POLICE BHAVAN KALABURAGI

POLICE BHAVAN KALABURAGI

26 July 2018

KALABURAGI DISTRICT REPORTED CRIMES

ಅಪಘಾತ ಪ್ರಕರಣಗಳು :
ಮುಧೋಳ ಠಾಣೆ : ದಿನಾಂಕ: 25-07-2018 ರಂದು ಬೆಳಗ್ಗೆ 0930 ಗಂಟೆ ಸುಮಾರಿಗೆ ನಮ್ಮೂರ ನಮ್ಮ ಮನೆಯ ಹತ್ತಿರ ರುವ ಖಾಸೀಮ್ ಸಾಬ ತಂದೆ ಹಸೇನಸಾಬ ಪಿಂಜಾರ ಇತನು ನಮ್ಮ ಮನೆಗೆ ಬಂದು ನನ್ನ ಮಗವಾಸಿಮ್ ಇತನಿಗೆ ಆರಾಮ ಇರುವದಿಲ್ಲಾ ಇತನಿಗೆ ನಮ್ಮ ಮೊ/ಸೈ ಮೇಲೆ ಗುರುಮಠಕಲಗೆ ಕರೆದುಕೊಂಡು ಹೋಗಿ ದಾವಾಖಾನೆಗೆ ಹೋಗಿ ತೊರಿಸಿಕೊಂಡು ಬರೋಣಾ ಬಾ ಅಂತಾ ಹೇಳಿ ತನ್ನ ಸಂಗಡ ನನ್ನ ಮಗ ರಾಜಶೇಖರ ಇತನಿಗೆ ಮನೆಯಿಂದ ಕರೆದುಕೊಂಡು ಹೋದನು. ನಂತರ ಬೆಳಗ್ಗೆ 1140 ಗಂಟೆ ಸುಮಾರಿಗೆ ನಾನು ಹಾಗು ನನ್ನ ಗಂಡ ಸಿದ್ದಲಿಂಗಪ್ಪ ಇಬ್ಬರು ಮನೆಯಲ್ಲಿದ್ಧಾಗ ನಮ್ಮೂರ ವೆಂಕಟರೆಡ್ಡಿಯ ಮಗನಾದ ಚಿನ್ನಾ ಇತನು ನಮ್ಮ ಮನೆಗೆ ಬಂದು ತಿಳಿಸಿದೆನೆಂದರೆ, ಈಗ 1130 ಗಂಟೆ ಸುಮಾರಿಗೆ ನಿಮ್ಮ ಮಗ ರಾಜಶೇಖರ ಇತನು ಖಾಸಿಮ ಸಾಬ ಇತನ ಮೊ/ಸೈ ಮೇಲೆ ಕುಳಿತು ಗುರುಮಠಕಲದಿಂದ ಊರಿಗೆ ಬರುವಾಗ ಇಟ್ಕಲ್ ಕ್ರಾಸ ಹತ್ತಿರ ರಸ್ತೆಯಲ್ಲಿ ಒಬ್ಬ ಬಸ್ಸನ ಚಾಕಲನು ಮೊ/ಸೈಗೆ ಡಿಕ್ಕಿ ಪಡಿಸಿ ಅಪಘಾತ ಮಾಡಿದ್ದರಿಂದ ರಾಜಶೇಖರ ಮತ್ತು ಖಾಸಿಂ ಸಾಬ ಇಬ್ಬರು ಸ್ಥಳದಲ್ಲಿಯೇ ಸತ್ತಿರುತ್ತಾರೆ ಅಂತಾ ನನಗೆ ಗೊತ್ತಾಗಿದೆ ಅಂತಾ ತಿಳಿಸಿದ್ದು, ತಕ್ಷಣ ನಾನು ನನ್ನ ಗಂಡ ಸಿದ್ದಲಿಂಗಪ್ಪ ಹಾಗು ನಮ್ಮ ಮನೆಯ ಹತ್ತಿರದ ಖಾಸಿಂ ಸಾಬ ಇತನ ಹೆಂಡತಿಯಾದ ಶಬನಾಬೇಗಂ ಇತರರು ಕೂಡಿಕೊಂಡು ಇಂದು ಮದ್ಯಾಹ್ನ ಗುರುಮಠಕಲ ದಿಂದ ಇಟ್ಕಲ ಕಡೆಗೆ ಬರುವ ಮುಖ್ಯ ರಸ್ತೆಯಲ್ಲಿ ಭೀಮರೆಡ್ಡಿ ಇವರ ಹೊಲದ ಹತ್ತಿರ ಹೋಗಿ ನೋಡಲಾಗಿ ರಸ್ತೆಯ ಮೇಲೆ ನನ್ನ ಮಗ ರಾಜಶೇಖರ @ ಶೇಖರ ಹಾಗು ಸದರಿ ಮೊ/ಸೈ ಚಾಲಕ ಖಾಸಿಂ ಸಾಬ ತಂದೆ ಹಸನ ಸಾಬ ಪಿಂಜಾರ ಇಬ್ಬರು ಸ್ಥಳದಲ್ಲಿಯೇ ಸತ್ತುಬಿದಿದ್ದು, ನನ್ನ ಮಗನ ಹಣೆಗೆ ಭಾರಿ ರಕ್ತಗಾಯವಾಗಿದ್ದು, ಹಾಗು ಕೈಕಾಲುಗಳಿಗೆ ತರುಚಿದ ರಕ್ತಗಾಯಗಳಾಗಿದ್ದು ಹಾಗು ಸದರಿ ಖಾಸಿಂಸಾಬ ಇತನಿಗೆ ತಲೆಗೆ ಹಾಗು ಇತರೆ ಕಡೆಗೆ ಭಾರಿರಕ್ತಗಾಯಗಳಾಗಿದ್ದು, ಸದರಿ ಖಾಸಿಂ ಸಾಬ ಇತನ ತಲೆಗೆ ಹಾಗು ಇತರೆ ಕಡೆ ಭಾರಿರಕ್ತಗಾಯಗಳಾಗಿದ್ದು ಸದರಿ ಖಾಸಿಂ ಸಾಬ ಇತನ ಮಗನಾದ ವಾಸಿಮ್ 04 ವರ್ಷ ಇತನಿಗೆ ಭಾರಿರಕ್ತಗಾಯಗಳಾಗಿದ್ದರಿಂದ ಅವನಿಗೆ ಉಪಚಾರಕುರಿತು ಗುರುಮಠಕಲ ಸರಕಾರಿ ದವಾಖಾನೆಗೆ ತೆಗೆದುಕೊಂಡು ಹೋಗಿದ್ದು ಇರುತ್ತದೆ. ಅಲ್ಲಿ ರಸ್ತೆಯ ಪಕ್ಕದಲ್ಲಿ ಸದರಿ ಖಾಸಿಂ ಸಾಬ ಇತನ ಮೊ/ಸೈ ನಂ ಕೆಎ32ಈಸಿ5279 ನೇದ್ದು ಬಿದಿದ್ದು ಹಾಗು ಸ್ವಲ್ಪ ಮುಂದುಗಡೆ ಗುರುಮಠಕಲ್ ಕಡೆಗೆ ಹೋಗುವ ರಸ್ತೆಯ ಪಕ್ಕದಲ್ಲಿ ಒಂದು ಕೆ.ಎಸ್.ಆರ್ ಟಿ.ಸಿ ಬಸ್ಸ ನಂ ಕೆಎ33/ಎಫ-0186 ನೇದ್ದು ನಿಂತಿದ್ದು ಇರುತ್ತದೆ. ಅಂತಾ ಶ್ರೀಮತಿ ಪಾರ್ವತಮ್ಮ ಗಂಡ ಸಿದ್ದಲಿಂಗಪ್ಪ ನಕ್ಕಲಗಡ್ಡಾ ಸಾ: ಗಾಡದಾನ ಗ್ರಾಮ  ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮುಧೋಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ಗ್ರಾಮೀಣ ಠಾಣೆ : ಶ್ರೀ. ಶ್ರೀಮಂತ ತಂದೆ ಬಸವಣ್ಣ ಬೇಲಸೂರೇ ಸಾ:ಮುನ್ನೋಳ್ಳಿ ತಾ:ಆಳಂದ ಜಿ:ಕಲಬುರಗಿ ಹಾವ: ಇಂಡಸ್ರ್ಟೀಯಲ್ ಏರಿಯಾ ಕಪನೂರ ರವರ ಮಗ ವಿಜಯಕುಮಾರ  ಬೆಲಸೂರೆ ಇತನು ದಿನಾಂಕ. 24-7-2018 ರಂದು 4-30 ಪಿ.ಎಂ.ಕ್ಕೆ. ತನ್ನ ಬಜಾಜ ಪಲ್ಸರ ಮೋಟಾರ ಸೈಕಲ್ ನಂ KA-37 W-6001 ಮೋಟಾರ ಸೈಕಲ್ ನ್ನು ತೆಗೆದುಕೊಂಡು ತನ್ನ ಯಾವುದೋ ಕೆಲಸ ಆಳಂದ ರೋಡಿನ ಕಡೆಗೆ ಹೋಗಿ ಮರಳಿ ಕಲಬುರಗಿ ಕಡೆಗೆ ಬರುತ್ತಿರುವಾಗ ತನ್ನ ಮೋಟಾರ ಸೈಕಲ್ ಅತೀವೇಗ ಮತ್ತು ನಿಸ್ಕಾಳಜಿತನದಿಂದ ಚಲಾಯಿಸುತ್ತಾ ತನ್ನ ಮುಂದುಗಡೆ ಹೋಗುತ್ತಿದ್ದ ಕೆ.ಎಸ್.ಆರ್.ಟಿಸಿ ಬಸಗೆ ಓವರ ಟೇಕ್ ಮಾಡಲು ಹೋಗಿ ಮೋಟಾರ ಸೈಕಲ ವೇಗದ ನಿಯಂತ್ರಣ ತಪ್ಪಿ ರೇಲ್ವೆ ಬ್ರಿಜಗೆ ಇರುವ ಕಬ್ಬಿಣದ ಪಟ್ಟಿಗೆ  ಅಪಘಾತಪಡಿಸಿದ್ದರಿಂದ್ದ ಆತನ ತಲೆಗೆ ಹಾಗು ಇತರೇ ಭಾಗಕ್ಕೆ ಭಾರಿ ರಕ್ತಗಾಯ ಹಾಗು ಗುಪ್ತಗಾಯಗಳಾಗಿ ಸ್ಥಳದಲ್ಲಿಯೇ ಮೃತಪಟ್ಟಿರುತ್ತಾನೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ಹಲ್ಲೆ ಮಾಡಿ ನಿಂದನೆ ಮಾಡಿದ ಪ್ರಕರಣ :
ಯಡ್ರಾಮಿ ಠಾಣೆ : ಶ್ರೀ  ವಾಲು ತಂದೆ ಚೋಕಲು ರಾಠೋಡ ಸಾ|| ಕೊಣ್ಣೂರ ತಾಂಡಾ ತಾ|| ಜೇವರ್ಗಿ ರವರು ತಮ್ಮೂರ ಸೀಮಾಂತರದಲ್ಲಿ ಸರ್ವೆ ನಂ 1 ನೇದ್ದರಲ್ಲಿ  2 ಎಕರೆ 38 ಗುಂಟೆ, ಮತ್ತು ಸರ್ವೆ ನಂ 2 ನೇದ್ದರಲ್ಲಿ 7 ಎಕರೆ 33 ಗುಂಟೆ ಜಮೀನು ನಾವು ಸುಮಾರು 60 ವರ್ಷಗಳಿಂದ ಕಬ್ಜೆಯಲ್ಲಿದ್ದು, ಇಲ್ಲಿಯವರೆಗೆ ನಾವೇ ಸಾಗುವಳಿ ಮಾಡುತ್ತಾ ಬಂದಿರುತ್ತೇವೆ, ಈ ಹೊಲಗಳ ಬಗ್ಗೆ ಸುರಪುರ ತಾಲೂಕಿನ ಪರಸನಳ್ಳಿ ಗ್ರಾಮದ ಶಿವರಾಜ ತಂದೆ ರಾಯಪ್ಪ ದೊಡಮನಿ ಇವರು ಸುಮಾರು ವರ್ಷಗಳಿಂದ ತಕರಾರು ಮಾಡಿಕೊಂಳ್ಳುತ್ತಾ ಬಂದಿದ್ದು, ಈ ಬಗ್ಗೆ ನ್ಯಾಯಾಲಯದಲ್ಲಿ ದಾವೇ ಹುಡಿದ್ದು ದಿನಾಂಕ 23-07-2018 ರಂದು 2;00 ಪಿ.ಎಂ ಸುಮಾರಿಗೆ ನಾನು ಮತ್ತು ನನ್ನ ಮಗ ಬದ್ದು, ನನ್ನ ಸೊಸೆ ಸೋನಾಬಾಯಿ, ರಾಣಿಬಾಯಿ ರವರು ಕೂಡಿ ನಮ್ಮ ಹೊಲ ಸರ್ವೆ ನಂ 1 ನೇದ್ದರಲ್ಲಿ ಕೆಲಸ ಮಾಡುತ್ತಿದ್ದೇವು, ಅದೇ ಸಮಯಕ್ಕೆ 1] ಶಿವರಾಜ ತಂದೆ ರಾಯಪ್ಪ ದೊಡಮನಿ ಮತ್ತು ಅವರ ಸಂಬಂಧಿಕರಾದ 2] ಶರಣಪ್ಪ ತಂದೆ ಶಂಕ್ರೆಪ್ಪ ಪೂಜಾರಿ ಸಾ|| ಪರಸನಳ್ಳಿ, 3] ಮಾನಯ್ಯಾ ತಂದೆ ಮಲ್ಲಯ್ಯಾ ಗೊಟ್ರಾಳ ಸಾ|| ವಶಿಕೇರಾ ತಾ|| ಸುರಪೂರ  ಹಾಗು ಅವರೊಂದಿಗೆ 15 ರಿಂದ 20 ಜನರು ಕೂಡಿಕೊಂಡು ನಮ್ಮ ಹತ್ತಿರ ಬಂದರು, ಅವರಲ್ಲಿ ಶಿವರಾಜ ಇವನು  ನಮಗೆ ಏ ಸುಳಿ ಮಕ್ಕಳ್ಯಾ ಲಾಮಾಣ್ಯಾರ್ಯಾ, ನಿಮಗ ಬಹಳ ಸೊಕ್ಕು ಬಂದಿದೆ, ನಮ್ಮ ಹೊಲ ನಮಗೆ ಬಿಟ್ಟು ಕೊಡುವುದು ಬಿಟ್ಟು, ಹೊಲ ಸಾಗುವಳಿ ಮಾಡುತ್ತಿದ್ದಿರಿ ಇವತ್ತ ನಿಮಗ ಖಲಾಸೆ ಮಾಡುತ್ತೇವೆ ಅಂತಾ ಅಂದನು, ಆಗ ನಾನು ಈ ಬಗ್ಗೆ  ಕೋರ್ಟಲ್ಲಿ ಕೇಸ ನಡೆದಿದೆ, ಕೋರ್ಟ ಆದೇಶ ಆದರೆ ನಿಮ್ಮ ಹೊಲ ನಿಮಗ ಬಿಟ್ಟು ಕೊಡುತ್ತೇನೆ ಅಂತಾ ಅಂದಾಗ ಶಿವರಾಜ ಇವನು ಈ ಸೂಳಿ ಮಗನಿಗೆ ಬಿಡಲ್ಲಾ ಅಂತಾ ಅಂದು ತನ್ನ ಕೈಯಲ್ಲಿದ್ದ ಬಡಿಗೆಯಿಂದ ನನ್ನ ಹಣೆಯ ಮೇಲೆ ಹೊಡೆದು ರಕ್ತಗಾಯ ಪಡಿಸಿದನು, ಆಗ ನನ್ನ ಮಗ ಬಿಡಿಸಲು ಬಂದಾಗ ಶರಣಪ್ಪ ಇವನು ಕಲ್ಲಿನಿಂದ ನನ್ನ ಮಗನ  ಹಣೆಯ ಮೇಲೆ ಹೊಡೆದು ರಕ್ತಗಾಯ ಮಾಡಿದನು, ಮಾನಯ್ಯ ಈತನು ನನ್ನ ಸೊಸೆಯಂದಿರಾದ ಸೋನಾಬಾಯಿ, ರಾಣಿಬಾಯಿಗೆ ಕೈಯಿಂದ ಮೈಕೈಗೆ ತಲೆಗೆ ಹೊಡೆದಿರುತ್ತಾನೆ, ನಂತರ ಶಿವರಾಜನೊಂದಿಗೆ ಬಂದವರೆಲ್ಲರೂ ಈ ಸುಳಿ ಮಕ್ಕಳಿಗೆ ಹೊಡದು ಖಲಾಸೆ ಮಾಡೋಣಾ ಅಂತಾ ಅನ್ನುತ್ತಾ ಹೊಡೆಯಲು ಬಂದಾಗ ಅಲ್ಲೆ ಬಾಜು ಹೊಲದಲ್ಲಿ ಕೆಲಸ ಮಾಡುತ್ತಿದ್ದ ನಮ್ಮ ತಾಂಡಾದ ಲಕ್ಷ್ಮೀಬಾಯಿ ಗಂಡ ಧನಸಿಂಗ್ ರಾಠೊಡ, ಶಾಂತಿಲಾಲ ತಂದೆ ರತ್ನು ರಾಠೋಡ ರವರು ಬಂದು ಬಿಡಿಸಿಕೊಂಡಿರುತ್ತಾರೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಯಡ್ರಾಮಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಲ್ಲೆ ಪ್ರಕರಣ :
ನರೋಣಾ ಠಾಣೆ : ಶ್ರೀ ಉಸ್ಮಾನಸಾಬ ತಂದೆ ಮಹೇಬೂಬಸಾಬ ಮುಲ್ಲಾ ಸಾ:ಕೊಟ್ಟರಗಾ ರವರದು ಚಿಂಚನಸೂರ ಗ್ರಾಮದ ಸೀಮಾಂತರ ಸರ್ವೆೇ ನಂ 327 ರಲ್ಲಿ ನನಗೆ 5ಎಕರೆ ಜಮೀನು ಇದ್ದು, ಸದರಿ ಜಮೀನಿಗೆ ಹೋಗಿ ಬರಲು ನಮ್ಮೂರಿನ ವಿಜಯಕುಮಾರ ತಂದೆ ಸೋಮಶೇಖರ ಪಾಟೀಲ್ ಇವರು ಹೊಲದಾಗಿನಿಂದಲೆ ಬಹಳ ವರ್ಷಗಳಿಂದ ರಸ್ತೆ ಇರುತ್ತದೆ. ಆದರೆ ಇತ್ತಿತ್ತಲಾಗಿ ಸದರಿ ವಿಜಯಕುಮಾರ ಇವರು ನನಗೆ ಮತ್ತು ಮೆಲಿನ ಹೊಲದವರಿಗೆ ಅವರ ಹೊಲದಾಗಿನಿಂದ ಹೋಗಬಾರದು ಮತ್ತು ಎತ್ತು ಹಾಗೂ ಬಂಡಿ ಹೊಡೆದುಕೊಂಡು ಹೊಗಬಾರದೆಂದು ನನ್ನೊಂದಿಗೆ ಆಗಾಗ ತಕರಾರು ಮಾಡುತ್ತಾ ಬಂದಿರುತ್ತಾನೆ.  ದಿನಾಂಕ:24/07/2018 ರಂದು ಮುಂಜಾನೆ 11-00 ಗಂಟೆಯ ಸುಮಾರಿಗೆ ನಾನು ಪ್ರತಿದಿನದಂತೆ ನಮ್ಮ ಚಿಂಚನಸೂರ ಸೀಮೆಯ ಹೊಲಕ್ಕೆ ಎತ್ತಿನ ಬಂಡಿ ಹೊಡದುಕೊಂಡು ಸದರಿ ವಿಜಯಕುಮಾರ ಇವರ ಹೊಲದಾಗಿನಿಂದ ಇರುವ ಬಂಡಿ ದಾರಿಯ ಮೇಲಿಂದಾ ಹೋಗುತ್ತಿರುವಾಗ 1)ವಿಜಯಕುಮಾರ ತಂದೆ ಸೋಮಶೇಖ ಪಾಟೀಲ್, 2)ಜಗನ್ನಾಥ ತಂದೆ ಸೋಮಶೇಕರ ಪಾಟೀಲ್, 3)ಶೆಸುಬಾಯಿ ಗಂಡ ಸೋಮಶೇಖರ ಪಾಟೀಲ್, 4)ತಾರಾಬಾಯಿ ಗಂಡ ಸೋಮಶೇಖರ ಪಾಟೀಲ್ ರವರುಗಳು ಕೂಡಿ ನನಗೆ ತಡೆದು ನಿಲ್ಲಿಸಿ ವಿಜಯಕುಮಾರನು ಏ ಭೋಸಡಿ ಮಗನೆ ನಮ್ಮ ಹೊಲದಾಗಿನಿಂದ ಹೋಗಬೇಡವೆಂದರೂ ಕೂಡ ಏಕೆ ಇಲ್ಲಿಂದ ಹೊಗುತ್ತಿದ್ದಿಯಾ ಎಂದು ಅವಾಚ್ಯ ಶಬ್ದಗಳಿಂದ ಬೈಯುತ್ತಾ ತನ್ನ ಕೈಯಲ್ಲಿದ್ದ ಕಬ್ಬಿಣದ ಬದ್ದ್ಡಿಯಿಂದ ನನ್ನ ಹಣೆಯ ಮೇಲೆ ಹೊಡೆದ್ದರಿಂದ ಕಂದುಗಟ್ಟಿದಂತೆ ಆಗಿ ಬಾವು ಬಂದಿರುತ್ತದೆ. ಅಸ್ಟರಲ್ಲಿಯೇ ಅವರ ತಮ್ಮನಾದ ಜಗನ್ನಾಥ ಈತನು ತನ್ನ ಕೈಯಲ್ಲಿದ್ದ ಬಡಿಗೆಯಿಂದ ನನ್ನ ಬೆನ್ನಿನ ಮೇಲೆ ಮೇಲಿಂದ ಮೇಲೆ ಹೊಡೆದಿದ್ದರಿಂದ ಧರಿ ಬಂದಂತೆ ಆಗಿ ಉಬ್ಬಿದ್ದು ಅಲ್ಲದೇ ಭಾರಿ ಒಳಪೆಟ್ಟಾಗಿ ನನಗೆ ಉಸಿರಾಡಲು ತೊಂದರೆಯಾಗುತ್ತಿದೆ. ಅಲ್ಲದೆ ಶೇಸುಬಾಯಿ ಮತ್ತು ತಾರಾಬಾಯಿ ಇವರುಗಳು ಸಹ ಬಡಿಗೆಗಳಿಂದ ನನ್ನ ಕಾಲುಗಳ ಮೇಲ ಹೊಡೆಯುತ್ತಿರುವಾಗ ಅಲ್ಲಿಯೇ ಇದ್ದ ನಮ್ಮೂರಿನ ಶಾಂತಪ್ಪಾ ತಂದೆ ಈರಣ್ಣಾ ಜಮಾದಾರ ಅಂಬಾರಾಯ ತಂದೆ ದೇವಿಂದ್ರಪ್ಪಾ ಮಾವಿನೂರ ಹಾಗೂ ಶಿವಕುಮಾರ ತಂದೆ ಪೀರಪ್ಪಾ ಜಮಾದಾರ ರವರುಗಳು ಜಗಳಾ ನೋಡಿ ಬಿಡಿಸಿರುತ್ತಾರೆ. ನಂತರ 4ಜನರು ಸೇರಿ ನನಗೆ ಇನ್ನು ಮುಂದೆ ನಿನೇದಾರು ಈ ಹೊಲದಾಗಿನಿಂದ ಹೊದರೆ ನಿನಗೆ ಜೀವಸಹಿತ ಬಿಡುವುದಿಲ್ಲಾ ಎಂದು ಜೀವದ ಬೆದರಿಕೆ ಹಾಕಿರುತ್ತಾರೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ನರೋಣಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.