POLICE BHAVAN KALABURAGI

POLICE BHAVAN KALABURAGI

09 July 2018

KALABURAGI DISTRICT REPORTED CRIMES

ಕಳವು ಪ್ರಕರಣ :
ರಾಘವೇಂದ್ರ ನಗರ ಠಾಣೆ : ಶ್ರೀ ಸಂಜೀವಕುಮಾರ ತಂದೆ ಶ್ರೀಮಂತ ತ್ರೀಲಾಪುರ ಸಾ:ಕರಕಮುಕಳಿ(ಕನಕಪುರ) ತಾ:ಚಿಂಚೋಳಿ ಹಾ::ಮನೆ.ನಂ.9/528 ಸಮೀಕ್ಷಾ ನಿಲಯ 3 ನೇ ಕ್ರಾಸ ಕೈಲಾಸ ನಗರ ಕಲಬುರಗಿ ರವರು  ದಿನಾಂಕ:06/07/2018 ರಂದು ರಾತ್ರಿ 9.00 ಗಂಟೆಗೆ ಮ್ಮ ಮನೆಯ ಬಾಗಿಲ ಕೀಲಿ ಹಾಕಿಕೊಂಡು ನನ್ನ ಹೆಂಡತಿ ಅಶ್ವಿನಿ ಇವರ ಹೇರಿಗೆ ಮದರಕೇರ ಆಸ್ಪತ್ರೆಯಲ್ಲಿ ಯಾಗಿದ್ದು ನಾನು ಆಸ್ಪತ್ರೆಗೆ ಹೋಗಿದ್ದು ದಿನಾಂಕ:07/07/2018 ರಂದು 7.50 .ಎಂಕ್ಕೆ ಮರಳಿ ನಮ್ಮ ಮನೆಗೆ ಬಂದಾಗ ಮನೆಯ ಬಾಗಿಲ ಕೊಂಡಿ ಮುರಿದಿದ್ದು ನಾನು ಗಾಬರಿಗೊಂಡು ಮನೆಯಲ್ಲಿ ಹೋಗಿ ನೋಡಲಾಗಿ ಮನೆಯಲ್ಲಿಯ ಆಲಮರಿ ಮುರಿದಿದ್ದು ಅಲಮಾರಿಯಲ್ಲಿಯ ಸಾಮಾನುಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದವು ನಾನು ಪರಿಶೀಲಿಸಿ ನೋಡಲಾಗಿ ಮನೆಯಲ್ಲಿಯ ಬಂಗಾರದ ಆಭರಣಗಳು ಮತ್ತು ನಗದು ಹಣ ಒಟ್ಟು 1,68,000/-ರೂ ಬೆಲೆಬಾಳುವ ಬಂಗಾರದ ಒಡವೆಗಳು ಹಾಗೂ ನಗದು ಹಣ ಯಾರೋ ಕಳ್ಳರು ರಾತ್ರಿ ವೇಳೆ ನಮ್ಮ ಮನೆಯ ಬಾಗಿಲ ಕೊಂಡಿ ಮುರಿದು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ರಾಘವೇಂದ್ರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಟಕಾ ಜೂಜಾಟದಲ್ಲಿ ನಿರತವನ ಬಂಧನ :
ಅಫಜಲಪೂರ ಠಾಣೆ : ದಿನಾಂಕ 06-07-2018 ರಂದು ದಿಕ್ಸಂಗಾ (ಕೆ) ಗ್ರಾಮದ ಹನುಂತ ದೇವರ ಗುಡಿಯ ಮುಂದೆ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿ ಮಟಕಾ ಜೂಜಾಟ ಆಡುತ್ತಿದ್ದಾನೆ ಅಂತಾ ಮಾಹಿತಿ ಮೇರೆಗೆ ಪಿ.ಎಸ್.ಐ. ಅಫಜಲಪೂರ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ದಿಕ್ಸಂಗಾ (ಕೆ) ಗ್ರಾಮಕ್ಕೆ ಹೋಗಿ, ಹನುಮಂತ ದೇವರ ಗುಡಿಯಿಂದ ಸ್ವಲ್ಪ ದೂರು ನಮ್ಮ ವಾಹನವನ್ನು ನಿಲ್ಲಿಸಿ ಮರೆಯಾಗಿ ನಿಂತು ನೋಡಲು, ಗುಡಿಯ ಮುಂದೆ ಇರುವ ರಸ್ತೆಯ ಮೇಲೆ ಒಬ್ಬ ವ್ಯಕ್ತಿ ನಿಂತುಕೊಂಡು ಹೋಗಿ ಬರುವ ಸಾರ್ವಜನಿಕರಿಗೆ 1 ರೂಪಾಯಿಗೆ 80 ರೂಪಾಯಿ ಗೆಲ್ಲಿರಿ ಅಂತಾ ಕರೆದು, ಜನರಿಂದ ಹಣ ಪಡೆದು ಅವರಿಗೆ ಅಂಕಿ ಸಂಖ್ಯೆ ಬರೆದುಕೊಟ್ಟು, ಮಟಕಾ ಬರೆದುಕೊಳ್ಳುತ್ತಿದ್ದ ಬಗ್ಗೆ ಖಚಿತಪಡಿಸಿಕೊಂಡು ದಾಳಿ ಮಾಡಿ ಹಿಡಿದು ಸದರಿಯವನ ಹೆಸರು ವಿಳಾಸ ವಿಚಾರಿಸಲಾಗಿ ಸಿದ್ದಾರಾಮ ತಂದೆ ಶಿವಪ್ಪ ನಾಗಣಸೂರ ಸಾ|| ದಿಕ್ಸಂಗಾ (ಕೆ) ತಾ|| ಅಫಜಲಪೂರ ಅಂತಾ ತಿಳಿಸಿದ್ದು, ಸದರಿಯವನ ವಶದಿಂದ ಮಟಕಾ ಜೂಜಾಟಕ್ಕೆ ಸಂಬಂಧ ಪಟ್ಟ 500/- ರೂಪಾಯಿ ನಗದು ಹಣ ಹಾಗೂ ಅಂಕಿ ಸಂಖ್ಯೆ ಬರೆದ ಒಂದು ಮಟಕಾ ಚೀಟಿ ಮತ್ತು ಒಂದು ಬಾಲ ಪೆನ್ನ ವಶಪಡಿಸಿಕೊಂಡು ಸದರಿಯವನೊಂದಿಗೆ ಅಫಜಲಪೂರ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.  
ಅಪಹರಣ ಪ್ರಕರಣ :
ರಾಘವೇಂದ್ರ ನಗರ ಠಾಣೆ : ಶ್ರೀ ಹಣಮಂತರಾಯ ತಂದೆ ಶರಣಪ್ಪಾ ಗೌಡಪ್ಪಗೋಳ ಸಾ:ಜವಳಿ (ಡಿ) ತಾ:ಆಳಂದ ಹಾ::ಜೆ.ಆರ್‌‌ ನಗರ ಆಳಂದ ರೋಡ ಕಲಬುರಗಿ  ರವರ ಮಗನಾದ  ಸಿದ್ರಾಮ ತಂದೆ ಹಣಮಂತರಾಯ ಗೌಡಪ್ಪಗೋಳ :16 :ಪ್ರಥಮ ಪಿಯುಸಿಯಲ್ಲಿ ವಿದ್ಯಾಭ್ಯಾಸ ಇತನು ದಿನಾಂಕ:04/07/2018 ರಂದು ಬೆಳಗ್ಗೆ 11.30 ಗಂಟೆ ಸುಮಾರಿಗೆ ಸ್ಟಡಿ ಮಟೇರಿಯಲ್ಸ್‌‌ ಝೇರಾಕ್ಸ್‌‌ ಮಾಡಿಸಿಕೊಂಡು ಬರುತ್ತೇನೆ ಅಂತಾ ಮನೆಯಲ್ಲಿ ಹೇಳಿ ಹೋಗಿದ್ದು ನಮ್ಮ ಮಗ ಮರಳಿ ಇಂದಿನವರೆಗೂ ಮನೆಗೆ ಬಂದಿರುವದಿಲ್ಲಾ ನನ್ನ ಮಗನ ಚಹರೆ ಪಟ್ಟಿ ಕೋಲು ಮುಖ, ಸಾಧಾರಣ ಮೈಕಟ್ಟು, ಗೋಧಿ ಬಣ್ಣ, ಎತ್ತರ 5’6’’ ಮೈಮೇಲೆ ಉದ್ದ ತೋಳಿನ ಕೆಂಪು ಟಿ-ಶರ್ಟ, ನೀಲಿ ಬಣ್ಣದ ಜೀನ್ಸ್ ಪ್ಯಾಂಟ, ಬಿಳಿ ಬನಿಯಾನ, ಬಾಟಾ ಕಂಪನಿಯ ಚಾಕಲೇಟ್‌‌ ಬಣ್ಣದ ಚಪ್ಪಲ್ ಧರಿಸಿದ್ದು ಇರುತ್ತದೆ. ಅಂಥಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ರಾಘವೇಂದ್ರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ಹಲ್ಲೆ ಪ್ರಕರಣ :
ರಾಘವೇಂದ್ರ ನಗರ ಠಾಣೆ : ಶ್ರೀ ಭವಾನಿ ತಂದೆ ಗುಂಡಪ್ಪಾ ಗರಡಕರ ಸಾ:ಮಾಕಾ ಲೇಔಟ ಜೇವರ್ಗಿ ಕಾಲೋನಿ ಕಲಬುರಗಿ ರವರು ದಿನಾಂಕ:04/07/18 ರಂದು ನನ್ನ ಹೆಂಡತಿಗೆ ಹೇರಿಗೆಯಾಗಿದ್ದು ಆಸ್ಪತ್ರೆಯಲ್ಲಿ ನನ್ನ ಹೆಂಡತಿ ಮತ್ತು ಮಗುವಿನ ಉಪಚಾರ ನೋಡಿಕೊಳ್ಳಲು ಯಾರು ಹೆಣ್ಣು ಮಕ್ಕಳು ಇಲ್ಲದ ಕಾರಣ ನಾನು ನಮ್ಮ ಮಾವನಾದ ಶಂಕರ ಚವ್ಹಾಣ ಇವರಿಗೆ ಪೋನ ಮಾಡಿ ಅತ್ತಿಯಾದ ಇಂಧುಬಾಯಿಗೆ ಆಸ್ಪತ್ರೆಗೆ ಕಳುಹಿಸಿ ಕೊಡಲು ಕೇಳಿದಾಗ ಮನೆಗೆ ಬಂದು ಕರೆದುಕೊಂಡು ಹೋಗು ಅಂತಾ ಹೇಳಿದರು ಆಗ ನಾನು ಗಂಗಾನಗರದಲ್ಲಿರುವ ನನ್ನ ಮಾವನ ಮನೆಗೆ ಹೋದಾಗ ಮನೆಯಲ್ಲಿ ನಮ್ಮ ಮಾವನವರಾದ ಶಂಕರ ತಂದೆ ತುಳಸಿರಾಮ ಚವ್ಹಾಣ ಹಾಗೂ ನಮ್ಮ ಅಳಿಯ ದೇವಿದಾಸ ಚವ್ಹಾಣ ಇಬ್ಬರೂ ಕೂಡಿಕೊಂಡು 5.00 ಪಿ.ಎಂ ಸುಮಾರಿಗೆ ನನಗೆ ಬೈಯ ಹತ್ತಿದರು ಆಗ ನಾನು ಯಾಕೆ ಬೈಯುತ್ತಿರಿ ನನ್ನ ಹೆಂಡತಿ ಆಸ್ಪತ್ರೆಯಲ್ಲಿ ಇದ್ದಾಳೆ ಅತ್ತೆಗೆ ಕಳುಹಿಸಿ ಕೋಡಿರಿ ಎಂದಾಗ ನಮ್ಮ ಮಾವ ಶಂಕರ ಇತನು ನಾನು ಕಳುಹಿಸಿ ಕೊಡುವದಿಲ್ಲಾ ನಿನ್ನ ಸೊಕ್ಕ ಬಹಳ ಆದ ಮಗನಾ ಅಂತಾ ಕಟ್ಟಿಗೆ ತೆಗೆದುಕೊಂಡು ನನ್ನ ತಲೆಯ ಮೇಲೆ ಎಡಭಾಗಕ್ಕೆ ಹೊಡೆದಿದ್ದು ನಮ್ಮ ಅಳಿಯ ದೇವಿದಾಸ ಇತನು ಕೈಯಿಂದ ಮೈ ಕೈಗೆ ಹೊಡೆಯಹತ್ತಿದನು ಆಗ ನಮ್ಮ ಅತ್ತೆ ಇಂದುಬಾಯಿ ಇವಳು ಬಿಡಿಸಿಕೊಂಡಳು ನನ್ನ ತಲೆಯಿಂದ ರಕ್ತ ಬರ ಹತ್ತಿತ್ತು ನಂತರ ನಾನು ಜಿಲ್ಲಾ ಆಸ್ಪತ್ರೆಗೆ ಬಂದು ಉಪಚಾರ ಕುರಿತು ಸೇರಿಕೆಯಾಗಿದ್ದು ವೈದ್ಯರು ನನ್ನ ತಲೆಯ ಗಾಯಕ್ಕೆ ಉಪಚಾರ ಮಾಡಿ ವಾರ್ಡನಲ್ಲಿ ಸೇರಿಕೆ ಮಾಡಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ರಾಘವೇಂದ್ರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವರದಕ್ಷಣೆ ಕಿರುಕಳ ಪ್ರಕರಣ
ಫರತಾಬಾದ ಠಾಣೆ : ಶ್ರೀಮತಿ ಜ್ಯೋತಿ ಗಂಡ ವಿಶ್ವರಾಜ ಧರಿಗೊಂಡ ಸಾ ತೆಲೂರ ಹಾ.ವ. ಜೈಲ ಕ್ವಾಟರ್ಸ ಖನದಾಳ ರೋಡ ಕಲಬುರಗಿ  ರವರು ಸುಮಾರು 4 ವರ್ಷಗಳ ಹಿಂದೆ ವಿಶ್ವರಾಜ ಇತನೊಂದಿಗೆ ಮದುವೆಯಾಗಿದ್ದು ಮದುವೆ ಕಾಲಕ್ಕೆ ವರೋಪಚಾರ ಅಂತಾ ನಗದು ಹಣ ಬಂಗಾರ ಗೃಹ ಉಪಯೋಗಿ ಸಾಮಾನುಗಳನ್ನು ಕೊಟ್ಟಿದ್ದು ಮದುವೆಯಾದ ನಂತರ  ಸ್ವಲಪ್ಪ ದಿನಗಳ ನಂತರ ನನ್ನ ಗಂಡ ಅತ್ತೆ ಮಾವ, ಮೈದುನರು ಮತ್ತು  ನೆಗೆಣಿ ಎಲ್ಲರು ಕೂಡಿಕೊಂಡು  ತವರುಮನೆಯಿಂದ ಇನ್ನು ಹೆಚ್ಚಿನ ವರದಕ್ಷಣೆ ತರುವಂತೆ ದೈಹಿಕವಾಗಿ ಮತ್ತು ಮಾನಸಿಕವಾಗಿ ಕಿರುಕಳ ಕೊಟ್ಟಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಫರಥಾಬಾದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.