POLICE BHAVAN KALABURAGI

POLICE BHAVAN KALABURAGI

06 March 2015

Kalaburagi District Reported Crimes

ಕೊಲೆ ಪ್ರಕರಣ :
ಕಮಲಾಪೂರ ಠಾಣೆ : ಶ್ರೀ ಜಗಪ್ಪ @ ಜಗನ್ನಾಥ ತಂದೆ ಭೀಮಶ್ಯಾ ಸನಗುಂದಿ ಸಾ; ಗೊಬ್ಬುರವಾಡಿ  ರವರು ದಿನಾಂಕ 05-03-2015 ರಂದು ಬೆಳಗ್ಗೆ ಎಂದಿನಂತೆ ನಮ್ಮ ಎತ್ತುಗಳನ್ನು ಹೊಡೆದುಕೊಂಡು ನಾನು ಪಾಲದಿಂದ ಮಾಡಿದ ರೇವಣಸಿದ್ದಯ್ಯ ಸ್ವಾಮಿ ಇವರ ಹೊಲದಲ್ಲಿ ಬಂದು ಗಳೆ ಹೊಡೆದು ನಂತರ ಮಧ್ಯಾಹ್ನ 12-00 ಗಂಟೆಯ ಸುಮಾರಿಗೆ ಎತ್ತುಗಳ ಕೊಳ್ಳು ಹರಿದು ಅವುಗಳಿಗೆ ನೀರು ಕುಡಿಸುವ ಸಲುವಾಗಿ ನಮ್ಮ ಹೊಲದ ಪಕ್ಕದಲ್ಲಿ ಹರಿಯುವ ಗಂಗಮ್ಮನ ಹಳ್ಳಕ್ಕೆ ನೀರು ಕುಡಿಸಲು ಬಂದಿದ್ದು, ಆಗ ಹಳ್ಳದ ಆಚೆ ಕಡೆಗೆ ಒಬ್ಬ ಗಂಡು ಮನುಷ್ಯನ ಮೃತ ದೇಹವು ಬಿದ್ದಿತ್ತು, ಆಗ ನಾನು ಗಾಬರಿಗೊಂಡು ನನ್ನ ದನಗಳನ್ನು ಅಲ್ಲಿಯೇ ಬಿಟ್ಟು ಓಡಿ ಹೋಗಿ ನಮ್ಮ ಊರಿನಲ್ಲಿಯೇ ಹೋಗಿ ನಮ್ಮೂರ ಅಶೋಕ ಸ್ವಾಮಿ ಮತ್ತು ಮಲ್ಲಿನಾಥ ಗೌಡ ಪೊಲೀಸ  ಪಾಟೀಲ್ ಇವರಿಗೆ ವಿಷಯ ತಿಳಿಸಿ ಗ್ರಾಮಸ್ಥ ರೊಂದಿಗೆ ಮತ್ತು ಗಂಗಮ್ಮನ ಹಳ್ಳಕ್ಕೆ ಬಂದು ನೋಡಲಾಗಿ ಅಂದಾಜು 30-35 ವರ್ಷ ವಯಸ್ಸಿನಗಂಡು ಮನುಷ್ಯನ ಮೃತ ದೇಹವಿದ್ದು, ಮೃತ ದೇಹವನ್ನು ಯಾವುದೇ ವಾಹನದಲ್ಲಿ ಯಾವುದೋ ಕಾರಣಕ್ಕೆ ಎಲ್ಲಯೋ ಹೇಗೋ ಕೊಲೆ ಮಾಡಿ ಯಾವದೋ ವಾಹನದಲ್ಲಿ ಮೃತ  ದೇಹವನ್ನು ತಂದು ಇಲ್ಲಿ ಬಿಸಾಡಿ ಮೃತನ ಗುರುತು ಪತ್ತೆ ನಾಶಮಾಡುವ ಉದ್ದೇಶದಿಂದ ಮೃತ ದೇಹದ ಮೇಲೆ ಯಾವುದೋ ಎಣ್ಣೆ ಹಾಕಿ ಸುಟ್ಟು ಹಾಕಿ ಹೋಗಿರುತ್ತಾರೆ,  ಮೃತ ಅಪರಿಚಿತ ಗಂಡು ಮನುಷ್ಯನ ಬಲಗೈಯಲ್ಲಿ ಒಂದು ಖಡೆ ಮತ್ತು ಒಂದು ಉಂಗುರವಿದೆ  ಈ ವೃತ ವ್ಯಕ್ತಿಯು ಯಾರು ಅಂತ ಗೋತ್ತಾಗಿರುವದಿಲ್ಲ ಮತ್ತು ಈತನನ್ನು ಯಾರು ಕೊಲೆ ಮಾಡಿ ಬಿಸಾಡಿ ಹೋಗಿರುತ್ತಾರೆ ಅಂತಾ  ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಕಮಲಾಠಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ಮಟಕಾ ಜೂಜಾಟದಲ್ಲಿ ನಿರತ ವ್ಯಕ್ತಿಯ ಬಂಧನ :
ನಿಂಬರ್ಗಾ ಠಾಣೆ : ದಿನಾಂಕ 05/03/2015 ರಂದು ಪಿ.ಎಸ್.ಐ. ನಿಂಬರ್ಗಾ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಭೂಸನೂರ ಗ್ರಾಮಕ್ಕೆ ಹೋಗಿ ಹಳೆ ಬಸ್ ಸ್ಟ್ಯಾಂಡ  ಹತ್ತಿರ ಇರುವ ಈರಣ್ಣ ಡಾಂಕೆ ಇವರ ಹೊಟೇಲ ಮರೆಯಲ್ಲಿ ನಿಂತು ನೋಡಲಾಗಿ ಹೋಟೇಲ ಮುಂದಿನ ಸಾರ್ವಜನಿಕ ಡಾಂಬರ ರಸ್ತೆಯ ಮೇಲೆ ಒಬ್ಬ ವ್ಯಕ್ತಿ ಸಾರ್ವಜನಿಕರಿಂದ ಹಣ ಪಡೆದು ಓಪನ ನಂಬರ ಬಂದರೆ 1 ರೂಪಾಯಿಗೆ 8 ರೂಪಾಯಿ ಗೆಲ್ಲಿರಿ ಅಂತ ಮತ್ತು ಜಾಯಿಂಟ ನಂಬರ ಬಂದರೆ 1 ರೂಪಾಯಿಗೆ 80 ರೂಪಾಯಿ ಗೆಲ್ಲಿರಿ ಅಂತ ಕೂಗುತ್ತಾ ಮಟಕಾ ಅಂಕೆ ಸಂಖ್ಯೆಯುಳ್ಳ ಚೀಟಿಗಳನ್ನು ಬರೆದುಕೊಡುತ್ತಿರುವದನ್ನು ಖಚಿತ ಪಡಿಸಿಕೊಂಡು ದಾಳಿ ಮಾಡಿ ಹಿಡಿದು ವಿಚಾರಿಸಲು ತನ್ನ ಹೆಸರು ಮಂಜೂನಾಥ ತಂದೆ ರೇವಪ್ಪ ಪೂಜಾರಿ ಸಾ: ಭೂಸನೂರ ಇತನ ಹತ್ತಿರ ಚಕ್ ಮಾಡಲಾಗಿ ಮಟಕಾ ಜೂಜಾಟಕ್ಕೆ ಬಳಿಸಿರುವ ನಗದು ಹಣ 1110/-,  ಒಂದು ಮಟಕಾ ಅಂಕಿ ಸಂಖ್ಯೆಯುಳ್ಳ ಚೀಟಿ, ಒಂದು  ಬಾಲ ಪೆನ್ನ ನೇದ್ದವುಗಳನ್ನು ವಶಪಡಿಸಿಕೊಂಡಿದ್ದು  ಸದರಿಯವನೊಂದಿಗೆ ನಿಂಬರ್ಗಾ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.
ಅಪಘಾತ ಪ್ರಕರಣಗಳು :
ಜೇವರ್ಗಿ ಠಾಣೆ : ದಿನಾಂಕ: 05.03.2015 ರಂದು ಮುಂಜಾನೆ ಶ್ರೀ ಶಂಕರ ತಂದೆ ಸಿದ್ರಾಮಪ್ಪ ಮುತ್ತಕೋಡ ಸಾ : ಜನತಾ ಕಾಲೋನಿ ಜೇವರ್ಗಿ ಮತ್ತು ನಮ್ಮ ಓಣಿಯವನಾದ ದೌಲತರಾಯ ತಂದೆ ಮಲ್ಲಪ್ಪ ಸುಣುರ ಇಬ್ಬರು ಕೂಡಿಕೊಂಡು ಕುರಿ ಮರಿಗಳಿಗೆ ಹುಲ್ಲು ತರುವ ಕುರಿತು ನನ್ನ ಸೈಕಲ್‌ ಮೇಲೆ ನಮ್ಮ ಹೋಲಕ್ಕೆ ಹೋಗುವ ಕುರಿತು ಜೇವರ್ಗಿ ಕ್ರಿಡಾಂಗಣದ ಹತ್ತಿರ ಶಹಾಪುರ ಜೇವರ್ಗೀ ರಾಜ್ಯ ಹೆದ್ದಾರಿಯ ಮೇಲೆ ಹೋಗುತ್ತಿದ್ದಾಗ ಅದೇ ವೇಳೆಗೆ ನಮ್ಮ ಹಿಂದುಗಡೆಯಿಂದ ಅಂದರೆ ಜೇವರ್ಗಿ ಕಡೆಯಿಂದ ಬಂದ ಕಾರ್‌ ನಂ ಕೆ.ಎ32ಎಮ್.ಎ 0033 ನೇದ್ದರ ಚಾಲಕ ತನ್ನ ಕಾರ್‌ ಅನ್ನು ಅತಿವೇಗ ಮತ್ತು ಅಲಕ್ಷ್ಯತನದಿಂದ ನಡೆಸಿಕೊಂಡು ಬಂದು ನಾವು ಕುಳಿತು ಹೋಗುತ್ತಿದ್ದ ಸೈಕಲ್‌ಗೆ ಹಿಂದಿನಿಂದ ಡಿಕ್ಕಿ ಪಡಿಸಿ ನಮಗೆ ರೋಡಿನ ಮೇಲೆ ಬಿಳಿಸಿ ನನಗೆ ಮತ್ತು ಹಿಂದೆ ಕುಳಿತಿದ್ದ ದೌಲತರಾಯ ತಂದೆ ಮಲ್ಲಪ್ಪ ಸುಣುರ ರವರಿಗೆ ಸಾದಾ ಹಾಗು ಭಾರಿ ರಕ್ತಗಾಯಪಡಿಸಿ ತನ್ನ ಕಾರ್‌ಸಮೇತ ಓಡಿ ಹೋಗಿದ್ದು ಗಾಯಾಳು ದೌಲತರಾಯನಿಗೆ ಕಲಬುರಗಿಯ ಯುನೈಟೆಡ್‌ ಆಸ್ಪತ್ರೆಗೆ ಚಿಕಿತ್ಸೆ ಕುರಿತು ದಾಖಲು ಮಾಡಿದ್ದು ನಂತರ ಹೆಚ್ಚಿನ ಉಪಚಾರ ಕುರಿತು ಸೋಲಾಪುರಕ್ಕೆ ಹೋಗುತ್ತಿದ್ದಾ ಮಾರ್ಗ ಮಧ್ಯ ಮೃತಪಟ್ಟಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಂಶದ ಮೇಲಿಂದ ಜೇವರ್ಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹೆಚ್ಚುವರಿ ಸಂಚಾರಿ ಠಾಣೆ : ದಿನಾಂಕ 03-03-2015 ರಂದು ಸಾಯಂಕಾಲ ಶ್ರೀ ದೇವರಾಜ ತಂದೆ ಪರಮೇಶ್ವರರಾವ ಸಾ: ಶ್ರೀಹರಿ ನಗರ ಹಳೆ ಜೆವರ್ಗಿ ರೋಡ  ಕಲಬುರಗಿ ರವರ ಮಗನಾದ ನಿತೀನ ಇತನು ತಮ್ಮ  ಮನೆಯ ಎದುರಿನ ರೋಡ ಹತ್ತಿರ ಹೋಗಿ ನಿಂತಿದ್ದನ್ನು ಅದೇ ಸಮಯಕ್ಕೆ  ಕಾರ ನಂಬರ ಕೆಎ-32 ಟಿ.ಪಿ ನಂಬರ 30737 ರ ಚಾಲಕನು ಹಳೆ ಜೆವರ್ಗಿ ರೋಡದಿಂದ ತನ್ನ ಕಾರನ್ನು ಅತೀವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ಫಿರ್ಯಾದಿ ಮಗನಾದ ನಿತೀನ ಇತನಿಗೆ ಡಿಕ್ಕಿ ಪಡಿಸಿ ಅಪಘಾತ ಮಾಡಿ ನಿತೀನ ಇತನಿಗೆ ಬಲಗಡೆ ತಲೆಗೆ ಭಾರಿಪೆಟ್ಟು ಬಿದ್ದು ರಕ್ತ ಬರುತ್ತಿತ್ತು, ಬಲಗಲ್ಲದ ಮೇಲೆ ತರಚಿದಗಾಯ, ಬಲಗಾಲು, ಎಡಗಾಲು ಮೊಳಕಾಲಿಗೆ ತರಚಿದಗಾಯ, ಎಡಗೈ ಭುಜಕ್ಕೆ ತರಚಿದಗಾಯ ಮಾಡಿ ಕಾರ ಸಮೇತ ಹೊರಟು ಹೋಗಿರುತ್ತಾನೆ ಅಂತಾ ಸಲ್ಲಿಸಿದ ದೂರು ನಸಾರಾಂಶದ ಮೇಲಿಂದ ಹೆಚ್ಚುವರಿ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.