POLICE BHAVAN KALABURAGI

POLICE BHAVAN KALABURAGI

06 July 2015

Kalaburagi District Reported Crimes

ಇಸ್ಪೀಟ ಜೂಜಾಟದಲ್ಲಿ ನಿರತ ವ್ಯಕ್ತಿಗಳ ಬಂಧನ :
ಚೌಕ ಠಾಣೆ : ದಿನಾಂಕ 05.07.2015 ರಂದು ಚೌಕ ಠಾಣಾ ವ್ಯಾಪ್ತಿಯ ಆಶ್ರಯ ಕಾಲೋನಿ ಹತ್ತಿರ ಇರುವ ಲಾರಿ ತಂಗುದಾಣ ಗುಮ್ಮಜ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಕೆಲವು ಜನರು ಹಣವನ್ನು ಪಣಕ್ಕೆ ಹಚ್ಚಿ ಅಂದರ ಬಹಾರ ಎಂಬ ಧೈವಲೀಲೆ ಇಸ್ಪೇಟ ಜೂಜಾಟ ಆಡುತ್ತಿದ್ದಾರೆ ಅಂತಾ ಖಚಿತ ಬಾತ್ಮಿ ಬಂದ ಮೇರೆಗೆ ಪಿ.ಐ. ಚೌಕ ಹಾಗು ಸಿಬ್ಬಂದು ಮತ್ತು ಪಂಚರೊಂದಿಗೆ ಆಶ್ರಯ ಕಾಲೋನಿ ಹತ್ತಿರ ಇರುವ ಲಾರಿ ತಂಗುದಾಣ ಗುಮ್ಮಜ ಹತ್ತಿರ ಹೋಗಿ ಮರೆಯಲ್ಲಿ ನಿಂತು ನೋಡಲು ಆಶ್ರಯ ಕಾಲೋನಿ ಹತ್ತಿರ ಇರುವ ಲಾರಿ ತಂಗುದಾಣ ಗುಮ್ಮಜ ಹತ್ತಿರ ಖುಲ್ಲಾ ಬಯಲು ಜಾಗೆಯಲ್ಲಿ ಪ್ರಜ್ವಲವಾದ ಮರಕುರಿ ಲೈಟಿನ ಬೆಳಕಿನಲ್ಲಿ ಸಾರ್ವಜನಿಕ ಸ್ಥಳದಲ್ಲಿ 8 ಜನರು ಗುಂಪಾಗಿ ಕುಳಿತ ಹಣವನ್ನು ಪಣಕ್ಕೆ ಹಚ್ಚಿ ಅಂದರ ಬಾಹರ ಜೂಜಾಟ ಆಡುತ್ತಿರುವದನ್ನು ಖಚಿತ ಪಡಿಸಿಕೊಂಡು ಪಂಚರ ಸಮಕ್ಷಮ ನಾನು ಮತ್ತು ಸಿಬ್ಬಂದಿಯವರು ಕೂಡಿಕೊಂಡು ಜೂಜಾಟ ನಿರತರ ಮೇಲೆ ದಾಳಿಮಾಡಿ ಅವರನ್ನು ಹಿಡಿದುಕೊಂಡು ವಿಚಾರಿಸಲು 1) ಶರಣಬಸಪ್ಪ ತಂದೆ ಸಿದ್ದಣ್ಣ ಚೆನ್ನಶೆಟ್ಟಿ ಸಾ: ರಾಮ ನಗರ ಕಲಬುರಗಿ 2) ಚಂದ್ರಕಾಂತ ತಂದೆ ರಾಣಪ್ಪ ಕಮಾನ ಸಾ: ಅಂಬೇಡ್ಕರ ಆಶ್ರಯ ಕಾಲೋನಿ ಫಿಲ್ಟರ ಬೆಡ್ ಕಲಬುರಗಿ 3) ಶಿವರಾಯ ತಂದೆ ತಿಪ್ಪಣ್ಣ ಪಟ್ಟಣಕರ ಸಾ: ಅಂಬೇಡ್ಕರ ಆಶ್ರಯ ಕಾಲೋನಿ ಫಿಲ್ಟರ ಬೆಡ್ ಕಲಬುರಗಿ 4) ಮಲ್ಲಿಕಾರ್ಜುನ ತಂದೆ ಶರಣಪ್ಪ ಪೂಜಾರಿ ಸಾ: ಶಿವಾಜಿ ನಗರ ಕಲಬುರಗಿ 5) ಶರಣಪ್ಪ ತಂದೆ ಮಡಿವಾಳಪ್ಪ ಗುಬ್ಬಿ ಸಾ: ಭವಾನಿ ನಗರ ಕಲಬುರಗಿ 6) ಶಿವಲಿಂಗಪ್ಪ ತಂದೆ ಗುಂಡಪ್ಪ ಹಾವನೂರ ಸಾ; ಅಯ್ಯರವಾಡಿ ಕಲಬುರಗಿ 7) ಬಸವಂತರಾಯ ತಂದೆ ವೀರಭದ್ರಪ್ಪ ಪಾಟೀಲ ಸಾ: ಶಿವಾಜಿ ನಗರ ಕಲಬುರಗಿ ಅಂತ ತಿಳಿಸಿದ್ದು 8) ಅಣವೀರಯ್ಯಾ ತಂದೆ ರುದ್ರಮುನಿ ಮಠಪತಿ ಸಾ: ಭಾಗೋಡಿ ಹಾ.ವ: ಶಿವಾಜಿ ನಗರ ಕಲಬುರಗಿ ಅಂತಾ ತಿಳಿಸಿದ್ದು ಸದರಿಯವರಿಂದ ಜೂಜಾಟಕ್ಕೆ ಬಳಸಿದ ನಗದು ಹಣ 8100 ರೂ. ಮತ್ತು 52 ಇಸ್ಪೇಟ ಎಲೆಗಳನ್ನು ವಶಪಡಿಸಿಕೊಂಡು ಸದರಿಯವರೊಂದಿಗೆ ಚೌಕ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ
ಹಲ್ಲೆ ಪ್ರಕರಣ :
ನಿಂಬರ್ಗಾ ಠಾಣೆ : ಶ್ರೀಮತಿ ಸುಶಿಲಾಬಾಯಿ ಗಂಡ ಗಣಪತಿ ಚವ್ಹಾಣ ಸಾ: ಯಳಸಂಗಿ ತಾಂಡಾ ರವರು ದಿನಾಂಕ 04/07/2015 ರಂದು ಸಾಯಂಕಾಲ ಯಳಸಂಗಿ ತಾಂಡಾದ ಪ್ರಾಥಮಿಕ ಶಾಲೆಯ ಹತ್ತಿರ ರಸ್ತೆಯ ಮೇಲೆ ಆರೋಪಿ ಮತ್ತು ಫಿರ್ಯಾದಿಯ ಮಕ್ಕಳು ತೆಗೆದ ಜಗಳದ ದ್ವೇಶ ಕಟ್ಟಿಕೊಂಡು ಕಾಶಿನಾಥ ತಂದೆ ವೇವಲು ಚವ್ಹಾಣ ಸಂಗಡ 03 ಜನರು ಸಾ|| ಯಳಸಂಗಿ ತಾಂಡಾ. ರವರು  ಫಿರ್ಯಾದಿ ಮತ್ತು ಅವರ ಕಡೆಯವರಿಗೆ ಅವಾಚ್ಯ ಶಬ್ದಗಳಿಂದ ಬೈದು, ಕೈಯಿಂದ ಮತ್ತು ಕಲ್ಲಿನಿಂದ ಹೊಡೆ ಬಡೆ ಮಾಡಿ ಫಿರ್ಯಾದಿಗೆ ಜಗ್ಗಾಡಿ ಜೀವ ಭಯ ಪಡಿಸಿರುತ್ತಾರೆ ಅಂತ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ನಿಂಬರ್ಗಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ಕಳವು ಪ್ರಕರಣ :
ಜೇವರ್ಗಿ ಠಾಣೆ : ಶ್ರೀ ಹುಸೇನ್ ಪಟೇಲ್ ತಂದೆ ಮಹ್ಮದ್ ಪಟೇಲ್ ಮಾಲಿ ಪಾಟೀಲ್ ಸಾ: ಮುದಬಾಳ ಬಿರವರು ದಿನಾಂಕ  19.06.2015 ರಂದು ಹಗಲು ಹೊತ್ತಿನಲ್ಲಿ ಖಾದ್ಯಾಪುರ ಸಿಮಾಂತರದ ಸರಕಾರಿ ಗೌಂಟಾಣದಲ್ಲಿ ಮೇಯಲು ಹೋದ ನನ್ನ ಒಂದು ಎಮ್ಮೆ ನಮ್ಮೂರಿನವರ 5 ಎಮ್ಮೆ, ಹಾಗು ಖಾದ್ಯಾಪುರ ಗ್ರಾಮದವರ 11 ಎಮ್ಮೆ ಕೊಡಚಿ ಗ್ರಾಮದವರ 2 ಎಮ್ಮೆ ಲಖಣಾಪುರ ಗ್ರಾಮದ 3 ಎಮ್ಮೆಗಳು ಹಿಗೆ ಒಟ್ಟು 22 ಎಮ್ಮೆಗಳು ಅಂ.ಕಿ 4.40.000/- ರೂ ಕಿಮ್ಮತ್ತಿನದ್ದವುಗಳನ್ನು ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಜೇವರ್ಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.