POLICE BHAVAN KALABURAGI

POLICE BHAVAN KALABURAGI

14 September 2014

Gulbarga District Reported Crimes

ಮಟಕಾ ಜೂಜಾಟದಲ್ಲಿ ನಿರತ ವ್ಯಕ್ತಯ ಬಂಧಣ :
ಅಫಜಲಪೂರ ಠಾಣೆ : ದಿನಾಂಕ 13-09-2014 ರಂದು ಅಫಜಲಪೂರ ಪಟ್ಟಣದ ಬಸ್ಸ ನಿಲ್ದಾಣದ ಹತ್ತಿರ ಒಬ್ಬ ವ್ಯಕ್ತಿ ಸಾರ್ವಜನಿಕ ಸ್ಥಳದಲ್ಲಿ ನಿಂತುಕೊಂಡು ಹೊಗಿ ಬರುವ ಜನರಿಗೆ 1 ರೂಪಾಯಿಗೆ 80 ರೂಪಾಯಿ ಗೆಲ್ಲರಿ ಅಂತಾ ಅನ್ನುತ್ತಾ ಸಾರ್ವಜನಿಕರ ಮನವೂಲಿಸಿ ಅವರಿಂದ ಹಣ ಪಡೆದು, ಅವರಿಗೆ ಅಂಕಿ ಸಂಖ್ಯೆ ಬರೆದ ಮಟಕಾ ಚೀಟಿಗಳನ್ನು ಕೊಡುತ್ತಿದ್ದಾನೆ ಅಂತಾ ಬಾತ್ಮಿ ಬಂದ ಮೇರೆಗೆ ಪಿ.ಎಸ್.ಐ. ಅಫಜಲಪೂರ, ಸಿಬ್ಬಂದಿ ಹಾಗು ಪಂಚರೊಂದಿಗೆ ಸ್ಥಳಕ್ಕೆ ಹೋಗಿ ದಾಳಿ ಮಾಡಿ  ಹಿಡಿದು ಸದರಿಯವನ ಹೆಸರು ವಿಳಾಸ ವಿಚಾರಿಸಲಾಗಿ ಸಿದ್ದು ತಂದೆ ಹಣಮಂತ ಗಾಯಕವಾಡ ಸಾ|| ಇಂದಿರಾ ನಗರ ಅಫಜಲಪೂರ ಅಂತಾ ತಿಳಿಸಿದ್ದು, ಸದರಿಯವನ ವಶದಿಂದ ಮಟಕಾ ಜೂಜಾಟಕ್ಕೆ ಸಂಬಂಧ ಪಟ್ಟ 325/- ರೂಪಾಯಿ ನಗದು ಹಣ ಹಾಗೂ ಅಂಕಿ ಸಂಖ್ಯೆ ಬರೆದ ಒಂದು ಮಟಕಾ ಚೀಟಿ ಹಾಗೂ ಒಂದು ಬಾಲ ಪೆನ್ನ ವಶಪಡಿಸಿಕೊಂಡು ಸದರಿಯವನೊಂದಿಗೆ ಅಫಜಲಪೂರ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.
ಅಫಜಲಪೂರ ಠಾಣೆ : ದಿನಾಂಕ 13-09-2014 ರಂದು ಅಫಜಲಪೂರ ಪಟ್ಟಣದ ಬಸವೇಶ್ವರ ಚೌಕ ಹತ್ತಿರ ಒಬ್ಬ ವ್ಯಕ್ತಿ ಸಾರ್ವಜನಿಕ ಸ್ಥಳದಲ್ಲಿ ನಿಂತುಕೊಂಡು ಹೊಗಿ ಬರುವ ಜನರಿಗೆ 1 ರೂಪಾಯಿಗೆ 80 ರೂಪಾಯಿ ಗೆಲ್ಲರಿ ಅಂತಾ ಅನ್ನುತ್ತಾ ಸಾರ್ವಜನಿಕರ ಮನವೂಲಿಸಿ ಅವರಿಂದ ಹಣ ಪಡೆದು, ಅವರಿಗೆ ಅಂಕಿ ಸಂಖ್ಯೆ ಬರೆದ ಮಟಕಾ ಚೀಟಿಗಳನ್ನು ಕೊಡುತ್ತಿದ್ದಾನೆ ಅಂತಾ ಬಾತ್ಮಿ ಬಂದ ಮೇರೆಗೆ ಶ್ರೀ ನಜೀರ ಅಹ್ಮದ ಎ.ಎಸ್.ಐ ಸಿಬ್ಬಂದಿ ಹಾಗು ಪಂಚರೊಂದಿಗೆ ಸ್ಥಳಕ್ಕೆ ಹೋಗಿ ದಾಳಿ ಮಾಡಿ ಹಿಡಿದು ಸದರಿಯವನ ಹೆಸರು ವಿಳಾಸ ವಿಚಾರಿಸಲಾಗಿ ಯಾಕೂಬ ತಂದೆ ಅಬ್ದುಲಸಾಬ ಕಡಿ ಸಾ|| ನೀಚೆ ಗಲ್ಲಿ ಅಫಜಲಪೂರ ಅಂತಾ ತಿಳಿಸಿದ್ದು, ಸದರಿಯವನ ವಶದಿಂದ ಮಟಕಾ ಜೂಜಾಟಕ್ಕೆ ಸಂಬಂಧ ಪಟ್ಟ 416/- ರೂಪಾಯಿ ನಗದು ಹಣ ಹಾಗೂ ಅಂಕಿ ಸಂಖ್ಯೆ ಬರೆದ ಒಂದು ಮಟಕಾ ಚೀಟಿ ಹಾಗೂ ಒಂದು ಬಾಲ ಪೆನ್ನ ವಶಪಡಿಸಿಕೊಂಡು  ಸದರಿಯವನೊಂದಿಗೆ ಅಫಜಲಪೂರ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.
ಅಫಜಲಪೂರ ಠಾಣೆ : ದಿನಾಂಕ 13-09-2014 ರಂದು ಅಫಜಲಪೂರ ಪಟ್ಟಣದ ಅಫಜಲಖಾನ ಚೌಕ ಹತ್ತಿರ ಒಬ್ಬ ವ್ಯಕ್ತಿ ಸಾರ್ವಜನಿಕ ಸ್ಥಳದಲ್ಲಿ ನಿಂತುಕೊಂಡು ಹೊಗಿ ಬರುವ ಜನರಿಗೆ 1 ರೂಪಾಯಿಗೆ 80 ರೂಪಾಯಿ ಗೆಲ್ಲರಿ ಅಂತಾ ಅನ್ನುತ್ತಾ ಸಾರ್ವಜನಿಕರ ಮನವೂಲಿಸಿ ಅವರಿಂದ ಹಣ ಪಡೆದು, ಅವರಿಗೆ ಅಂಕಿ ಸಂಖ್ಯೆ ಬರೆದ ಮಟಕಾ ಚೀಟಿಗಳನ್ನು ಕೊಡುತ್ತಿದ್ದಾನೆ ಅಂತಾ ಬಾತ್ಮಿ ಬಂದ ಮೇರೆಗೆ ಹೆಚ್.ಸಿ 110 ರಾಮಚಂದ್ರ, ಸಿಬ್ಬಂದಿ ಮತ್ತು ಪಂಚರೊಂದಿಗೆ ಸ್ಥಳಕ್ಕೆ ಹೋಗಿ ದಾಳಿ ಮಾಡಿ ಹಿಡಿದು ಸದರಿಯವನ ಹೆಸರು ವಿಳಾಸ ವಿಚಾರಿಸಲಾಗಿ ಶ್ರೀಮಂತ ರಂದೆ ಶಂಕ್ರೆಪ್ಪಾ ಶಿರಶ್ಯಾಡ ಸಾ|| ಮರಗಮ್ಮ ಗುಡಿ ಹತ್ತಿರ ಅಫಜಲಪೂರ ಅಂತಾ ತಿಳಿಸಿದ್ದು, ಸದರಿಯವನ ವಶದಿಂದ ಮಟಕಾ ಜೂಜಾಟಕ್ಕೆ ಸಂಬಂಧ ಪಟ್ಟ 285/- ರೂಪಾಯಿ ನಗದು ಹಣ ಹಾಗೂ ಅಂಕಿ ಸಂಖ್ಯೆ ಬರೆದ ಒಂದು ಮಟಕಾ ಚೀಟಿ ಹಾಗೂ ಒಂದು ಬಾಲ ಪೆನ್ನ ವಶಪಡಿಸಿಕೊಂಡು  ಸದರಿಯವನೊಂದಿಗೆ ಅಫಜಲಪೂರ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.
ಅಪಘಾತ ಪ್ರಕರಣಗಳು :
ನಿಂಬರ್ಗಾ ಠಾಣೆ : ಶ್ರೀಮತಿ ತಂಗಮಣಿ ಗಂಡ ಶಾಮರಾಮ ಹೆಗಡೆ ಸಾ|| ಚೆಂಗಟಾಹಾ|||| ಮಾಡಿಯಾಳ. ದಿನಾಂಕ 13/09/2014 ರಂದು 1030 ಗಂಟೆಗೆ ಫಿರ್ಯಾದಿಯು ಗುಲಬರ್ಗಾಕ್ಕೆ ಮೀಟಿಂಗ ಕುರಿತು ಹೋಗಲು ಮಾಡಿಯಾಳ ಗ್ರಾಮದ ಬಸ ನಿಲ್ದಾಣದ ನೀರಿನ ಗುಮ್ಮಿಯ ಹತ್ತಿರ ಹೊರಟಾಗ ಹಿಂದಿನಿಂದ ಒಂದು ಬಿಳಿ ಬಣ್ಣದ ಗೂಡ್ಸ ಪಿಕ ಅಪ ನಂ. ಕೆ.ಎ 32, ಡಿ 6719 ನೇದ್ದರ ಚಾಲಕ ವಾಹನವನ್ನು ಅತೀ ವೇಗ ಮತ್ತು ನಿಷ್ಕಾಳಜಿತನದಿಂದ ನಡೆಸಿಕೊಂಡು ಬಂದು ಫಿರ್ಯಾದಿಗೆ ಡಿಕ್ಕಿ ಹೊಡಿಸಿದ್ದು ಇದರಿಂದ ಫಿರ್ಯಾದಿಗೆ ಕಾಲಿಗೆ, ಮುಖಕ್ಕೆ ಗಂಭೀರ ರಕ್ತಗಾಯ ಮತ್ತು ಗುಪ್ತಗಾಯವಾಗಿರುತ್ತದೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ನಿಂಬರ್ಗಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹೆಚ್ಚುವರಿ ಸಂಚಾರಿ ಠಾಣೆ : ಶ್ರೀ ವಿತ್ರಣಾಚಾರ್ಯಾ ತಂದೆ ಈಶ್ವರಪ್ಪ ರವರು .ದಿನಾಂಕ 13-09-2014 ರಂದು ಮದ್ಯಾಹ್ನ 1-30 ಗಂಟೆಗೆ ನಾನು ಮತ್ತು ವಿಜಯಕುಮಾರ ಹಾಗು ಪೀರಪ್ಪ ಬಡಿಗೆರ ಮೂರು ಜನರು ನಮ್ಮ ಬಸ ಡಿಪೊದಿಂದ ಸಂತೋಷ ಟಾಕೀಜ ಎದುರುಗಡೆ ಬರುವ ಬಸವ ಭವನ ಖಾನಾವಳಿಗೆ ಊಟ ಮಾಡುವ ಸಲುವಾಗಿ ನಡೆದುಕೊಂಡು ಹೋಗಿ ಜನತಾ ಹೋಟಲ ಮತ್ತು ನಬಿ ಲಾಡ್ಜ ಮದ್ಯದ ರೋಡಿನ ಬಲ ರೋಡಿನಿಂದ ಎಡ ರೋಡ ಕಡೆಗೆ ರಸ್ತೆ ದಾಟುತ್ತಿರುವಾಗ ಕೇಂದ್ರ ಬಸ್ ನಿಲ್ದಾಣದ ಕಡೆಯಿಂದ ಮೋ/ಸೈಕಲ ನಂಬರ ಕೆಎ-32 ಎಲ್-3132 ರ ಸವಾರ ಅತೀವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ನನಗೆ ಡಿಕ್ಕಿ ಪಡಿಸಿ ಅಪಘಾತ ಮಾಡಿ ನನ್ನ ಎಡಗಾಲ ಮೊಳಕಾಲ ಕೆಳಗೆ ಭಾರಿ ಗುಪ್ತಪೆಟ್ಟು ಕಿರುಬೆರಳಿಗೆ ರಕ್ತಗಾಯ ಪಡಿಸಿ ಮೋ/ಸೈಕಲ ಸಮೇತ ಓಡಿ ಹೋಗಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಹೆಚ್ಚುವರಿ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪಹರಣ ಪ್ರಕರಣ :
ಜೇವರ್ಗಿ ಠಾಣೆ : ಶ್ರೀಮತಿ ಪುತಲಿಬೇಗಂ ಗಂಡ ಬಾಸುಮಿಯಾ ಪ್ಯಾಟಿ ಸಾ: ಮದರಿ ಇವರ ಮಗಳಾದ ಶಾಹೀದಾ ಬೇಗಂ ವಯಾ: 16 ವರ್ಷ  ಇವಳಿಗೆ ದಿನಾಂಕ: 3-9-2014 ರಂದು ಸಾಯಾಂಕಾಲ 5-30 ಗಂಟೆಗೆ ಮದರಿ ಗ್ರಾಮದ ಹೆಣ್ಣುಮಕ್ಕಳ ಶೌಚಾಲಯಕ್ಕೆ ಹೋದ ಫಿರ್ಯಾದಿಯ ಅಪ್ರಾಪ್ತ ವಯಸ್ಸಿನ ಮಗಳಿಗೆ ಬಾಬು ತಂದೆ ಬಸವಂತಪ್ಪ ಆಲಗೂರ ಸಾ|| ಮದರಿ ಇತನು ಪುಸಲಾಯಿಸಿ ಅಥವಾ ಜಬರದಸ್ತಿಯಿಂದ ಅಪಹರಣ ಮಾಡಿಕೊಂಡು ತನ್ನ ಮೊಟಾರು ಸೈಕಲ್ ಮೇಲೆ ಕರೆದುಕೊಂಡು ಹೊಗಿದ್ದು  ನನ್ನ ಮಗಳಿಗೆ ಎಲ್ಲಾ ಕಡೆ ಹುಡಾಕಾಡಿದರು ಸಿಕ್ಕಿರುವದಿಲ್ಲ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಜೇವರ್ಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನಕಲಿ ಕಾಟ್ರೇಜ ಮಾರಾಟ ಮಾಡುತ್ತಿದ್ದವನ ಬಂಧನ :
ಸ್ಟೇಷನ ಬಜಾರ ಠಾಣೆ :  ದಿನಾಂಕ 13/09/2014 ರಂದು ಶ್ರೀ ಕೆವಿನ ಜಾನ ತಂದೆ ಸ್ಟೇನ್ ಲೆ ಜಾನ ಉಃ ರಿಜನಲ ಮ್ಯಾಜೇಜರ EIPR ಸಾಃ ಡಿ-0 ಸಾಯಿ ತೇಜಾ ಶೆರುಡ 1 ನೇ ಮೇನ್ 16 ನೇ ಕ್ರಾಸ್ ಪೈ ಲೇಔಟ ಹಳೆ ಮದ್ರಾಸ ರಸ್ತೆ ಕೆ.ಆರ್ ಪೂರಂ ಬೆಂಗಳೂರು-16 ರವರು, ಐವನ ಶಾಯಿ ಏರಿಯಾದ ಮಹಾರಾಜಾ ಹೊಟೇಲ ಪಕ್ಕದಲ್ಲಿರುವ ಅಂಬಿಕಾ ಸ್ಟೇಷನರಿ ಅಂಗಡಿಯ ಮಾಲಕ ಗೊವಿಂದ ತಂದೆ ಗಣೇಶ ಮಾಲ ಇವರು ನಕಲಿ ಹೆಚ್.ಪಿ ಕಂಪನಿಯ ಟೂನರ್ ಕಾಟ್ರೇಜ ಮಾರಾಟ ಮಾಡುತ್ತಿದ್ದಾರೆ ಅಂತಾ ಸಲ್ಲಿಸಿದ ದೂರು ಸಾರಾಂಸದ ಮೇಲಿಂದ ಸ್ಟೇಷನ ಬಜಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.