POLICE BHAVAN KALABURAGI

POLICE BHAVAN KALABURAGI

18 January 2017

Kalaburagi District Reported Crimes

ಕೊಲೆ ಪ್ರಕರಣ :
ಆಳಂದ ಠಾಣೆ : ಶ್ರೀಮತಿ ಗಂಗೂಬಾಯಿ ಗಂಡ ಭೀಮಾಶಂಕರ ಮಾನೆ ಮು:ಬೋರಗಾಂವ ತಾ:ಅಕ್ಕಲಕೋಟ ಹಾ:ವ: ಸದ್ಯ ಉಮರ್ಗಾ ತಾ: ಜಿ:ಉಸ್ಮಾನಾಬಾದ ರವರ ಮಕ್ಕಳಾದ ರಾಜೇಂದ್ರ, ಅನೀಲ ಇವರೊಂದಿಗೆ ನನ್ನ ತವರು ಮನೆಯಾದ ಗುಲಬರ್ಗಾದ ಶಹಾಬಜಾರಕ್ಕೆ ಹೋಗಿ ಸುಮಾರು 10 ವರ್ಷಗಳ ಕಾಲ ಕೂಲಿ ಕೆಲಸ ಮಾಡಿಕೊಂಡು ನನ್ನ ಮಕ್ಕಳೊಂದಿಗೆ ಉಪಜೀವಿಸುತ್ತಿದ್ದು ಜೋಗುರ ಗ್ರಾಮದಲ್ಲಿ ನನ್ನ ಸಂಬಂದಿಕರು ಇದ್ದು ಅವರ ಪೈಕಿ ಕಿಟ್ಟು ತಂದೆ ಶಾಂತಾಪ್ಪ ಮಾನೆ ಇತನಿಗೆ ಸುಮಾರು 03 ವರ್ಷಗಳ ಹಿಂದೆ ನನ್ನ ಮಗ ರಾಜೇಂದ್ರ ಮತ್ತು ಇತರರು ಕೂಡಿಕೊಂಡು ಕೊಲೆ ಮಾಡಿದ್ದು ಈ ಬಗ್ಗೆ ಪ್ರಕರಣ ದಾಖಲಾಗಿದ್ದರಿಂದ ನನ್ನ ಮಗ ಸುಮಾರು ಒಂದು ವರ್ಷಗಳ ಕಾಲ ಜೈಲಿನಲ್ಲಿದ್ದನು. ಕಿಟ್ಟು ಮಾನೆ ಇತನಿಗೆ ನನ್ನ ಮಗ ರಾಜೇಂದ್ರ ಇತನು ಕೊಲೆ ಮಾಡಿದ್ದರಿಂದ ಆತನ ಅಣ್ಣತಮ್ಮಂದಿರಾದ 1) ಚಿನ್ನು ತಂದೆ ಶಾಂತಪ್ಪ ಮಾನೆ 2) ಸಿದ್ದು ತಂದೆ ಶಾಂತಪ್ಪ ಮಾನೆ ಸಾ: ಜೋಗುರ ತಾ.ಜಿ:ಗುಲಬರ್ಗಾ ರವರು ನನ್ನ ಮಗನ ಮೇಲೆ ದ್ವೇಷ ಭಾವನೆ ಹೊಂದಿ ನನ್ನ ಮಗನಿಗೆ ಕೊಲೆ ಮಾಡಬೇಕೆಂದು ಹೆದರಿಸುತ್ತಾ ಬಂದಿರುತ್ತಾರೆ. ನನ್ನ ಮಗ ರಾಜೇಂದ್ರ ಇತನು ಬ್ಯಾಂಜೊ ಬಾರಿಸುವ ಕೆಲಸಕ್ಕೆಂದು ಹೈದ್ರಾಬಾದಕ್ಕೆ ಹೋದಾಗ ನನ್ನ ಮಗ ಹೈದ್ರಾಬಾದಕ್ಕೆ ಹೋದ ಬಗ್ಗೆ ಮಾಹಿತಿ ತಿಳಿದುಕೊಂಡು ಆತನಿಗೆ ಕೋಲೆ ಮಾಡಬೇಕೆಂದು ಹೊಂಚುಹಾಕಿ ಹೊಡೆಯಲು ಪ್ರಯತ್ನಿಸಿದಾಗ ನನ್ನ ಮಗನು ಅವರಿಂದ ತಪ್ಪಿಸಿಕೊಂಡು ಉಳಿದು ಬಂದಿರುತ್ತಾನೆ. ನಂತರ ನನ್ನ ಮಗನಿಗೆ ಇವರು ಒಂದು ದಿನ ಕೊಲೆ ಮಾಡಿಯೇ ಬಿಡುತ್ತಾರೆ ಎಂದು ತಿಳಿದು ಆರು ತಿಂಗಳಗಳ ಹಿಂದೆ ನನ್ನ ಗಂಡನ ಸಂಬಂದಿಕರು ಉಮರ್ಗಾದಲ್ಲಿ ಇರುವುದರಿಂದ ನನ್ನ ಎರಡು ಮಕ್ಕಳೊಂದಿಗೆ ಉಮರ್ಗಾಕ್ಕೆ ಬಂದಿರುತ್ತೇನೆ. ನನ್ನ ಮಕ್ಕಳಿಬ್ಬರು ಉಮರ್ಗಾದಲ್ಲಿ ಒಂದು ಬ್ಯಾಂಡ ಕಂಪನಿ ಮಾಡಿಕೊಂಡು ಬೇರೆ ಬೇರೆ ಗ್ರಾಮಗಳಿಗೆ ಹೋಗಿ ಬ್ಯಾಂಡ ಬಾರಿಸಿ ಬರುತ್ತಿದ್ದರು. ದಿನಾಂಕ 17/01/2017 ರಂದು ನನ್ನ ಗಂಡನ  ಅಣ್ಣತಮ್ಮಕೀಯ ಕಿಶೋರ  ಮಾನೆ ರವರೊಂದಿಗೆ ಬ್ಯಾಂಡ ಬಾರಿಸಲು  ನನ್ನ ಮಕ್ಕಳಿಬ್ಬರು ಮತ್ತು ಇತರೆ 10 ಜನ ಕೂಡಿಕೊಂಡು ಆಳಂದಕ್ಕೆ ಹೋಗಿ ಬರುತ್ತೇನೆ ಅಂತಾ ಬೆಳಿಗ್ಗೆ ಉಮರ್ಗಾದಿಂದ ಹೋಗಿರುತ್ತಾರೆ. ನಂತರ ರಾತ್ರಿ 10:30 ಗಂಟೆಗೆ ನನ್ನ ಸಣ್ಣ ಮಗ ಅನೀಲ ಇತನು ಪೋನ ಮಾಡಿ ವಿಷಯ ತಿಳಿಸಿದೆನೆಂದರೆ ನಾನು ಮತ್ತು ನನ್ನ ಅಣ್ಣ ರಾಜೇಂದ್ರ ಹಾಗು ಇತರರು ಕೂಡಿಕೊಂಡು ಯಲ್ಲಮ್ಮದೇವಿಯ ಗುಡಿಯ ಮೇರವಣಿಗೆಯ ಮುಂದುಗಡೆ ಬ್ಯಾಂಡ ಬಾರಿಸುತ್ತಾ ಬಂದಿದ್ದು ಆ ಸಮಯದಲ್ಲಿ ನನ್ನ ಅಣ್ಣನೊಂದಿಗೆ ಒಬ್ಬ ಬಿಳಿ ಬಟ್ಟೆ ತೊಟ್ಟ ವ್ಯಕ್ತಿಯೊಬ್ಬ ಇಡಿ ಮೇರವಣಿಗೆ ಮುಗಿಯವವರೆಗೆ ಆತನೊಂದಿಗೆ ಇದ್ದು ರಾತ್ರಿ 9:00 ಗಂಟೆಗೆ ಮೇರವಣಿಗೆ ಮುಗಿದ ನಂತರ ಯಲ್ಲಮ್ಮ ಗುಡಿ ಹತ್ತಿರದಿಂದ ನನ್ನ ಅಣ್ಣನಿಗೆ ಕರೆದುಕೊಂಡು ಹೋಗಿದ್ದು ನಂತರ ರಾತ್ರಿ 10:15 ಗಂಟೆಗೆ ನಮ್ಮೊಂದಿಗೆ ಇದ್ದ ಕಿಶೋರ ಇವರಿಗೆ ಯಾರೋ ತಿಳಿಸಿದೆನೆಂದರೆ ನಿಮ್ಮೊಂದಿಗೆ ಇದ್ದ ಒಬ್ಬ ವ್ಯಕ್ತಿಯನ್ನು ಆಳಂದ ಉಮರ್ಗಾ ರಸ್ತೆಯ ಸಿದ್ದಾರ್ಥ ಚೌಕ ಹತ್ತಿರ ಹೊಡೆದು ಹಾಕಿರುತ್ತಾರೆ ಅಂತಾ ಹೇಳಿದಾಗ ನಾನು ಮತ್ತು ಕಿಶೋರ ಇಬ್ಬರೂ ಕೂಡಿಕೊಂಡು ಸ್ಥಳಕ್ಕೆ ಹೋಗಿ ನೋಡಲು ನನ್ನ ಅಣ್ಣನ ಶವವು ರೋಡಿನ ಪಕ್ಕದಲ್ಲಿ ಬಿದಿದ್ದು ಅವನ ಹಣೆಗೆ, ಹೊಟ್ಟೆಗೆ ಮತ್ತು ಎರಡು ಎದೆಗೆ ಹರಿತವಾದ ಆಯುಧದಿಂದ ಹೊಡೆದು ಕೊಲೆ ಮಾಡಿರುತ್ತಾರೆ. ಅಂತಾ ನನ್ನ ಮಗ ಅನೀಲ ತಿಳಿಸಿದಾಗ ಸ್ಥಳಕ್ಕೆ ನಾನು ಮತ್ತು ನನ್ನ ಮಗಳಾದ ಮಹಾದೇವಿ ಬಂದು ನೋಡಲು ನನ್ನ ಮಗನಿಗೆ ಹಿಂದಿನ ಹಳೆಯ ದ್ವೇಷ ಮನಸ್ಸಿನಲ್ಲಿ ಇಟ್ಟುಕೊಂಡ  1) ಚಿನ್ನು ತಂದೆ ಶಾಂತಪ್ಪ ಮಾನೆ 2) ಸಿದ್ದು ತಂದೆ ಶಾಂತಪ್ಪ ಮಾನೆ ಸಾ: ಜೋಗುರ ತಾ.ಜಿ:ಗುಲಬರ್ಗಾ ಹಾಗು ಇತರರು ಕೂಡಿಕೊಂಡು ಒಬ್ಬ ಬಿಳಿ ಬಟ್ಟೆಯ ವ್ಯಕ್ತಿಯ ಸಹಾಯ ಪಡೆದು ನನ್ನ ಮಗನ ಹಣೆಗೆ, ಹೊಟ್ಟೆಗೆ ಮತ್ತು ಎರಡು ಎದೆಗೆ ಹೊಡೆದು ಕೊಲೆ ಮಾಡಿರುತ್ತಾರೆ  ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಆಳಂದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮರಳು ಕಳ್ಳತನ ಮಾಡಿದ ಪ್ರಕರಣ :
ಅಫಜಲಪೂರ ಠಾಣೆ : ಶ್ರೀ ಲಕ್ಷ್ಮೀಕಾಂತ ಮಿತ್ರಾ  ಸಹಾಯಕ ಭಿಯಂತರರು ಲೋಕೋಪಯೋಗಿ ಬಂದರು & ಒಳನಾಡು ಜಲಸಾರಿಗೆ ಇಲಾಖೆ ಉಪ ವಿಭಾಗ ಅಫಜಲಪೂರ ರವರು ಮಾನ್ಯ ಸಹಾಯಕ ಆಯುಕ್ತರು ಕಲಬುರಗಿ ರವರು ಮೌಖಿಕ ಆದೇಶದ ಮೇರೆಗೆ ದೂರು ಕೊಡುವುದೆನೆಂದರೆ, ಅಫಜಲಪೂರ ತಾಲೂಕಿನ ಶಿವಪೂರ ಗ್ರಾಮದಲ್ಲಿ ಜಪ್ತಿ ಮಾಡಲಾದ ಮರಳನ್ನು ಅನದಿಕೃತವಾಗಿ ಟಿಪ್ಪರ ವಾಹನದ ಸಂಖ್ಯೆ ಕೆಎ-28 ಡಿ-6655 ಮೂಲಕ ದಿನಾಂಕ 16-01-2017 ರಂದು ರಾತ್ರಿ 23-51 ಮತ್ತು ದಿನಾಂಕ 17-01-2017 ರಂದು ಮದ್ಯ ರಾತ್ರಿ 01-11 ಎರಡು ಬಾರಿ ಸಾಗಾಣಿಕೆ ಮಾಡಲಾಗಿದೆ. ಅನದಿಕೃತ ಸಾಗಾಣೆ ಕುರಿತು, CEMEC INFOTECH ರವರ ವರದಿಯಲ್ಲಿ GEO FENCING ನಲ್ಲಿ ದಾಖಲಾಗಿರುವಂತೆ ಟಿಪ್ಪರ ವಾಹನದ ಸಂಖ್ಯೆ ಕೆಎ-28 ಡಿ-6655 ನೇದ್ದರ ಚಾಲಕ ಮತ್ತು ಮಾಲಿಕರ ಮೇಲೆ ಕಾನೂನಿಸನ ಕ್ರಮ ಜರುಗಿಸಬೇಕು ಅಂತಾ ಸಲ್ಲಿಸಿದ ದೂರು ಸಾರಾಂಸದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಟಕಾ ಜೂಜಾಟದಲ್ಲಿ ನಿರತವರ ಬಂಧನ :
ಫರತಾಬಾದ ಠಾಣೆ  ದಿನಾಂಕ 17/01/2017 ರಂದು ಬೆಳಿಗ್ಗೆ ಫರಹತಾಬಾದ  ಗ್ರಾಮದಲ್ಲಿ ಸರ್ಕಾರಿ ಆಸ್ಪತ್ರೆಯ ಮುಂದಿನ ಸಾರ್ವಜನಿಕ ಸ್ಥಳದಲ್ಲಿ ಮಟಕಾ ಜೂಜಾಟ ನಡೆದಿದೆ ಅಂತಾ ಬಾತ್ಮಿ ಬಂದ ಮೇರೆಗೆ ಶ್ರೀ ಪರಸಪ್ಪ .ಎಸ್ .ವನಂಜಕರ ಪಿ.ಎಸ್.ಐ ಫರಹತಾಬಾದ ಪೊಲೀಸ್ ಠಾಣೆ  ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಮಾನ್ಯ ಸಿಪಿಐ ಸಾಹೇಬರು ಎಮ್.ಬಿ ನಗರ ವೃತ್ತ ರವರ ಮಾರ್ಗದರ್ಶನದಲ್ಲಿ ಬತ್ಮೀ ಬಂದ ಸ್ಥಳಕ್ಕೆ ಬಂದು  ಸ್ವಲ್ಪ ದೂರದಲ್ಲಿ ಮರೆಯಲ್ಲಿ ನಿಂತು ನೋಡಲಾಗಿ  ಸರ್ಕಾರಿ ಆಸ್ಪತ್ರೆಯ ಮುಂದೆ ಇರುವ  ಕೂಡಿ ಬಿಲ್ಡಿಂಗ  ಮುಂದಿನ ಸಾರ್ವಜನಿಕ  ಸ್ಥಳದಲ್ಲಿ ಒಬ್ಬ ವ್ಯಕ್ತಿ ಕುಳಿತುಕೊಂಡು  ಜನರಿಗೆ 1 ರೂ.ಗೆ 80 ರೂ ಕೊಡುತ್ತೇನೆ ಅಂತಾ ಹೇಳುತ್ತಾ ಜನರಿಂದ ಹಣವನ್ನು ಪಡೆದುಕೊಂಡು ದೈವಲೀಲೆಯ ಮಟಕಾ ಜೂಜಾಟದ ನಂಬರಗಳನ್ನು ಬರೆದುಕೊಳ್ಳುತ್ತಿರುವುದನ್ನು ನೋಡಿ ಖಚಿತ ಪಡಿಸಿಕೊಂಡು ದಾಳಿ ಮಾಡಿ ಮಟಕಾ ಅಂಕಿಗಳನ್ನು ಬರೆದುಕೊಳ್ಳುತ್ತಿದ್ದ ಮನುಷ್ಯನನ್ನು ಹಿಡಿದುಕೊಂಡಾಗ ಅಲ್ಲಿದ್ದ ಸಾರ್ವಜನಿಕರು ಓಡಿ ಹೋಗಿರುತ್ತಾರೆ. ಸದರಿ ವ್ಯಕ್ತಿಯನ್ನು  ವಿಚಾರಿಸಿ ಚೆಕ್ಕ ಮಾಡಲಾಗಿ ತನ್ನ ಹೆಸರು ಸಾಹೇಬಗೌಡ   ತಂದೆ ಭೀಮರಾಯ ರಾಸಣಗಿ ಸಾ : ಫರಹತಾಬಾದ ಅಂತಾ ತಿಳಿಸಿದ್ದು  ಈತನಿಗೆ ನಾನು ಚೆಕ್ಕ ಮಾಡಿದಾಗ ಆತನ ಹತ್ತಿರ  ಒಂದು  ಮಟಕಾ ಚೀಟಿ , ಒಂದು ಬಾಲ್‌ ಪೆನ್‌, ಮಟಕಾ ಅಂಕಿಯನ್ನು ಬರೆದುಕೊಂಡಿದ್ದರ ನಗದು ಹಣ 860 /- ರೂ ವಶಪಡಿಸಿಕೊಂಡು ಸದರಿಯವನೊಂದಿಗೆ ಫರತಾಬಾದ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.
ರಾಘವೇಂದ್ರ ನಗರ ಠಾಣೆ : ದಿನಾಂಕ:16/01/2017 ರಂದು ಠಾಣಾ ರಾಣಾ ವ್ಯಾಪ್ತಿಯ ಮದಿನಾ ಕಾಲೋನಿ ಮಕ್ಕಾ ಮಜೀದ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿ ರಸ್ತೆಯ ಮೇಲೆ ನಿಂತ್ತು ಸಾರ್ವಜನಿಕರಿಂದ ಹಣ ಪಡೆಯುತ್ತಾ ಮಟಕಾ ನಡೆಸುತ್ತಿದ್ದ ಬಗ್ಗೆ ಖಚೀತ ಮಾಹೀತಿ ಬಂದ ಮೇರೆಗೆ ಶ್ರೀ ಸಂಜೀವಕುಮಾರ ಡಿ, ಪಿ.ಎಸ್‌‌. ರಾಘವೇಂದ್ರ ನಗರ ಪೊಲೀಸ ಠಾಣೆ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ   ಬಾತ್ಮಿ ಸ್ಥಳಕ್ಕೆ ಹೋಗಿ  ಮಕ್ಕಾ ಜಮೀದ ಮರೆಯಲ್ಲಿ ನಿಂತು ನೋಡಲು ಅಲ್ಲಿ ಒಬ್ಬ ವ್ಯಕ್ತಿಯು ಸಾರ್ವಜನಿಕ ರಸ್ತೆಯ ಪಕ್ಕದಲ್ಲಿ ನಿಂತು ಬಾಂಬೆ ಕಲ್ಯಾಣ ಮಟಕಾ ನಂಬರಕ್ಕೆ ಒಂದು ರೂ ಗೆ 90 ರೂ ಕೊಡುತ್ತೇನೆ ಅಂತಾ ಕೂಗುತ್ತಾ ರಸ್ತೆಗೆ ಹೋಗಿ ಬರುವ ಸಾರ್ವಜನಿಕರಿಂದ ಹಣ ಪಡೆದು ಮಟಕಾ ನಂಬರ ಚೀಟಿ ಬರೆದು ಒಂದು ಚೀಟಿ ಸಾರ್ವಜನಿಕರಿಗೆ ಕೋಡುತ್ತಾ ಇನ್ನೊಂದು ಚೀಟಿ ತನ್ನ ಹತ್ತಿರ ಇಟ್ಟುಕೊಳ್ಳುತ್ತಿದ್ದನು. ಇದನ್ನು ಖಚಿತ ಪಡಿಸಿಕೊಂಡು  ದಾಳಿ ಮಾಡಿ ಹಿಡಿದು ಆತನ  ಹೆಸರು ವಿಳಾಸ ವಿಚಾರಿಸಲು ಅವನು ತನ್ನ ಹೆಸರು ಅಮ್ಜದ  ತಂದೆ ಸರ್ದಾರ ಖಾನ್ ಶೇಖ  ಸಾ|| ಮೊಹ್ಮದಿ ಚೌಕ್ ಹತ್ತಿರ ಜಿಲಾನಾಬಾದ ಎಮ್,ಎಸ್,ಕೆ ಮಿಲ್ಲ್ ಕಲಬುರಗಿ ಅಂತಾ ತಿಳಿಸಿದ್ದನು ಆತನ ಅಂಗಶೋಧನೆ ಮಾಡಲು ಮಟಕಾ ಜುಜಾಟಕ್ಕೆ ಸಂಬಂದಿಸಿದ ನಗದು ಹಣ 1280=00 ರೂ ಮತ್ತು 6 ಮಟಕಾ ನಂಬರ ಬರೆದ ಚೀಟಿಗಳು ಮತ್ತು ಒಂದು ಬಾಲ ಪೆನ್ನ ದೊರೆತಿದ್ದು ಅವುಗಳನ್ನು ವಶಪಡಿಸಿಕೊಂಡು ಸದರಿಯವನೊಂದಿಗೆ ರಾಘವೇಂದ್ರ ನಗರ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.
ಹಲ್ಲೆ ಪ್ರಕರಣಗಳು :
ರಾಘವೇಂದ್ರ ನಗರ ಠಾಣೆ : ಶ್ರೀ ರಾಘವೇಂದ್ರ ತಂದೆ ನಾರಾಯಣರಾವ ಸುರಪುರಕರ ಸಾ:ನ್ಯೂ ರಾಘವೇಂದ್ರ ಕಾಲೋನಿ ಕಲಬುರಗಿ ಇವರು ದಿನಾಂಕ:15-01-2017 ರಂದು ರಾತ್ರಿ ಕಲಬುರಗಿ ನಗರದ ಬ್ರಹ್ಮಪೂರ ಬಡಾವಣೆಯ ಲಾಲಗೇರಿಯಲ್ಲಿರುವ ಮೈಕಾನ ಬಾರಗೆ ನಾನು ಮತ್ತು ನನ್ನ ಗೆಳೆಯ ಸಂತೋಷ ಮತ್ತು ಪ್ರಮೋದ, ಬಸವರಾಜ ನಾಲ್ಕು ಜನರು ಕೂಡಿ ಹೋಗಿ ಅಲ್ಲಿ ಬಾರಿನಲ್ಲಿ ಬ್ರಾಂಡಿ ಕುಡಿಯುತ್ತಾ ಕುಳಿತಿದ್ದು ಬಾರಿನಲ್ಲಿ ಟಿ.ವಿ ಯಲ್ಲಿ ಕ್ರಿಕೇಟ ನಡೆದಿದ್ದು ನಾವು ನೋಡುತ್ತಿದ್ದೆವು. ಆಗ ನನ್ನ ಗೆಳೆಯ ಸಂತೋಷ ಕ್ರಿಕೇಟ ನೋಡಿ ಶೀಟಿ ಹೊಡೆದನು. ಆಗ ಬಾರಿನ ಅಕೌಂಟಟೆಂಟ ಮ್ಯಾನೇಜರ ಸಂತೋಷ ಮತ್ತು ಸೂಪರವೈಜರ ಪ್ರವೀಣ ಇಬ್ಬರೂ ಬಂದು ಏಕೆ ಸೀಟಿ ಹೊಡೆಯುತ್ತಿದ್ದಿರಿ ಅಂತಾ ಕೇಳಿದಾಗ ನಾನು ಅವರಿಗೆ ಸೀಟಿ ಹೊಡೆದರೆ ಏನು ಆಗುತ್ತದೆ ಅಂತಾ ಹೇಳಿದ್ದಕ್ಕೆ ಸಂತೋಷ ಈತನು ನನ್ನ ಎದೆಯ ಮೇಲಿನ ಅಂಗಿ ಹಿಡಿದು ರಂಡಿ ಮಗನೆ ಭೋಸಡಿ ಮಗನೆ ಅಂತಾ ಬೈದು ಒಂದು ಪ್ಲಾಸ್ಟೀಕ್‌ ಪೈಪದಿಂದ ನನ್ನ ಬೆನ್ನಿನ ಮೇಲೆ ಮತ್ತು ಎಡಗಡೆ ಪಕ್ಕೆಯ ಮೇಲೆ ಹೊಡೆದು ಗುಪ್ತಗಾಯ ಮಾಡಿರುತ್ತಾನೆ. ಪ್ರವೀಣ ಈತನು ಏ ಭೋಸಡಿ ಮಗನೆ ನೀನು ನಮ್ಮ ಬಾರಿಗೆ ಬಂದು ನಮಗೆ ಅಂಜಿಸುತ್ತಿ ಏನು ಅಂತಾ ಕೈಯಿಂದ ಹೊಟ್ಟೆಯ ಮೇಲೆ ಎದೆಯ ಮೇಲೆ ಹೊಡೆದಿರುತ್ತಾನೆ ಇದನ್ನು ನೋಡಿ ನನ್ನ ಜೊತೆಯಿದ್ದ ಸಂತೋಷ ಮತ್ತು ಪ್ರಮೋದ ಜಗಳ ಬಿಡಿಸಿರುತ್ತಾರೆ ಅಲ್ಲಿಂದ ನಾನು ಮನೆಗೆ ಹೋಗಿ ರಾತ್ರಿ ಮನೆಯಲ್ಲಿ ಮಲಗಿಕೊಂಡಿದ್ದು ಬೆಳಗ್ಗೆ ಬೇನೆಯಾಗುತ್ತಿರುವದರಿಂದ ಉಪಚಾರ ಕುರಿತು ಆಸ್ಪತ್ರೆಗೆ ಬಂದು ಸೇರಿಕೆಯಾಗಿರುತ್ತೇನೆ  ಅಂತಾ ಸಲ್ಲಿಸಿದ ದೂರು ಸಾರಾಂಸದ ಮೇಲಿಂದ ರಾಘವೇಂದ್ರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ರಾಘವೇಂದ್ರ ನಗರ ಠಾಣೆ : ಶ್ರೀ ಸಂತೋಷ ತಂದೆ ಚಿತ್ರಶೇಖರ ಹಡಪದ ಸಾ|| ಕಾವೇರಿ ನಗರ ಶಹಾಬಜಾರ ಕಲಬುರಗಿ ಇವರು ಕಲಬುರಗಿ ನಗರದ ಬ್ರಹ್ಮಪೂರ ಬಡಾವಣೆಯ ಲಾಲಗೇರಿಯಲ್ಲಿರುವ ಮೈಖಾನ ಬಾರಿನಲ್ಲಿ ಕಳೆದ 12-13 ವರ್ಷಗಳಿಂದ ಮ್ಯಾನೇಜರ ಅಂತಾ ಕೆಲಸ ಮಾಡಿಕೊಂಡು ಬರುತ್ತಿದ್ದೇನೆ  ನಿನ್ನೆ ದಿನಾಂಕ 15-01-2017 ರಂದು ರಾತ್ರಿ ನಮ್ಮ ಬಾರಿನಲ್ಲಿರುವ ಎಲ್ಲಾ ಗ್ರಾಹಕರಿಗೆ ನಾನು ಮತ್ತು ನಮ್ಮ ಬಾರಿನಲ್ಲಿ ಕೆಲಸ ಮಾಡುವ ಸುಭಾಶ ಮತ್ತು ಅಶೋಕ ಎಲ್ಲರೂ ಕೂಡಿಕೊಂಡು ಬಾರ ಬಂದು ಮಾಡುತ್ತೇವೆ ರಾತ್ರಿಯಾಗಿರುತ್ತದೆ ಅಂತಾ ಎಲ್ಲರಿಗೆ ಹೋರಗೆ ಹಾಕುತ್ತಿರುವಾಗ ಬಾರಿನಲ್ಲಿದ್ದ ಗ್ರಾಹಕರಾದ 1) ರಾಘು ಭಾಗ್ಯಶ್ರೀ ಮೇಡಿಕಲ್, 2) ಸಂತೋಷ ಮತ್ತು 3) ಇನ್ನೊಬ್ಬ ಅವರ ಗೆಳೆಯ ಇವರು 3 ಜನರು ನಮ್ಮ ಜೋತೆಯಲ್ಲಿ ಜಗಳ ತೆಗೆದು ನಾವು ಇನ್ನೂ ಒಂದು ಗಂಟೆ ಬಾರಿನಲ್ಲಿ ಕುಳಿತುಕೊಳ್ಳುತ್ತೆವೆ ಏಕೆ ನಮಗೆ ಹೊರೆಗೆ ಹಾಕುತ್ತಿದ್ದಿರಿ ಅಂತಾ ರಾಘು ಇವನು ನನ್ನ ಎದೆಯ ಮೇಲಿನ ಅಂಗಿ ಹಿಡಿದು ಏ ರಂಡಿ ಮಗನೆ ಭೋಸಡಿ ಮಗನೆ ಅಂತಾ ಅಲ್ಲೆ ಮೂಲೆಯಲ್ಲಿ ಬಿದ್ದಿದ ಒಂದು ಪ್ಲಾಸ್ಟಿಕ ಪೈಪದಿಂದ ನನ್ನ ಬೆನ್ನಿನ ಮೇಲೆ ಎದೆಯ ಮೇಲೆ ಹೊಡೆದು ಗುಪ್ತಗಾಯ ಮಾಡಿರುತ್ತಾನೆ ಸಂತೋಷ ಇತನು ಒಂದು ಕಲ್ಲಿನಿಂದ ಹೊಟ್ಟೆಯ ಮೇಲೆ ಹೊಡೆದು ಗುಪ್ತಗಾಯ ಮಾಡಿ ಮತ್ತೆ ಕೈಮುಷ್ಠಿ ಮಾಡಿ ಎಡಕೀವಿಯ ಮೇಲೆ ಹೋಡೆದಿರುತ್ತಾನೆ ಇನ್ನೊಬ್ಬ ವ್ಯಕ್ತಿ ಏ ರಂಡಿ ಮಗನೆ ಸೂಳ್ಯಾ ಮಗನೆ ನಮಗೆ ಬಾರಿನಿಂದ ಹೋರಗೆ ಹಾಕುವದು ನಿಮಗೆಷ್ಟು ಏನೂ ಧೈರ್ಯ ಅಂತಾ ಕಾಲಿನಿಂದ ಹೊಟ್ಟೆಯ ಮೇಲೆ ಹೊಡೆದಿರುತ್ತಾನೆ ಅವನ ಹೆಸರು ವಿಳಾಸ ಗೊತ್ತಿಲ್ಲಾ ನೋಡಿದರೆ ಗುರುತ್ತಿಸುತ್ತೇನೆ ನನಗೆ ಹೊಡೆಬಡೆ ಮಾಡುತ್ತಿರುವಾಗ ನಮ್ಮ ಜೋತೆಯಿದ್ದ ಸುಭಾಶ ಮತ್ತು ಅಶೋಕ ಇವರು ಜಗಳ ಬಿಡಿಸಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ರಾಘವೇಂದ್ರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.