POLICE BHAVAN KALABURAGI

POLICE BHAVAN KALABURAGI

03 August 2013

GULBARGA DIST REPORTED CRIMES

ಅಪಘಾತ ಪ್ರಕರಣ:  

ಕಮಲಾಪೂರ ಪೊಲೀಸ ಠಾಣೆ:

ದಿನಾಂಕ:02/08/2013 ರಂದು ಫಿರ್ಯಾದಿ ಶ್ರೀ ಅಶೋಕ ತಂದೆ ದಸ್ತಯ್ಯಾ ಗುತ್ತೇದಾರ ನವನಿಹಾಳ ಜಿ;ಗುಲಬರ್ಗಾ ಇವರು ಠಾಣೆಗೆ ಹಾಜರಾಗಿ ಗಣಕಯಂತ್ರದಲ್ಲಿ ಹೇಳಿ ಟೈಪ ಮಾಡಿಸಿದ ಫಿರ್ಯಾದು ಹೇಳಿಕೆ ಸಾರಾಂಶವೆನೇಂದರೆ ನಾನು ಇಂದು ದಿನಾಂಕ: 02-08-2013 ರಂದು ಬೆಳಗ್ಗೆ ಗುಲಬರ್ಗಾ-ಹುಮನಾಬಾದ ಹೆದ್ದಾರಿ 218 ನೇದ್ದರ ರೋಡಿನ ನಾವದಗಿ ಸೇತುವೆ ಹತ್ತಿರ ಇರುವ ಹನುಮಾನ ದೇವರ ದರ್ಶನ ಮಾಡಿಕೊಂಡು ಮರಳಿ ಹೆದ್ದಾರಿ ಮೇಲೆ ಬರುತ್ತಿವಾಗ ಸೇತುವೆ ಹತ್ತಿರ ಗುಲಬರ್ಗಾ ಕಡೆಯಿಂದ ಬಜಾಜ ಪಲ್ಸರ್ ಮೋಟಾರ ಸೈಕಲ ನಂಬರ ಕೆಎ:42 ಜೆ:3827 ನೇದ್ದರ ಸವಾರ ವಸೀಮ ಅಕ್ರಮ ಮತ್ತು  ಮಹ್ಮದ ಹಾಜಿ ತಂದೆ ಮೈಹಿಬೂಬಸಾಬ ಸಾಃಇಬ್ಬರು ಗುಲಬರ್ಗಾ ಇವರು ಕೂಡಿಕೊಂಡು ಗುಲಬರ್ಗಾದಿಂದ ಕಮಲಾಪೂರ ಕಡೆಗೆ ಬರುತ್ತಿದ್ದಾಗ ವಸೀಮ ಅಕ್ರಮ ಈತನು ತನ್ನ ಮೋ.ಸೈಕಲನ್ನು ಅತಿವೇಗ ಮತ್ತು ಅಲಕ್ಷತನದಿಂದ ಚಲಾಯಿಸಿ ನಾವದಗಿ ಸೇತುವೆ ದಾಟಿ ತನ್ನ ನಿಯಂತ್ರಣ ಕಳೆದುಕೂಂಡು ರೋಡಿನ ಎಡಬದಿಯಲ್ಲಿರುವ ಗಾರ್ಡ ಕಲ್ಲಿಗೆ ಜೋರಾಗಿ ಡಿಕ್ಕಿ ಹೊಡೆದು ಅಪಘಾತ ಪಡಿಸಿದ್ದರಿಂದ ಮೊಟಾರ ಸೈಕಲ ಸವಾರ ವಸೀಮ ಅಕ್ರಮ ಈತನು ತನ್ನ ಹಣೆಗೆ ಭಾರಿ ರಕ್ತ ಗಾಯವಾಗಿ ಸ್ಥಳದಲ್ಲಿಯೇ ಮೃತಪಟ್ಟಿದ್ದು. ಮಹ್ಮದ ಹಾಜಿ ತಂದೆ ಮೈಹಿಬೂಬಸಾಬ ಈತನಿಗೆ ಮುಖಕ್ಕೆ, ತಲೆಗೆ ಮೈಕೈಗಳಿಗೆ ಭಾರಿ ರಕ್ತಗಾಯ ಮತ್ತು ಗುಪ್ತಗಾಯವಾಗಿ ಮಾತನಾಡುವ ಸ್ಥೀತಿಯಲ್ಲಿರಲಿಲ್ಲಾ. ನಂತರ ಖಾಸಗಿ ವಾಹನದಲ್ಲಿ ಮೃತ ವಸೀಮ ಅಕ್ರಮ ಮತ್ತು ಗಾಯಾಳು ಮಹ್ಮದ ಹಾಜಿ ಇವರಿಗೆ ಉಪಚಾರ ಕುರಿತು ಗುಲಬರ್ಗಾ ಸರ್ಕಾರಿ ಆಸ್ಪತ್ರೆಗೆ ಸಯ್ಯದ ಸಲೀಂ ಮತ್ತು ಆತನ ಸಂಗಡಿಗರು ಕರೆದು ಹೋಗಿದ್ದು ಇರುತ್ತದೆ. ಮೃತ ವಸೀಮ ಅಕ್ರಮ ಈತನು ತನ್ನ ಮೊ.ಸೈಕಲನ್ನು ನಿರ್ಲಕ್ಷ್ಯತನದಿಂದ ಚಲಾಯಿಸಿ ರೋಡಿನ ಬದಿಯಲ್ಲಿರುವ ಗಾರ್ಡ ಕಲ್ಲಿಗೆ ಡಿಕ್ಕಿ ಹೊಡಿದು ಅಪಘಾತ ಪಡಿಸಿದ್ದರಿಂದ ಈತನ ಮೇಲೆ ಕಾನೂನು ಕ್ರಮ ಜರುಗಿಸಬೇಕು ಅಂತಾ ಹೇಳಿಕೆ ದೂರು ಸಾರಾಂಶದ ಮೇಲಿಂದ ಪ್ರಕ್ರಣದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ.