POLICE BHAVAN KALABURAGI

POLICE BHAVAN KALABURAGI

14 July 2016

Kalaburagi District Reported Crimes

ಆಕ್ರಮವಾಗಿ ಗಾಂಜಾ ಗಿಡಗಳನ್ನು ಬೆಳೆದವನ ಬಂಧನ :
ಅಫಜಲಪೂರ ಠಾಣೆ : ದಿನಾಂಕ 13/07/2016 ರಂದು ಮದ್ಯಾಹ್ನ ಗೌರ(ಬಿ) ಸೀಮಾಂತರದ ಬಸಯ್ಯ ತಂದೆ ಮಹಾದೇವಯ್ಯ ಹಿರೇಮಠ ಇವರ ಹೊಲದಲ್ಲಿ ಅನದಿಕೃತವಾಗಿ ಗಾಂಜಾ ಗಿಡಗಳನ್ನು ಬೆಳೆಸಿ, ಗಾಂಜಾ ಮಾರಾಟ ಮಾಡುತ್ತಾನೆ ಅಂತಾ ಖಚಿತ ಮಾಹಿತಿ ಬಂದ ಮೇರೆಗೆ, ಪಿ.ಎಸ್.ಐ. ಅಫಜಲಪೂರ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಮತ್ತು ಮಾನ್ಯ ತಾಲೂಕಾ ದಂಡಾಧಿಕಾರಿಗಳು ಹಾಗೂ ಮಾನ್ಯ ತಹಸಿಲ್ದಾರರು ಆದ ಶ್ರೀ ದಯಾನಂದ ಪಾಟೀಲ ಸಾಹೇಬರಿಗೆ ದಾಳಿ ಮಾಡುವ ಸಂದರ್ಬದಲ್ಲಿ ಹಾಜರಿರುವಂತೆ ಮಾನ್ಯ ತಹಸಿಲ್ದಾರ ಸಾಹೇಬರು ಇಬ್ಬರು ಪಂಚರಾದ 1) ಸಂಗಪ್ಪ ತಂದೆ ಕಲ್ಲಪ್ಪ ಬಗಲಿ ಉ|| ಗ್ರಾಮ ಲೆಕ್ಕಾದಿಕಾರಿ ಗೌರ (ಬಿ) ಗ್ರಾಮ ಸಾ|| ಮನ್ನಿಕೇರಿ ತಾ|| ಬಿಳಗಿ ಜಿ|| ಬಾಗಲಕೋಟ ಹಾ|| || ಅಫಜಲಪೂರ 2) ದೇವಾನಂದ ತಂದೆ ದತ್ತಪ್ಪ ಜಮಾದಾರ ಉ| ಗ್ರಾಮ ಸೆವಕ ಗೌರ (ಬಿ) ಗ್ರಾಮ ಸಾ|| ಗೌರ (ಬಿ) ಇವರೊಂದಿಗೆ ಗೌರ (ಬಿ) ಗ್ರಾಮಕ್ಕೆ ಹೋಗಿ ಗ್ರಾಮದ ಬಾತ್ಮಿದಾರರಿಗೆ ಸದರಿ ಬಸಯ್ಯ ಹಿರೆಮಠ ಈತನ ಹೊಲದ ಬಗ್ಗೆ ಹಾಗೂ ಸದರಿಯವನ ಬಗ್ಗೆ ವಿಚಾರಿಸಿದಾಗ ಬಾತ್ಮಿದಾರನು ನಮ್ಮ ಜೊತೆಗೆ ಬಂದು ದೂರದಿಂದ ಬಸಯ್ಯ ಹಿರೆಮಠ ಈತನ ಹೊಲವನ್ನು ತೊರಿಸಿದ ಮೇರೆಗೆ, ಸದರಿ ಬಸಯ್ಯ ಹಿರೆಮಠ ಈತನ ಹೊಲದಲ್ಲಿ ತಲಾಸ ಮಾಡುತ್ತಾ ಹೊಗುತ್ತಿದ್ದಾಗ ಸದರಿ ಹೊಲದಲ್ಲಿ ತರಕಾರಿ ಬೆಳೆಗಳ ಸಮೀಪ ಹೋಗುತ್ತಿದ್ದಂತೆ ತರಕಾರಿ ಬೆಳೆಯಲ್ಲಿ ಗಾಂಜಾ ಗಿಡಗಳು ಕಂಡವು ಆಗ ನಾವು ಗಾಂಜಾ ಗಿಡಗಳ ಸಮೀಪ ಹೋಗುತ್ತಿದ್ದಂತೆ ಅಲ್ಲೆ ಸಮೀಪದಲ್ಲಿದ್ದ ಒಬ್ಬ ವ್ಯೆಕ್ತಿ ಸಮವಸ್ತ್ರದಲ್ಲಿದ್ದ ನಮ್ಮನ್ನು ನೋಡಿ ಓಡ ತೊಡಗಿದನು, ಆಗ ನಾವು ಸದರಿಯವನ ಮೇಲೆ ಸಂಶಯ ಬಂದು, ಅವನನ್ನು ಬೆನ್ನಟ್ಟಿ ಹಿಡಿದು ಹೆಸರು ವಿಳಾಸ ವಿಚಾರಿಸಲಾಗಿ ತನ್ನ ಹೆಸರು ಬಸಯ್ಯ ತಂದೆ ಮಹಾದೇವಯ್ಯ ಹಿರೇಮಠ ಸಾ|| ಗೌರ (ಬಿ) ಅಂತಾ ತಿಳಿಸಿದನು, ನಾವು ತಲಾಸ ಮಾಡುತ್ತಿದ್ದ ಹೊಲದ ಮಾಲಿಕ ಹಾಗೂ ವ್ಯೆಕ್ತಿ ಸದರಿಯವನೆ ಆಗಿದ್ದರಿಂದ, ಸದರಿ ಬಸಯ್ಯ ಹಿರೆಮಠ ಈತನಿಗೆ ವಿಚಾರಿಸಿದಾಗ ಸದರಿಯವನು ಸದರಿ ಗಾಂಜ ಬೆಳೆದ ಹೊಲದ ಸರ್ವೆ ನಂಬರ 56 ಇದ್ದು ಗೌರ (ಬಿ) ಸೀಮಾಂತರದಲ್ಲಿ ಇರುತ್ತದೆ. ನಾನು ಸದರಿ ನನ್ನ ಹೊಲದಲ್ಲಿ ಸುಮಾರು ದಿನಗಳಿಂದ ಗಾಂಜಾ ಗಿಡಗಳನ್ನು ಬೆಳೆದು ಅದನ್ನು ನನ್ನ ಸ್ವಂತ ಲಾಬಕ್ಕಾಗಿ ಮಾಹಾರಾಷ್ಟ್ರದ ಬೇರೆ ಬೇರೆ ಕಡೆಗೆ ತಗೆದುಕೊಂಡು ಹೋಗಿ ಮಾರಾಟ ಮಾಡುತ್ತೇನೆ ಅಂತಾ ತಿಳಿಸಿದನು. ನಂತರ ಸದರಿ ವ್ಯೆಕ್ತಿಯನ್ನು ವಶಕ್ಕೆ ಪಡೆದುಕೊಂಡು, ಸದರ ಗಾಂಜಾ ಗಿಡಗಳನ್ನು ಕಾಂಡ ಸಮೇತ ಕಿತ್ತಿಸಿ ನಂತರ ಸದರಿ ಹಾಜರಿದ್ದ ಪಂಚರ ಸಮಕ್ಷಮ ನಾನು ಮತ್ತು ಮಾನ್ಯ ತಹಸಿಲ್ದಾರ ಸಾಹೇಬರು ಇಬ್ಬರು ಗಾಂಜ ಗಿಡಗಳನ್ನು ವಶಪಡಿಸಿಕೊಂಡಿದ್ದು, ಸದರಿ ಗಾಂಜಾ ಗಿಡಗಳನ್ನು ಕಾಂಡ ಸಮೇತವಾಗಿ ಕಿತ್ತಿದ್ದು, ಒಟ್ಟು ಕಾಂಡ ಸಮೇತವಾದ 45 ಹಸಿ ಗಾಂಜಾ ಗಿಡಗಳು ಇರುತ್ತವೆ. ಅವುಗಳನ್ನು ತೂಕ ಮಾಡಿಸಲು ಅಂದಾಜು 40 ಕೆಜಿ ತೂಕಿನವುಗಳು ಇರುತ್ತವೆ. ಸದರಿ ಕಾಂಡ ಸಮೇತವಾದ ಹಸಿ ಗಾಂಜಾ ಗಿಡಗಳು  ಅಂದಾಜು 2,00,000/- ರೂ ಕಿಮ್ಮತ್ತಿನವು ಇರಬಹುದು. ಅಂಥಾ ತಿಳಿಸಿಜಪ್ತಿ ಪಂಚನಾಮೆ ಮಾಡಿಕೊಂಡು ನಚಿತರ ಸದರಿ ಜಪ್ತ ಮಾಡಿಕೊಂಡ ಎಲ್ಲಾ ಗಾಂಜಾ ಗಿಡಗಳನ್ನು ಹಾಗೂ ಗಾಂಜಾ ಗಿಡಗಳನ್ನು ಬೆಳೆದ ಬಸಯ್ಯಾ ಹಿರೆಮಠ ಈತನೊಂದಿಗೆ ಅಫಜಲಪೂರ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.
ಅಪಹರಣ ಪ್ರಕರಣ :
ಗ್ರಾಮೀಣ ಠಾಣೆ : ದಿನಾಂಕ.8-7-2016 ರಂದು ಮುಂಜಾನೆ 8-00 ಗಂಟೆಯ ಸುಮಾರಿಗೆ  ನಮ್ಮ ಗ್ರಾಮದ ನಮ್ಮ ಓಣಿಯ ನಮ್ಮ ಜನಾಂಗದವನೆಯಾದ ಕುಮಾರ ತಂದೆ ಬಂಡೆಪ್ಪಾ ನಂದಿಕೂರ  ಸಾ;ಉದನೂರ ಗ್ರಾಮ ಇತನು ತನ್ನ ಮಗಳು ಅಪ್ರಾಪ್ತ ಬಾಲಕಿ ಚಿನ್ನಮ್ಮಾ ತಂದೆ ಜೈಭೀಮ ಕಟ್ಟಿ ವಯ;17 ವರ್ಷ ಇವಳನ್ನು ಮದುವೆಯಾಗುತ್ತೇನೆ ಅಂತಾ ಹೇಳಿ ಪುಸಲಾಯಿಸಿ ಅಪಹರಿಸಿಕೊಂಡು ಹೋಗಿರುತ್ತಾನೆ ಅಂತಾ ಶ್ರೀಮತಿ ಭಾರತಿ ಗಂಡ ಜೈಭೀಮ ಕಟ್ಟಿ ಸಾ :;ಉದನೂರ ಗ್ರಾಮ ತಾ;ಜಿ;ಕಲಬುರಗಿ  ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹುಡುಗ ಕಾಣೆಯಾದ ಪ್ರಕರಣ :
ನೆಲೋಗಿ ಠಾಣೆ : ಶ್ರೀ ಶಿವಪ್ಪ ತಂದೆ ಗೋಪಾಲ, ಮಾನವರ್ ಸಾ: ಅರಕೇರಿ ತಾ : ಜಿ : ವಿಜಯಪೂರ ಇವರ ಎರಡನೆ ಮಗ ಸಿದ್ದಪ್ಪ ಇವನು ಈಗ ಸುಮಾರು 2 ತಿಂಗಳ ಹಿಂದೆ ನಮ್ಮ ಕುರಿಗಳನ್ನು ಹೊಡೆದುಕೊಂಡು ನಾನು ನನ್ನ ಹೆಂಡತಿ ಮಗ ಅಜೀತ, ಸಿದ್ದಪ್ಪ ಕೂಡಿಕೊಂಡು ಮಂದೇವಾಲ ಸೀಮಾಂತರದಲ್ಲಿ ಕುರಿಗಳನ್ನು ಮೈಸುತ್ತಾ ರಾತ್ರಿ ಅಲ್ಲೇ ಹೊಲಗಳಲ್ಲಿ ರಾತ್ರಿ ವಸ್ತಿ ಮಾಡುತ್ತಿದ್ದೇವು.ನನ್ನ ಮಗ ಅಜೀತನಿಗೆ ಸ್ವಲ್ಪು ಆರಾಮವಿಲ್ಲದ ಕಾರಣ ಅವನಿಗೆ ದೇವರ ಕೇಳಿದ್ದರಿಂದ ಅವನಿಗೆ 7 ಶನಿವಾರ ನಮ್ಮ ಹನುಮಾನ ದೇವರಿಗೆ ಹೊಗಿ ಬರುಲು ಹೇಳಿದ್ದರಿಂದ ಅವನು 2 ಶನಿವಾರ ಹನುಮಾನ ದೇವರಿಗೆ ಮಂದೇವಾಲಕ್ಕೆ ಹೋಗಿದ್ದ ದಿನಾಂಕ: 11/06/2016 ರಂದು ಮುಂಜಾನೆ 7:30 ಎ.ಎಂ ಸುಮಾರಿಗೆ ನಾವು ವಸ್ತಿ ಮಾಡಿದ ಮಂದೇವಾಲ ಸೀಮಾಂತರದ ಶೇಟ್ಟಿಯವರ ಹೊಲದಿಂದ ದೇವರಿಗೆ ಹೋಗಿ ಬರುತ್ತೇನೆ ಅಂತ ನನ್ನ ಮಗ ಅಜೀತನು ಹೊದನು ನಂತರ 12:00 ಗಂಟೆ ಆದರು ನನ್ನ ಮಗ ನಾವು ಇದ್ದ ಹೊಲಕ್ಕೆ ಬರಲಿಲ್ಲಾ ನಂತರ ನಾವು ಮಂದೇವಾಲ ಹಾಗೂ ಇತರೆ ಕಡೆಗಳಲ್ಲಿ ಹುಡಿಕಾಡಿದರು ಸಿಗಲಿಲ್ಲಾ ನಂತರ ನಾವು ನಮ್ಮ ಸಂಬಂಧಿಕರಲ್ಲಿ ಹೊಗಿರಬಹುದೆಂದು ನಮ್ಮೂರಿಗೆ ಹೋಗಿ ನಮ್ಮ ಸುತ್ತಿಲಿನ ಸಂಬಂಧಿಕರ ಊರಲ್ಲಿ ಪತ್ತೆ ಮಾಡಲಾಗಿ ಎಲ್ಲಿಯೂ ನನ್ನ ಮಗನು ಸಿಕ್ಕರುವದಿಲ್ಲಾ ಕಾಣೆಯಾದ ನನ್ನ ಮಗನನ್ನೂ ಪತ್ತೆ ಮಾಡಿಕೊಡಬೇಕೆಂದು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ನೆಲೋಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಳವು ಪ್ರಕರಣ :
ನಿಂಬರ್ಗಾ ಠಾಣೆ : ಶ್ರೀ ಶಿವಾನಂದ ತಂದೆ ಧರ್ಮಣ್ಣ ಉ|| ಪ್ರಭಾರಿ ಮುಖ್ಯ ಗುರುಗಳು ಸರ್ಕಾರಿ ಪ್ರೌಢ ಶಾಲೆ ಯಳಸಂಗಿ, ಸಾ|| ಮೋಘಾ (ಕೆ), ತಾ|| ಆಳಂದ ಇವರು ದಿನಾಂಕ 28/06/2016 ರಂದು ಎಸ್.ಎಸ.ಎಲ.ಸಿ ಜೂನ 2016 ರ ಪರೀಕ್ಷಾ ಉತ್ತರ ಪತ್ರಿಕೆಗಳ ಮೌಲ್ಯ ಮಾಪನ ಕರ್ತವ್ಯ ಕುರಿತು ಹೊರಟು ಶಾಲೆಯ ಪೂರ್ಣ ಪ್ರಭಾರವನ್ನು ದೈಹಿಕ ಶಿಕ್ಷಕರಾದ ಶ್ರೀ ಸಿದ್ದಾರಾಮ ತಂದೆ ಪರಮೇಶ್ವರ ಪಾಳೆದ ಇವರಿಗೆ ವಹಿಸಿಕೊಟ್ಟಿರುತ್ತೇನೆ. ದಿನಾಂಕ 30/06/2016 ರಂದು 0500 ಪಿ.ಎಮದಿಂದ ಮತ್ತು ದಿನಾಂಕ 01/07/2016 ರ 0600 ಎ.ಎಮ ಮಧ್ಯದ ಅವಧಿಯಲ್ಲಿ ನಮ್ಮ ಶಾಲೆಯ ಹಳೆಯ ಕಟ್ಟಡದ ಮಧ್ಯದ ಕಂಪ್ಯೂಟರ ಕೋಣೆಯಲ್ಲಿರುವ ಒಟ್ಟು 16 ಬ್ಯಾಟರಿಗಳ ಅಂದಾಜು ಬೆಲೆ 24,900/- ಮೌಲ್ಯದವುಗಳನ್ನು ಯಾರೋ ಕಳ್ಳರು ಬಾಗಿಲಿನ ಕೊಣೆಯ ಬೀಗದ ಕೈ ಮತ್ತು ಕಬ್ಬಿಣದ ಶಟರ ಮುರಿದು ಒಳಗೆ ನುಗ್ಗಿ ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ಅಂತ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ನಿಂಬರ್ಗಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.