POLICE BHAVAN KALABURAGI

POLICE BHAVAN KALABURAGI

07 January 2014

Gulbarga District Reported Crimes

ಜಾತಿ ನಿಂದನೆ ಪ್ರಕರಣ :
ಕೊಂಚಾವರಂ ಠಾಣೆ : ಶ್ರೀ ಮೊಘಲಪ್ಪಾ ತಂದೆ ಯಲ್ಲಪ್ಪಾ ಸಾ|| ಮಗದಂಪುರ ತಾ|| ಚಿಂಚೋಳಿ ರವರು ದಿನಾಂಕ 31.12.2013 ರಂದು ರಾತ್ರಿ ವೇಳೆಯಲ್ಲಿ 12.00 ಗಂಟೆಗೆ ಫಿರ್ಯಾದಿಯೂ ಮಗದಂಪುರ ಗ್ರಾಮದ ದಶರಥ ಇತನ ಕಟಿಂಗ್ ಶಾಪ ಅಂಗಡಿ ಮುಂದುಗಡೆ ರೋಡಿನ ಮೇಲೆ ಹೊಸ ವರ್ಷ ಆಚರಣೆ ಮಾಡುತ್ತಿರುವಾಗ ಆರೋಪಿ ದಶರಥ ತಂದೆ ಶಿವಣ್ಣ ಮಂಗಲಿ, ವಿಜು, ತಂದೆ ದಶರಥ ಬಿಚ್ಚಪ್ಪಾ ತಂದೆ ದಶರಥ , ಸತ್ಯಪ್ಪಾ ತಂದೆ ಶಿವಣ್ಣಾ ಇವರು ನೀನು ಹೊಲೇ ಸೂಳೀ ಮಗನೇ ನನ್ನ ಅಂಗಡಿ ಕಡೆ ಬಾ ನೋಡ್ತೀವಿ ಅಂತಾ ಜಾತೀ ಎತ್ತೀ ಅವಾಚ್ಯ ಶಬ್ದಗಳಿಂದ ಬೈಯ್ದು ಹೊಡೆದಿರುತ್ತಾರೆ, ನನಗೆ ಹೊಡೆ ಬಡೆ ಮಾಡಿದವರ ವಿರುದ್ದ   ಕಾನೂನು ಕ್ರಮ ಕೈಗೋಳ್ಳಬೇಕು ಅಂತಾ ಸಲ್ಲಿಸಿದ ದೂರು ಸಾರಾಶಂಶದ ಮೇಲಿಂದ ಕೊಂಚಾವರಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪಘಾತ ಪ್ರಕರಣ :
ಕಮಲಾಪೂರ ಠಾಣೆ : ಶ್ರೀ ಸಂಜುಕುಮಾರ ತಂದೆ ಗೋಪಿನಾತ ರಾಠೋಡ ಸಾ:ಮರಮಂಚಿ ತಾಂಡಾ ತಾ:ಜಿ: ಗುಲಬರ್ಗಾ ರವರು ದಿನಾಂಕ: 07-01-2014 ರಂದು ಮುಂಜಾನೆ 10-30 ಗಂಟೆಯ ಸೂಮಾರಿಗೆ ಮರಮಂಚಿ ಗ್ರಾಮದ ವಿಜಯಕುಮಾರ ತಂದೆ ವಿಠಲರಾವ ಜಮಾದಾರ ಇವರು ನನ್ನ ಮೋಬಾಯಿಲಗೆ ಕರೆಮಾಡಿ ನನ್ನ ಅಜ್ಜಿಯಾದ ಜೀಣಾಬಾಯಿ ರಾಠೋಡ ಇವಳಿಗೆ ಮರಮಂಚಿ ಗ್ರಾಮದಿಂದ ಸ್ವಂತ ಗ್ರಾಮದ ಕಡೆಗೆ ಹೋಗುವ ರಸ್ತೆಯ ಮೇಲೆ ಡೌನಲನಲ್ಲಿ ರಸ್ತೆ ಅಪಘಾತವಾದ ಬಗ್ಗೆ ವಿಷಯ ತಿಳಿಸಿದ್ದು ನಾನು ಗಾಬರಿಯಿಂದ ನಮ್ಮ ತಾಂಡಾದ ರಮೇಶ ರಾಠೋಡ ಮತ್ತು ಸುಭಾಷ ರಾಠೋಡ ಇವರನ್ನು ಕರೆದುಕೊಂಡು ಘಟನಾ ಸ್ಥಳಕ್ಕೆ ಹೋಗಿ ನೋಡಲು ನನ್ನ ಅಜ್ಜಿ ಜೀಣಾಬಾಯಿಯ ತಲೆಯ ಹಿಂಭಾಗಕ್ಕೆ ರಕ್ತಗಾಯವಾಗಿ ಬಾಯಿಯಿಂದ ಮುಗಿನಿಂದ ಮತ್ತು ಬಲ ಕಿವಿಯಿಂದ ರಕ್ತ ಬಂದಿದ್ದು ಅಲ್ಲದೆ ನನ್ನ ಅಜ್ಜಿ ಬಲಗಾಲ ಪಾದ ಮುರಿದು ಜೋತು ಬಿದ್ದಂತಾಗಿದ್ದನ್ನು ಕಂಡು ಅಲ್ಲೆ ಹಾಜರಿದ್ದ ವಿಜಯಕುಮಾರಿನಿಗೆ ವಿಚಾರಿಸಿದಾಗ ಡಿ.ಸಿ.ಎಮ ಟೆಂಪೋ 608 ಅದರ ನಂಬರ ಕೆಎ-38 -213 ನೇದ್ದರ ಚಾಲಕ ತನ್ನ ಟೆಂಪೋವನ್ನು ಮರಗುತ್ತಿ ಕಡೆಯಿಂದ ಅತಿ ವೇಗ ಮತ್ತು ಅಲಕ್ಷತನದಿಂದ ಚಲಾಯಿಸುತ್ತ ಬಂದು ರಸ್ತೆ ಬದಿಗೆ ಹೋರಟ ನನ್ನ ಅಜ್ಜಿಗೆ ಡಿಕ್ಕಿ ಹೊಡೆದು ಅಪಘಾತ ಪಡಿಸಿ ವಾಹನವನ್ನು ನಿಲ್ಲಿಸದೆ ಓಡಿ ಹೋಗಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಕಮಲಾಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Gulbarga District Reported Crimes

ಹಲ್ಲೆ ಪ್ರಕರಣ :
ನೆಲೋಗಿ ಠಾಣೆ : ಶ್ರೀಮತಿ ಕತವಿತಾ ಗಂಡ ರಾಜು ರಾಠೋಡ. ಸಾ. ಪರತಾಪೂರ ತಾಂಡಾ ತಾ. ಬಸವಕಲ್ಯಾಣ   ಜಿಲ್ಲಾ ಬಿದರ. ಹಾ.ವ ಕುಟನೂರ. ರವರ ಗಂಡನಾದ ರಾಜು ರಾಠೋಡ. ಮತ್ತು ಶಾರದಾಬಾಯಿ ರಾಠೊಡ. ಸಾ. ಪರತಾಪುರ ತಾಂಡಾ. ರವರು ಕುಡಿಕೊಂಡು  ದಿನಾಂಕ 04-01-2014 ರಂದು ರಾತ್ರಿ  ಸುಮಾರು 1130 ಗಂಟೆ ವೇಳೆಗೆ ಶಾರಾದಾಬಾಯಿ ಬಳಿಗೆ ಹೋಗಿ ನಂತರ ನನ್ನ ಬಳಿಗೆ ಬಂದು ನಾನು ಶಾರಾದಾಯಿ ಬಾಯಿ ಜೊತೆಯಲ್ಲಿಯೇ ಇರುತ್ತೇನೆ ಅಂತಾ ಹೇಳಿ ನೀನು ಬದುಕಿರಬಾರದು ನೀನು ಇದ್ದರೆ ತೊಂದರೆಯಾಗುತ್ತದೆ. ಸಾಯಿ ಮುಂಡೆ ಅಂತಾ ಬೈಯುತ್ತಾ ಕಬ್ಬು ಕಡಿಯುವ ಮಚ್ಚಿನಿಂದ ಮೈ ಕೈಗೆ ತುಂಬಾ ಹೊಡೆದನು ಆಗ  ನನಗೆ ತಲೆಯ ಹಿಂಬದಿಯಲ್ಲಿ ಬಲಗಣ್ಣಿನ ಹಣೆಯ ಮೇಲೆ ಬುಜಗಳಿಗೆ ಎದೆಯ ಮೇಲೆ ಬಾರಿ ಗಾಯಗಳಾಗಿರುತ್ತವೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ನೆಲೋಗಿಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವಿದ್ಯಾರ್ಥಿಣಿ ಕಾಣೆಯಾದ ಪ್ರಕರಣ :
ಮಾಹಾಗಾಂವ ಠಾಣೆ : ಶ್ರೀ ಕಂಟೆಪ್ಪ ತಂ, ವೀರಪ್ಪ ಮುಕ್ತೆ ಸಾ||ಮನೆ ನಂ; 13-567 ಯಲ್ಲಾಲಿಂಗ ಕಾಲೋನಿ ನೌಬಾದ ನಗರ ಬೀದರ ರವರ  ಮಗಳಾದ ಮಾಲಾಶ್ರೀ ವಯ||20, ಇವಳು ಮಹಾಗಾಂವ ಪಶುವೈದ್ಯಕೀಯ ಹೈನುಗಾರಿಕೆ ವಿಜ್ಞಾನ ಶಾಲೆಯಲ್ಲಿ 3 ನೇ ವರ್ಷದಲ್ಲಿ ತರಬೇತಿ ಮಾಡುತ್ತಿದ್ದು ದಿನಾಂಕ: 03-01-2014 ರಂದು ಬೆಳಿಗ್ಗೆ ತಾನು ವಿಧ್ಯಾಭ್ಯಾಸ ಮಾಡುವ ವಸತಿ ಗೃಹದಿಂದ ನಮ್ಮೂರಿಗೆ ಹೋಗಿಬರುತ್ತೇನೆ ಅಂತಾ ಹೇಳಿ ಹೋದವಳು ಮರಳಿ ಮನೆಗೆ ಬಂದಿರುವದಿಲ್ಲ ಹಾಗೂ ಸಂಬಂಧಿಕರ ಊರಿಗೆ ಹೋಗಿರುವದಿಲ್ಲ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಾಹಾಗಾಂವ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.   
ಅಪಘಾತ ಪ್ರಕರಣ :

ಹೆಚ್ಚುವರಿ ಸಂಚಾರಿ ಠಾಣೆ : ಶ್ರೀ ಶಾಮರಾವ ತಂದೆ ವಿಠಲರಾವ ರವರು ದಿನಾಂಕ 05-01-2014 ರಂದು ರಾತ್ರಿ 9-30 ಗಂಟೆ ಸುಮಾರಿಗೆ ಪಾರ್ಚುನ ಇಂಗ್ಲೀಷ ಶಾಲೆ ಹಿಂದುಗಡೆ ಏಕೆ ಮಾಡಲು ಹೋಗಿ ವಾಪಸ್ಸ ಮನೆಯ ಕಡೆಗೆ ಬರುವಾಗ ಜಿಲ್ಲಾನಬಾದ ಗಾಲಿಫ ಕಾಲೋನಿ ರೋಡ ಮೇಲೆ ಯಾವುದೊ ಒಂದು ಮೋಟಾರ ಸೈಕಲ ಸವಾರನು ಅತೀವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ಡಿಕ್ಕಿ ಪಡಿಸಿ ಅಪಘಾತ ಮಾಡಿ ಭಾರಿಗಾಯಗೊಳಿಸಿ ಮೋಟಾರ ಸೈಕಲ ಸಮೇತ ಓಡಿ ಹೋಗಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಹೆಚ್ಚುವರಿ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.