POLICE BHAVAN KALABURAGI

POLICE BHAVAN KALABURAGI

07 November 2012

GULBARGA DISTRICT REPORTED CRIME


ಅಪಹರಣ ಪ್ರಕರಣ:
ಸೇಡಂ ಪೊಲೀಸ ಠಾಣೆ:ಶ್ರೀ ಗೋಪಾಲರೆಡ್ಡಿ ತಂದೆ ಭೀಮರೆಡ್ಡಿ ಚಿಟ್ಟೆಪ್ಪನೋರ್ ಸಾ: ರೋಡ ಕಲ್ಲೂರ ತಾ: ಚಿಂಚೋಳಿ ರವರು ನನ್ನ ಮಗಳಾದ ಶ್ವೇತ ಇವಳು ಸೇಡಂ ಪಟ್ಟಣದ ಕೆಇಬಿ ಕಾಲೋನಿಯಲ್ಲಿ ವ್ಯಾಸಂಗದ ಸಲುವಾಗಿ ನಮ್ಮ ತಮ್ಮನಾದ ಅಶೋಕ ರೆಡ್ಡಿ ಇವರ ಹತ್ತಿರ ರೂಮ್ ಬಾಡಿಗೆ ಮಾಡಿ ಇರುತ್ತಾಳೆ. ಈ ಹಿಂದೆ ಚಂದಾಪುರದಲ್ಲಿ ಓದುವಾಗ ಚಂದಾಪೂರ ಗ್ರಾಮದ ದೇವಿಂದ್ರ ತಂದೆ ಮಾರುತಿ ಇಂಗಳಗಿ,ರಾಕೇಶ ತಂದೆ ಚನ್ನಪ್ಪ ಮಡಿವಾಳ,ಶಂಕರ ತಂದೆ ಮಾರುತಿ ಇಂಗಳಗಿ,ಪ್ರಕಾಶ ಬೀದರ, ಸಂತೋಷಕುಮಾರ ಚಂದಾಪುರ ಅನೀಲ ಚಂದಾಪುರ ಇವರುಗಳು ಚುಡಾಯಿಸುತ್ತಿದ್ದರು ಅಂತಾ ನನ್ನ ಮಗಳು ಹೇಳಿದ್ದಳು. ನನ್ನ ಮಗಳಿಗೆ ಇವರೆಲ್ಲರೂ ಪೋನಿನಲ್ಲಿ ಮೆಸೇಜ್ ಮಾಡುವುದು ಹಾಗೂ ನೀನಗೆ ಎತ್ತಿಕೊಂಡು ಹೋಗುತ್ತೆವೇ ಅಂತಾ ಹೆದರಿಸುತ್ತಿರುವ ವಿಷಯ ನನಗೆ ಹೇಳಿರುತ್ತಾಳೆ. ದಿನಾಂಕ:05-11-12 ರಂದು ಸಾಯಾಂಕಾಲ 7 ಗಂಟೆ ಸುಮಾರಿಗೆ ನನ್ನ ತಮ್ಮನಾದ ಅಶೋಕ ರೆಡ್ಡಿ ಇವರು ಪೋನ್ ಮಾಡಿ ಶ್ವೇತ ಇವಳು ಬೆಳಿಗ್ಗೆ 10 ಗಂಟೆ ಸುಮಾರಿಗೆ ಕಾಲೇಜಿಗೆ ಹೋಗುತ್ತೇನೆ ಅಂತಾ ಹೇಳಿ ಹೋದವಳು ತಿರುಗಿ ಇಷ್ಟೋತ್ತಾದರು ಮನೆಗೆ ಬಂದಿರುವುದಿಲ್ಲಾ ನಾವು ಸೇಡಂ ಪಟ್ಟಣದ ಎಲ್ಲಾ ಕಡೆಗೆ ಹುಡುಕಾಡಿದರೂ ಸಿಕ್ಕರುವುದಿಲ್ಲಾ ಅಂತಾ ತಿಳಿಸಿದ್ದರಿಂದ ಈ ಮೊದಲು ಸಂಶಯವಿರುವ ರಾಕೇಶನ ತಾಯಿಯಾದ ಮಮತಾ ಗಂಡ ಚನ್ನಪ್ಪ ಮಡಿವಾಳ ಸಾ: ಚಂದಾಪೂರ ತಾ: ಚಿಂಚೋಳಿ ಇವಳ ಕೈವಾಡ ಹಾಗೂ ಪ್ರಚೋದನೆ ಇರಬಹುದು ಕಾರಣ ಅವರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಅಂತಾ ದೂರು ಸಲ್ಲಿಸಿದ  ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ:226/2012 ಕಲಂ 143,366,109 ಸಂಗಡ 149 ಐಪಿಸಿ ಪ್ರಕಾರ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.    

GULBARGA DISTRICT REPORTED CRIME


ಅಪಘಾತ ಪ್ರಕರಣ:
ಜೇವರ್ಗಿ ಪೊಲೀಸ್ ಠಾಣೆ: ಶ್ರೀ ಮುಬಾರಕ ತಂದೆ ಮಹ್ಮದಸಾಬ ಸಾ:ಬಾಗವಾನ ಗಲ್ಲಿ ಜೇವರ್ಗಿ ರವರು ನಾನು ದಿನಾಂಕ:03-11-2012 ರಂದು ಮದ್ಯಾಹ್ನ 12-10 ಗಂಟೆಗೆ ಜೇವರ್ಗಿ ಪಟ್ಟಣ್ಣದ ಪೊಲೀಸ ಠಾಣೆಯ ರೋಡ ಕ್ರಾಸನಲ್ಲಿ ವೀರಯ್ಯಾ ತಂದೆ ಶರಣಯ್ಯಾ ಹಿರೇಮಠ ಸಾ:ವರ್ಚನಳ್ಳಿ ಇತನು ತನ್ನ ಟ್ರಾಕ್ಟರ ನಂ.ಕೆ.ಎ-32-ಟಿಎ-3712 ನೇದ್ದು ಸಿಂದಗಿ ಕಡೆಯಿಂದ ಅತೀವೇಗ ಮತ್ತು ಅಲಕ್ಷತನದಿಂದ ನಡೆಸಿಕೊಂಡು ಬಂದು ನನ್ನ ತಂದೆ ಮಹ್ಮದ ಸಾಬನಿಗೆ ಹಿಂದಿನಿಂದ ಡಿಕ್ಕಿ  ಪಡೆಸಿ ಭಾರಿ ಗಾಯಗೋಳಿಸಿ ತನ್ನ ಟ್ರಾಕ್ಟರ ಸ್ಥಳದಲ್ಲಿಯೇ ಬಿಟ್ಟು ಓಡಿ ಹೋಗಿರುತ್ತಾನೆ. ಉಪಚಾರ ಕುರಿತು ಗುಲಬರ್ಗಾದ ವಾತ್ಸಲ್ಯ ಆಸ್ಪತ್ರೆಯಲ್ಲಿ ಸೇರಿಕೆ ಮಾಡಿರುತ್ತೆವೆ. ನನ್ನ ತಂದೆಯವರಾದ ಮಹಮದಸಾಬ ಇತನು ದಿನಾಂಕ:06-11-2012 ರಂದು ಉಪಚಾರ ಫಲಕಾರಿಯಾಗದೇ ಮೃತ ಪಟ್ಟಿರುತ್ತಾನೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ.163/12 ಕಲಂ. 279,338,ಐ.ಪಿ.ಸಿ ಸಂಗಡ 187 ಐ.ಎಮ್.ವ್ಹಿ ಆಕ್ಟ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.