POLICE BHAVAN KALABURAGI

POLICE BHAVAN KALABURAGI

31 March 2016

Kalaburagi District Reported Crimes

ಅಪಘಾತ ಪ್ರಕರಣ :
ಜೇವರಗಿ ಠಾಣೆ : ದಿನಾಂಕ 30.03.2016 ರಂದು ಸಾಯಂಕಾಲ 19:54 ಗಂಟೆಯ ಸುಮಾರಿಗೆ ನನ್ನ ತಮ್ಮನು ಊರಿಗೆ ಬರುವ ಕುರಿತು ಕಟ್ಟಿ ಸಂಗಾವಿಯ ಕ್ರಾಸ್ ನ ಭೀಮಾ ಬ್ರೀಡ್ಜ ಜೇವರಗಿ ಕಲಬುರಗಿ ರಸ್ತೆ ಮೆಲೆ ನಡೆದುಕೊಂಡು ಬರುತ್ತಿರುವ ವೇಳೆಗೆ ಜೇವರಗಿ ಕಡೆಯಿಂದು ಒಂದು ಮೊಟಾರು ಸೈಕಲ್‌ ನಂ ಕೆಎ32ಇಎಫ್‌1806 ನೇದ್ದರ ಚಾಲಕನು ತನ್ನ ಮೋಟಾರು ಸೈಕಲ್‌ ಅನ್ನು ಅತೀ ವೇಗ ಮತ್ತು ಅಲಕ್ಷ್ಯತನದಿಂದ ನಡೆಸಿಕೊಂಡು ಬಂದು ನಡೆದುಕೊಂಡು ಬರುತ್ತಿದ್ದ ನನ್ನ ತಮ್ಮನಿಗೆ ಹಿಂದಿನಿಂದ ಡಿಕ್ಕಿ ಪಡಿಸಿದ್ದರಿಂದ ನನ್ನ ತಮ್ಮನಿಗೆ ಭಾರಿ ರಕ್ತಗಾಯವಾಗಿ ಸ್ಥಳದಲ್ಲಿಯೆ ಮೃತಪಟ್ಟಿದ್ದು ಅಪಘಾತದಲ್ಲಿ ಮೋಟಾರ ಸೈಕಲ್‌ ಸವಾರನಿಗೂ ಗಾಯವಾಗಿದ್ದು ಕಾರಣ ಸದರಿ ಮೋಟಾರು ಸೈಕಲ್‌ ಸವಾರನ ಮೇಲೆ ಕಾನೂನು ಕ್ರಮ ಕೈಕೊಳ್ಳಬೇಕು ಅಂತ ಶ್ರೀ ಅಬ್ಬಾಸಲಿ ತಂದೆ ಅಲಿಸಾಬ ಕೊಳಕೂರ ಸಾ : ಹಸನಾಪುರ  ರವರು  ಸಲ್ಲಿಸಿದ  ದೂರು ಸಾರಾಂಶದ ಮೇಲಿಂದ ಜೇವರಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ದ್ವೀಚಕ್ರ ವಾಹನ ಕಳವು ಪ್ರಕರಣಗಳು :
ಫರತಾಬಾದ ಠಾಣೆ : ದಿನಾಂಕ: 08/02/2016 ರಂದು ಮದ್ಯಾಹ್ನ 3:30 ರಿಂದ 4:30 ರ ಮದ್ಯದ ಅವಧಿಯಲ್ಲಿ ಪಿರೋಜಾಬಾದ ದರ್ಗಾದ ಹತ್ತಿರದ ಮುಂದಿನ ಗೇಟ ಮುಂದೆ ನಿಲ್ಲಿಸಿದ ಶ್ರೀ ಮಹ್ಮದ ಶಬ್ಬೀರ ತಂದೆ ಮಹ್ಮದ ರುಕ್ನೋದ್ದಿನ ಸಾ: ಉಮರ ಕಾಲೋನಿ ಆಜಾದಪೂರ ರೋಡ ಕಲಬುರಗಿ ರವರ ಸುಮಾರು 30,000/- ರೂಪಾಯಿಗಳು ಕಿಮ್ಮತ್ತಿನ ಹಿರೋ ಹೊಂಡಾ ಫ್ಯಾಶನ ಪ್ಲಸ್‌‌  ಮೋಟಾರ ಸೈಕಲನ್ನು ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿರುತ್ತಾರೆ  ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಫರತಾಬಾದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಾಹಾತ್ಮಾ ಬಸವೇಸ್ವರ ನಗರ ಠಾಣೆ : ಶ್ರೀ ವಿಜಯಕುಮಾರ ತಂದೆ ರಾಮರಾವ್ ಸಾಕ್ರೆ ಸಾಃ ಮನೆ.ನಂ.4-601/14ಬಿ, 02ನೇ ಕ್ರಾಸ್ ಬಸವೇಶ್ವರ ಕಾಲೋನಿ ಕಲಬುರಗಿ ಇವರು ದಿನಾಂಕ 21/01/2016 ರಂದು ಬೆಳಿಗ್ಗೆ 11.45 ಎಎಂ ಸುಮಾರಿಗೆ ತಮ್ಮ ಹೆರಿನಲ್ಲಿರುವ ರಾಯಲ್ ಎನಫೀಲ್ಡ್ ಕ್ಲಾಸಿಕ್ 350 ಮೊಟಾರು ಸೈಕಲ್ ನಂ. ಕೆ.ಎ.32 ಇಜಿ0765 ನೆದ್ದನ್ನು ಮನೆಯ ಮುಂದೆ ನಿಲ್ಲಿಸಿದ್ದು ನಂತರ 12.45 ಪಿ.ಎಮ್.ಕ್ಕೆ ಬಂದು ನೋಡಲಾಗಿ ಮನೆಯ ಮುಂದೆ ನಿಲ್ಲಿಸಿದ್ದ ಮೊಟಾರು ಸೈಕಲ್ ಇರಲಿಲ್ಲ ಎಲ್ಲಾ ಕಡೆ ಹುಡುಕಾಡಲಾಗಿ ಸಿಕ್ಕಿರುವುದಿಲ್ಲ ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೊಗಿರುತ್ತಾರೆ  ಕಳುವಾದ ನನ್ನ ರಾಯಲ್ ಎನಫೀಲ್ಡ್ ಕ್ಲಾಸಿಕ್ 350 ಮೊಟಾರು ಸೈಕಲ್ ನಂ. ಕೆ.ಎ.32 ಇಜಿ0765 ಅ.ಕಿ.1,00,000/- ರೂ. ಸಿಲ್ವರ್ ಬಣ್ಣದ್ದು ನೆದ್ದನ್ನು ಪತ್ತೆ ಮಾಡಿ ಕಳ್ಳರ ವಿರುದ್ದ ಸೂಕ್ತ ಕಾನೂನು ರೀತಿ ಕ್ರಮ ಜರುಗಿಸಬೇಕು ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಾಹಾತ್ಮಾಬಸವೇಸ್ವರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.