POLICE BHAVAN KALABURAGI

POLICE BHAVAN KALABURAGI

09 November 2012

GULBARGA DISTRICT


ಗುಲಬರ್ಗಾ ಜಿಲ್ಲಾ ಪೊಲೀಸರ್ ಕಾರ್ಯಚರಣೆ,
ಅನಧಿಕೃತ ಆಯುಧಗಳು ಮಾರಾಟ ಮಾಡುತ್ತಿರುವ ಆರೋಪಿತರ ಬಂದನ,
       
ಇತ್ತಿಚಿಗೆ ಗುಲಬರ್ಗಾ ನಗರದಲ್ಲಿ ಅನಧಿಕೃತವಾಗಿ ಪರವಾನಿಗೆ ಇಲ್ಲದೇ ಆಯುಧಗಳನ್ನು ಮಾರಾಟ ಮಾಡುತ್ತಿರುವ ಬಗ್ಗೆ ಖಚಿತ ಮಾಹಿತಿ ಬಂದ್ದಿದ್ದು, ಮಾಹಿತಿ ಅನ್ವಯ  ದಾಳಿ ಮಾಡಿ ಕ್ರಮ ಜರೂಗಿಸಲು ಶ್ರೀ ಪ್ರವೀಣ ಮಧುಕರ ಪವಾರ  ಪೊಲೀಸ್ ಅಧೀಕ್ಷಕರು, ಗುಲಬರ್ಗಾರವರು ಎರಡು ವಿಶೇಷ ತಂಡಗಳನ್ನು ರಚಿಸಿದ್ದು, 1) ಶ್ರೀ ಎಸ್. ಎಸ್. ಹುಲ್ಲೂರ ಪೊಲೀಸ್ ಇನ್ಸಪೇಕ್ಟರ ಡಿಸಿಐಬಿ ಘಟಕ ಗುಲಬರ್ಗಾ, ಡಿಸಿಐಬಿ ಘಟಕದ ಸಿಬ್ಬಂದಿಯವರಾದ ಎ.ಎಸ.ಐ ಬಸವರಾಜ, ಹೆಚಸಿ ಗಳಾದ ಬಸವರಾಜ ಪಾಟೀಲ, ಪ್ರಕಾಶ, ಅಣ್ಣರಾವ, ಶಿವಯೋಗಿ, ಲಕ್ಕಪ್ಫಾ, ವಿಜಯಕುಮಾರ, ಅಣ್ಣಪ್ಪಾ ಬೆಳ್ಳಿ, ವಾಹನ ಚಾಲಕ ವೀರಣ್ಣಾ ಎಪಿಸಿ, ಮತ್ತು 2) ಶ್ರೀ ಶರಣಬಸವೇಶ್ವರ ಪೊಲೀಸ್ ಇನ್ಸಪೇಕ್ಟರ ಬ್ರಹ್ಮಪೂರ ಠಾಣೆ, ಮತ್ತು ಪಿ.ಎಸ.ಐ ಬಸವರಾಜ ತೇಲಿ ಪಿ.ಎಸ.ಐ ರಾಘವೇಂದ್ರ  ನಗರ ಠಾಣೆ, ಮತ್ತು ಹಾಗು ರಾಘವೇಂದ್ರ ನಗರ ಠಾಣೆಯ ಹೆಚ.ಸಿ ಪಾಂಡುರಂಗ, ಮತ್ತು (ಎ) ಉಪ-ವಿಭಾಗ ಅಪರಾದ ಪತ್ತೆ ದಳದ  ಸಿಬ್ಬಂದಿಗಳಾದ ರಪೀಕ, ದೇವಿಂದ್ರ, ಗುಲಬರ್ಗಾ ರವರು  ನಗರದ ಮಹ್ಮದಿ ಚೌಕ ಹತ್ತಿರ ದಾಳಿ ಮಾಡಿ, 1) ಪ್ರಕಾಶ ತಂದೆ ಕುಪ್ಪಣ್ಣ ಭೂತಿ,ಸಾ|| ಅಪಜಲಪೂರ, 2) ರವಿಕಾಂತ ತಂದೆ ನಾಗೇಂದ್ರಪ್ಪಾ ಬೈರಾಮಡಗಿ ಸಾ|| ಬೈರಾಮಡಗಿ ತಾ|| ಅಪಜಲಪೂರ, 3) ಸಿದ್ದಾರ್ಥ ತಂದೆ ಅಶೋಕ ಲಾಖೆ ಸಾ|| ಕೋರ್ಟ ರೋಡ ಗುಲಬರ್ಗಾ ಇವರನ್ನು ದಸ್ತಗಿರಿ ಮಾಡಿ ಇವರ ವಶದಿಂದ ಒಂದು ನಾಡ್  ರಿವಾಲ್ವಾರ, ಒಂದು ನಾಡ್ ಪಿಸ್ತೂಲ್, ನಾಲ್ಕು ಜೀವಂತ ಮದ್ದು ಗುಂಡುಗಳು,ಹೀಗೆ ಒಟ್ಟು ಅ||ಕಿ|| 80,000/-  ಬೆಲೆ ಬಾಳುವ ಆಯುಧಗಳನ್ನು ಜಪ್ತಿ ಮಾಡಿ ಕ್ರಮ ಜರೂಗಿಸಿರುತ್ತಾರೆ.
ಈ ಎರಡು ವಿಶೇಷ ತಂಡಗಳು ಶ್ರೀ ಕಾಶಿನಾಥ ತಳಕೇರಿ ಹೆಚ್ಚುವರಿ ಪೊಲೀಸ್ ಅಧೀಕ್ಷಕರು,  ಶ್ರೀ ಭೂಷಣೆ ಭೋರಸೆ ಎ.ಎಸ.ಪಿ (ಎ) ಉಪ-ವಿಭಾಗ ಗುಲಬರ್ಗಾ ರವರ ಮಾರ್ಗದರ್ಶನದಲ್ಲಿ ಕಾರ್ಯ ನಿರ್ವಹಿಸಿರುತ್ತಾರೆ.
ಈ ಎರಡು ವಿಶೇಷ ತನಿಖಾ ತಂಡಗಳ ಪತ್ತೆ ಕಾರ್ಯವನ್ನು  ಶ್ರೀ ಪ್ರವೀಣ ಮಧುಕರ ಪವಾರ  ಪೊಲೀಸ್ ಅಧೀಕ್ಷಕರು, ಗುಲಬರ್ಗಾರವರು ಶ್ಲಾಘಿಸಿರುತ್ತಾರೆ.  

GULBARGA DISTRICT REPORTED CRIMES


ದರೋಡೆ ಪ್ರಕರಣ:
ಶಹಾಬಾದ ನಗರ ಪೊಲೀಸ ಠಾಣೆ:ಶ್ರೀ ಸುಭಾಷ ತಂದೆ ಗಿರೇಪ್ಪಾ ಬಾಲಖೆಡ್ ಸಾ:ರೇವಣಸಿದ್ದೇಶ್ವರ ಕಾಲೋನಿ ಗುಲ್ಬರ್ಗಾರವರು ನಾನು ದಿನಾಂಕ:08/11/2012 ರಂದು ನಮ್ಮ ಮಾಲೀಕರ ಟ್ಯಾಂಕರ ನಂ.ಎಮ್‌.ಹೆಚ್‌-11,ಎಮ್‌‌-3991 ನೇದ್ದರಲ್ಲಿ ಸೀಮೆಎಣ್ಣೆ ನಂದೂರ ಡಿಪೋದಲ್ಲಿ ತುಂಬಿಕೊಂಡು ಚಿತ್ತಾಪುರ ತಾಲ್ಲೂಕಿನ ಹಳ್ಳಿಗಳಾದ ನಾಲವಾರ ಗೇಟ್‌ ಹತ್ತಿರ ಇರುವ ಬಾಲು ನಾಯಕ ತಾಂಡಾ, ಮಾರಡಿಗ್ರಾಮ, ಕೊಲ್ಲೂರ ಗ್ರಾಮ ವಿ.ಎಸ್‌‌.ಎಸ್‌.ಎನ್‌, ಕನಗನಹಳ್ಳಿ, ಸನ್ನತಿ, ರಾಂಪೂರ ಹಳ್ಳಿ, ಶಾಂಫೂರ ಹಳ್ಳಿ, ತರಕಸಪೇಟ ಗ್ರಾಮ, ಸೂಗೂರ [ಎನ್‌] ಗ್ರಾಮಗಳಿಗೆ ಹೋಗಿ ಸೀಮೆಎಣ್ಣೆ ಕೊಟ್ಟು ವಾಪಾಸ ಗುಲಬರ್ಗಾಕ್ಕೆ ವಾಡಿ ಬೈಪಾಸ ರೋಡಿನಿಂದ ರಾವೂರ ಮುಖಾಂತರ ಬರುವಾಗ ಭಂಕೂರ ಕ್ರಾಸ ದಾಟಿ ಬ್ರೀಡ್ಜ ಹತ್ತಿರ 10.30 ಗಂಟೆ ಸುಮಾರಿಗೆ ಹಿಂದುಗಡೆಯಿಂದ 4 ಮೋಟಾರ ಬೈಕ ಮೇಲೆ 7-8 ಜನರು ಬಂದು ಟ್ಯಾಂಕರ ಎದರುಗಡೆ ಬಂದು ಟ್ಯಾಂಕರ ತಡೆದು ಹೆದರಿಸಿ ಮಚ್ಚು ತೊರಿಸಿ ಕೈಯಿಂದ ಹೊಡೆದು ಒಂದು ಖಾಕಿ ಕಲರ ಬ್ಯಾಗಿನಲ್ಲಿದ್ದ 1,85,500/-ರೂ ಹಣ, 3 ಮೊಬೈಲ ಸೆಟಗಳು ಅ.ಕಿ.3700/-,ಒಂದು  ಕ್ಯಾಲಕುಲೇಟರ ಅ.ಕಿ. 80/-  ಒಂದು ಕನ್ನಡಕ ಅ.ಕಿ. 400/- ರೂ ನೇದ್ದವುಗಳನ್ನು  ಹೀಗೆ ಒಟ್ಟು 1,89,680/- ರೂ. ನೇದ್ದವುಗಳನ್ನು ದರೋಡೆ ಮಾಡಿಕೊಂಡು ಹೋಗಿರುತ್ತಾರೆ. ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 147/2012 ಕಲಂ, 395 ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಮುಂಜಾಗ್ರತೆ ಕ್ರಮ:
ಗುಲಬರ್ಗಾ ಗ್ರಾಮೀಣ ಪೊಲೀಸ ಠಾಣೆ:ದಿನಾಂಕ:-08/11/2012 ರಂದು ಮುಂಜಾನೆ 09:30 ಗಂಟೆಗೆ ಫಿರ್ಯಾದಿ ತಮ್ಮ ಠಾಣಾ ವ್ಯಾಪ್ತಿಯಲ್ಲಿ ಪೆಟ್ರೋಲಿಂಗ ಮಾಡುತ್ತಾ ಹಾಗರಗಾ ಕ್ರಾಸ ಕಡೆಗೆ ಹೋದಾಗ ಹಾಗರಗಾ ಕ್ರಾಸದಲ್ಲಿ ಸರಫರಾಜ ತಂದೆ ಎಂ.ಡಿ ಇಸಾ ವಯಾ:24 ವರ್ಷ ಜಾ:ಮುಸ್ಲಿಂ ಸಾ:ನೂರಾನಿ ಮೊಹಲ್ಲಾ ಹಾಗರಗಾ ಕ್ರಾಸ ಗುಲಬರ್ಗಾ ಇತನು ರೋಡಿನ ಮೇಲೆ ನಿಂತುಕೊಂಡು ಸಾರ್ವಜನಿಕರನ್ನು ಉದ್ದೇಶಿಸಿ ಅವಾಶ್ಚವಾಗಿ ಬೈಯುತ್ತಾ ಹೋಗಿ ಬರುವ ಸಾರ್ವಜನಿಕರ ನೆಮ್ಮದಿಯನ್ನು ಹಾಳು ಮಾಡುತ್ತಿದ್ದರಿಂದ ಸದರಿಯವನಿಗೆ ಮುಂಜಾಗ್ರತಾ ಕ್ರಮ ಅಡಿಯಲ್ಲಿ ದಸ್ತಗಿರಿ ಮಾಡಿ ಠಾಣೆ ಗುನ್ನೆ ನಂ: 359/2012 ಕಲಂ, 110 (ಈ) (ಜಿ) ಸಿ.ಅರ್.ಪಿ.ಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಅಪಘಾತ ಪ್ರಕರಣ:
ಗುಲಬರ್ಗಾ ಗ್ರಾಮೀಣ ಪೊಲೀಸ ಠಾಣೆ:ಶ್ರೀ ದತ್ತಪ್ಪಾ ತಂದೆ ಲಿಂಗಪ್ಪ ಸುಂಟನೂರ ಸಾ:ಹತಗುಂದಾ ತಾ:ಜಿ:ಗುಲಬರ್ಗಾ ರವರು ನಾನು ದಿ:08-11-2012 ರಂದು ಮುಂಜಾನೆ ಶಿವಪುತ್ರ ಮದರಿ ಇತನು ನಡೆಯಿಸುತಿದ್ದ ಬಜಾಜ ಡಿಸ್ಕವರಿ ಮೋಟಾರ ಸೈಕಲ್ ನಂ.ಕೆ.ಎ32 ಇಬಿ-6690 ನೇದ್ದರ ಹಿಂದೆ ಕುಳಿತು  ಹತಗುಂದಾ ಗ್ರಾಮದಿಂದ ಗುಲಬರ್ಗಾಕ್ಕೆ ಬರುತ್ತಿರುವಾಗ ಗುಲಬರ್ಗಾ- ಆಳಂದ ರೋಡನ ಕೆರಿಬೋಸಗಾ ದಾಟಿ ಸಂತೋಷ ದಾಬಾದ ಎದರುಗಡೆ ಮೋಟಾರ ಸೈಕಲ್ ಚಾಲಕ ಶಿವಪುತ್ರ ಇತನು ಮೋಟಾರ ಸೈಕಲನ್ನು ಅತೀವೇಗ ಮತ್ತು ನಿಸ್ಕಾಳಜಿತನದಿಂದ ನಡೆಯಿಸಿ ರೋಡಿನ ಬದಿಗೆ ಅಪಘಾತ ಪಡಿಸಿ ನನಗೆ ಮತ್ತು ಶಿವಪುತ್ರ ಇತನಿಗೆ ಭಾರಿಗಾಯಗಳಾಗಿರುತ್ತವೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 360/2012 ಕಲಂ, 279, 338 ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.