POLICE BHAVAN KALABURAGI

POLICE BHAVAN KALABURAGI

07 March 2015

Kalaburagi District Reported Crimes

ಮಟಕಾ ಜೂಜಾಟದಲ್ಲಿ ನಿರತ ವ್ಯಕ್ತಿಯ ಬಂಧನ :
ಅಫಜಲಪೂರ ಠಾಣೆ : ದಿನಾಂಕ 07-03-2015 ರಂದು ಅಫಜಲಪೂರ ಪಟ್ಟಣದ ಬಸವೇಶ್ವರ ಚೌಕ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿ ನಿಂತುಕೊಂಡು ಹೊಗಿ ಬರುವ ಜನರಿಗೆ 1 ರೂಪಾಯಿಗೆ 80 ರೂಪಾಯಿ ಗೆಲ್ಲರಿ ಅಂತಾ ಅನ್ನುತ್ತಾ ಸಾರ್ವಜನಿಕರ ಮನವೂಲಿಸಿ ಅವರಿಂದ ಹಣ ಪಡೆದು, ಅವರಿಗೆ ಅಂಕಿ ಸಂಖ್ಯೆ ಬರೆದ ಮಟಕಾ ಚೀಟಿಗಳನ್ನು ಕೊಡುತ್ತಿದ್ದಾನೆ ಅಂತಾ ಬಾತ್ಮಿ ಬಂದ ಮೇರೆಗೆ ಪಿ.ಎಸ್.ಐ. ಅಫಜಪೂರ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಸ್ಥಳಕ್ಕೆ ಹೋಗಿ ಸ್ವಲ್ಪ ದೂರು  ಮರೆಯಾಗಿ ನಿಂತು ನೋಡಲು ಬಸವೇಶ್ವರ ಚೌಕ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿ ನಿಂತುಕೊಂಡು ಸಾರ್ವಜನಿಕರಿಂದ ಹಣ ಪಡೆದು ಅವರಿಗೆ ಅಂಕಿ ಸಂಖ್ಯೆ ಬರೆದ ಮಟಕಾ ಚೀಟಿಗಳು ಕೊಡುತ್ತಿದ್ದದನ್ನು ಖಚಿತ ಪಡಿಸಿಕೊಂಡು ದಾಳಿ ಮಾಡಿ ಹಿಡಿದು ಸದರಿಯವನ ಹೆಸರು ವಿಳಾಸ ವಿಚಾರಿಸಲಾಗಿ ಬಸವರಾಜ ತಂದೆ ಚನ್ನವೀರಪ್ಪಾ ಮಲಗಾಣ ಸಾ|| ಅಫಜಲಪೂರ ಅಂತಾ ತಿಳಿಸಿದ್ದು, ಸದರಿಯವನ ವಶದಿಂದ ಮಟಕಾ ಜೂಜಾಟಕ್ಕೆ ಸಂಬಂಧ ಪಟ್ಟ 315/- ರೂಪಾಯಿ ನಗದು ಹಣ ಹಾಗೂ ಅಂಕಿ ಸಂಖ್ಯೆ ಬರೆದ ಒಂದು ಮಟಕಾ ಚೀಟಿ ಮತ್ತು ಒಂದು ಬಾಲ ಪೆನ್ನ ವಶಪಡಿಸಿಕೊಂಡು ಸದರಿಯವನೊಂದಿಗೆ ಅಫಜಲಪೂರ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.
ಹಲ್ಲೆ ಪ್ರಕರಣ :
ಅಫಜಲಪೂರ ಠಾಣೆ : ಶ್ರೀಮತಿ ರಾಜಶ್ರೀ ಗಂಡ ಶೀಶೈಲ ಇಬೂತಿ ಇವರ ಗಂಡ ಶ್ರೀಶೈಲ ಇವರು ಸುಮಾರು 2 ವರ್ಷಗಳ ಹಿಂದೆ ತೀರಿಕೊಂಡಿರುತ್ತಾರೆ. ನನ್ನ ಗಂಡನಿಗೆ ಶರಣಪ್ಪಾ ಮತ್ತು ದೇವಾ ಅಂತಾ 2 ಜನ ತಮ್ಮಂದಿರರು ಇರುತ್ತಾರೆ. ನಾವೆಲ್ಲರು ಬೇರೆ ಬೇರೆಯಾಗಿ ಸಂಸಾರ ಮಾಡುತ್ತಿರುತ್ತೇವೆ. ನನ್ನ ಮೈದುನ ದೇವಾ ಮತ್ತು ಅವನ ಹೆಂಡತಿ ಜೋತಿ ರವರು ಮನೆ ಕೆಲಸದ ವಿಷಯಕ್ಕೆ ಸುಮಾರು ಸಲ ನನ್ನೊಂದಿಗೆ ತಕರಾರು ಮಾಡಿಕೊಳ್ಳುತ್ತಾ ಬಂದಿರುತ್ತಾರೆ.   ದಿನಾಂಕ 04-03-2015 ರಂದು ಜೋತಿ ಇವಳು 1;00 ಪಿ.ಎಂ ಸುಮಾರಿಗೆ ತಮ್ಮ ಮನೆ ಸ್ವಚ್ಚ ಮಾಡಿ ಮನೆಯಲ್ಲಿದ್ದ ಹಳೆ ಸಾಮಾನುಗಳನ್ನು ನಮ್ಮ ಮನೆಯಲ್ಲಿ ತಂದು ಇಡುತ್ತಿದ್ದಾಗ ನಾನು ಜೋತಿ ಇವಳಿಗೆ ಈ ಸಾಮಾನುಗಳನ್ನು ನಮ್ಮ ಮನೆಯಲ್ಲಿ ಯಾಕ ತಂದು ಇಟ್ಟಿದಿ ಅಂತಾ ಕೇಳಿದ್ದಕ್ಕೆ ನಾನು ತಂದು ಇಡಕ್ಕಿನೆ ನೀ ಏನ ಮಾಡಕೋತಿ ಮಾಡಕು ಅಂತಾ ಅಂದಳು ಆಗ ನಾನು ನಿಮ್ಮ ಮನೆ ಸ್ವಚ್ಚ ಇಟ್ಟುಕೊಂಡು ನಮ್ಮ ಮನೆ ಯಾಕ ಹೊಲಸ ಮಾಡತಿರಿ ನಿಮಗ ನಾಚೀಕೆ ಬರಲ್ಲಾ ಅಂತಾ ಅಂದಿದ್ದಕ್ಕೆ ಜೋತಿ ಇವಳು ಏನೆ ರಂಡಿ ನನಗೆ ಎದುರು ಮಾತಾಡತಿಯಾ ಅಂತಾ ಅಂದು ನನಗೆ ಕೈಯಿಂದ ಕಪಾಳ ಮೇಲೆ ಹೊಡೆದಳು, ನಂತರ ಅಲ್ಲೆ ಇದ್ದ ಅವಳ ಗಂಡ ದೇವಾ ಇವನು ನನ್ನ ಹತ್ತಿರ ಬಂದು ನನಗೆ ಕೈ ಹಿಡಿದು ಎಳೆದು ಏನೇ ರಂಡಿ ನನ್ನ ಹೆಂಡತಿಗೆ ಬೈತಿಯಾ ಅಂತಾ ಅಂದು ಅಲ್ಲೆ ಬಿದ್ದಿದ್ದ ಬಡಿಗೆಯಿಂದ ನನ್ನ ಎಡಗಡೆ ತೊಡೆಯ ಮೇಲೆ ಜೋರಾಗಿ ಹೊಡೆದು ಭಾರಿ ಗುಪ್ತಗಾಯ ಪಡಿಸಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ  ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪಘಾತ ಪ್ರಕರಣ :
ಹೆಚ್ಚುವರಿ ಸಂಚಾರಿ ಠಾಣೆ : ಶ್ರೀ ಶಂಬಾಜಿ ಇವರಿಗೆ ನೋಡಲು ಮಾತನಾಡುವ ಸ್ಥಿತಿಯಲ್ಲಿ ಇರಲಿಲ್ಲಾ ಅವರ ಜೊತೆಯಲ್ಲಿದ್ದ ಲೋಕಪ್ಪ ತಂದೆ ರಾವತಪ್ಪ ಇವರನ್ನು ವಿಚಾರಿಸಲು ದಿನಾಂಕ:28/02/2015 ರಂದು ಸಾಯಂಕಾಲ ಫಿರ್ಯಾದಿಯ ಮತ್ತು ಸೋಮಲಿಂಗ ತಂದೆ ವಿಠಲ ಬುರಾವ ಬಸ್ ನಿಲ್ದಾಣದ ಒಳಗಡೆ ನಿಂತಿರುವಾಗ  ಶಂಬಾಜಿ ಇವರು  ಕಲಬುರಗಿ ನಗರದ ಕೇಂದ್ರ ಬಸ್ ನಿಲ್ದಾಣದ ಒಳಗೆ ಇರುವ ಶೌಚಾಲಯಕ್ಕೆ ಏಕಿ (ಒಂದಕ್ಕೆ) ಮಾಡುವ ಸಲುವಾಗಿ ನಡೆದುಕೊಂಡು ಹೋಗುತ್ತಿದ್ದಾಗ ನೃಪ ತುಂಗಾ ಬಸ್ ನಿಲ್ಲುವ ಸ್ಥಳದ ಕಡೆಯಿಂದ ಎನ್.ಇ. ಕೆ.ಆರ್.ಟಿ.ಸಿ. ಬಸ್ ನಂ:  ಕೆಎ 32 ಎಫ್ 1910 ರ ಚಾಲಕನು ತನ್ನ ಬಸ್ ನ್ನು ಅತಿವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ಶಂಬಾಜಿಗೆ  ಡಿಕ್ಕಿ ಪಡಿಸಿ ಅಪಘಾತಮಾಡಿ ಭಾರಿ ರಕ್ತ ಗಾಯಗೊಳಿಸಿ ಬಸ್ ಸಮೇತ ಹೊರಟು ಹೋಗಿದ್ದು  ಈ ಬಗ್ಗೆ ಪ್ರಕರಣ ದಾಖಲಾಗಿದ್ದು  ಶ್ರೀ ಸುರೇಶ ತಂದೆ ಸಂಬಾಜಿ ಮಾನೆ ರವರು ಇಂದು ದಿನಾಂಕ: 04/03/2015 ರಂದು ಠಾಣೆಗೆ ಬಂದು ಹೇಳಿಕೆ ನೀಡ್ಡಿದ್ದೆನೆಂದರೆ ದಿನಾಂಕ:28/02/2015 ರಂದು ಎನ್.ಈ.ಕೆ.ಆರ್.ಟಿ.ಸಿ ಬಸ ನಂಬರ ಕೆಎ-32 ಎಫ-1910 ರ ಚಾಲಕನಾದ ಜಹಾಂಗೀರಮಿಯಾ ಇತನು  ತನ್ನ ಬಸ್ಸನ್ನು ಅತೀವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ನಡೆದುಕೊಂಡು ಹೋಗುತ್ತಿರುವ ನನ್ನ ತಂದೆಯಾದ ಸಂಬಾಜಿ ಇವರಿಗೆ ಡಿಕ್ಕಿ ಪಡಿಸಿ ಅಪಘಾತ ಮಾಡಿ ಅವರಿಗೆ ಭಾರಿಗಾಯಗೊಳಿಸಿದರಿಂದ ದಿನಾಂಕ 28.02.2015 ರಂದು ಕಲಬುರಗಿ ಜಿಲ್ಲಾ ಸರಕಾರಿ ಆಸ್ಪತ್ರೆಯಿಂದ ಹೆಚ್ಚಿನ ಉಪಚಾರ ಕುರಿತು ಸೊಲಾಪೂರ ಯಶೋದರಾ ಆಸ್ಪತ್ರೆಗೆ ಹೋಗುವಾಗ ದಾರಿ ಮದ್ಯ ಅಂಬುಲೇನ್ಸ ವಾಹನದಲ್ಲಿ ರಾತ್ರಿ ನನ್ನ ತಂದೆಯಾದ ಸಂಬಾಜಿ ಇತನು ಮೃತಪಟ್ಟಿದ್ದು ಮೃತ ಪಟ್ಟ ದು:ಖದಲ್ಲಿ ನಮಗೆ ಯಾವುದು ಗೊತ್ತಾಗದೆ ಆತನ ಮೃತ ದೇಹವನ್ನು ನಮ್ಮೂರಿಗೆ ತೆಗೆದುಕೊಂಡು ಹೋಗಿ ನನ್ನ ತಂದೆಯ  ಮೃತ ದೇಹವನ್ನು ನಮ್ಮ ಧಾರ್ಮಿಕ ವಿಧಿ ವಿಧಾನದ ಪ್ರಕಾರ ದಹನ ಮಾಡಿದ್ದು ನಮ್ಮ ತಂದೆ ಸತ್ತ ದು:ಖದಲ್ಲಿ ಪೊಲೀಸ್ ನವರಿಗೆ ಮಾಹಿತಿ ನೀಡಲು ಆಗಿರುವದಿಲ್ಲಾ. ಇಂದು ತಡವಾಗಿ ಠಾಣೆಗೆ ಬಂದಿದ್ದು ತಾವು ಮುಂದಿನ ಕ್ರಮ ಜರುಗಿಸಬೇಕು ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಹೆಚ್ಚುವರಿ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

KALABURAGI DIST REPORTED CRIME

ಆಕ್ರಮವಾಗಿ  ಮದ್ಯ ಮಾರಾಟ ಮಾಡುತ್ತಿದ್ದವನ ಬಂಧನ :
ಅಫಜಲಪೂರ ಠಾಣೆ : ದಿನಾಂಕ 06-03-2015 ರಂದು ಅಫಜಲಪೂರ ಆಶ್ರಯ ಕಾಲೋನಿಯಲ್ಲಿ ಪರಸಪ್ಪಾ ಕುಡಕಿ ರವರ ಮನೆಯ ಮುಂದೆ   ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿ ಅನದಿಕೃತವಾಗಿ ಮದ್ಯ ಮಾರಾಟ ಮಾಡುತ್ತಿದ್ದಾನೆ ಅಂತಾ ಬಾತ್ಮಿ ಬಂದ ಮೇರೆಗೆ ಪಿ.ಎಸ್.ಐ. ಅಫಜಲಪೂರ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಆಶ್ರಯ ಕಾಲೋನಿಗೆ ಹೋಗಿ, ಪರಸಪ್ಪಾ ಕುಡಕಿ ರವರ ಮನೆಯಿಂದ ಸ್ವಲ್ಪ ದೂರು ಮರೆಯಾಗಿ ನಿಂತುಕೊಂಡು ನೋಡಲಾಗಿ, ಪರಸಪ್ಪಾ ಕುಡಕಿ ರವರ ಮನೆ ಮುಂದೆ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿ ತನ್ನ ಹತ್ತಿರ ಒಂದು ಪ್ಲಾಸ್ಟೀಕ ಚೀಲ ಇಟ್ಟುಕೊಂಡು ಹೋಗಿ ಬರುವ ಜನರಿಗೆ ಕರೆದು ಅವರಿಂದ ಹಣ ಪಡೆದು ಚೀಲದಲ್ಲಿದ್ದ ಮದ್ಯದ ಪೌಚಗಳನ್ನು ಕೊಡುತ್ತಿದ್ದುದನ್ನು ಖಚಿತಪಡಿಸಿಕೊಂಡು ದಾಳಿ ಮಾಡಿ ಹಿಡಿದು ಅವನ ಹತ್ತಿರ ಇದ್ದ ಪ್ಲಾಸ್ಟೀಕ ಚೀಲನ್ನು ಚೆಕ್ ಮಾಡಲಾಗಿ, ಸದರಿ ಚೀಲನಲ್ಲಿ ಓಲ್ಡ್ ಟವೇರನ್ ಕಂಪನಿಯ 180 ಎಮ್ ಎಲ್ ಅಳತೆಯ ಮದ್ಯ ತುಂಬಿದ ಒಟ್ಟು 36 ರಟ್ಟಿನ ಪೌಚಗಳು ಇದ್ದವು ಅ||ಕಿ|| 2016/- ರೂ. ಮತ್ತು ಹಾಯ ವರ್ಡ ಕಂಪನಿಯ 90 ಎಮ್.ಎಲ್ ಅಳತೆಯ ಮದ್ಯ ತುಂಬಿದ 72 ರಟ್ಟಿನ ಪೌಚಗಳು ಅ||ಕಿ|| 1,728/- ರೂ ರಷ್ಟು ದೊರೆತವು. ಸದರಿಯವನಿಗೆ ಮದ್ಯದ ಬಗ್ಗೆ ವಿಚಾರಿಸಲಾಗಿ ತಾನು ಯಾವುದೆ ಪರವಾನಿಗೆ ಇಲ್ಲದೆ ಮದ್ಯದ ಪೌಚಗಳನ್ನು ಅಕ್ರಮವಾಗಿ ರಸ್ತೆಯ ಮೇಲೆ ಇಟ್ಟುಕೊಂಟು ಮಾರಾಟ ಮಾಡುತ್ತಿರುವುದಾಗಿ ತಿಳಿಸಿದನು. ಸದರಿ ವ್ಯೆಕ್ತಿಯ ಹೆಸರು ವಿಳಾಸ ವಿಚಾರಿಸಲು ತನ್ನ ಹೆಸರು ಫಕೀರಪ್ಪಾ ಯಮನಪ್ಪಾ ದೊಡಮನಿ ಅಂತಾ ತಿಳಿಸಿದ್ದು ಸದರಿಯವನೊಂದಿಗೆ ಅಫಜಲಪೂರ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.
ಹಲ್ಲೆ ಪ್ರಕರಣಗಳು :
ಅಫಜಲಪೂರ ಠಾಣೆ : ದಿನಾಂಕ 06-03-2015 ರಂದು ಶ್ರೀ ಮಳೆಪ್ಪಾ ತಂದೆ ಸಿದ್ದಪ್ಪ@ಹುಲೆಪ್ಪಾ ಡಾಂಗೆ ಸಾ|| ಮಲ್ಲಿಕಾರ್ಜುನ ಚೌಕ ಅಫಜಲಪೂರ ರವರು ಮತ್ತು ನಮ್ಮ ತಂದೆ ಹಾಗು ನಮ್ಮೋಣಿಯವರೆಲ್ಲರು ಸೇರಿಕೊಂಡು ಮಲ್ಲಿಕಾರ್ಜುನ ಗುಡಿಯಲ್ಲಿ ದಾಸೋಗ ಊಟ ಮಾಡುತ್ತಿದ್ದಾಗ ನಮ್ಮ ಅಣ್ಣತಮ್ಮಕಿಯವನಾದ ಬಸವರಾಜ ತಂದೆ ಮಳೆಪ್ಪಾ ಡಾಂಗೆ ಇವನು ಸರಾಯಿ ಕುಡಿದ ಅಮಲಿನಲ್ಲಿ ನಮ್ಮ ತಂದೆಗೆ ವಿನಾಕಾರಣ ಹೊಡೆಯಲು ಬಂದು ಬಾಯಿ ತಕರಾರು ಮಾಡಿಕೊಳ್ಳುತ್ತಿದ್ದನು, ಆಗ ಅಲ್ಲಿದ್ದ ಬಸವರಾಜ ತಂದೆ ಶಂಕ್ರೆಪ್ಪಾ ಹಳಿಮನಿ, ಹಣಮಂತ ತಂದೆ ಶಿವಣ್ಣಾ ಡಾಂಗೆ ರವರು ಬಿಡಿಸಿ ಕಳುಹಿಸಿರುತ್ತಾರೆ. ನಂತರ 10;15 ಪಿ.ಎಂ ಸುಮಾರಿಗೆ ನಾನು ಸದರಿ ಬಸವರಾಜ ಡಾಂಗೆ ರವರ ಮನೆಗೆ ಹೋಗಿದಾಗ ಮನೆಯ ಮುಂದೆ ಬಸವರಾಜನ ತಂದೆ ಮಳೆಪ್ಪಾ ತಂದೆ ಸಿದ್ದಪ್ಪಾ ಡಾಂಗೆ ರವರು ಇದ್ದರು ಸದರಿಯವರಿಗೆ ನಿಮ್ಮ ಮಗ ಬಸವರಾಜ ಇವನು ನಮ್ಮ ತಂದೆಯಿಂದಿಗೆ ಮಲ್ಲಿಕಾರ್ಜುನ ಗುಡಿಯಲ್ಲಿ ಸರಾಯಿ ಕುಡಿದ ಅಮಲಿನಲ್ಲಿ ವಿನಾಕಾರಣ ಯಾಕೇ ಜಗಳ ತೆಗೆದಿರುತ್ತಾನೆ ಅಂತಾ ಕೇಳಿದಾಗ ಮಳೆಪ್ಪಾ ಇವರು ನನಗೆ ಏ ಸೂಳಿ ಮಗನಾ ನಿಮ್ಮ ಸೊಕ್ಕೆ ಬಹಳ ಆದ ಸುಮ ಸುಮನೆ ನಮ್ಮೊಂದಿಗೆ ಜಗಳ ತೆಗೆಯಲು ಬರುತ್ತಿರಿ ಅಂತಾ ಅಂದು ನನಗೆ ಕೈಯಿಂದ ಕಪಾಳ ಮೇಲೆ ಹೊಡೆದನು, ಆಗ ಅಲ್ಲೆ ಇದ್ದ ಧರೆಪ್ಪಾ ತಂದೆ ಮಳೇಪ್ಪಾ ಡಾಂಗೆ ಇವನು ನನ್ನ ಹತ್ತಿರ ಬಂದು ನನ್ನ ಎಡಗಡೆ ಎದೆಯ ಮೇಲೆ ತನ್ನ ಹಲ್ಲಿಲೆ ಕಚ್ಚಿ ಗಾಯ ಪಡಿಸಿದನು. ಸದರಿ ಮಳೇಪ್ಪಾ ಡಾಂಗೆ ರವರ ಹೆಂಡತಿ ಮಹಾದೇವಿ ಇವರು ಇವತ್ತ ಈ ಮಗನಿಗಿ ಬಿಡಬ್ಯಾಡರಿ ಹೊಡೆದು ಖಲಾಸ ಮಾಡರಿ ಅಂತಾ ಅನ್ನುತ್ತಿದ್ದರು, ಬಸವರಾಜ ಮತ್ತು ರೇವಣಪ್ಪಾ ರವರು ಇಬ್ಬರು ಬಂದು ನನಗೆ ನೆಲದ ಮೇಲೆ ಹಾಕಿ ಕಾಲಿಲೆ ಒದೆಯುತ್ತದ್ದರು. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪಘಾತ ಪ್ರಕರಣಗಳು :
ಹೆಚ್ಚುವರಿ ಸಂಚಾರಿ ಠಾಣೆ : ಶ್ರೀ ಸಂತೋಷ ತಂದೆ ಹಣಮಂತರಾವ ದಿಗಸಂಗಿ ಸಾ: ದೇವಿ ಗುಡಿ ಹತ್ತಿರ ದೇವಿ ನಗರ ಕಲಬುರಗಿ  ರವರು ದಿನಾಂಕ 06-03-2015 ರಂದು ಮದ್ಯಾಹ್ನ 1-00 ಗಂಟೆಗೆ ಶಿವರಾಜ ಇವರು ಮೋ/ಸೈಕಲ ನಂಬರ ಕೆಎ-05 ಹೆಚ್.ಎನ್-2581 ರ ಮೇಲೆ ಹಿಂದುಗಡೆ ಕುಳಿತು ಶಹಾಬಜಾರ ನಾಕಾ ಲಾಲಗೇರಿ ಕ್ರಾಸ ಮುಖಾಂತರವಾಗಿ ಹೋಗುವಾಗ ಎಸ್.ಬಿ.ಟೆಂಪಲ ಹತ್ತಿರ ಬರುವ ನಾಗರಕಟ್ಟಾ ಕ್ರಾಸ ಹತ್ತಿರ ರೋಡ ಮೇಲೆ ಹಿಂದಿನಿಂದ ಯಾವುದೊ ಒಬ್ಬ ಮೋ/ಸೈಕಲ ಸವಾರನು ಅತೀವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ಮೋ/ಸೈಕಲ ಹಿಂದುಗಡೆ ಕುಳಿತ್ತಿದ್ದ ಫಿರ್ಯಾದಿಯ ಬಲಗಾಲಿಗೆ ಡಿಕ್ಕಿ ಪಡಿಸಿ ಅಪಘಾತ ಮಾಡಿ ಭಾರಿಗಾಯಗೊಳಿಸಿ ಮೋ/ಸೈಕಲ ಸಮೇತ ಹೊರಟು ಹೋಗಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಹೆಚ್ಚುವರಿ ಸಂಚಾರಿ ಠಾಣೆಯಲ್ಲಿ  ಪ್ರಕರಣ ದಾಖಲಾಗಿದೆ.
ಹೆಚ್ಚುವರಿ ಸಂಚಾರಿ ಠಾಣೆ : ದಿನಾಂಕ 06-03-2015 ರಂದು ಮದ್ಯಾಹ್ನ 12-00 ಗಂಟೆ ಸುಮಾರಿಗೆ ನನ್ನ ತಮ್ಮನಾದ ಕರಣಪ್ಪಾ ಇತನು ಮದ್ಯ ಸೇವನೆ ಮಾಡಿ ಅಟೋರಿಕ್ಷಾ ನಂಬರ ಕೆಎ-32 ಬಿ-8955 ನೇದ್ದನ್ನು ಆರ್.ಪಿ. ಸರ್ಕಲ ಕಡೆಯಿಂದ ಅತೀವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ರೋಡ ಎಡಬಲ ಕಟ್ಟ ಹೊಡೆದು ಅಟೋ ಶೊ ರೂಮ ಹತ್ತಿರ ಒಮ್ಮೆಲೆ ಬ್ರೇಕ ಹಾಕಿ ಅಟೋರಿಕ್ಷಾ ಪಲ್ಟಿ ಮಾಡಿ ತಲೆಯ ಹಿಂದುಗಡೆ ರಕ್ತಗಾಯ, ಬಲಗಡೆ ರಿಸ್ಟ ಹತ್ತಿರ ರಕ್ತಗಾಯ, ಎಡಗಣ್ಣಿನ ಹುಬ್ಬಿನ ಹತ್ತಿರ ರಕ್ತಗಾಯ, ಬಲಗಾಲು ಮೊಳಕಾಲಿಗೆ ತರಚಿದಗಾಯ, ಬಲಗಾಲು ರಿಸ್ಟ ಹತ್ತಿರ ರಕ್ತಗಾಯ, ಹೊಂದಿರುತ್ತಾನೆ ಅಂತಾ ದ್ದು ಆತನ ಮೇಲೆ ಕಾನೂನು ಕ್ರಮ ಜರುಗಿಸಬೇಕು ಅಂತಾ ಶ್ರೀಮತಿ ಈರಮ್ಮಾ ಗಂಡ ರಮೇಶ ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಹೆಚ್ಚುವರಿ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮೊಸ ಮಾಡಿದ ಪ್ರಕರಣ :
ಅಫಜಲಪೂರ ಠಾಣೆ : ಗ್ರಾಮ ಸ್ವರಾಜ ಯೋಜನಾ ಕಛರಿ ಗ್ರಾಮೀಣಾಬಿವೃದ್ದಿ ಮತ್ತು ಪಂಚಾಯತ ರಾಜ್ ಇಲಾಖೆ ಕಾರ್ಯಾಲಯ  ಬೆಂಗಳೂರ ರವರು ಗ್ರಾಮ ಸ್ವರಾಜ  ಕರ್ನಾಟಕ ಪಂಚಾಯತ ಸಬಲಿಕರಣ ಯೋಜನೆಯಾಗಿದ್ದು, ಈ ಯೋಜನೆಯು ಮಾರ್ಚ -2014 ಕ್ಕೆ ಮುಕ್ತಾಯಗೊಳ್ಳುತ್ತಿದ್ದ, ಅದರಂತೆ ತಮ್ಮ ತಾಲೂಕಾ ಪಂಚಾಯತ ವ್ಯಾಪ್ತಿಯ ಎಲ್ಲಾ ಗ್ರಾಮ ಪಂಚಾಯತಿಗಳಿಗೆ 2011-12 ಮತ್ತು 2012-13 ನೇ ಸಾಲಿನಲ್ಲಿ ಬಿಡುಗಡೆಯಾದ ಹೆಚ್ಚುವರಿ ಅನುದಾನವನ್ನು ಅನುಸ್ಟಾನಗೊಳಿಸಲು ಸಾದ್ಯವಾಗದೆ ಇರುವುದರಿಂದ ಹಾಗೂ ಯೋಜನೆಯು ಮಾರ್ಚ 2014 ಕ್ಕೆ ಮುಕ್ತಾಯಗೊಳ್ಳುತ್ತಿದ್ದು ಉಳಿಕೆಯಾದ ಬಾಕಿ ಅನುದಾನವನ್ನು ಸರ್ಕಾರ  ಹಿಂಪೆಡೆಯಲು ತಿರ್ಮಾನಿಸಿದಂತೆ ಬಾಕಿ ಉಳಿದಿರುವ ಅನುದಾನದ ಮೊತ್ತವನ್ನು ಮುಖ್ಯಸ್ಥರು ಗ್ರಾಮ ಸ್ವರಾಜ ಯೋಜನೆ ಹೆಸರಿನಲ್ಲಿ ಚೆಕ್ ತಗೆದು, ಗ್ರಾಮ ಸ್ವರಾಜ ಯೋಜನಾ ಅನುದಾನವನ್ನು ದಿನಾಂಕ 15-08-2014 ರ ಒಳಗಾಗಿ ಸರ್ಕಾರಕ್ಕೆ  ಹಿಂದಿರುಗಿಸಲು ಸೂಚಿಸಿ ಮುಖ್ಯ ಕಚೇರಿಯಿಂದ ದಿನಾಂಕ 28-01-2014 ರಂದು ಈ ಮೇಲ್ ಮೂಖಾಂತರ ನಮ್ಮ ಕಾರ್ಯಾಲಯಕ್ಕೆ ಒಂದು ಪತ್ರ ಮತ್ತು ಅದಕ್ಕೆ ಒಂದು ಮಾದರಿ ನಮೂನೆ ಪತ್ರವನ್ನು ಲಗತ್ತಿಟ್ಟು ಪತ್ರವನ್ನು ಕಳುಹಿಸಿರುತ್ತಾರೆ. ಅದಲ್ಲದೆ ಮತ್ತೆ 3-4 ಸಲ ಸದರಿ ವಿಷಯವಾಗಿ ಬಾಕಿ ಹಣವನ್ನು ಸಂದಾಯ ಮಾಡುವಂತೆ ಪತ್ರವನ್ನು ನಮ್ಮ ಕಳುಹಿಸಿರುತ್ತಾರೆ, ಅದರಂತೆ ಆ ಸಮಯದಲ್ಲಿ ನಮ್ಮ ಕಾರ್ಯಾಲಯದಲ್ಲಿ ದಿನಗೂಲಿಯ ಮೇಲೆ ಕೆಲಸ ಮಾಡುವ ಗ್ರಾಮ ಸ್ವರಾಜ ಕಂಪ್ಯೂಟರ ಆಪರೇಟರ ಆದ ಬಸವರಾಜ ತಂದೆ ಸಿದ್ದಾರಾಮ ಅಲ್ಲಾಪೂರ ಸಾ|| ರಾಮನಗರ ಈತನು ನಮ್ಮ ತಾಲೂಕಿನ ಗ್ರಾಮ ಪಂಚಾಯತಿಗಳಿಗೆ ಮುಖ್ಯ ಕಚೆರಿಯಿಂದ ಬಂದ ಪತ್ರ ಮತ್ತು ಮಾದರಿ ನಮೂನೆಯನ್ನು ಲಗತ್ತಿಟ್ಟ ಪತ್ರವನ್ನು ಕಳುಹಿಸಿರುತ್ತಾನೆ. ದಿನಾಂಕ 04-03-2015 ರಂದು ಬೆಂಗಳೂರಿನ ನಮ್ಮ ಇಲಾಖೆಯ ಮುಖ್ಯ ಕಚೇರಿಯಿಂದ ನಿಮ್ಮ ತಾಲೂಕ ಪಂಚಾಯತ ಕಾರ್ಯಲಯ ವ್ಯಾಪ್ತಿಯ ಗ್ರಾಮ ಪಂಚಾಯತಿಗಳಿಂದ ಗ್ರಾಮ ಸ್ವರಾಜ ಯೋಜನೆಯ ಬಾಕಿ ಹಣ ಇನ್ನು ಸಂದಾಯ ವಾಗಿರುವುದಿಲ್ಲ ಎಂದು ಅದಿಕೃತವಾಗಿ ತಿಳಿಸಿದ ಮೇರೆಗೆ ನಾನು ಗ್ರಾಮ ಪಂಚಾಯತ ಅಬಿವೃದ್ದಿ ಅದಿಕಾರಿಗಳಿಗೆ ಗ್ರಾಮ ಸ್ವರಾಜ ಬಾಕಿ ಹಣವನ್ನು ಸಂದಾಯ ಮಾಡುವಂತೆ ಸೂಚಿಸಲು ತಿಳಿಸಿದಾಗ ಗ್ರಾಮ ಪಂಚಾಯತ ಪಿ.ಡಿ.ಓ ರವರುಗಳು ಮಾದರಿ ನಮೂನೆಯಲ್ಲಿದ್ದ 62115372832 ಈ ಖಾತೆಗೆ ಹಣ ಸಂದಾಯ ಮಾಡಿದ ಬಗ್ಗೆ ದಾಖಲಾತಿಗಳನ್ನು ಕೊಟ್ಟು ಸಂದಾಯ ಮಾಡಿರುತ್ತೆವೆ ಎಂದು ತಿಳಿಸಿರುತ್ತಾರೆ. ಅದರಂತೆ ನಾನು ಸದರಿ ಖಾತೆಯ ಬಗ್ಗೆ ವಿಚಾರ ಮಾಡಲಾಗಿ ಈ ಖಾತೆ ಅಫಜಲಪೂರ ಪಟ್ಟಣದ ಎಸ್,ಬಿ.ಹೆಚ್ ಬ್ಯಾಂಕ ಖಾತೆಯಿದ್ದು, ಆ ಬ್ಯಾಂಕಿಗೆ ಹೋಗಿ ಸದರಿ ಖಾತೆಯ ಬಗ್ಗೆ ಪರಿಶಿಲಿಸಿ ಬ್ಯಾಂಕ ತಕ್ತೆಯನ್ನು ಪಡೆದುಕೊಂಡು ನೋಡಲಾಗಿ ಅವ್ಯವಹಾರವಾಗಿರುವುದು ಕಂಡುಬಂದಿರುತ್ತದೆ. ಸದರಿ ಖಾತೆಯು ನಮ್ಮ ಈ ಹಿಂದೆ ನಮ್ಮ ಕಾರ್ಯಲಯದಲ್ಲಿ ದಿನಗೂಲಿ ಆದಾರದ ಮೇಲೆ ಕೆಲಸ ಮಾಡುತ್ತಿದ್ದ ಗ್ರಾಮ ಸ್ವರಾಜ ಕಂಪ್ಯೂಟರ ಆಪರೇಟರ ಆದ ಬಸವರಾಜ ತಂದೆ ಸಿದ್ದಾರಾಮ ಅಲ್ಲಾಪೂರ ರೆಂಜ ಫಾರೆಷ್ಟ ಆಫೀಸ್ ಎಂಬ ಈತನ ಖಾತೆಗೆ ಅಂದಾಜು 30,51,710/- ರೂ ಜಮಾ ಆಗಿರುವುದು ಗೊತ್ತಾಗಿರುತ್ತದೆ.  ಈ ಹಿಂದೆ ದಿನಗೂಲಿಯ ಮೇಲೆ ಗ್ರಾಮ ಸ್ವರಾಜ ಕಂಪ್ಯೂಟರ ಆಪರೇಟರ ಕೆಲಸ ಮಾಡುವ ಬಸವರಾಜ ತಂದೆ ಸಿದ್ದಾರಾಮ ಅಲ್ಲಾಪೂರ ಸಾ|| ರಾಮನಗರ ಈತನು ಮುಖ್ಯ ಕಚೇರಿಯಿಂದ ಬಂದ ಪತ್ರದ ಜೋತೆಗೆ ಲಗತ್ತಿಟ್ಟಿದ್ದ ಮಾದರಿ ನಮೂನೆಯ ಪತ್ರದಲ್ಲಿ ತನ್ನ ಸ್ವಂತ ಖಾತೆ ನಂಬರ 62115372832 ಎಸ್,ಬಿ,ಹೆಚ್ ಅಫಜಲಪೂರ ಬ್ಯಾಂಕಿನ ಖಾತೆ ನಂಬರ ಹಾಕಿ ಸೃಷ್ಟಿಸಿ ನಮ್ಮ ತಾಲೂಕಾ ಪಂಚಾಯತಿ ವ್ಯಾಪ್ತಿಯ ಗ್ರಾಮ ಪಂಚಾಯತಿಗಳಿಗೆ ಈ ಪತ್ರವನ್ನು ಕಳುಹಿಸಿ 1) ಬಿದನೂರ 2) ಮಣೂರ 3) ಉಡಚಾಣ 4) ಅತನೂರ 5) ಕೋಗನೂರ 6) ಮಾಶಾಳ 7) ಚೌಡಾಪೂರ 8) ಅಳ್ಳಗಿ (ಬಿ) 9) ಬಂದರವಾಡ 10) ದೇವಲಗಾಣಗಾಪೂರ 11) ಬಳೂರ್ಗಿ ಗ್ರಾಮ ಪಂಚಾಯತಗಳಿಂದ ಅಂದಾಜು 30,51,710/- ರೂ ಹಣವನ್ನು ತನ್ನ ಸ್ವಂತಕ್ಕೆ ಪಡೆದು ಸರ್ಕಾರಕ್ಕೆ ಹಾಗೂ ತಾಲೂಕ ಪಂಚಾಯತಿಗೆ ಮತ್ತು ಇಲಾಖೆಗೆ ಹಾಗೂ ಪಿ.ಡಿ.ಓ ರವರುಗಳಿಗೆ ಮೋಸಮಾಡಿರುತ್ತಾನೆ ಅಂತಾ ಶ್ರೀ ರೇವಣಸಿದ್ದಪ್ಪ ಅಕಂಡೆ ಕಾರ್ಯನಿರ್ವಾಹಕ  ಅಧಿಕಾರಿ ತಾಲೂಕ ಪಂಚಾಯತ ಕಾರ್ಯಾಲಯ  ಅಫಜಲಪೂರ ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.