POLICE BHAVAN KALABURAGI

POLICE BHAVAN KALABURAGI

23 February 2012

GULBARGA DIST REPORTED CRIME

ಅಪಘಾತ ಪ್ರಕರಣ:
ಜೇವರ್ಗಿ ಪೊಲೀಸ್ ಠಾಣೆ:
ಶ್ರೀ ನಿಂಗನಗೌಡ ತಂದೆ ಮಲ್ಲಣ್ಣಗೌಡ ಬಿರಾದಾರ ಸಾ:ಕೊಡಚಿ ತಾ: ಜೇವರ್ಗಿ ರವರು ನನ್ನ ಮಗನಾದ ಸಿದ್ದಣ್ಣ ಮತ್ತು ಅವನ ಗೆಳೆಯರಾದ ದೇವಪ್ಪ ಮತ್ತು ಭೀಮಣ್ಣ ಮೂವರು ಕೂಡಿಕೊಂಡು ನಿನ್ನೆ ದಿನಾಂಕ 22-02-2012 ರಂದು ಸಾಯಾಂಕಾಲ ಹೀರೋ ಹೊಂಡಾ ಪ್ಯಾಶನ್ ಮೋಟರ ಸೈಕಲ್ ನಂ ಕೆ.ಎ.31 ಕೆ. 8986 ನೇದ್ದರ ಮೇಲೆ ಕೊಡಚಿಯಿಂದ ಚಿಗರಳ್ಳಿಗೆ ಬರುತ್ತಿದ್ದಾಗ ರಾತ್ರಿ 8-00 ಗಂಟೆಗೆ ಸುಮಾರಿಗೆ ಮುಂದಬಾಳ (ಬಿ) ಗ್ರಾಮದ ಹತ್ತಿರ ಸಿದ್ದಣ್ಣ ಇತನು ಮೋಟರ ಸೈಕಲ್ ನ್ನು ಅತೀವೇಗ ಮತ್ತು ಅಲಕ್ಷತನದಿಂದ ನಡೆಯಿಸಿ ರೋಡಿನ ಸೈಡಿಗೆ ಇದ್ದ ಕಲ್ಲಿಗೆ ಡಿಕ್ಕಿ ಪಡೆಯಿಸಿದ ಪ್ರಯುಕ್ತ ಸಿದ್ದಣ್ಣ ಇತನು ಸ್ಥಳದಲ್ಲಿಯೇ ಮೃತ ಪಟ್ಟಿದ್ದು, ದೇವಪ್ಪ ಮತ್ತು ಭೀಮಣ್ಣನಿಗೆ ಸಾದಾ ಮತ್ತು ಭಾರಿ ಪೆಟ್ಟು ಗಾಯಗಳಾಗಿರುತ್ತವೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ 25/2012 ಕಲಂ 279,337,338,304 (ಎ) ಐ.ಪಿ.ಸಿ ನೇದ್ದರ ಪ್ರಕಾರ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.

GULBARGA DIST REPORTED CRIMES

ಮಾನಭಂಗ ಮತ್ತು ಕೊಲೆಗೆ ಯತ್ನ:
ಶಹಾಬಾದ ನಗರ ಪೊಲೀಸ ಠಾಣೆ :
ಶ್ರೀ ಆನಂದ ತಂದೆ ಶಿವಲಿಂಗಪ್ಪಾ ಹುಂಡೆಕರ ಸಾ:ಶಂಕರವಾಡಿ ರವರು ನನ್ನ ತಂಗಿ ನಂದಿನಿಯು ಕಸ ಚಲ್ಲಲು ಹೋದಾಗ ಶಿವಮುರ್ತಿ ತಂದೆ ಮಹಾದೇವ ಕಮಲಾಪೂರ ಸಾ ಶಂಕರವಾಡಿ ಇವನು ನನ್ನ ತಂಗಿಗೆ ಕೈಹಿಡಿದು ತನ್ನ ಮನೆಯಲ್ಲಿ ಕರೆದುಕೊಂಡು ಹೋಗಿ ಮೈಮೇಲಿನ ಬಟ್ಟೆಗಳನ್ನು ಹರಿದು ಮಾನಭಂಗ ಮಾಡಲು ಯತ್ನಿಸಿದಾಗ ನನ್ನ ತಂಗಿ ಚೀರಾಡುವಾಗ ಇವಳನ್ನು ಮುಗಿಸಿಯೇ ಬಿಡಬೇಕು ಅಂತಾ ತೊಗರಿ ಬೆಳೆಗೆ ಹೊಡೆಯುವ ಕ್ರಿಮಿನಾಶಕ ಔಷಧವನ್ನು ಜಬರ ದಸ್ತಿಯಿಂದ ಕೂಡಿಸಿದ್ದಾನೆ, ಅಷ್ಟರಲ್ಲಿ ನಾನು ಮತ್ತು ಮಹೇಶ ಹೋಗಿ ನೋಡುವಷ್ಟರಲ್ಲಿ ಓಡಿ ಹೋಗಿರುತ್ತಾನೆ. ನಾವು ಉಪಚಾರ ಕುರಿತು ಮೇಡಿಕೇರ ಆಸ್ಪತ್ರೆ ಗುಲಬರ್ಗಾ ಕ್ಕೆ ತಂದು ಸೇರಿಕೆ ಮಾಡಿದ್ದು ಇರುತ್ತದೆ. ಇನ್ನೂ ಮಾತಾಡುವ ಸ್ಥಿತಿಯಲ್ಲಿ ಇರುವುದಿಲ್ಲಾ. ಶಿವಮುರ್ತಿ ಇತನು ನನ್ನ ತಂಗಿಗೆ ಮಾನಭಂಗಮಾಡಿ ಕೊಲೆ ಮಾಡಲು ಪಯತ್ನಿಸಿರುತ್ತಾನೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 17/2012 ಕಲಂ 354, 307 ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಅಪಘಾತ ಪ್ರಕರಣ:
ಗುಲಬರ್ಗಾ ಗ್ರಾಮೀಣ ಠಾಣೆ:
ಶ್ರೀ ಮತಿ ನಾಗಮ್ಮಾ ಗಂಡ ಮಾಹಾಂತೇಶ ನಾಟೀಕರ ಸಾ: ಪಟ್ಟಣ ಗ್ರಾಮ ತಾ:ಜಿ: ಗುಲಬರ್ಗಾರವರು ನಾವು ದಿಃ 21-02-2012 ರಂದು ಅಮವಾಸ್ಯೆ ದಿನವಿದುದ್ದರಿಂದ ಆಫಜಲಪೂರ ತಾಲೂಕಿನ ಫತ್ತರಗಾ ಗ್ರಾಮದ ಭಾಗ್ಯವಂತಿ ದೇವಿಯ ದರ್ಶನಕ್ಕೆ ಹೋಗುವ ಕುರಿತು ನಾನು ಮತ್ತು ನನ್ನ ತಂಗಿ ರಾಚಮ್ಮಾ ಹಾಗು ಅವಳ ಮಗಳಾಧ ರಂಜಿತಾ ಕೂಡಿ ಟಂಟಂ ನಂ ಕೆಎ 32 ಬಿ-1602 ನೇದ್ದರಲ್ಲಿ ಹೋಗುವಾಗ ಸದರ ಟಂಟಂ ಚಾಲಕನು ಅತೀ ವೇಗದಿಂದ ಮತ್ತು ಅಲಕ್ಷತನದಿಂದ ನಡೆಸುತ್ತಾ ಪಟ್ಟಣ ಕ್ರಾಸ ಹತ್ತಿರ ಇರುವ ಪಾಟಿ ಹಳ್ಳದ ಹತ್ತಿರ ಒಮ್ಮಲೇ ಬ್ರೇಕ ಹಾಕಿದ್ದರಿಂದ ಟಂಟಂ ಎಡಬಾಗಕ್ಕೆ ಪಲ್ಟಿಯಾಗಿ ಭಾರಿ ರಕ್ತಗಾಯ ಮತ್ತು ಸಾದಾ ರಕ್ತಗಾಯ ಮತ್ತು ಗುಪ್ತಗಾಯಗಳು ಆಗಿರುತ್ತವೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 59/2012 ಕಲಂ 279, 337, 338 ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಮಟಕಾ ಪ್ರಕರಣ:
ರಾಘವೇಂದ್ರ ನಗರ ಪೊಲೀಸ್ ಠಾಣೆ:
ದಿನಾಂಕ 22-02-2012 ರಂದು ಸಾಯಂಕಾಲ ಸುಮಾರಿಗೆ ಠಾಣಾ ವ್ಯಾಪ್ತಿಯ ಬ್ರಹ್ಮಪೂರ ಬಡಾವಣೆಯ ಶಹಾ ಹುಸೇನಿ ಚಿಲ್ಲಾ ಎದುರಿಗೆ ಸಾರ್ವಜನಿಕ ರಸ್ತೆಯ ಮೇಲೆ ಇಬ್ಬರು ವ್ಯಕ್ತಿಗಳು ಸಾರ್ವಜನಿಕರಿಂದ ಹಣ ಪಡೆದು, ಮಟಕಾ ಜೂಜಾಟ ಬರೆದುಕೊಳ್ಳುತ್ತಿದ್ದ ಬಗ್ಗೆ ಮಾಹಿತಿ ಬಂದ ಮೇರೆಗೆ ಸಿದ್ದಪ್ಪ ಎ.ಎಸ್.ಐ, ಪಾಂಡುರಂಗ ಹೆಚ್.ಸಿ, ಮತ್ತು ಪಂಡಿತ, ಚನ್ನಮಲ್ಲಪ್ಪ, ನೀಲಪ್ಪ ಪಿಸಿರವರೊಂದಿಗೆ ಹೋಗಿ ಮಟಕಾ ಜೂಜಾಟ ನಡೆಸುತ್ತಿದ್ದ ದೇವಿಂದ್ರ ತಂದೆ ಸಿದ್ರಾಮಪ್ಪ ಕೋರೆ, ವಿಶ್ವನಾಥ ತಂದೆ ಪ್ರಭುಲಿಂಗ ಕೊರೆ ಇವರಿಗೆ ದಸ್ತಗಿರಿ ಮಾಡಿಕೊಂಡು ಅವರಿಂದ ಮಟಕಾ ಜೂಜಾಟಕ್ಕೆ ಬಳಸಿದ ನಗದು ಹಣ 3461/-ರೂಪಾಯಿಗಳು, ಮಟಕಾ ನಂಬರ ಬರೆದ ಚೀಟಿಗಳು ಗಳು ಪಂಚರ ಸಮಕ್ಷಮ ಜಪ್ತಿ ಮಾಡಿಕೊಂಡು ವರದಿ ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ 12/12 ಕಲಂ 78 (iii) ಕರ್ನಾಟಕ ಪೊಲೀಸ್ ಕಾಯ್ದೆ ನೇದ್ದರ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಕಳ್ಳತನ ಪ್ರಕರಣ:
ಮಾದನ ಹಿಪ್ಪರಗಾ ಠಾಣೆ:
ಶ್ರೀ ತಮ್ಮಣ್ಣಾ ತಂದೆ ನಾಗಪ್ಪ ತಳಕೇರಿ ಸಾ: ಪಂಚಶೀಲ ನಗರ ನಿಂಬಾಳ ಇವರು ನಾವು ದಿನಾಂಕ: 21/02/2012 ರಾತ್ರಿ ವೇಳೆ 11-30 ರಿಂದ ಬೇಳಗಿನ 5 ಗಂಟೆಯವರೆಗಿನ ಮದ್ಯದ ಅವಧಿಯಲ್ಲಿ ಯಾರೊ ಕಳ್ಳರು ಮನೆಯಲ್ಲಿದ್ದ ನಗದು 30,000/-, ಬಂಗಾರ ಆಭರಣಗಳು ಮತ್ತು ರೇಷ್ಮೆ ಸೀರೆಗಳು ಇತರೆ ಬಟ್ಟೆಗಳು ಅಂದಾಜು ಹಿಗೆ ಒಟ್ಟು 43,500/ ರೂಪಾಯಿ ಕೀಮತ್ತಿನದ್ದು ಕಳುವು ಮಾಡಿಕೊಂಡು ಹೋಗಿರುತ್ತಾರೆ. ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ 5/2012 ಕಲಂ 457, 380 ಐ.ಪಿ.ಸಿ. ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.