POLICE BHAVAN KALABURAGI

POLICE BHAVAN KALABURAGI

04 December 2013

Gulbarga District Reported Crimes

ಹಾವು ಕಚ್ಚಿ ವ್ಯಕ್ತಿ ಸಾವು
ಕಮಲಾಪೂರ ಠಾಣೆ : ರಾಜು ತಂದೆ ಭೀಮಾಶಂಕರ ಧೂಮಾಳ ಸಾ;ಸೊಂತ  ತಾ;ಜಿ; ಗುಒಲಬರ್ಗಾ ರವರು ದಿನಾಂಕ 02-12-2013  ರಂದು ರಾತ್ರಿ 07-30 ಗಂಟೆ ಸುಮಾರಿಗೆ ಸೋಂತ ಗ್ರಾಮಕ್ಕೆ ಹೋಗುವ ಕುರಿತು ತನ್ನ ಮನೆಯ ಮುಂದಿನ ಗೇಟ್ ಹತ್ತಿರ ನಿಂತುಕೊಂಡಿದ್ದಾಗ ಕತ್ತಲೆಯಲ್ಲಿ ನೋಡದೇ ವಿಷಕಾರಿ ಹಾವಿನ ಮೇಲೆ ಕಾಲು ಇಟ್ಟಿದ್ದುಸದರಿ ವಿಷಕಾರಿ ಹಾವು ಆತನ ಬಲಗಾಲ ಪಾದಕ್ಕೆ ಕಚ್ಚಿದ್ದು ಆತನಿಗೆ ಜಡಿಬೂಟಿ ಉಪಚಾರ ಕೊಡಿಸಲು  ಮಳಸಾಪೂರಕ್ಕೆ ಕರೆದುಕೊಂಡು ಹೋಗುತ್ತಿದ್ದಾಗ ಪಟವಾದ ಸೀಮಾಂತರದ ಗೂಡುಸಾಬ ದರ್ಗಾದ ಹತ್ತಿರ ರಾತ್ರಿ 07-50 ಗಂಟೆ ಸುಮಾರಿಗೆ ಮೃತಪಟ್ಟಿರುತ್ತಾನೆ. ಅಂತಾ ಶ್ರೀ ಕಾಳಪ್ಪಾ ತಂದೆ ಕಲ್ಲಪ್ಪಾ ಪೂಜಾರಿ ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಕಮಲಾಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.