POLICE BHAVAN KALABURAGI

POLICE BHAVAN KALABURAGI

18 May 2015

Kalaburagi District Reported Crimes

ಇಸ್ಪೀಟ ಜೂಜಾಟದಲ್ಲಿ ನಿರತ ವ್ಯಕ್ತಿಗಳ ಬಂಧನ :
ಸ್ಟೇಷನ ಬಜಾರ ಠಾಣೆ : ದಿನಾಂಕ 17-05-2015  ರಂದು ಇಂದಿರಾನಗರದ ಡಿಪೋ ನಂ.3 ಕಂಪೌಂಡ ಹತ್ತಿರ ಜಾಗೆಯಲ್ಲಿ ಕೆಲವು ಜನರು ಇಸ್ಪೆಟ್ ಜೂಜಾಟ ಆಡುತ್ತಿದ್ದಾರೆ ಅಂತಾ ಖಚಿತ ಬಾತ್ಮಿ ಬಂದ ಮೇರೆಗೆ ಶ್ರೀ ಎಸ್.ಎಸ್.ದೊಡ್ಡಮನಿ ಪಿ.ಎಸ್.ಐ (ಕಾ&ಸು) ಸ್ಟೇಷನ ಬಜಾರ ಪೊಲೀಸ್ ಠಾಣೆ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಇಂದಿರಾನಗರ ಡಿಪೋ ನಂ.3 ರ ಹತ್ತಿರ ಹೋಗಿ ಮರೆಯಾಗಿ ನಿಂತು ನೋಡಲು ಕೆಲವು ಜನರು ಗುಂಪಾಗಿ ಕುಳಿತು ಇಸ್ಪೆಟ ಎಲೆಗಳ ಸಹಾಯದಿಂದ ಪಣಕ್ಕೆ ಹಣ ಹಚ್ಚಿ ಅಂದರ ಬಾಹರ ಎಂಬ ದೈವಲಿಲೆ ಇಸ್ಪೆಟ್ ಜೂಜಾಟ ಆಡುತ್ತಿದ್ದದ್ದು ಖಚಿತಪಡಿಸಿಕೊಂಡು ದಾಳಿ ಮಾಡಿ ಹಿಡಿದು ಅವರನ್ನು ವಿಚಾರಿಸಲು ತಮ್ಮ ಹೆಸರು 1.  ಶಿವಪುತ್ರ ತಂದೆ ಶಿವಶರಣಪ್ಪಾ ಕರಲಗಿ 2. ರವೀಂದ್ರ ತಂದೆ ಮಾಪಣ್ಣ ಚುಬನಕರ್ 3. ಸಂತೋಷ ತಂದೆ ಉತ್ತಮ ಚುಬನಕರ್ 4. ರಾಣೋಜಿ ತಂದೆ ರಾಜು ಬಡದಾಳ ಸಾ || ಎಲ್ಲರು ಇಂದಿರಾನಗರ ಕಲಬುರಗಿ ಅಂತಾ ತಿಳಿಸಿದ್ದು ಸದರಿ ನಾಲ್ಕು  ಜನರಿಂದ ಹತ್ತಿರ ಇದ್ದ ಹಣ ಒಟ್ಟು. 2560/- ರೂ. ಮತ್ತು 52 ಇಸ್ಪೆಟ್ ಎಲೆಗಳು ನ್ನು ಜಪ್ತಿ ಮಾಡಿಕೊಂಡು ಸದರಿಯವರೊಂದಿಗೆ ಸ್ಟೇಷನ ಬಜಾರ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.
ಅಪಘಾತ ಪ್ರಕರಣ :
ಅಫಜಲಪೂರ ಠಾಣೆ : ಶ್ರೀ ಶರಣಪ್ಪಾ ತಂದೆ ಕಲ್ಲಪ್ಪಾ ವಿಬೂತಿಹಳ್ಳಿ ಸಾ||ಅಫಜಲಪೂರ ಇವರು ದಿನಾಂಕ 17-05-2015 ರಂದು ಸರಕಾರಿ ಆಸ್ಪತ್ರೆ ಅಫಜಲಪೂರ ಮುಂದಿನ ರೊಡನಲ್ಲಿ ತನ್ನ ಹೊಲಕ್ಕೆ ನಡೆದುಕೊಂಡು ಹೋಗುತಿದ್ದಾಗ ಎದುರಿನಿಂದ ಮೋ ಸೈ ನಂ ಕೆಎ-28 ಆರ್ 4274 ನೇದ್ದರ ಸವಾರನು ತನ್ನ ಮೋಟರ ಸೈಕಲ್ ನ್ನು ಅತಿವೇಗ ಹಾಗೂ ನಿಸ್ಕಾಳಜಿತನದಿಂದ ನಡೆಸಿಕೊಂಡು ಬಂದು ಫಿರ್ಯಾದಿಗೆ ಡಿಕ್ಕಿ ಪಡಿಸಿದ್ದರಿಂದ ಫಿರ್ಯಾದಿ ಬಲಗಾಲು ಮರಿತಂತೆ ಆಗಿ ಭಾರಿ ಗುಪ್ತಗಾಯ ಮತ್ತು ರಕ್ತಗಾಯವಾಗಿದ್ದು ಇರುತ್ತದೆ ಸದರಿ ಚಾಲಕನ ಹೆಸರು ಸಿದ್ದಣ್ಣ ತಂದೆ ಹನಮಂತ ಮಾವೂರ ಸಾ||ಸೋನ್ನ ಅಂತ ಇರುತ್ತದೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಲ್ಲೆ ಪ್ರಕರಣ :
ಅಫಜಲಪೂರ ಠಾಣೆ : ಶ್ರೀಮತಿ ಸರೋಜನಿ ಗಂಡ ಶರಣಪ್ಪಾ ಅಳ್ಳಗಿ ಸಾ||ಜಕಾಪೂರ ಇವರು ದಿನಾಂಕ 16/05/2015 ರಂದು ತನ್ನ ಮಗ ಸಂತೋಷ ಭವನ ಮಗ ರಾಜಶೇಖರ ಹಾಗೂ ಪಿರ್ಯಾದಿ ಸಂಬಂದಿಯಾದ ರಮೇಶ ಇವರೆಲ್ಲರು ಸ್ಕಾರ್ಪಿಯೋ ವಾಹನವನ್ನು ಬಾಡಿಗೆ ಮಾಡಿಕೊಂಡು ದೇವಲ ಗಾಣಗಾಪೂರಕ್ಕೆ ಹೋಗಿ ಅಲಿಂದ ಘತ್ತರ್ಗಾಕ್ಕೆ ಹೋಗುತಿದ್ದಾಗ ಹೊಂಚಗೇರಾ ಹತ್ತಿರ ಟಾಟಾ ಸುಮೋ ನಂ ಎಮ್ ಹೆಚ್ 04 ವಾಯ್ 9774 ನೇದ್ದುನು ಫಿರ್ಯಾದಿಯ ವಾಹನದಮುಂದೆ ಬಂದು ಸೈಡ್ ಸಲುವಾಗಿ ಅವಾಚ್ಯವಾಗಿ ಬೈಯುತ್ತಾ ನನಗು ಹಾಗೂ ಸಂಗಡ ಇದ್ದವರಿಗೆ ಹಿಡಿದು ಎಳೆದು ಕೈಯಿಂದ ಹೊಡೆ ಬಡೆ ಮಾಡಿ ಗುಪ್ತಗಾಯ ಪಡಿಸಿದ್ದು ಅದೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ಕಿರುಕಳ ನೀಡಿ ಹಲ್ಲೆ ಮಾಡಿದ ಪ್ರಕರಣ :
ಅಫಜಲಪೂರ ಠಾಣೆ : ಶ್ರೀಮತಿ ಹಸೀನಾಬೇಗಂ ಗಂಡ ಶಕೀಲಪಾಶಾ ಶೇಖ ಮುಸ್ಲೀಂ ಸಾ: ಅಫಜಲಪೂರ ಹಾ: ವ: ದೇಸುಣಗಿ ತಾ: ಜೇವರ್ಗಿ ಜಿ: ಕಲಬುರಗಿ ಇವರಿಗೆ 8 ವರ್ಷಗಳ ಹಿಂದೆ ಮದುವೆಯಾಗಿದ್ದು, ಈಗ ಒಂದು ಗಂಡು ಮಗು ಮತ್ತು ಒಂದು ಹೆಣ್ಣು ಮಗು ಇರುತ್ತವೆ. ಮದುವೆಯಾದ 6-7 ವರ್ಷಗಳ ವರೆಗೆ ನನಗೆ ನನ್ನ ಗಂಡ ಮತ್ತು ಗಂಡನ ಮನೆಯವರು ಚೆನ್ನಾಗಿ ಪ್ರೀತಿ ಪ್ರೇಮದಿಂದ ನೋಡಿಕೊಂಡಿರುತ್ತಾರೆ, ಈಗ 1 ವರ್ಷದಿಂದ ನನ್ನ ಗಂಡ ಮತ್ತು ಗಂಡನ ಮನೆಯವರು ನನಗೆ ನೀನು ಸರಿಯಾಗಿಲ್ಲ, ನಮಗ್ಯಾಕ ಮೂಲಾಗಿದಿ, ನೀನು ಸಿಗದಿದ್ದರೆ ನಾನು ಬೇರೆ ಮದುವೆ ಮಾಡಿಕೊಳ್ಳುತ್ತಿದ್ದೆ ಅಂತಾ ನನ್ನ ಗಂಡ ಹಾಗೂ ನನ್ನ ಗಂಡನ ಮನೆಯವರು ನಿನು ನೋಡಲು ಚೆನ್ನಾಗಿಲ್ಲ, ನಿನು ನಮ್ಮ ಮನೆಗೆ ಹೊಂದುವುದಿಲ್ಲ ಎಂದು ವಿಕಾರಣ ನನಗೆ ಬೈಯುವುದು, ಹೊಡೆಯುವುದು ಮಾಡಿ ಮಾನಸಿಕ ಮತ್ತು ದೈಹಿಕ ಕಿರುಕುಳ ನೀಡುತ್ತಾ ಬಮದಿರುತ್ತಾರೆ.ದಿನಾಂಕ 19-02-2015 ರಂದು ರಾತ್ರಿ ನಾನು ಅಫಜಲಪೂರ ಪಟ್ಟಣದ ನನ್ನ ಗಂಡನ ಮನೆಯಲ್ಲಿದ್ದಾಗ ನನ್ನ ಗಂಡ 1) ಶಕೀಲಪಾಶಾ ತಂದೆ ಸಾಹೇಬಲಾಲ ಶೇಖ, ಅತ್ತೆ 2) ಹಲೀಮಾ ಗಂಡ ಸಾಹೇಬಲಾಲ ಶೇಖ, ನಮ್ಮ ಅತ್ತೆಯ ತಂಗಿ 3) ಆಶಾಭಿ ಶೇಖ, ನಮ್ಮ ಭಾವ 4) ಅಬ್ದುಲರಜಾಕ ತಂದೆ ಸಾಹೇಬಲಾಲ ಶೇಖ, ನೇಗೇಣಿ 5) ಪರವೀನಬೇಗಂ ಗಂಡ ಅಬ್ದುಲರಜಾಕ ಶೇಖ, ಮೈದುನ 6) ಪೈಗಂಬರ ತಂದೆ ಸಾಹೇಬಲಾಲ ಶೇಖ ಸಾ: ಎಲ್ಲರೂ ಅಫಜಲಪೂರ ಎಲ್ಲರೂ ಕೂಡಿ ನನಗೆ ಏನೆ ರಂಡಿ, ಸೂಳೆ ನಮಗ್ಯಾಕ ಮೂಲಾಗಿದಿ, ನೀನ್ನ ತವರು ಮನೆಗೆ ಹೋಗು ಎಂದು ಬೈಯುತ್ತಿದ್ದರು, ಆಗ ನಾನು ಹೊಗುವುದಿಲ್ಲ ಅಂತಾ ಹೇಳಿದಕ್ಕೆ ಸದರಿಯವರೆಲ್ಲರು ನನಗೆ ಕೈಯಿಂದ ಹೊಡೆಯುವುದು ಕಾಲಿನಿಂದ ಒದೆಯುವುದು ಮಾಡಿರುತ್ತಾರೆ, ಸದರಿಯವರು ನನಗೆ ಬೈಯುವುದು ಹೊಡೆಯುವುದು ಮಾಡುತ್ತಿದ್ದಾಗ ನಮ್ಮ ಬಾಜು ಮನೆಯವರಾದ ಬಸವರಾಜ ಅಂಗಡಿ ಮತ್ತು ಇಲಿಯಾಸ ಪಟೇಲ ಇವರು ಬಂದು ನನಗೆ ಹೊಡೆಯುವುದನ್ನು ಬೀಡಿಸಿರುತ್ತಾರೆ, ಆಗ ಸದರಿಯವರು ರಂಡಿ ಇವರು ಬಂದು ಬಿಡಿಸಿದ್ದಕ್ಕೆ ನೀನು ಉಳಿದುಕೊಂಡಿದಿ ಮುಂದೆ ನಿನಗೆ ಒಂದಲ್ಲಾ ಒಂದಿನ ಜೀವ ಸಹಿತ ಬಿಡುವುದಿಲ್ಲ ಅಂತಾ ಜೀವ ಬೇದರಿಕೆ ಹಾಕಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಸದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.