ್ಯ ಕೊಡಂಬಲ ತಾ; ಹುಮನಾಬಾದ ಜಿ; ಬೀದರ ಇವರ ಹೊಲ ಸರ್ವೆ ನಂ. 131/1, 131/4 ಇದರಲ್ಲಿ ದಿನಾಂಕ 6-10-2014 ರಂದು ಬೆಳಗ್ಗೆ 1130 ಗಂಟೆಗೆ ಫಿರ್ಯಾದಿಯ ಹೊಲದಲ್ಲಿದ್ದ  ಜೋಳದ ಬೇಳೆ ಮತ್ತು ತೊಗರಿಯ ಬೇಳೆಯನ್ನು ಶಿವಶಂಕ್ರಯ್ಯ ತಂದೆ ಬಸಯ್ಯ ಸಿಂದನಕೇರಿ ಮತ್ತು ಆತನ ಪಾಲ್ಲಕಾರನಾದ ಶಕಪ್ಪಾ  ತಂದೆ ಬಸವಣ್ಣಪ್ಪಾ ಹೋಡಿನಮನಿ ಮತ್ತು ಆತನ ಮಗ ಬಾನುದಾಸ ತಂದೆ ಹಾಗೂ ಇತರರು ಕೂಡಿ ಬೆಳೆಯನ್ನು ಕತ್ತರಿಸಿ ಹಾನಿ ಪಡಿಸಿರುತ್ತಾರೆ, ಫಿರ್ಯಾದಿಯು ಸದರಿ ಬೆಳೆಯನ್ನು ಏಕೆ ಹಾಳು ಮಾಡಿದ್ದಿರಿ ಅಂತ ಕೇಳಲು ಹೋದರೆ ಫಿರ್ಯಾದಿಗೆ ಅವಚ್ಯಾ ಶಭ್ದಗಳಿಂದ ಬೈದ್ದು, ಜೀವದ ಬೆದರಿಕೆ ಹಾಕಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಕಮಲಾಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಲ್ಲೆ ಪ್ರಕರಣಗಳು :
ಜೇವರ್ಗಿ ಠಾಣೆ : ಶ್ರೀಮತಿ ಹಾಜರಾ ಬೇಗಂ ಗಂಡ ಶೇಖ್‌ ಮಹ್ಮದ್ ಚಿತ್ತಾಪುರ ಸಾ|| ಆಂದೋಲಾ ರವರು ದಿನಾಂಕ 19.02.2015 ರಂದು ರಾತ್ರಿ 08:00 ಗಂಟೆಯ ಸುಮಾರಿಗೆ ನ್ನ ಮನೆಯಲ್ಲಿ ಕುಳಿತುಕೊಂಡಿದ್ದಾಗ ಮಲ್ಲಪ್ಪ ತಂದೆ ಸಾಯಬಣ್ಣ ತಳವಾರ ಸಂಗಡ 9 ಜನರು ಸಾ|| ಎಲ್ಲರು ಆಂದೋಲಾ ಗ್ರಾಮ ಕೂಡಿಕೊಂಡು ಅಕ್ರಮ ಕೂಟ ರಚಿಸಿಕೊಂಡು ಬಂದು ನನ್ನ ಮನೆಯಲ್ಲಿ ಅತಿಕ್ರಮ ಪ್ರವೇಶ ಮಾಡಿ ನನಗೆ ಅವಾಚ್ಯವಾಗಿ ಬೈದು ಚಪ್ಪಲಿಯಿಂದ ಮತ್ತು ಬಡಿಗೆಯಿಂದ ಹೊಡೆ ಬಡೆ ಮಾಡಿ ನನ್ನನ್ನು ಸಾಯಿಸುವ ಉದ್ದೇಶದಿಂದ ಕತ್ತು ಹಿಸುಕಿ ದವರ ಮತ್ತು  ನನಗೆ ಜೀವದ ಬೇದರಿಕೆ ಹಾಕಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಂಶದ ಮೇಲಿಂದ ಜೇವರ್ಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಜೇವರ್ಗಿ ಠಾಣೆ : ದಿನಾಂಕ 19.02.2015 ರಂದು ಸಾಯಂಕಾಲ ಶ್ರೀ ರಮೇಶ ತಂದೆ ಬಾಲಪ್ಪ ಗಂವ್ಹಾರ್ ಸಾ|| ಆಂದೋಲಾ ಮತ್ತು  ಸಿದ್ರಾಮ ಹಾಗು ಇತರರೊಂದಿಗೆ ಕೂಡಿಕೊಂಡು ನಮ್ಮ ಓಣಿಯ ಶೈಲಾಶ್ರಿ ಮತ್ತು ಆಕೆಯ ಗೇಳತಿಯರಿಗೆ ಚುಡಾಯಿಸಿದ ವಿಷಯದಲ್ಲಿ ಆರೋಪಿತನ ಶರೀಫ್  ಈತನಿಗೆ ಕೇಳಲು ಅವನ ಮನೆಯ ಮುಂದೆ ಹೋದಾಗ ಶರೀಫ್ ತಂದೆ ಶೇಖ್‌ ಮಹ್ಮದ್ ಚಿತ್ತಾಪುರ ಸಂಗಡ 26 ಜನರು ಸಾ|| ಎಲ್ಲರು ಆಂದೋಲಾ ಗ್ರಾಮ ಕೂಡಿಕೊಂಡು ಬಂದು ನಮಗೆಲ್ಲರಿಗೆ ತಡೆದು ನಿಲ್ಲಿಸಿ ಸಂಗಡ ಇದ್ದವರಿಗೆ ಅವಾಚ್ಯವಾಗಿ ಬೈದು ನನಗೆ ಹಾಗು ಸಿದ್ರಾಮನಿಗೆ ಕೈಯಿಂದ ಹೊಡೆ ಬಡೆ ಮಾಡಿ ಜೀವದ ಬೇದರಿಕೆ ಹಾಕಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಜೇವರ್ಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.