POLICE BHAVAN KALABURAGI

POLICE BHAVAN KALABURAGI

22 December 2013

Gulbarga District Reported Crimes

ಇಸ್ಪೀಟ ಜೂಜಾಟದಲ್ಲಿ ನಿರತ ವ್ಯಕ್ತಿಗಳ ಬಂಧನ :
ಗ್ರಾಮೀಣ ಠಾಣೆ : ದಿನಾಂಕ 21-12-13 ರಂದು ಖಚಿತ ಮಾಹಿತಿ ಪಿ.ಎಸ್.ಐ. ರವರು ಇಬ್ಬರು ಪಂಚರ ಮತ್ತು ಸಿಬ್ಬಂದಿಯವರೊಂದಿಗೆ ತಾಜ ಸುಲ್ತಾನಪೂರ ಸರಕಾರಿ ಶಾಲೆ ಹಿಂದುಗಡೆ ಇಸ್ಪೇಟ ಜೂಜಾಟದಲ್ಲಿ ತೊಡಗಿದ ಆರೋಪಿತರನ್ನು ದಾಳಿ ಮಾಡಿ 3 ಜನ ಆರೋಪಿತರನ್ನು ದಸ್ತಗೀರ ಮಾಡಿ  ಅವರಿಂದ ನಗದು ಹಣ 1420 ರೂ. ಮತ್ತು 52 ಇಸ್ಪೇಟ ಎಲೆಗಳು  ಜಪ್ತ ಪಡಿಸಿಕೊಂಡ  ಠಾಣೆಗೆ ಬಂದು ಸದರಿಯವರ ವಿರುದ್ಧ ಗ್ಆಮೀಣ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಕೊಲೆ ಪ್ರಕರಣ :
ಕಮಲಾಪೂರ ಠಾಣೆ : ಶ್ರೀಮತಿ ಶಶಿಬಾಯಿ ಗಂಡ ರಾಮಣ್ಣಾ ಕಾಂಬಳೆ ಸಾಃ ಬೇಲೂರ ತಾಃ ಬಸವಕಲ್ಯಾಣ ಜಿಃ ಬೀದರ ಇವರ ಮಗಳಾದ ಲತಾ ವಯ: 30 ವರ್ಷ ಇವಳಿಗೆ ಈಗ ಸುಮಾರು 10 ವರ್ಷಗಳ ಹಿಂದೆ ವರನಾಳ ಗ್ರಾಮದ ಮಲ್ಲಿಕಾರ್ಜುನ ಮಾಳಗೆ ಎಂಬುವವ ನೊಂದಿಗೆ ಕೊಟ್ಟು ಮದುವೆ ಮಾಡಿದ್ದು ಅವರಿಗೆ  4 ಜನ ಮಕ್ಕಳಿದ್ದು ಅವರ ಮಾವ ಹುಸೇನಿ ಈತನು ಅಳಿಯ ಮತ್ತು ಮಗಳೊಂದಿಗೆ ಅವರಿರುವ ಮನೆಯು ಅವರ ಜಾಗೆ ಇರುತ್ತದೆ ಅದನ್ನು ಖಾಲಿ ಮಾಡುವ ವಿಷಯದಲ್ಲಿ ಜಗಳ ಮಾಡುತ್ತಾ ಬಂದಿದ್ದು. ಇಂದು ದಿನಾಂಕ: 21.-12-13 ರಂದು ಬೆಳಿಗ್ಗೆ 8-00 ಗಂಟೆ ಸುಮಾರಿಗೆ,  ಮನೆ ಖಾಲಿ ಮಾಡುವ ವಿಷಯದಲ್ಲಿ ಲತಾ ಇವಳೊಂದಿಗೆ ಜಗಳಕ್ಕೆ ಬಿದ್ದು ಅಂಗಳದಲ್ಲಿ ಅವಳಿಗೆ ನೆಲಕ್ಕೆ ಹಾಕಿ ಕುತ್ತಿಗೆ  ಒತ್ತಿ ಅವಳು ಚಿರಾಡುತ್ತಾ ಕಾಲು ನೆಲ್ಲಕ್ಕೆ ತಿಕ್ಕುತ್ತಾ ಇದ್ದರು ಬಿಡದೇ ಜೋರಿನಿಂದ ಕುತ್ತಿಗೆಒತ್ತಿ  ಕೊಲೆಮಾಡಿಫರಾರಿಯಾಗಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಕಮಲಾಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.   
ಅಪಘಾತ ಪ್ರಕರಣ :
ಮಾಹಾಗಾಂವ ಠಾಣೆ : ದಿನಾಂಕ 20-12-2013 ರಂದು ನನ್ನ ತಂದೆಯವರು ನಮಗೆ ಫೋನ್ ಮಾಡಿ ತಿಳಿಸಿದ್ಧೇನೆಂದರೆ ತಾನು ಕಂಪನಿಯ ಕೆಲಸಕ್ಕಾಗಿ ಬೆಂಗಳೂರಕ್ಕೆ ಬಂದಿದ್ದೇನೆ ಹಾಗೂ ಇಂದು ವಾಪಸ ರೈಲ್ವೆ ಮೂಲಕ ಬೆಂಗಳೂರಿನಿಂದ ವಾಪಸ ಮುಂಬೈಗೆ ಹೋಗುತ್ತಿದ್ದೇನೆ ಬೆಂಗಳೂರ ಖುರ್ಲಾ ಎಕ್ಸಪ್ರೇಸ್ ಟ್ರೇನ್ ಗುಲಬರ್ಗಾದಲ್ಲಿ ದಿನಾಂಕ 21-12-2013 ರ ಬೆಳಿಗಿನ ಜಾವ 03-20 ಎ.ಎಮ್ ಕ್ಕೆ ಬರುತ್ತದೆ ಊಟ ತೆಗೆದುಕೊಂಡು ಬಾ ಅಂತಾ ಹೇಳಿದ್ದರಿಂದ ಊಟವನ್ನು ತೆಗೆದುಕೊಂಡು ಗುಲಬರ್ಗಾಕ್ಕೆ ರೈಲ್ವೆ ನಿಲ್ದಾಣಕ್ಕೆ ಹೋಗುವ ಸಂಬಂಧ ನಾನು ಮತ್ತು ನನ್ನ ಗೆಳೆಯ ಅಬ್ದುಲ್ ಜಬ್ಬಾರ ಇಬ್ಬರೂ ಕೂಡಿ ರಾತ್ರಿ 8:45 ಪಿ.ಎಮ್ ಕ್ಕೆ ವಾಹನ ನಿಲ್ಲುವ ಸ್ಥಳದಲ್ಲಿ ಬಂದಾಗ ಒಂದು ಟಂಟಂ ಆಟೋ ನಿಂತಿದ್ದು ಅದರ ಚಾಲಕನಿಗೆ ವಿಚಾರಿಸಿದಾಗ ಅದು ಮಹಾಗಾಂವ ಗ್ರಾಸಗೆ ಹೋಗುತ್ತದೆ  ಅಂತ ಚಾಲಕ ತಿಳಿಸಿದಾಗ ನಾನು ಹಾಗೂ ಜಬ್ಬರ ಅದರಲ್ಲಿ ಕುಳಿತು ಮಹಾಗಾಂವ ಕ್ರಾಸಿಗೆ ಬರುವಾಗ ರಾತ್ರಿ ಮಹಾಗಾಂವ ಗ್ರಾಮ ದಾಟಿ ಮುಂದೆ ಬರುವಾಗ ಟಂಟಂ ಚಾಲಕನು ತನ್ನ ವಶದಲ್ಲಿದ್ದ ಟಂಟಂನ್ನು ಅತಿವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ರೋಡಿನ ಎಡಗಡೆ ಒಮ್ಮಲೆ ಕಟ್ ಮಾಡಿ ಪಲ್ಟಿಗೊಳಿಸಿ ಅಪಘಾತ ಪಡಿಸಿದ್ದರಿಂದ ಫಿರ್ಯಾದಿಯ ಎಡಗಾಲು ಹಿಮ್ಮಡಿ ಹತ್ತಿರ ಭಾರಿ ರಕ್ತಗಾಯವಾಗಿ ಎಲುಬು ಮುರಿದಂತೆ ಆಗಿರುತ್ತದೆ ಜಬ್ಬರ ಇತನಿಗೆ ನೋಡಲಾಗಿ ಆತನ ಎಡಗೈ ಉಂಗುರು ಬೆರಳಿಗೆ ಭಾರಿ ರಕ್ತಗಾಯವಾಗಿದ್ದು ಇರುತ್ತದೆ. ನಂತರ ಟಂಟಂ ನೋಡಲಾಗಿ ಕೆ.ಎ-32-ಬಿ-5338 ಅಂತಾ ಇತ್ತು ಸದರಿ ಟಂಟಂ ಚಾಲಕನಿಗೆ ಯಾವುದೇ ಗಾಯವಗೈರೆ ಆಗಿರುವದಿಲ್ಲ ಆತನ ಹೆಸರು ವಿಳಾಸ ವಿಚಾರಿಸಲಾಗಿ ಆತನು ಟಂಟಂ ಅಲ್ಲಿಯೇ ಬಿಟ್ಟು ಓಡಿ ಹೋಗಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಾಹಾಗಾಂವ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.