POLICE BHAVAN KALABURAGI

POLICE BHAVAN KALABURAGI

31 May 2013

GULBARGA DISTRICT REPORTED CRIMES

ಹಲ್ಲೆ ಪ್ರಕರಣ:
ಅಶೋಕ ನಗರ ಪೊಲೀಸ್ ಠಾಣೆ:ದಿನಾಂಕ:30/05/2013 ರಂದು ಬೆಳಿಗ್ಗೆ 11-30 ಗಂಟೆಗೆನಾನುಮತ್ತು ಶರಣಪ್ಪ ಇಬ್ಬರು ಕೂಡಿಕೊಂಡು ಊರಿಗೆ ಹೋಗುವ ಕುರಿತು ಕೇಂದ್ರ ಬಸ್ಸ್ ನಿಲ್ದಾಣದ ಎಡಭಾಗದಲ್ಲಿರುವ ಖಾಸಗಿ ಬಸ್ ಜೀಪ ನಿಲ್ಲುವ ಸ್ಥಳಕ್ಕೆ ಹೋದಾಗ ಎಲ್ಲಿ ಊರಿಗೆ ಹೋಗುವ ವಾಹನ ಇರದೆ ಇದ್ದುದರಿಂದ ಸ್ವಲ್ಪ ಕುಡಿಯೊಣ ಅಂತ ಇಬ್ಬರು ಕೂಡಿಕೊಂಡುವಿನಾಯಕ ಬಾರ ಹತ್ತಿರ ಹೊಗುವಷ್ಟರಲ್ಲಿ 20-25 ವರ್ಷದವರು ಇಬ್ಬರು ಅದರಲ್ಲಿ ಒಬ್ಬ ಕಪ್ಪಾಗಿದ್ದು ಉದ್ದನೆ ಕುದಲು ಇನ್ನೊಬ್ಬ ಕಪ್ಪಾಗಿದ್ದು ಸಣ್ಣ ಕುದಲು ಇದ್ದವರು ನಮ್ಮನ್ನು ನೋಡಿ ಏ ಭೋಸಡಿ ಮಕ್ಕಳ್ಯಾ ಇಲ್ಲಿ ಬರ್ರಿ ಅಂತ ಕಪ್ಪಾಗಿರುವ ಸಣ್ಣ ಕುದಲಿನವನು ಕರೆದ ನಾವು ಏನು ಅಂತ ಅವರ ಹತ್ತಿರ ಹೋಗುವಷ್ಟರಲ್ಲಿ ಅವರಲ್ಲಿಯ ಇನ್ನೊಬ್ಬನು ಅವಾಚ್ಯವಾಗಿ ಬೈದು ಬೋಸಡಿ ಮಕ್ಕಳೆ ಏಲ್ಲಿಯವರು ನೀವು ಈ ಗುಲಬರ್ಗಾ ನಿಮ್ಮಪ್ಪಂದು ಯಾಕ ತಿರುಗ್ಯಾಡುತ್ತಿರಿ ನಮಗೆ ಮಧ್ಯ ಕುಡಿಸಿ ಅಂತ ನನ್ನ ಅಂಗಿ ಹಿಡಿದಿದ್ದು ಆಗ ನಾನು ಯಾಕೆ ಅಂತ ಅನ್ನುವಷ್ಟರಲ್ಲಿ ಉದ್ದ ಕೂದಲಿದ್ದವನು ಮರ್ಯಾದಿ ಇಂದ ಕೂಡಿಸು ಇಲ್ಲದಿದ್ದರೆ ಈ ಬ್ಲೇಡಚಾಕುವಿನಿಂದ ನಿನಗೆ ಖಲಾಸ ಮಾಡುತ್ತೇನೆ ಅಂತಾ ಅಂದವನೆ ನನ್ನ ಮೇಲೆ ಹೊಡೆಯಲು ಬಂದಿದ್ದು ಆಗ ಶರಣಪ್ಪ ಇತನು ಬಿಡಿಸಿಕೊಳ್ಳಲು ಬಂದಾಗ ಅವನಿಗೂ ಸಹ ಹೊಡೆದು ನೂಕಿಕೊಟ್ಟು ಬ್ಲೇಡಚಾಕುವಿನಿಂದ ನನ್ನ ಕುತ್ತಿಗೆ ನಳ್ಳಿ ಹತ್ತಿ ಎಡಭಾಗದಲ್ಲಿ ಜೋರಾಗಿ ಹೊಡೆದು ಅದರಿಂದ ನನಗೆ ಭಾರಿ ಗಾಯವಾಗಿ ರಕ್ತ ಸೊರಹತ್ತಿದ್ದು ಆಗ ಅಂಗಡಿಯವರು ಮತ್ತು ಇತರರನ್ನುನೋಡಿ ನನ್ನನ್ನು ಬಿಟ್ಟು ಓಡಿಹೋಗಿರುತ್ತಾರೆ.ವಿನಾಕಾರಣ ತಂಟೆ ಕತರಾರು ಮಾಡಿ ಮಧ್ಯ ಕುಡಿಸು ಅಂತ ಬ್ಲೇಡಚಾಕುವಿನಿಂದ ಹೊಡೆದಿರುವರ ಮೇಲೆ ಕಾನೂನು ಕ್ರಮ ಕೈಕೊಳ್ಳಬೇಕು ಅಂತಾ ಶ್ರೀ ಶರಣಯ್ಯ ತಂದೆ ಸಿದ್ದಯ್ಯ ಮಠಪತಿ ಸಾ|| ವಜ್ಜರಗಾವಂ ತಾ|| ಚಿಂಚೋಳಿ ಗುಲಬರ್ಗಾ ರವರು ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ.87/2013 ಕಲಂ. 323, 324, 307, 504, 506 ಸಂ. 34 ಐ.ಪಿ.ಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಕೊಲೆಗೆ ಪ್ರಯತ್ನ ಪ್ರಕರಣ:

ಚಿತ್ತಾಪೂರ ಪೊಲೀಸ್ ಠಾಣೆ:ಶ್ರೀಮತಿ, ಮೇರಾಬಿ ಗಂಡ ಉಸ್ಮಾನಸಾಬ ಮೇಲ್ದಾರ್ ಸಾ|| ಆಲ್ಲೂರ (ಬಿ) ರವರು ನಿನ್ನ ದಿವಸ ನಾವು ನಿನ್ನಗೆ  ಹೋಡೆದಿದ್ದವಿ ಅಂತಾ ನಮ್ಮ ವಿರುದ್ಧ  ಪೋಲಿಸ್ ಠಾಣೆಯಲ್ಲಿ  ಕೇಸು ಮಾಡಿದ್ದಿ ಅಯ್ಯುಬ ಖಾನ  ತಂದೆ ಮೈಹಿಬೂಬ ಅಲಿ ಮೇಲ್ದಾರ್ ಸಾ|| ಅಲ್ಲೂರ (ಬಿ) ಮತ್ತು ಅವನ ಹೆಂಡತ್ತಿ ಶಬಾನ ಬೇಗಂ ಗಂಡ ಅಯ್ಯುಬ ಖಾನ  ಮೇಲ್ದಾರ್ ಸಾ|| ಅಲ್ಲೂರ (ಬಿ)    ರವರು ಅವಾಚ್ಯ ಶಬ್ದಗಳಿಂದ  ಬೈಯುತ್ತಾ ಅಯ್ಯುಬ ಖಾನ  ಇತನು ನನಗೆ ಬೆನ್ನ ಮೇಲೆ .ಹೊಟ್ಟೆಯ ಮೇಲೆ ಹೊಡೆದಿದ್ದು, ಶಬಾನ ಬೇಗಂ ಇವಳು  ಕಲ್ಲಿನಿಂದ ತಲೆಯ ಎಡಭಾಗಕ್ಕೆ ಹೊಡೆದು ರಕ್ತಗಾಯ ಪಡಿಸಿದು ಅಯ್ಯುಬ ಖಾನ  ಇತನು ನೆಲಕ್ಕೆ ಹಾಕಿ ಕುಳಿತು ಕುತ್ತಿಗೆ ಒತ್ತಿ ಹಿಡಿದು ಖಲಾಸ ಮಾಡಿಯೇ ಬಿಡುತ್ತನೆ ಅಂತಾ ಕೊಲೆ ಮಾಡಲು ಪ್ರಯತ್ನ ಮಾಡಿರುತ್ತಾನೆ ಅಂತಾ ಶ್ರೀಮತಿ ಮೇರಾಬಿ ರವರು ದೂರ ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ:77/2013 ಕಲಂ, 323, 324, 354, 504, 506, 307 ಸಂಗಡ 34 ಐಪಿಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.