POLICE BHAVAN KALABURAGI

POLICE BHAVAN KALABURAGI

11 April 2013

GULBARGA DISTRICT REPORTED CRIMES


ಅಲಕ್ಷತನದಿಂದ ಸಾವು:
ಚಿಂಚೋಳಿ ಪೊಲೀಸ್ ಠಾಣೆ:ಶ್ರೀ ಗಜಾನನ ತಂದೆ ಛತ್ರು ರಾಠೋಡ ವಃ 32 ವರ್ಷ ಸಾಃ ಸಜ್ಜನಕೊಳತಾಂಡಾ ಸಲಗರ ಬಸಂತಪುರ  ತಾಃಚಿಂಚೋಳಿ ರವರು ನನ್ನ ಅಣ್ಣನಾದ ಶ್ರೀ ಮುರಲಿ ವಯಾ:45 ವರ್ಷ ಎಂಬುವವನ ಹೆಸರಿನಲ್ಲಿ ಸಲಗರ ಬಸಂತಪುರ ಸರ್ವೇ ನಂ 58 ನೇದ್ದರಲ್ಲಿ ಸರಕಾರದ ವತಿಯಿಂದ ಒಂದು ಬೋರವೆಲ್ಲ ಮಂಜೂರಾಗಿದ್ದು, ದಿನಾಂಕ:09-04-2013 ರಂದು ಸಾಯಂಕಾಲ 5.30 ಗಂಟೆಗೆ ರೇವತಿ ಬೋರವೆಲ್ಸ್ ತಿರುಚನಾಗುಡೆ ಬೋರವೆಲ್ಲ ಡ್ರೀಲ್ ಮಶೀನ ನಂ ಕೆಎ-51 ಎಮ.ಎ-4855 ನೇದ್ದರಿಂದ ಅಗೆಯುತ್ತಿದ್ದಾಗ ನನ್ನ ಅಣ್ನನಾದ ಮುರಲಿ, ನಾರಯಣ  ತಮ್ಮಂದಿರಾದ ಭರತ ಮತ್ತು ತನ್ನ ತಾಂಡಾದ ಶಿವರಾಮ ಏಕನಾಥ ಎಂಬುವವರು ಸದರ ಡ್ರೀಲ ಮಶೀನನ ಬಲಭಾಗಕ್ಕೆ ಕುಳಿತುಕೊಂಡಿದ್ದು ಸದರ ಡ್ರೀಲ ಚಾಲಕನಾದ ಸಿಂಥೇಲ ತಂದೆ ಪೇರುಮ್ ವಃ 40 ಎಂಬುವವನು ಬೋರವೇಲ್ ಡ್ರೀಲ ಮಶೀನ ವಾಹನ ನಂ ಕೆ.ಎ 51 ಎಮ.ಎ 4855 ನೇದ್ದರ ಸ್ಟೇರಿಂಗ್ ಮೇಲೆ ಕುಳಿತುಕೊಂಡು ವಾಹನ ಚಾಲೂ ಮಾಡಿ ವಾಹನ ಹಿಂದೆ ಮುಂದೆ ಮಾಡಿದ್ದರಿಂದ ಬೋರವೆಲ್ಲ ಡ್ರೀಲ್ ಮಶೀನ ವಾಹನದ ರಾಡ್ ಸೇಂಜರ್ ಹುಕ್ಕನಿಂದ ಬಿಚ್ಚಿ ನನ್ನ ಅಣ್ಣನ ಬಲಭಾಗದ ಕಿಡ್ನಿಯ ಮೇಲೆ ಜೋರಾಗಿ ಚುಚ್ಚಿದ್ದರಿಂದ ಉಪಚಾರ ಕುರಿತು ಸರಕಾರಿ ಆಸ್ಪತ್ರೆ ಚಿಟಗುಪ್ಪಾ ಕ್ಕೆ ತೆಗೆದುಕೊಂಡು ಹೋಗುತ್ತಿರುವಾಗ ಮಾರ್ಗ ಮದ್ಯದಲ್ಲಿ ಮೃತಪಟ್ಟಿರುತ್ತಾನೆ ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ:80/2013 ಕಲಂ 304(ಎ) ಐಪಿಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಹಲ್ಲೆ ಪ್ರಕರಣ:
ಗ್ರಾಮೀಣ ಪೊಲೀಸ್ ಠಾಣೆ:ದಿನಾಂಕ:09/04/2013 ರಂದು ರಾತ್ರಿ 8 ಗಂಟೆಗೆ ನನ್ನ ಸಣ್ಣಮ್ಮನ ಮಗನು ರಸ್ತೆಯ ಮೇಲೆ ಇರುವ ಟೂಬಲೈಟ ಪೈಪಿಗೆ ಒದ್ದಾಗ ಅದರ ಗಾಜು ಶಬ್ಬೀರ ತಂದೆ ಮಹ್ಮದ ಹನೀಪಸಾಬ ಮುರಗೆವಾಲೆ 6 ವರ್ಷದ ಮಗಳಿಗೆ ತಗುಲಿದ್ದರಿಂದ ಶಭೀರ ಮತ್ತು ಇನ್ನೂ 6 ಜನರು ಮನೆಗೆ ಬಂದು ಆಸ್ಪತ್ರೆಯ ಖರ್ಚು ಕೋಡಬೇಕು ಅಂತ ಅವ್ಯಾಚವಾಗಿ ಬೈಯತ್ತಿದ್ದಾಗ ಆಸ್ಪತ್ರೆಯ ಖರ್ಚು ಕೊಡುತ್ತೇವೆ ಅಂತಾ ಹೇಳಿದರು ಸಹ ಅವ್ಯಾಚ್ಛವಾಗಿ ಬೈದು  ಹೊಡೆ  ಬಡೆ ಮಾಡಿರುತ್ತಾರೆ, ಅಂತಾ ಶ್ರೀರಪೀಕ ತಂದೆ ಶೇಖದಸ್ತಗಿರ ಸಂಗಾಪೂರ ಸಾ:ಖಂಡಾಲ ಗ್ರೌಂಡ ಹತ್ತಿರ ಮಿಲ್ಲತ್ತ ನಗರ ಗುಲಬರ್ಗಾ ರವರು ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ:180/13 ಕಲಂ 147 143 148 323 324, 504 506(2) ಸಂಗಡ  149 ಐಪಿಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಹಲ್ಲೆ ಪ್ರಕರಣ:
ಗ್ರಾಮೀಣ ಪೊಲೀಸ್ ಠಾಣೆ: ಮರೆಪ್ಪಾ ತಂದೆ ಶರಣಪ್ಪ ಸಾ:ಅವರಾದ(ಬಿ) ತಾ:ಜಿ;ಗುಲಬರ್ಗಾ ಇತನು ಮಹಾನಗರ ಪಾಲಿಕೆ ಗುಲಬರ್ಗಾದಿಂದ ನಕಲಿ ಜನ್ಮ ಪ್ರಮಾಣ ಪತ್ರವನ್ನು ತಯಾರಿಸಿ ಪಾಸಪೋರ್ಟ ಸಲುವಾಗಿ ಅರ್ಜಿ ಸಲ್ಲಿಸಿದ್ದು ಸದರಿ ಪಾಸಪೋರ್ಟ ಅರ್ಜಿಯ ಪರಿಶೀಲನೆ ಕಾಲಕ್ಕೆ ಆತನ ಜನನ ಪ್ರಮಾಣ ಪತ್ರ  ನಕಲಿ ಇರುತ್ತದೆ ಅಂತಾ ಮಹಾನಗರ ಪಾಲಿಕೆ ಗುಲಬರ್ಗಾದಿಂದ ತಿಳಿದು ಬಂದಿರುತ್ತದೆ. ಸದರಿ ಆಪಾದಿತನು ನಕಲಿ ಜನನ ಪ್ರಮಾಣ ಪತ್ರ ತಯಾರಿಸಿದ್ದರಿಂದ ಆತನ ಮೇಲೆ ಕ್ರಮ ಜರುಗಿಸುವಂತೆ ಶ್ರೀ ಆರ್‌, ಅಮರಜ್ಯೋತಿ  ರಿಜನಲ್ ಪಾಸಪೋರ್ಟ ಆಪೀಸ ಬೆಂಗಳೂರು ರವರು ದೂರು ಸಲ್ಲಿಸಿದ ಮೇರೆಗೆ ಠಾಣೆ ಗುನ್ನೆ ನಂ: 182/13 ಕಲಂ 464 465, 468 471 420 ಐಪಿಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಮನುಷ್ಯ ಕಾಣೆಯಾದ ಬಗ್ಗೆ:
ಚಿಂಚೋಳಿ ಪೊಲೀಸ್ ಠಾಣೆ:ಶ್ರೀ ಸೈಯದ್ ಮೌಸಿನ ತಂದೆ ಸೈಯದ್ ಇಕ್ಬಾಲಸಾಬ ಚೌಕಿದಾರ ವ|| 25 || ವಿದ್ಯಾರ್ಥಿ ಸಾ|| ಐನೋಳ್ಳಿ ರವರು ನನ್ನ ಅಣ್ಣನಾದ ಸೈಯದ ಆಸ್ಪಾಕ @ ಗೋರ್ಯ್ಯಾಮಿಯ್ಯ ವ||28 ಇತನು ಸುಮಾರು 15 ದಿನಗಳ ಹಿಂದೆ ನನ್ನ ತನ್ನ ಮೋಟರ ಸೈಕಲ್ ತೆಗೆದುಕೊಂಡು ಮನೆಯಿಂದ ಹೋಗಿರುತ್ತಾನೆ ಎಲ್ಲಿಗೆ ಅಂತಾ ಹೇಳಿರುವದಿಲ್ಲ. ಆತನ ಮೋಬಾಯಿಲ್ ನಂಬರಗಳ ಸ್ವಿಚ್ ಆಪ್ ಆಗಿರುತ್ತವೆ. ದಿನಾಂಕ:10-04-2013 ರಂದು ಮಧ್ಯಾಹ್ನ  12-00 ಗಂಟೆಗೆ ಚಂದ್ರಂಪಳ್ಲಿ ಗ್ರಾಮದ ಕೆಲವು ಹುಡಗರು ತಮ್ಮ ಎತ್ತುಗಳನ್ನು ಯುಗಾದಿ ಹಬ್ಬದ ನಿಮಿತ್ಯ ತೋಳೆಯಲು  ಚಂದ್ರಂಪಳ್ಳಿ ಕೆರೆಗೆ ಹೋದಾಗ ನನ್ನ ಅಣ್ಣನ ಹೀರೊ ಹೋಂಡಾ ಸೈಕಲ ಮೋಟಾರ ಕೆರೆಯಲ್ಲಿ ಕಂಡಿದ್ದು ಅವರು ಅದನ್ನು ಮೇಲೆ ಗುರುತಿಸಿ ನಮಗೆ ಹಾಗೂ ಊರಿನವರಿಗೆ ತಿಳಿಸಿದಾಗ ನಾವು ಹೋಗಿ ನೋಡಲಾಗಿ ಅದು ನಮ್ಮ ಅಣ್ನನ ಸೈಕಲ ಮೋಟಾರ ಇರುತ್ತದೆ ಆದರೆ ನಮ್ಮ ಅಣ್ಣನ ಸುಳಿವು ಸಿಕ್ಕಿರುವದಿಲ್ಲಾ ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ:81/2013 ಕಲಂ ಮನುಷ್ಯ ಕಾಣೆಯಾದ ಬಗ್ಗೆ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ. 
ಅಲಕ್ಷತನದಿಂದ ಸಾವು:
ಮಳಖೇಡ ಪೊಲೀಸ್ ಠಾಣೆ:ದಿನಾಂಕ 10/04/2013 ರಂದು ಮಧ್ಯಾಹ್ನ 2-45  ಗಂಟೆ ಸುಮಾರಿಗೆ ತೊಟನಳ್ಳೀ ಗ್ರಾಮದಿಂದ ಸಾರ್ವಜನಿಕರು ಅಲಿಸಾಬ ತಂದೆ ಶುಕುರಮಿಯ ಮುಲ್ಲಾ ಇವನು ನೀರಿನಲ್ಲಿ ಮುಳುಗಿ ಸತ್ತಿರುತ್ತಾನೆ ಅಂತಾ ತಿಳಿಸಿದ್ದರಿಂದ ನಾನು ಹೋಗಿ ನೋಡಲು ನನ್ನ ಅಣ್ಣ  ಮೃತ ಅಲಿಸಾಬ ಸಂಗಡ ನಮ್ಮೂರ ಗೌಸಪಟೇಲ, ಸೂರ್ಯಕಾಂತ ಅಣಕೇರಿ ಎಲ್ಲರೂ ಖಾಸಗಿ ಕೆಲಸಕ್ಕೆ ಮಳಖೇಡಕ್ಕೆ ಹೋಗಿ ಮರಳಿ ಬರುವಾಗ ಕಾಗಿಣಾ ನದಿಯಲ್ಲಿ ಅಲ್ಲಿಸಾಬ ಇವನು ನೀರು ಕುಡಿಯುವಾಗ ಒಮ್ಮಲೆ ಕಾಲು ಜಾರಿ ತೆಗ್ಗಿನಲ್ಲಿ ಬಿದ್ದು ಮೃತ ಪಟ್ಟಿದ್ದು, ಕಾಗಿಣಾ ನದಿಯಲ್ಲಿ  ಚಂದ್ರಶೇಖರ ಹಂಗನಳ್ಳಿ ಇತನು ಅಕ್ರಮವಾಗಿ ಮರಳು ತೆಗೆದಿದ್ದಿಂದ ನನ್ನ ಅಣ್ಣನು ಜಾರಿ ನೀರಿನಲ್ಲಿ ಬಿದ್ದು ಸತ್ತಿರುತ್ತಾನೆ. ಅಂತಾ ಆರೀಫ ತಂದೆ ಶುಕುರಮಿಯ ಮುಲ್ಲಾ ಸಾ:ತೊಟನಳ್ಳಿ ರವರು ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ:34/2013 ಕಲಂ 304(ಎ) ಐಪಿಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಕಳ್ಳತನ ಪ್ರಕರಣ:
ಅಶೋಕ ನಗರ ಪೊಲೀಸ್ ಠಾಣೆ:ಶ್ರೀ ಚನ್ನಬಸವರಾಜ ತಂದೆ ಶಿವಪೂಜೆವಯಾ || 27 ಸಾ|| ಕಲ್ಪಕಲಾ ರೋಡ ಬಿ.ಎಸ್. ಕಂಪೌಂಡ ಬಳ್ಳಾರಿ ರವರು ನಾನು ಮತ್ತು ನನ್ನ ಗೆಳೆಯನಾದ ಪಾಂಡುರಂಗ ಜಾಧವ ಇಬ್ಬರೂ ಹಬ್ಬದ ನಿಮಿತ್ಯ ರಜೆ ಇರುವುದರಿಂದ ಬೆಂಗಳೂರ ಆನಂದರಾವ ಸರ್ಕಲದಲ್ಲಿ ಪೂಜಾ ಟ್ರಾವೇಲ್ಸ್  ಎಜೇನ್ಸಿಯಲ್ಲಿ ಟಿಕೇಟ ರಿಜವೇಷನ್ ಮಾಡಿಸಿಕೊಂಡು, ನಾನು ಬೀದರಕ್ಕೆ ಹೋಗಬೇಕಾಗಿದ್ದು ಪಾಂಡುರಂಗ ಜಾಧವ ರವರು ಗುಲಬರ್ಗಾದಲ್ಲಿ ಇಳಿವವರಿದ್ದರು. ದಿನಾಂಕ:10/04/2013 ರಂದು ಸಾಯಂಕಾಲ 7-00 ಗಂಟೆಗೆ ಪೂಜಾ ಟ್ರಾವೇಲ್ಸ ಬಸ್ ನಂ. ಕೆಎ-01 ಎಎ-3204 ನೇದ್ದರಲ್ಲಿ ಸ್ಲೀಪರ ಕೋಚ್ ಶೀಟಿನ ಕೆಳಗಡೆ ನಮ್ಮ ಲ್ಯಾಪ್ ಟ್ಯಾಪ್ ಹಾಗು ಇನ್ನಿತರೆ ಲಗೇಜ ಬ್ಯಾಗನ್ನು ಇಟ್ಟು ಬೆಂಗಳೂರಿದಿಂದ ಗುಲಬರ್ಗಾಕ್ಕೆ ಪ್ರಯಾಣ ಮಾಡಿದ್ದು, ದಿನಾಂಕ:11/04/2013 ರಂದು ಬೆಳಿಗ್ಗೆ 8-00 ಗಂಟೆಗೆ ರಾಮ ಮಂದಿರ ಹತ್ತಿರ ನಮ್ಮ ಲಗೇಜನ್ನು ನೋಡಿದಾಗ ನನ್ನ ಬ್ಯಾಗನಲ್ಲಿಟ್ಟಿದ, ( ACER LAPTOP )  ಇರಲಿಲ್ಲಾ. ಅದೇ ರೀತಿ ನನ್ನ ಗೆಳೆಯ ಪಾಂಡುರಂಗ ಜಾಧವ ರವರ ಲಗೇಜ ಬ್ಯಾಗನಲ್ಲಿಟ್ಟದ್ದ 2) LENEVO LAPTOP  Modal No. Z570 3)  One Apple Ipod 6 G  4) Vodafone 3G Internet Card With Sim No. 9538069162 ನೇದ್ದವುಗಳು ಸಹ ಇರಲಿಲ್ಲಾ. ಆಗ ಪೂಜಾ ಬಸ್ಸಿನ ಡ್ರೈವರ ರವರಿಗೆ ವಿಚಾರಿಸಿದ್ದು ಮತ್ತು ಪೂಜಾ ಟಿಕೇಟ ಎಜೇನ್ಸಿ ರವರಿಗೆ ಕೇಳಿದಾಗ ಸರಿಯಾಗಿ ಸ್ಪಂದಿಸಿರುವುದಿಲ್ಲಾ.ಸ್ಲೀಪರ ಕೋಚ್ ಬಸ್ಸಿನ ಕೆಳಗಡೆ ಇಟ್ಟಿರುವ ನಮ್ಮ ಲಗೇಜ ಬ್ಯಾಗದಲ್ಲಿರುವ ಮೇಲ್ಕಂಡ ಲ್ಯಾಪ್ ಟಾಫ್ ಇನ್ನಿತರೆ ವಸ್ತುಗಳು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 57/2013 ಕಲಂ.379 ಐಪಿಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.