POLICE BHAVAN KALABURAGI

POLICE BHAVAN KALABURAGI

14 November 2015

Kalaburagi District Reported Crimes

ಆತ್ಮಹತ್ಯೆ ಮಾಡಿಕೊಂಡ ಪ್ರಕರಣ :
ಯಡ್ರಾಮಿ ಠಾಣೆ : ದಿನಾಂಕ 13-11-2015 ರಂದು ಬೇಳಿಗ್ಗೆ 10 ಗಂಟೆಗೆ ನಾನು ಮನೆಯಲ್ಲಿದ್ದಾಗ ಯಾಳಗಿ ಗ್ರಾಮದ ನಬಿಸಾಬ ಎಂಬುವವರು ನಮ್ಮ ಮನೆಗೆ ಫೊನ್ ಮಾಡಿ ತಿಳಿಸಿದ್ದೆನೆಂದರೆ ಕುಳಗೇರಾ ಸೀಮೇಯಲ್ಲಿರುವ ಬಸವರಾಜ ಸಜ್ಜನ ಎಂಬುವವರ ಹೊಲದ ಬಾಂದಿಗೆ ಇರುವ ಬೇವಿನ ಗಿಡಕ್ಕೆ ನಿಮ್ಮ ತಂದೆ ತನ್ನ ಉಟ್ಟ ಪಾಲಿಸ್ಟರ್ ದೋತರದಿಂದ ನೇಣು ಹಾಕಿಕೊಂಡು ಮೃತ ಪಟ್ಟಿರುತ್ತಾನೆ. ಅಂತಾ ತಿಳಿಸಿದ ಕೂಡಲೆ ಗಾಭರಿಗೊಂಡು ನಾನು ನನ್ನ ಗಂಡ ಸುಭಾಷ್ಚಂದ್ರ ಮಾವ ತಮ್ಮಣ್ಣ ರಾಮಪೂರಕರ್ ಅತ್ತೆಯಾದ ಶಾಂತಬಾಯಿ ಮತ್ತು ನನ್ನ ತಂಗಿಯಂದಿರರು ಕೂಡಿಕೊಂಡು ಕುಳಿಗೇರಾ ಸಿಮಾಂತರದ ಬಸವರಾಜ ಸಜ್ಜನ ಎಂಬುವವರ ಹೊಲಕ್ಕೆ ಬಂದು ನೋಡಲಾಗಿ ಹೊಲದ ಬಾಂದಿಗೆ ಇರುವ ಬೇವಿನ ಗಿಡಕ್ಕೆ ತನ್ನ ಉಟ್ಟ ದೋತರದಿಂದ ನೇಣು ಹಾಕಿಕೊಂಡು ಮೃತ ಪಟ್ಟಿದ್ದು ನನ್ನ ತಂದೆಯಾದ ಸಿದ್ದಪ್ಪ ಇತನು ಖಾಸಗಿಯಾಗಿ ಕೃಷಿ ಸಾಲ ಮತ್ತು ನನ್ನ ತಂಗಿಯ ಮದುವೆಗೆ ಸಾಲ ಮಾಡಿಕೊಂಡಿದ್ದೂ ಸಾಲ ಹೇಗೆ ತೀರಿಸುವದು ಅಂತಾ ಜೀವನದಲ್ಲಿ ಜಿಗುಪ್ಸೆ ಹೊಂದಿ ನಿನ್ನೆ ದಿನಾಂಕ 12-11-2015 ರಂದು ಸಾಯಂಕಾಲ 6 ಪಿ ಎಂ ದಿಂದ ದಿನಾಂಕ 13-11-2015 ರಂದು ಬೇಳಿಗ್ಗೆ 8 ಗಂಟೆಯ ಅವದಿಯಲ್ಲಿ ನನ್ನ ತಂದೆ ನೇಣು ಹಾಕಿಕೊಂಡು ಮೃತ ಪಟ್ಟಿರುತ್ತಾರೆ. ಅಂತಾ ಶ್ರೀಮತಿ ರೇಣುಕಾ ಗಂಡ ಸುಭಾಶ್ಚಂದ್ರ ರಾಮಪೂರಕರ್ ಸಾ|| ಬಸವೆಶ್ವರ ನಗರ  ಶಹಾಪೂರ ಜಿ|| ಯಾದಗಿರ  ಇವರು  ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಯಡ್ರಾಮಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪಹರಣ ಪ್ರಕರಣ :
ಮಹಿಳಾ ಠಾಣೆ : ಶ್ರೀ ಅನಿಲ ತಂದೆ ಧೇನು ಜಾಧವ ಸಾ//ಭರತನಗರ ತಾಂಡಾ ಸೇಡಂ ರೋಡ ಕಲಬುರಗಿ ಇವರ ಮಗಳಾದ ಆರತಿ ವಯ;16ವರ್ಷ ಇವಳು ದಿನಾಂಕ 23-10-2015 ರಂದು ಬೆಳಗ್ಗೆ 9-30 ಗಂಟೆಯ ಸುಮಾರಿಗೆ ಮನೆಯಿಂದ ಹೊರಗಡೆ ಹೋದವಳು ರಾತ್ರಿಯಾದರು ಮರಳಿ ಮನೆಗೆ ಬಂದಿರುವುದಿಲ್ಲಾ ಅಲ್ಲಿಂದ ಇಲ್ಲಿಯವರೆಗೆ ,ನಾವು ಎಲ್ಲಾ ಕಡೆ ಹುಡುಕಾಡಿದರೂ ನನ್ನ ಮಗಳು ಪತ್ತೆಯಾಗಿರುವುದಿಲ್ಲಾ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.