POLICE BHAVAN KALABURAGI

POLICE BHAVAN KALABURAGI

21 March 2016

Kalaburagi District Reported Crimes

ಅ ಸ್ವಾಭಾವಿಕ ಸಾವು ಪ್ರಕರಣ :
ಗ್ರಾಮೀಣ ಠಾಣೆ : ಶ್ರೀ. ಬಸವರಾಜ ತಂದೆ ವಿಠಲರಾವ ಬಿರಾದರ ವಿಳಾಸ; ಆಳಂದ ಚಕ್ಕ ಪೋಸ್ಟ ಹತ್ತಿರ ಕಲಬುರಗಿ ಇವರು ದಿನಾಂಕ.1-3-2016 ರಂದು  ತಾನು ತನ್ನ ಗೆಳೆಯಸಾಹೇಬ ಪಾಶಾ ತಂದೆ ನಬಿಶಾ ಮಕನದಾರ ಇಬ್ಬರುಮೋಟಾರ ಸೈಕಲ್ ಮೇಲೆ ಮುಂಜಾನೆ ಸಾವಳಗಿ ಗ್ರಾಮಕ್ಕೆ  ಹೋಗಿ ಮರಳಿ ಬರುತ್ತಿರುವಾಗ ಬಬಲಾದ ಗ್ರಾಮದ ಮುಖಾಂತರ ಬರುತ್ತಿರುವಾಗ ಬಬಲಾದ ಊರ ಸಮೀಪ ಮಠದ ಮುಂದುಗಡೆ ಮೇನ ರೋಡಿನ ಪಕ್ಕದಲ್ಲಿ ಒಬ್ಬ ವಯಸ್ಸಾದ ಮುದುಕ ಅಪರಿಚಿತ ವ್ಯಕ್ತಿ ವಯಸ್ಸು ಅಂದಾಜು 60-65 ವರ್ಷ ಹೆಸರು ವಿಳಾಸ ಗೊತ್ತಾಗಿ ರುವದಿಲ್ಲಾ ಸದರಿ ವ್ಯಕ್ತಿಯು ಯಾವುದೋ ಕಾಯಿಲೆಯಿಂದ ಬಳಲುತಿದ್ದು  ದಿನಾಂಕ. 1-3-2016 ರಂದು ಉಪಚಾರ ಕುರಿತು ಕಲಬುರಗಿ ಜಿಲ್ಲಾ ಸರಕಾರಿ ಆಸ್ಪತ್ರೆಗೆ ಸೇರಿಸಿದ್ದು,ಉಪಚಾರದಲ್ಲಿ ಗುಣ ಮುಖನಾಗೆದೆ ದಿನಾಂಕ 19-3-2016ರಂದು4-20 ಪಿ.ಎಂ.ಕ್ಕೆ. ಮೃತ ಪಟ್ಟಿರುತ್ತಾನೆ, ಸದರಿ ಅಪರಿಚಿತ ವ್ಯಕ್ತಿಯ ಮರಣದಲ್ಲಿ ಯಾರ ಮೇಲೆ ಯಾವುದೇ ರೀತಿಯ ಸಂಶಯ ಫಿರ್ಯಾದಿ ಇರುವದಿಲ್ಲಾ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ  ಕೊಟ್ಟ ಫಿರ್ಯಾದಿ ಸಾರಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪಘಾತ ಪ್ರಕರಣ :
ಮುಧೋಳ ಠಾಣೆ : ದಿನಾಂಕ: 20-03-2016 ರಂದು ಸಾಯಂಕಾಲ 5:30 ಗಂಟೆ ಸುಮಾರಿಗೆ ನಾನು ನನ್ನ ಅಂಗಡಿಯಲ್ಲಿ ಇದ್ದಾಗ ನನ್ನ ಹೆಂಡತಿಯ ಅಣ್ಣನಾದ ಮೊಹಮ್ಮದ ನಜಮೊದ್ದೀನ ತಂದೆ ಅಬ್ದುಲ್ ಖಾದರ ಇತನು ಕಲಬುರಗಿಯಿಂದ ನನಗೆ ಪೋನ ಮಾಡಿ ತಿಳಿಸಿದ್ದೇನೆಂದರೆ, ನಮ್ಮ ತಮ್ಮನಾದ ಮೊಹಮ್ಮದ ಅಬ್ದುಲ್ ಕರೀಮ ಇತನಿಗೆ ಮೊತಕಪಲ್ಲಿ ಗಾಡದಾನ ಕ್ರಾಸ ಹತ್ತಿರ ಎಕ್ಸಿಡೆಂಟ ಆಗಿ ಇತನಿಗೆ ಗಾಯ ಆಗಿರುತ್ತದೆ ಅಂತಾ ಗೊತ್ತಾಗಿರುತ್ತದೆ ಆದ್ದರಿಂದ ನೀನು ಬೇಗೆ ಅಲ್ಲಿಗೆ ಹೋಗು ಅಂತಾ ಪೋನ ಮಾಡಿ ತಿಳಿಸಿದ್ದು, ತಕ್ಷಣ ನಾನು ಗುರುಮಿಠಕಲ್ ದಿಂದ ಇಂದು ಸಾಯಂಕಾಲ 6:15 ಗಂಟೆ ಸುಮಾರಿಗೆ ಮೋತಕಪಲ್ಲಿ ಗಾಡದಾನ ಕ್ರಾಸ ಹತ್ತಿರ ಬಂದು ನೋಡಲಾಗಿ ಜನರು ನೇರೆದಿದ್ದು ರಸ್ತೆಯ ಪಕ್ಕದ ತೆಗ್ಗಿನಲ್ಲಿ ನನ್ನ ಹೆಂಡತಿಯ ತಮ್ಮನಾದ ಮೊಹಮ್ಮದ ಅಬ್ದುಲ್ ಕರೀಮ ತಂದೆ ಅಬ್ದುಲ್ ಖಾದರ ಇತನು ಗಾಯಹೊಂದಿ ಬಿದ್ದಿದ್ದು ನಾನು ಹತ್ತಿರ ಹೋಗಿ ನೊಡಲಾಗಿ ಇತನಿಗೆ ಬಲಗಾಲ ತೊಡೆಗೆ ಹಾಗೂ ಇತರೆ ಕಡೆ ಭಾರಿ ರಕ್ತಗಾಯವಾಗಿ ಸ್ಥಳದಲ್ಲಿ ಮೃತಪಟ್ಟಿದ್ದು ಅಲ್ಲಿಯೆ ರಸ್ತೆಯಲ್ಲಿಯೆ ಅಪಘಾತಪಡಿಸಿದ ಟಿಪ್ಪರ ನಿಂತಿದ್ದು ಅದರ ನಂಬರ ನೊಡಲಾಗಿ ಕೆಎ-33-1290 ಅಂತಾ ಇದ್ದಿದ್ದು ಹಾಗೂ ಸದರಿ ಮೃತ ಮೊಹಮ್ಮದ ಅಬ್ದುಲ್ ಕರೀಮ ಇತನ ಮೊ ಸೈ ನಂಬರ ಕೆಎ-33 ಜೆ-1196 ನೇದ್ದು ಅಲ್ಲಿಯೆ ರಸ್ತೆಯ ಬದಿಯಲ್ಲಿ ಬಿದ್ದಿದ್ದು ಈ ಬಗ್ಗೆ ಅಲ್ಲಿದ್ದ ಜನರಿಗೆ ವಿಚಾರಿಸಲಾಗಿ ಪ್ರತ್ಯಕ್ಷ ದರ್ಶಿಗಳಾದ ವೆಂಕ್ಯಾನಾಯಕ ತಂದೆ ಚಂದ್ರ್ಯಾನಾಯಕ ಚವ್ಹಾಣ ಸಾ|| ಮೋತಕಪಲ್ಲಿ ತಾಂಡಾ ಇತನು ತಿಳಿಸಿದ್ದೇನೆಂದರೆ, ಇಂದು ಸಾಯಂಕಾಲ 5:15 ಗಂಟೆ ಸುಮಾರಿಗೆ ನಾನು ಹಾಗೂ ನಮ್ಮೂರ ಶ್ರೀನಿವಾಸ ತಂದೆ ಹುಸೇನಪ್ಪ ಹಡಪದ ಇಬ್ಬರೂ ಇಲ್ಲಿ ಗಾಡದಾನ ಕ್ರಾಸ ಹತ್ತಿರ ಇರುವ ಪಾಂಡುನಾಯಕ ತಂದೆ ರಾಮುನಾಯಕ ಇವರ ಹೊಟೇಲ ಮುಂದುಗಡೆ ಚಹಾ ಕುಡಿಯುತ್ತಾ ನಿಂತಿದ್ದಾಗ ವೆಂಕಟಾಪೂರ ಕಡೆಯಿಂದ ಮೃತ ವ್ಯಕ್ತಿಯು ತನ್ನ ಮೊಟಾರ ಸೈಕಲ ಮೇಲೆ ಗುರುಮಿಠಕಲ್ ಕಡೆಗೆ ಹೋಗುತ್ತಿದ್ದನು ಗಾಡದಾನ ಕಡೆಯಿಂದ  ಒಂದು ಟಿಪ್ಪರ ನಂಬರ ಕೆ ಎ-33-1290 ನೇದ್ದರ ಚಾಲಕನು ತನ್ನ ಟಿಪ್ಪರನ್ನು ಅತೀ ವೇಗವಾಗಿ ಮತ್ತು ನಿಸ್ಕಾಳಜಿತನದಿಂದ ನಡೆಸುತ್ತಾ ಬಂದು ಮೊತಕಪಲ್ಲಿ ಗಾಡದಾನ ಕ್ರಾಸ ಹತ್ತಿರ ರಸ್ತೆಯ ಎಡಬದಿಯಿಂದ ಹೊಗುತ್ತಿದ್ದ ಸದರಿ ಮೊಟಾರ ಸೈಕಲ ಚಾಲಕನಿಗೆ ಡಿಕ್ಕಿ ಪಡಿಸಿ ಅಪಘಾತ ಮಾಡಿದ್ದು ಇದರಿಂದ ಮೊಟಾರ ಸೈಕಲ ಚಾಲಕನು ಮೊಟಾರ ಸೈಕಲ ಸಮೇತ ರಸ್ತೆಯ ಬದಿಯ ತೆಗ್ಗಿನಲ್ಲಿ ಬಿದ್ದಿದ್ದು ನಾವು ಓಡುತ್ತಾ ಹೋಗಿ ಸದರಿ ವ್ಯಕ್ತಿಗೆ ನೊಡಲಾಗಿ ಇತನಿಗೆ ಬಲಗಾಲ ತೊಡೆಗೆ ಹಾಗೂ ಎಡಗಾಲಿಗೆ ಹೊಟ್ಟೆಗೆ ಇತರೆ ಕಡೆಗಳಲ್ಲಿ ಭಾರಿ ರಕ್ತಗಾಯ ಗುಪ್ತಗಾಯಗಳಾಗಿ ಒದ್ದಾಡುತ್ತಿದ್ದು ನಾವು 108 ಅಂಬುಲೇನ್ಸಗೆ ಪೋನ ಮಾಡಿ ಕರೆಸುವಷ್ಟರಲ್ಲಿ ಸದರಿ ವ್ಯಕ್ತಿಯು ಇಲ್ಲಿಯೆ ಸ್ಥಳದಲ್ಲಿ ಮೃತಪಟ್ಟಿದ್ದು ಇರುತ್ತದೆ. ಅಂತಾ  ಅಸ್ಪಕಅಹೀಮದ ತಂದೆ ಅಬ್ದುಲ್ ಸಲಾಮ ಚಾಂದ ಸಾ|| ಪಂಚಾಯತ ಮೊಹಲ್ಲಾ ಗುರುಮಿಠಕಲ್  ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮುಧೋಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.