POLICE BHAVAN KALABURAGI

POLICE BHAVAN KALABURAGI

04 February 2014

Gulbarga District Reported Crimes

ವಾರಸುದಾರರಿಲ್ಲದ ಮಾಲು ಜಪ್ತಿ ಕಳ್ಳಿಯ ಬಂಧನ :
ಚೌಕ ಠಾಣೆ : ದಿನಾಂಕ 03-02-2014 ರಂದು 1215 ಪಿ.ಎಂಕ್ಕೆ ಶ್ರೀ ಕಲ್ಯಾಣಿ ಹೊಸಮನಿ ಪಿ.ಐ ಚೌಕ  ಮತ್ತು ಸಿಬ್ಬಂದಿಯವರು ಕೂಡಿ ಬಜಾರ, ಕಿರಾಣಾ ಬಜಾರ, ಹುಮನಾಬಾದ ಬೇಸ್, ಬಂಬೂಬಜಾರ ಮಾರ್ಗವಾಗಿ ಎಮ್.ಎ.ಟಿ ಕ್ರಾಸ್ ಹತ್ತಿರ ಹೋದಾಗ ಒಬ್ಬಳು ನಮ್ಮ ಜೀಪ ಬರುತ್ತಿರುವದನ್ನು ನೋಡಿ ಒಂದು ಚೀಲ ಹಿಡಿದು ಕೊಂಡು ಓಡುವ ಪ್ರಯತ್ನದಲ್ಲಿದ್ದಾಗ ನಮಗೆ ಸದರಿಯವಳ ಮೇಲೆ ಸಂಶಯ ಬಂದು ಸದರಿಯವಳಿಗೆ ಸಿಬ್ಬಂದಿಯವರ ಸಹಾದಿಂದ ಹಿಡಿದು. ಅವಳ ಹೆಸರು ವಿಚಾರಿಸಲಾಗಿ ತನ್ನ ಹೆಸರು ಶಬೀನಾ ಗಂಡ ಮಹಾಂತೇಶ ಕಾಳೆ ಉಃ ಪೇಪರ ಆಯುವದು ಸಾಃ ಮಾಂಗರವಾಡಿಗಲ್ಲಿ ಬಾಪುನಗರ ಗುಲಬರ್ಗಾ ಅಂತ ತಿಳಿಸಿದ್ದು ಸದರಿಯವಳ ಹತ್ತಿರ ಇದ್ದ ಚೀಲ ನೋಡಲು ಪರಿಶೀಲಿಸಿ ಚೀಲದಲ್ಲಿ ಬೆಳೆಗಳಿಗೆ ಕ್ರೀಮಿನಾಷಕ ಔಷದಿ ಹೋಡೆಯುವ ಕಂಚಿನ ಛಡಿಗಳು, ಅಟೋ ಫೀಸ್ಟ್ನ್  ಇದ್ದು. ಮಾಲೀಕರು ಇಲ್ಲದೆ ವಸ್ತುಗಳುನ್ನು ತೆಗೆದು ಕೊಂಡು ಹೋಗುತ್ತಿದ್ದರಿಂದ ಇವುಗಳ ಬಗ್ಗೆ ವಿಚಾರಿಸಲು ಯಾವುದೇ ಸಮಪರ್ಕ ವಿವರಣೆ ನೀಡಿಲಿಲ್ಲ, ಮತ್ತು ಸದರಿ ಮಾಲಿನ ಬಗ್ಗೆ ಯಾವುದೆ ದಾಖಲಾತಿಗಳು ತನ್ನ ಹತ್ತಿರ ಇರುವದಿಲ್ಲ ಅಂತ ತಿಳಿಸಿದ್ದು ಸದರಿ ವಸ್ತಗಳು ಕಳತನ ಮಾಡಿ ತಂದಿದ್ದು ಇರಬಹುದೆಂದು ಸದರಿಯವಳ ಮೇಲೆ ಬಲವಾದ ಸಂಶಯ ಬಂದಿದರಿಂದ ಸದರಿಯವಳ ಹತ್ತಿರ ಇದ್ದ 23,000/- ರೂ ಕಿಮ್ಮತ್ತಿನ ಕಂಚಿ ಛಡಿ ಮತ್ತು ಬಿಡಿಭಾಗಗಳನ್ನು ವಶಪಡಿಸಿಕೊಂಡು ಆರೋಪಿತಳೊಂದಿಗೆ ಠಾಣೆಗೆ ಬಂದು ಸದರಿಯವಳ ವಿರುದ್ಧ ಚೌಕ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಕೊಲೆ ಪ್ರಕರಣ :
ನಿಂಬರ್ಗಾ ಠಾಣೆ : ಶಿವಪ್ಪ ನಿಗಶೆಟ್ಟಿ ಮತ್ತು ಆಪಾಧಿತ ರಾಜಶೇಖರ ನಿಗಶೆಟ್ಟಿ ಇಬ್ಬರು ಖಾಸ ಅಣ್ಣ ತಮ್ಮಂದಿರರಿದ್ದು ಇವರ ಹೋಲ ಸರ್ವೇ ನಂ 177 ನೇದ್ದರಲ್ಲಿ ತಲಾ 3 ಎಕರೆ ಜಮೀನು ಇದ್ದು ಮತ್ತು ರಾಜಶೇಖರ ಪಾಲಿಗೆ ಬಂದ ಹೊಲದಲ್ಲಿ ಒಂದು ನೀರಿನ ಭಾವಿ ಇದ್ದು ಆ ಭಾವಿಯ ನೀರಿನ ಪಾಲಿಗಾಗಿ ಇಬ್ಬರ ಮಧ್ಯ ಆಗಾಗ ತಂಟೆ ತಕರಾರು ಆತುತ್ತಾ ಬಂದು ದ್ವೇಶ ಬೆಳೆದಿದ್ದುದಿನಾಂಕ 04-02-2014 ರಂದು ಬೆಳಿಗ್ಗೆ ವಿಜಯಕುಮಾರ  ಮತ್ತು ಆತನ ತಂದೆಯಾದ ಶಿವಪ್ಪ ನಿಗಶೆಟ್ಟಿ ಇಬ್ಬರು ಕೂಡಿಕೊಂಡು ಗದ್ದೆಗೆ ನೀರು ಬಿಡಲು ಹೊಲಕ್ಕೆ ಹೋಗಿದ್ದು ಹೊಲದಲ್ಲಿ ಬೆಳಿಗ್ಗೆ 0700 ಗಂಟೆಗೆ ಶಿವಪ್ಪ ನಿಗಶೆಟ್ಟಿ ಇತನಿಗೆ ಆಪಾಧಿತ ರಾಜಶೇಖರ ನಿಗಶೆಟ್ಟಿ ಇತನು ನೀರಿನ ಪಾಳಿಯ ವಿಷಯದಲ್ಲಿ ಜಗಳ ತಗೆದು ಅವಾಚ್ಯವಾಗಿ ಬೈದು ಕೆಳಗೆ ಕೆಡವಿ ಕಲ್ಲಿನಿಂದ ಮುಖಕ್ಕೆ ಮತ್ತು ತಲೆಗೆ ಜೆಜ್ಜಿ ಭಾರಿ ರಕ್ತಗಾಯ ಪಡೆಸಿ ಮೌಂಸ ಕಂಡ ಹೊರಬರುವಂತೆ ಮಾಡಿ ಕೋಲೆ ಮಾಡಿರುತ್ತಾನೆ ಅಂತಾ ಶ್ರೀ ವಿಜುಯಕುಮಾರ ತಂದೆ ಶೀವಪ್ಪ ನಿಗಶೆಟ್ಟಿ ಸಾ: ನಿಂಬರ್ಗಾ ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ನಿಂಬರ್ಗಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.   ಈ ವಿಷಯದಲ್ಲಿ ನಿಂಬರ್ಗಾ ಪೊಲೀಸ್ ಠಾಣೆಯ ಆಪಾಧಿತನ ಮೇಲೆ  ಕೋಲೆ ಪ್ರಕರಣ ದಾಖಲಾಗಿರುತ್ತದೆ.

Gulbarga District Reported Crimes

ಇಸ್ಪೀಟ ಜೂಜಾಟದಲ್ಲಿ ನಿರತ ವ್ಯಕ್ತಿಗಳ ಬಂಧನ :
ಸ್ಟೇಷನ ಬಜಾರ ಠಾಣೆ : ದಿನಾಂಕ. 03-02-2014 ರಂದು   ಗುಲಬರ್ಗಾ ನಗರದ ಸಿದ್ದಿಪಾಶ ದರ್ಗಾದ ಹತ್ತಿರ ಖುಲ್ಲಾ ಜಾಗೆಯಲ್ಲಿ ಲೈಟ ಕಂಬದ ಬೆಳಕಿನಲ್ಲಿ ಕೆಲವು ಜನರು ಗುಂಪಾಗಿ ಕುಳಿತುಕೊಂಡು ಇಸ್ಪೆಟ್ ಜೂಜಾಟ ಆಡುತ್ತಿದ್ದಾರೆ ಅಂತಾ ಖಚಿತ ಬಾತ್ಮಿ ಮೇರೆಗೆ ಪಿ.ಎಸ್.ಐ. ಮುರಳಿ, ಸಿಬ್ಬಂದಿಜನರು ಹಾಗು ಪಂಚರೊಂದಿಗೆ ಸ್ಥಳಕ್ಕೆ ಹೋಗಿ ಮರೆಯಲ್ಲಿ ನಿಂತು ನೋಡಲು ಸಿದ್ದಿಪಾಶ ದರ್ಗಾದ ಹತ್ತಿರ ಖುಲ್ಲಾ ಜಾಗೆಯಲ್ಲಿ ಲೈಟ ಕಂಬದ ಬೆಳಕಿನಲ್ಲಿ 5-6 ಜನರು ಗುಂಪಾಗಿ ಕುಳಿತು ಇಸ್ಪೆಟ ಜೂಜಾಟವಾಡುತ್ತಿದ್ದುದನ್ನು ಖಚಿತಪಡಿಕೊಂಡು  ಮಾನ್ಯ ಎ.ಎಸ್.ಪಿ ಸಾಹೇಬರ ನೆತೃತ್ವದಲ್ಲಿ ನಾನು ಮತ್ತು ಸಿಬ್ಬಂದಿಯೊಂದಿಗೆ ಪಂಚರ ಸಮಕ್ಷಮ ದಾಳಿ ಮಾಡಿದಾಗ ಅವರಲ್ಲಿ ಮೂರು ಜನರು ಓಡಿ ಹೋಗಿದ್ದು ಇಬ್ಬರೂ ಸಿಕ್ಕಿದ್ದು ಅವರನ್ನು ವಿಚಾರಿಸಲು ಅವರ ಹೆಸರು 1.ನಾಗೇಂದ್ರ ತಂದೆ ಮರ್ಲಿಂಗಪ್ಪ ರಾಜನಾಳ ಸಾ|| ಮನೆ ನಂ. 4-601/ಎಫ/2 ಎಂ.ಬಿ.ನಗರ ಶಿವಮಂದಿರ ಹತ್ತಿರ ಗುಲಬರ್ಗಾ 2. ಮಲ್ಲಪ್ಪಾ ತಂದೆ ಗೋಪಣ್ಣಾ ಸೂರಪೂರ  ಸಾಃ ಮನೆ ನಂ. 269/25ಎ ಸುಂದರ ನಗರ ಗುಲಬರ್ಗಾ ಇವರನ್ನು ದಸ್ತಗೀರ ಮಾಡಿಕೊಂಡು ಓಡಿ ಹೋದವರ ಹೆಸರುವಿಚಾರಿಸಲು ಗೊತ್ತಿಲ್ಲ ಅಂತಾ ಹೇಳಿದರು ಒಟ್ಟು. 21,470/- ರೂ ಮತ್ತು 52 ಇಸ್ಪೆಟ್ ಎಲೆಗಳು ಪಂಚರ ಸಮಕ್ಷಮ ಜಪ್ತಿ ಮಾಡಿಕೊಂಡು ಮರಳಿ ಠಾಣೆಗೆ ಬಂದು ಸದರಿಯವರ ವಿರುದ್ಧ ಸ್ಟೇಷನ ಬಜಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅನಧೀಕೃತ ಮಧ್ಯ ಮಾರಟದಲ್ಲಿ ನಿರತ ವ್ಯಕ್ತಿಯ ಬಂಧನ :
ರಟಕಲ ಠಾಣೆ : ದಿನಾಂಕ 03-02-2014 ರಂದು ಮೋಘಾ ತಾಂಡದಲ್ಲಿ ಅನಧಿಕೃತವಾಗಿ ಸರಾಯಿ ಮಾರಟ ಮಾಡುತ್ತಿರುವ ಬಗ್ಗೆ ಮಾಹಿತಿ ಮೇರೆಗೆ ಮೋಘಾ ತಾಂಡಕ್ಕೆ ಸಿಬ್ಬಂದಿ ಪಂಚರೊಂದಿಗೆ ಹೋಗಿ ದಾಳಿ ಮಾಡಿ ರಾಮಶೆಟ್ಟಿ ತಂದೆ ರಾಮಜಿ ರಾಠೋಡ ಸಾ : ಮೋಘಾ ತಾಂಡ ಇತನನ್ನು ವಶಕ್ಕೆ ತೆಗೆದುಕೊಂಡು ಅವನಿಂದ ಓಟಿಯ 180 ಎಂ.ಎಲ್.ನ 127 ಡಬ್ಬಿಗಳು,ನಾಕೋಟ್ ಬೀರ 650 ಎಂ.ಎಲ್. 24  ಬಾಟಲಿಗಳು, ನಾಕೋಟ್ ಬೀರ 330 ಎಂ.ಎಲ್. 24  ಬಾಟಲಿಗಳು ಹೀಗೆ ಒಟ್ಟು 10400/- ಕಿಮ್ಮತಿನ ಮಾಲು ಹಾಗೂ ನಗದು ಹಣ 1100/- ರೂ ವಶಪಡಿಸಿಕೊಂಡು ಠಾಣೆಗೆ ತಂದು ಸದರಿಯವನ ವಿರುದ್ಧ ರಟಕಲ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಮಟಕಾ ಜೂಜಾಟದಲ್ಲಿ ನಿರತ ವ್ಯಕ್ತಿಯ ಬಂಧನ :
ಅಫಜಲಪೂರ ಠಾಣೆ : ದಿನಾಂಕ 03-02-2014 ರಂದು 1:00 ಪಿ.ಎಂ ಕ್ಕೆ ಹೇಬರು ಮುದ್ದೆಮಾಲು ಹಾಗೂ ಆರೋಪಿತನೊಂದಿಗೆ ವರದಿ ಹಾಜರ ಪಡಿಸಿದ್ದುಸದರ ವರದಿ ಸಾರಾಂಶವೆನೆಂದರೆ ಇಂದು ದಿನಾಂಕ 03-02-2014 ರಂದು 11:00 ಎ.ಎಮ್ ಕ್ಕೆ ಶ್ರೀ ಸುರೇಶ.ಸಿ.ಬಿ. ಪಿ.ಎಸ್.ಐ ಅಫಜಲಪೂರ  ರವರು ಪಟ್ಟಣದಲ್ಲಿ ಪೆಟ್ರೊಲಿಂಗ ಕುರಿತು ಠಾಣೆಯಿಂದ ಬಿಟ್ಟು ಅಂಬೆಡ್ಕರ ಸರ್ಕಲಬಸ್ ನಿಲ್ದಾಣ ಮಾರ್ಗವಾಗಿ ಅಫ್ಜಲಖಾನ ಚೌಕ ಹತ್ತಿರ ಇದ್ದಾಗ ಖಚಿತ ಬಾತ್ಮಿ ಬಂದಿದ್ದು ಎನೆಂದರೆ ಘತ್ತರಗಿ ರೋಡಿಗೆ ಇರುವ ಲಕ್ಷ್ಮೀ ಗುಡಿಯ ಮುಂದೆ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿ ನಿಂತುಕೊಂಡು ಹೊಗಿ ಬರುವ ಜನರಿಗೆ 1 ರೂಪಾಯಿಗೆ 80 ರೂಪಾಯಿ ಗೆಲ್ಲರಿ ಅಂತಾ ಅನ್ನುತ್ತಾ ಸಾರ್ವಜನಿಕರ ಮನವೂಲಿಸಿ ಅವರಿಂದ ಹಣ ಪಡೆದುಅವರಿಗೆ ಅಂಕಿ ಸಂಖ್ಯೆ ಬರೆದ ಮಟಕಾ ಚೀಟಿಗಳನ್ನು ಕೊಡುತ್ತಿದ್ದಾನೆ ಅಂತಾ ಬಾತ್ಮಿ ಬಂದ ಮೇರೆಗೆ ಸಿಬ್ಬಂದಿ ಮತ್ತು ಪಂಚರೊಂದಿಗೆ ಸ್ಥಳಕ್ಕೆ ಹೋಗಿ ಜೂಜಾಟದ ಬಗ್ಗೆ ಖಚಿತ ಪಡಿಸಿಕೊಂಡು ದಾಳಿ ಮಾಡಿ ಮಟಕಾ ಚೀಟಿಯನ್ನು ಬರೆದು ಕೊಡುತ್ತಿದ್ದ ರಾಜಶೇಖರ ತಂದೆ ಗುಂಡೆರಾವ ಕುಲಕರ್ಣಿ ಸಾ||ಬ್ರಾಹ್ಮಣ ಗಲ್ಲಿ ಅಫಜಲಪೂರ ವಶಕ್ಕೆ ತೆಗೆದುಕೊಂಡು ಸದರಿಯವನ ವಶದಿಂದ ಮಟಕಾಕ್ಕೆ ಸಂಬಂಧ ಪಟ್ಟ 300/- ರೂಪಾಯಿ ನಗದು ಹಣ ಹಾಗೂ ಅಂಕಿ ಸಂಖ್ಯೆ ಬರೆದ ಒಂದು ಮಟಕಾ ಚೀಟಿ ಹಾಗೂ ಒಂದು ಬಾಲ ಪೆನ್ನ ವಶಪಡಿಸಿಕೊಂಡು ಮರಳಿ ಠಾಣೆಗೆ ಬಂದು ಸದರಿಯವನ ವಿರುದ್ಧ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಸುಲಿಗೆ ಪ್ರಕರಣ :
ವಾಡಿ ಠಾಣೆ : ಶ್ರೀ ಮಹ್ಮದ ಇಸ್ಮಾಯಿಲ ತಂದೆ ಹಸನಸಾಬ ಹೊಸುರ ಇವರು ಟಿಪ್ಪರ ಖರಿದಿ ಮಾಡಿದ್ದರ ಸಂಬಂಧ ಹಣವನ್ನು ಕೊಡುವ ಸಲೂವಾಗಿ ತನ್ನ ಹೆಂಡತಿಯ ಖಾತೆಯಲ್ಲಿದ್ದ 4,50,000/- ರೂಗಳು ಎಸ್,ಬಿ,ಎಚ್ ಬ್ಯಾಂಕ ವಾಡಿಯಿಂದ  ಮತ್ತು ಎಸ್,ಬಿ,ಐ ಬ್ಯಾಂಕ ವಾಡಿಯಲ್ಲಿ ತನ್ನ ಸಂಬಂಧಿಯ ಹೆಸರಿನ ಖಾತೆಯಲ್ಲಿದ್ದ 2,00,000/- ರೂ ಗಳನ್ನು ಹೀಗೆ ಒಟ್ಟು 6,50,000/- ರೂ ಗಳನ್ನು ಮದ್ಯಹ್ನ ಡ್ರಾಮಾಡಿಕೊಂಡು ಮನೆಗೆ ಬಂದು ಸದರಿ ಹಣವನ್ನು ಗುಲಬರ್ಗಾಕ್ಕೆ ಹೊಗಿ ಟಿಪ್ಪರ ಮಾಲಿಕರಿಗೆ ಕೊಡುವ ಸಲೂವಾಗಿ ಹಸಿರು ಬಣ್ಣದ ವೈರನ ಕೈ ಚೀಲದಲ್ಲಿ 6,50,000/- ರೂ ಗಳನ್ನು ಹಾಕಿಕೊಂಡು ಮನೆಯಿಂದ ಹೊರಟು ತಮ್ಮ ಮನೆಯ ಮುಂದಿನ ರೊಡಿಗೆ ಬರುತ್ತಿದ್ದಂತೆ ಇಬ್ಬರು ಹುಡುಗರು ಅವರಲ್ಲಿ ಒಬ್ಬನು 25 ವರ್ಷ ಹಾಗು ಇನ್ನೊಬ್ಬ 26 ರಿಂದ 30 ವರ್ಷ ವಯಸ್ಸಿನ ಇಬ್ಬರು ಮೊಟರ ಸೈಕಲ ಮೆಲೆ ಬಸವೇಶ್ವರ ಚೌಕ ಕಡೆಯಿಂದ ಬಂದು ತನ್ನ ಹತ್ತಿರ ನಿಲ್ಲಿಸಿ ಹಿಂದೆ ಕುಳಿತವನು ಸದರಿ ಹಣದ ಬ್ಯಾಗ ಕಸಿದುಕೊಳ್ಳಲು ಆತನು ಹಣದ ಚೀಲ ಬಿಡದೆ ಇದ್ದಾಗ ಕಾಲಿನಿಂದ ಒದ್ದು ಹಣ ಇದ್ದ ಚೀಲವನ್ನು ಕಸಿದುಕೊಂಡು ಮೊಟರ ಸೈಕಲ ಮೆಲೆ ರೈಲ್ವೆ ಸ್ಟೇಶನ ಕಡೆಗೆ ಓಡಿಸಿಕೊಂಡು ಹೊಗಿದ್ದು ಬೆನ್ನು ಹತ್ತಿದರು ಸಿಗಲಿಲ್ಲಾ ಸದರಿಯವರಿಗೆ ನೊಡಿದ್ದು ಮತ್ತೆ ನೊಡಿದಲ್ಲಿ ಗುರ್ತಿಸುತ್ತೆನೆ. ಒಬ್ಬವನು ಹಳದಿ ಹಾಗು ಬಿಳಿ ಬಣ್ಣದ ಶರ್ಟ ಬದಾಮಿ ಕಲರ ಪ್ಯಾಂಟ ಧರಿಸಿದ್ದು ಈತನು ಮೊಟರ ಸೈಕಲ ನಡೆಸುತ್ತಿದ್ದು ಹಣದ ಕೈಚಿಲ ಕಸಿದುಕೊಂಡವನು ನೀಲಿಬಣ್ಣದ ತುಂಬು ತೊಳಿನ ಶರ್ಟ ಹಾಗು ನಿಲಿ ಬಣ್ಣದ ಜೀನ್ಸ ಪ್ಯಾಂಟ ಧರಿಸಿದ್ದನು ಕೆಂಪು ಬಣ್ಣದ ಮೊಟರ ಸೈಕಲ ಇದ್ದು ಎಮ್,ಎಚ್ ಪಾಸಿಂಗ ಇರುತ್ತದೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ವಾಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನಿಂದನೆ ಪ್ರಕರಣ :
ಗ್ರಾಮೀಣ ಠಾಣೆ : ಶ್ರೀಮತಿ ಮೈನಾಬಾಯಿ ಗಂಡ ಖೇಮಸಿಂಗ @ ಖೇಮಲು ಕಾಳೆ ಸಾ;ಸಿಂಧಗಿ ( ಬಿ ) ತಾ;ಜಿ;ಗುಲಬರ್ಗಾ . ಹಾವ; ಆಳಂದ ಚಿಕ್ಕ ಪೋಸ್ಟ ಹತ್ತಿರ ರಿಂಗರೋಡ ಗುಲಬರ್ಗಾ ಇವರು ದಿನಾಂಕ.3-2-2014 ರಂದು ಸಿಂಧಗಿ (ಬಿ ಗ್ರಾಮಕ್ಕೆ ಹೋಗಿ ನಮ್ಮ ಪಾರ್ದಿ ಜನಾಂಗದವರಿಗೆ ಹುಡ್ಕೋ ಯೋಜನೆ ಅಡಿಯಲ್ಲಿ ತಾಲುಕಾ ಪಂಚಾಯತದಿಂದ ಮಂಜೂರಾದ ವಸತಿಗಾಗಿ ಇವರ ಜಾಗೆಯಲ್ಲಿ  ಬೋರ್ಡ ಹಾಕಿದ್ದೇವು. ಸದರಿ ಬೋರ್ಡಗೆ ಕಂಬಕ್ಕೆ ನೀರು ಹಾಕುವ ಕುರಿತು ನಾನು ಮತ್ತು ಕಾಶೀಬಾಯಿ  ಗಂಡಬಿರದಾರ ಕಾಳೆ ಮತ್ತು ಅಂಜನಾಬಾಯಿ ಗಂಡ ಜಾಮ್ಯಾ ಚವ್ಹಾಣ ಮೂರು ಜನರು ಹೋಗಿ ಮದ್ಯಾನ 1-00 ಗಂಟೆಯ ಸುಮಾರಿಗೆ ನೀರ ಹಾಕುವಾಗ ಅದೇ ವೇಳಗೆ ಸಿಂದಗಿ (ಬಿ) ಗ್ರಾಮದ 1. ಸೈಯದ ಅಲಿ ತಂದೆ ಮೈಸಾನ ಅಲಿ ,2. ಕಲ್ಯಾಣಿ ತಂದೆ ಸಿದ್ರಾಮ ಮತ್ತು 3. ದತ್ತಪ್ಪಾ ತಂದೆ ಸಿದ್ರಾಮ ಇವರು ಮೂರು ಜನರು ಬಂದು ನಮಗೆ ಏ ಪಾರ್ದಿ ರಂಡೆರೆ ಈ ಜಾಗೆದಲ್ಲಿ ಬೋರ್ಡ ಏಕೆ ಹಾಕಿರಿ ನಮ್ಮ ಊರಲ್ಲಿ ನಿಮಗೆ  ಜಾಗೆ ಇರುವದಿಲ್ಲಾ ಅಂತಾ ಜ್ಯಾತಿ ಎತ್ತಿ ಅವಾಚ್ಯ ಶಬ್ದಗಳಿಂದ ಬೈಯ್ದು ನಮ್ಮ ಹತ್ತಿರ ಬಂದು  ಕೈಹಿಡಿದು ಎಳೆದಾಡಿ ಕೈಯಿಂದ ಬೆನ್ನಲ್ಲಿ ಹೊಡೆದು ಗುಪ್ತಗಾಯಪಡಿಸಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ಅಪಘಾತ ಪ್ರಕರಣ :
ಸಂಚಾರಿ ಠಾಣೆ : ಶ್ರೀ ಸಂದೇಶ ತಂದೆ ಜೇಮಸಿಂಗ ಪವಾರ ಸಾಃ ಪಾಳಾ ಹಾಃವಃ ಜಯನಗರ ಹನುಮಾನ ಗುಡಿಯ ಹತ್ತಿರ ಗುಲ್ಬರ್ಗಾ  ಮತ್ತು ಲಕ್ಷ್ಮಿಕಾಂತ ತಂದೆ ಶಿವಶರಣಪ್ಪ ಮತ್ತು ನವೀನ ಇವರು ನಡೆದುಕೊಂಡು ಬರುತ್ತಿರುವಾಗ ಸೇಡಂ ರಿಮಗ ರೋಡ ಕಡೆಯಿಂದ ಒಂದು ಯಮಹಾ ಆರ ಎಕ್ಷ 100 ಮೋಸೈ ನಂ ಸಿ.ಟಿ.ಪಿ. 2000 ನೇದ್ದರ ಚಾಲಕ ಅತೀವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ಫಿರ್ಯಾದಿ ಹಾಗೂ ಲಕ್ಷ್ಮಿಕಾಂತ ಇವರಿಗೆ ಡಿಕ್ಕಿ ಪಡಿಸಿ ಗಾಯಗೊಳಿಸಿ ತನ್ನ ಮೋಟರ ಸೈಕಿಲ ಸಮೇತ ಓಡಿ ಹೋಗಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಳವು ಪ್ರಕರಣಗಳು :
ಗ್ರಾಮೀಣ ಠಾಣೆ : ಶ್ರೀಮತಿ ಶೋಬಾ ಮೊಖ್ಯೋಪಾಧ್ಯಯರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಹೀರಾಪೂರ ರವರು ದಿನಾಂಕ: 01-02-2014 ರಂದು ಶನಿವಾರ ಶಾಲಾ ಅವಧಿಯ ನಂತರ ಎಲ್ಲಾ ಕೋಣೆಗಳಿಗೆ ಬೀಗ ಹಾಕಿ ಮೇನ್ ಗೇಟ್ ಬಂದ್ ಮಾಡಿ ಬೀಗ ಹಾಕಿ ಹೋಗಿದ್ದು ಇಂದು ದಿನಾಂಕ: 03-02-2014 ರಂದು ಸೋಮವಾರ ಬೆಳಿಗ್ಗೆ 9-30 ಕ್ಕೆ ಶಾಲೆ ಕರ್ತವ್ಯ ನಿರ್ವಹಿಸುವ ಸಪಾಯಿ ಕರ್ಮಚಾರಿ ಕಸಗೂಡಿಸಲು ಬಂದಾಗ ಕಂಪ್ಯೂಟರ್‌ ಕೋಣೆ ಬಾಗಿಲು ಲಾಕ್‌ ಮುರಿದಿದ್ದು ಕೋಣೆಗಳು ಖುಲ್ಲಾ ಇದ್ದು ಸದರಿ ವಿಷಯ ಚಂದ್ರಶೇಖರ್‌ ಡಾಂಗೆ ಸಹ ಶಿಕ್ಷಕ ಇವರಿಗೆ ತಿಳಿಸಿದ್ದು ಮತ್ತು ನಾನು ಸಹ ಸದರಿ ಕೋಣೆಯಲ್ಲಿ ನೋಡಲಾಗಿ ಕಂಪ್ಯೂಟರ್‌ ಮಾನಿಟರ್‌ 6 ಅ.ಕಿ 24.000/- ರೂ ಯಾರೋ ಕಳ್ಳರು ದಿನಾಂಕ: 02-02-2014 ರಂದು ರಾತ್ರಿ 1200 ಗಂಟೆಯಿಂದ ಬೆಳಿಗ್ಗೆ 0430 ಗಂಟೆ ಅವಧಿಯಲ್ಲ ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಗ್ರಾಮೀಣ ಠಾಣೆ : ಶ್ರೀ ಅಣ್ಣಾರಾವ ಬಿ. ಸಾಗರೆ ಸಾ|| ಪಂಚಮುಖಿ ಲೆಔಟ್ ಗುಲ್ಬರ್ಗಾ ಇವರು ದಿನಾಂಕ: 03.02.2014 ರಂದು ಸಾಯಂಕಾಲ 5:3 0 ಗಂಟೆಗೆ ತಮ್ಮ ಹೆಂಡತಿ ನಿರ್ಮಲಾ ಇವಳು ಬೆಳಗ್ಗೆ 0845 ಗಂಟೆಗೆ ಬೋಧನ ಗ್ರಾಮದಲ್ಲಿ ಶೀಕ್ಷಕಿ ಇದ್ದು ತನ್ನ ಕರ್ತವ್ಯಕ್ಕೆ ಹೋಗಿರುತ್ತಾಳೆ , ಇಬ್ಬರು ಮಕ್ಕಳಾದ ಸತೋಷ ಮತ್ತು ಶರಣಬಸಪ್ಪ ಇವರು ಬಿ.ಇ ವಿದ್ಯಾರ್ಥಿಗಳಾಗಿದ್ದು ಅವರು ಸಹ ಕಾಲೇಜಕ್ಕೆ ಹೋಗಿರುತ್ತಾರೆ. ನಾನು ನನ್ನ ಖಾಸಗಿ ಕೆಲಸ ಕುರಿತು ಬೆಳಗ್ಗೆ 1000 ಗಂಟೆಗೆ ಮನೆಗೆ ಕೀಲಿ ಹಾಕಿ ಸುಪರ್ ಮಾರ್ಕೆಟಗೆ ಬಂದು ಕೆಲಸ ಮುಗಿಸಿಕೊಂಡು ಮರಳಿ ಮನೆಗೆ 1345 ಗಂಟೆಗೆ ಬಂದು ನೋಡಲಾಗಿ ಬಾಗಿಲ ಕೀಲಿ ಮುರಿದಿದ್ದು ಬಾಗಿಲು ಖುಲ್ಲಾ ಇದ್ದು , ನಾನು ಒಮ್ಮೆಲೆ ಗಾಬರಿಯಾಗಿ ಅಲ್ಲೆ ಹತ್ತೀರದಲ್ಲಿ ಇಟ್ಟಂಗಿ ಕೆಲಸ ಮಾಡುವ ಚಂದ್ರಕಾಂತ ತಂದೆ ಹಣಮಂತ ಕೂಡಿಕೊಂಡು ಮನೆಯಲ್ಲಿ ನೋಡಲಾಗಿ ಬೆಡ ರೂಮಿನಲ್ಲಿದ್ದ ಅಲಮಾರಿ ಮುರಿದಿದ್ದು ಸಾಮಾನುಗಳು ಚೆಲ್ಲಾ-ಪಿಲ್ಲಿಯಾಗಿ ಬಿದ್ದಿದ್ದು ನೋಡಲಾಗಿ ಅರ್ಧ ತೊಲೆವುಳ್ಳ 4 ಸುತ್ತುಂಗರುಗಳು ಅ,ಕಿ: 60,000/- ರೂಪಾಯಿ ನಗದು ಹಣ 19000/- ರೂಪಾಯಿ , 5 ತೊಲಿ ಬೆಳ್ಳಿ ಸಮಯ ಅ,ಕಿ: 2000/- 5 ತೊಲೆ ಬೆಳ್ಳಿ ಮೂರ್ತಿ ಅ,ಕಿ: 2000/- ರೂ, 2 ತೊಲೆ ಬೆಳ್ಳಿ ಆರತಿ ಅ,ಕಿ: 800/- ರೂ ಹೀಗೆ ಒಟ್ಟು 83,800/- ರೂಪಾಯಿ ಬೆಲೆ ಬಾಳುವ ಸಾಮಾನುಗಳು ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಫಜಲಪೂರ ಠಾಣೆ : ಶ್ರೀ ಶರಣಪ್ಪ ತಂದೆ ಜೋತೆಪ್ಪ ಪಾಟೀಲ ಸಾ|| ನಂದರ್ಗಿ ರವರು ತಮ್ಮ  ಮೋಟರ ಸೈಕಲ್ ಹಿರೋ ಹೆಚ್.ಎಫ್ ಡಿಲಕ್ಸ್ ಅದರ ನಂ ಕೆ,ಎ-32 ಇ.ಡಿ-4960 ಇರುತ್ತದೆ. ದಿನಾಂಕ 02-12-2013 ರಂದು ರಾತ್ರಿ 9;00 ಗಂಟೆಗೆ ನಮ್ಮ ಮನೆಯ ಮುಂದೆ ನಿಲ್ಲಿಸಿ ನಂತರ ನಾನು ಮತ್ತು ನನ್ನ ಹೆಂಡತಿ ಬಸಮ್ಮ ಹಾಗು ನನ್ನ ಮಗ ಶಿವರಾಜ ಕೂಡಿಕೊಂಡು ಊಟ ಮಾಡಿ 10;00 ಪಿ.ಎಂ ಕ್ಕೆ ಮನೆಯ ಒಳಗೆ ಮಲಗಿಕೊಂಡಿರುತ್ತೇವೆ.  ದಿನಾಂಕ 03-12-2013 ರಂದು ಬೆಳಿಗ್ಗೆ 06-00 ಗಂಟೆಗೆ ಎದ್ದು ಹೊರಗೆ ಬಂದು ನೋಡಲಾಗಿ ನನ್ನ ಮೋಟರ ಸೈಕಲ್ ಮನೆಯ ಮುಂದೆ ಇರಲಿಲ್ಲ. ನಂತರ ನಮ್ಮೂರಲ್ಲೆ ಇದ್ದ ನನ್ನ ಅಳಿಯಂದರಾದ ಸಂತೋಷ ತಂದೆ ಶಂಕರ ವಾಗ್ದರಗಿ, ವಿಶ್ವನಾಥ ತಂದೆ ಕಾಂತಪ್ಪ ಕಾಮನಳ್ಳಿ ಇವರನ್ನು ಕರೆಯಿಸಿ ವಿಷಯ ತಿಳಿಸಿದೆನು. ನಂತರ ನಾನು ನನ್ನ ಅಳಿಯಂದರೊಂದಿಗೆ ಕೂಡಿಕೊಂಡು ತಮ್ಮ ಠಾಣೆಗೆ ಬಂದು ಸದರಿ ನನ್ನ ಮೋಟರ ಸೈಕಲ್ ದಿನಾಂಕ 02-12-2013 ರಂದು ರಾತ್ರಿ 10;00 ಗಂಟೆಯಿಂದ ಬೆಳಿಗ್ಗೆ 06;00 ಗಂಟೆಯ ಮದ್ಯಧ ಅವಧಿಯಲ್ಲಿ ಯಾರೋ ಕಳ್ಳರು ಕಳುಮಾಡಿಕೊಂಡು ಹೋಗಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.