POLICE BHAVAN KALABURAGI

POLICE BHAVAN KALABURAGI

22 February 2015

Kalaburagi District Reported Crimes

ಹಲ್ಲೆ ಪ್ರಕರಣಗಳು :
ನಿಂಬರ್ಗಾ ಠಾಣೆ : ಶ್ರೀ ಫಕೀರಸಾಬ  ತಂದೆ  ರಸೂಲಸಾಬ ನದಾಫ್ ವಯ: 22 ವರ್ಷ ಜಾ: ಮುಸ್ಲಿಂ ಉ: ಒಕ್ಕಲುತನ ಸಾ: ಮಾಡಿಯಾಳ ಇವರು ದಿನಾಂಕ 20-02-2015 ರಂದು ಸಾಯಂಕಾಲ 17:30 ಗಂಟೆಗೆ ತಮ್ಮ ಹೊಲದಲ್ಲಿನ ಬೋರವೆಲ್ ಸುಟ್ಟಿದ್ದರಿಂದ ಅದರ ರೀಪೇರಿಗಾಗಿ ಭೋರವೆಲ್ ಮಶೀನ್ ಲಾರಿ ತರುವ ಸಂಬಂಧ ರೋಡಿನಿಂದ ಹೊಲದವರೆಗೆ ದಾರಿ ಮಾಡುತ್ತಿದ್ದಾಗ ದೋಡಪ್ಪನಾದ ಖಾಜಾಸಾಬ ತಂದೆ ಫಕೀರಸಾಬ, ಅವನ ಮಗನಾದ ಸುಲ್ತಾನಸಾಬ ತಂದೆ ಖಾಜಾಸಾಬ, ಹೆಂಡತಿಯಾದ ಪಾಚಾಬಿ ಗಂಡ ಖಾಜಾಸಾಬ, ಸೊಸೆಯಾದ ರಹೇಮತಬಿ ಗಂಡ ಸುಲ್ತಾನಸಾಬ ಎಲ್ಲರೂ ಸೇರಿ ಜಗಳ ತಗೆದು ಅವಾಚ್ಯ ಶಬ್ದಳಿಂದ ಬೈದು ಕೈಯಿಂದ ಕಲ್ಲಿನಿಂದ ಹೊಡೆ ಬಡೆ ಮಾಡಿ ಜೀವ ಭಯ ಪಡೆಸಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಂಸದ ಮೇಲಿಂದ ನಿಂಬರ್ಗಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನಿಂಬರ್ಗಾ ಠಾಣೆ : ಶ್ರೀ ಹಸನಸಾಬ ತಂದೆ ಫಕೀರಸಾಬ ನದಾಫ ಸಾ: ಮಾಡಿಯಾಳ ಇವರು ಮತ್ತು ಶ್ರೀಕಾಂತ ತಂದೆ ಮಲ್ಲಪ್ಪ ಪೋದ್ದಾರ ಇವರ ಹೊಲವನ್ನು 3 ವರ್ಷಗಳ ಮಟ್ಟಿಗೆ ಕಡತಿ ಹಾಕಿಕೊಂಡಿದ್ದು ಹೊಲದಲ್ಲಿನ ಬಾವಿಗೆ ಹತ್ತಿಕೊಂಡೆ ನನ್ನ ತಮ್ಮನಾದ ರಸೂಲಸಾಬ ತಂದೆ ಫಕೀರಸಾಬ ನದಾಫ್ ಇತನ ಹೊಲ ಇದ್ದು ರಸೂಲಸಾಬನು ಬಾವಿಯ ಡಿಬ್ಬಿ ಸಾಪ ಮಾಡಿಸಿ ತನ್ನ ಹೊಲಕ್ಕೆ ಬೋರ ವೆಲ್ ಗಾಡಿ ಹೋಗಲು ದಾರಿ ಮಾಡಿಕೊಂಡಿದ್ದು ಇದನ್ನು ಕೇಳಲು ಹೋದಾಗ ದಿ: 20-02-2015 ರಂದು  17:30 ಗಂಟೆಗೆ ರಸೂಲಸಾಬ ತಂದೆ ಫಕೀರಸಾಬ, ಗುಲಶನಬಿ ಗಂಡ ರಸೂಲಸಾಬ, ಫಕೀರಸಾಬ ತಂದೆ ರಸೂಲಸಾಬ, ಹಮೀದ ತಂದೆ ರಸೂಲಸಾಬ ಎಲ್ಲರೂ ಸೇರಿ ಮಾಡಿಯಾಳ ದಿಂದ ಬೆಣ್ಣೆಶೀರೂರ ಕಡೆಗೆ ಹೋಗುವ ರಸ್ತೆಯ ಮೇಲೆ ತನಗೆ ಬಾಯಿ ಬಡೆದು ಕೈಯಿಂದ ಮತ್ತು ಬಡಿಗೆಯಿಂದ ಹೊಡೆ ಬಡೆ ಮಾಡಿ ಅವಾಚ್ಯ ಶಬ್ದಗಳಿಂದ ಬೈದು ಹೊಡೆ ಬಡೆ ಮಾಡಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ  ನಿಂಬರ್ಗಾ ಠಾಣೆ ಯಲ್ಲಿ ಪ್ರಕರಣ ದಾಖಲಾಗಿದೆ.
ಜಾತಿ ನಿಂದನೆ ಪ್ರಕರಣ :
ಮಾಡಬೂಳ ಠಾಣೆ : ಶ್ರೀ ಸಂತೋಷ ತಂದೆ ಶಿವಯೋಗಿ ಕಾಳನೂರ ಸಾ:ಕಾಟಂದೇವರಹಳ್ಳಿ ಇವರು ದಿನಾಂಕ:20-02-2015 ರಂದು ರಾತ್ರಿ 9 ಗಂಟೆ ಸುಮಾರಿಗೆ ಊಟ ಮಾಡಿ ನಾನು ಹಾಗೂ ನಮ್ಮ ಗ್ರಾಮದ 1) ಕುಮಾರ ತಂದೆ ಶಾಮರಾವ ದೊಡ್ಡಮನಿ ಜಾ:ಮಾದರ 2) ಶರಣಬಸಪ್ಪ ತಂದೆ ಶಿವಪುತ್ರ ದಂಡೋತಿ ಜಾ:ಕುರುಬರ  ಮೂರು ಜನರೂ ಕೂಡಿ ನಮ್ಮ ಮನೆಯ ಸಮೀಪ ಇರುವ ಡಾ:ಬಿ.ಆರ ಅಂಬೇಡ್ಕರ ಕಟ್ಟೆಯ ಮೇಲೆ ಲೈಟಿನ ಬೆಳಕಿನಲ್ಲಿ ಮನೆಯ ವಿಷಯಗಳನ್ನು ಮಾತನಾಡುತ್ತಾ ಕುಳಿತ್ತಿರುವಾಗ ನಮ್ಮ ಗ್ರಾಮದ 1) ಹುಣಚೆಪ್ಪ ತಂದೆ ಬಾಬುರಾವ ಹರಕತ್ತಿ 2) ಜಗಪ್ಪ ತಂದೆ ಶಿವಪುತ್ರಪ್ಪ ಹರಕತ್ತಿ 3) ಶಂಕರ ತಂದೆ ಶಿವಪುತ್ರಪ್ಪ ಹರಕತ್ತಿ ಮೂರು ಜನರೂ ಕೂಡಿ ನಾವು ಕುಳಿತ ಕಟ್ಟೆಯ ಹತ್ತಿರ ಬಂದು ಹುಣಚೆಪ್ಪ ಇತನೂ ನನಗೆ ಏ ರಂಡಿ ಮಗಾ ಸಂತ್ಯಾ ಹೊಲೆಯ ಸುಳೆ ಮಗನೆ ಈ ಸಮಯದಲ್ಲಿ ಇಲ್ಲಿ ಕುಳಿತು ಏನು ಮಾತನಾಡುತ್ತಿರುವಿ ಅಂತ ಬೈಯ್ಯುತ್ತಿದ್ದಾಗ ನಾನು ಸದರಿ ಹುಣಚೆಪ್ಪನಿಗೆ ನಮ್ಮ ಅಂಬೇಡ್ಕರ ಕಟ್ಟೆಯ ಮೇಲೆ ಕುಳಿತ್ತಿದ್ದೇನೆ ಯಾರ ಮನೆಯ ಮುಂದೆ ಕುಳಿತ್ತಿರುವುದಿಲ್ಲಾ. ಅಂತ ಅಂದಿದ್ದಕ್ಕೆ ಜಗಪ್ಪ ಹಾಗೂ ಶಂಕರ ಇಬ್ಬರೂ ನನಗೆ ಒತ್ತಿ ಹಿಡಿದುಕೊಂಡರು. ಆಗ ಹುಣಚೆಪ್ಪ ಇತನೂ ಈ ರಂಡಿ ಮಗ ಹೊಲೆಯ ಸುಳೆ ಮಗಂದು ಹೆಚ್ಚಾಗಿದೆ ಇವತ್ತು ಇತನಿಗೆ ಜೀವಂತ ಬಿಡುವುದಿಲ್ಲಾ ಅಂತ ಮನಸ್ಸಿಗೆ ಬಂದ ಹಾಗೆ ನನ್ನ ಹೊಟ್ಟೆಯಲ್ಲಿ ಮತ್ತು ಬೆನ್ನಿಗೆ ಕೈಯಿಂದ ಹೊಡೆ ಬಡೆ ಮಾಡಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಂಸದ ಮೇಲಿಂದ ಮಾಡಬೂಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪಹರಣ ಪ್ರಕರಣ :
ಅಫಜಲಪೂರ ಠಾಣೆ : ಶ್ರೀ ಯಲ್ಲಪ್ಪಾ ತಂದೆ ಶಿವಪ್ಪಾ ಅಳ್ಳಗಿ ಸಾ|| ನಂದರಗಿ ತಾ|| ಅಫಜಲಪೂರ ರವರು  ಪ್ರತಿ ವರ್ಷ ಕಬ್ಬು ಕಡಿಯಲು ನನ್ನ ಹೆಂಡತಿಯೊಂದಿಗೆ ಬೆಳಗಾಂವ ಜಿಲ್ಲೆಗೆ ಹೋಗುತ್ತಿದ್ದು, ಅಲ್ಲಿ ಟೋಳಿ ಮಾಲಕರಾದ ಹಣಮಂತ ತಂದೆ ಫಕೀರಪ್ಪಾ ಟ್ಯಾಪಿ ಸಾ|| ಅರಟಗಲ್ ತಾ|| ಸೌದತ್ತಿ ಇವರಲ್ಲಿ ಕೆಸಲ ಮಾಡುತ್ತಿರುತ್ತೇವೆ. ಈ ವರ್ಷ ನಾನು ಸದರಿ ಹಣಮಂತ ಟ್ಯಾಪಿ ರವರಿಂದ ಕಬ್ಬು ಕಡಿಯುವ ಸಲುವಾಗಿ 6 ಲಕ್ಷ ರೂಪಾಯಿಗಳನ್ನು ಮುಂಗಡವಾಗಿ ತೆಗೆದುಕೊಂಡಿದ್ದು ಇರುತ್ತದೆ. ಆದರೆ ನನ್ನ ಕುಟುಂಬದ ಸಮಸ್ಯ ಇದ್ದಿದ್ದರಿಂದ ನಾನು ಕಬ್ಬು ಕಡಿಯಲು ಹೋಗಿರಲಿಲ್ಲಾ. ಸದರಿ ಹಣಮಂತ ಟ್ಯಾಪಿ ರವರು ಸುಮಾರು ಸಲ ನನಗೆ ಫೋನ ಮಾಡಿ ಕೆಲಸಾ ಮಾಡಲು ಬಾ ಇಲ್ಲದಿದ್ದರೆ ನಮ್ಮ ಹಣ ನಮಗೆ ಕೊಡು ಅಂತಾ ಅನ್ನುತ್ತಿದ್ದನು, ದಿನಾಂಕ 19-02-2015 ರಂದು ರಾತ್ರಿ ನಾನು ಮತ್ತು ನನ್ನ ಹೆಂಡತಿ ರೇಣುಕಾ ಹಾಗು ನಮ್ಮ ತಂದೆ ತಾಯಿ ಮತ್ತು ನಮ್ಮ ಮಕ್ಕಳು ಎಲ್ಲರು ನಮ್ಮ ಮನೆಯಲ್ಲಿ ಮಲಗಿಕೊಂಡಾಗ ರಾತ್ರಿ ಅಂದಾಜ 02;30 ಎ.ಎಂ ಸುಮಾರಿಗೆ ಯಾರೋ ನಮ್ಮ ಮನೆ ಬಾಗಿಲು ಬಡಿದರು ಆಗ ನಾನು ಎದ್ದು ನೋಡಿದಾಗ ನಮ್ಮ ಟೋಳಿ ಮಾಲಿಕರಾದ ಹಣಮಂತ ತಂದೆ ಫಕೀರಪ್ಪಾ ಟ್ಯಾಪಿ ಮತ್ತು ಅವರ ಅಣ್ಣತಮ್ಮಂದಿರರಾದ ವಿಠ್ಠಲ ಟ್ಯಾಪಿ, ಅರ್ಜುನ ಟ್ಯಾಪಿ ರವರು ಬಂದಿದ್ದರು, ಹಣಮಂತ ರವರು ನನಗೆ ಏ ಸೂಳಿ ಮಗನಾ ಯಲ್ಲ್ಯಾ ನಮ್ಮ ರೊಕ್ಕಾ ತಗೋಂಡು ಇಲ್ಲಿ ಮಜಾ ಮಾಡಲಾಕತ್ತಿಯೇನೋ ಭೋಸಡಿ ಮಗನಾ ಹೊಲ್ಯಾ ಅಂತಾ ಅಂದು ನನ್ನ ಕೈ ಹಿಡಿದು ಮನೆ ಹೊರಗೆ ರಸ್ತೆಯ ಮೇಲೆ ಎಳೆದು ನನಗೆ ಕಪಾಳ ಮೇಲೆ ಹೊಡೆದನು, ಆಗ ನಾನು ನಿಮ್ಮು ಹಣ ಆದಷ್ಟು ಬೇಗನೆ ಕೊಡತಿನಿ ನನಗ ಹೊಡೆಯ ಬೇಡಿ ಅಂತಾ ಅಂದಾಗ ವಿಠ್ಠಲ ಮತ್ತು ಅರ್ಜುನ ಇವರು ನನಗೆ ಕಾಲಿನಿಂದ ಒದ್ದು ನೆಲದ ಮೇಲೆ ಕೆಡವಿದರು, ಆಗ ನನ್ನ ಹೆಂಡತಿ ಮತ್ತು ನಮ್ಮ ತಂದೆ ತಾಯಿ ರವರು ಬಂದು ಬಿಡಿಸುತ್ತಿದ್ದಾಗ ಹಣಮಂತ ಮತ್ತು ವಿಠ್ಠಲ ಇವರು ನನ್ನ ಹೆಂಡತಿಗೆ ಮತ್ತು ನನ್ನ ಸಣ್ಣಮಗ ಮಂಜುನಾಥ ವಯ; 04 ವರ್ಷ ಇವನರಿಗೆ ಹಿಡಿದು ಅವರು ತಂದ ಕ್ರೋಜರ ವಾಹನದಲ್ಲಿ ಹಾಕಿಕೊಂಡರು, ನಂತರ ಹಣಮಂತ ಇವರು ನಮ್ಮ ಹಣ ನಮಗೆ ಕೊಟ್ಟು ನಿನ್ನ ಹೆಂಡತಿ ಮಗನಿಗೆ ಕರೆದುಕೊಂಡು ಹೋಗು ಇಲ್ಲದಿದ್ದರೆ ನಿನ್ನ ಹೆಂಡತಿ ಮಗನಿಗೆ ಖಲಾಸ ಮಾಡುತ್ತೇವೆ ಅಂತಾ ಅಂದು ತಮ್ಮ ಕ್ರೋಜರ ವಾಹನವನ್ನು ಅಲ್ಲಿಂದ ತೆಗೆದುಕೊಂಡು ಹೋದರು. ನಂತರ ನಮ್ಮ ಓಣಿಯವರಾದ ಸಂತೋಷ ತಂದೆ ತುಕಾರಾಮ ದೊಡಮನಿ, ಪುಂಡಲಿಕ ತಂದೆ ಗವಪ್ಪಾ ದೊಡಮನಿ ರವರು ಸೇರಿಕೊಂಡು ಸದರಿ ಕ್ರೋಜರ ವಾಹನದ ಹಿಂದೆ ಓಡಿ ಹೋದಾಗ ಅದು ನಮಗೆ ಸಿಗಲಿಲ್ಲಾ. ಸದರಿ ಹಣಮಂತ ಟ್ಯಾಪಿ ರವರಿಗೆ ನಾನು ಕೊಡಬೇಕಾದ ಹಣ ಕೊಡಲಾರದಕ್ಕೆ ಸದರಿಯವರು ನನಗೆ ಅವಾಚ್ಯ ಶಬ್ದಗಳಿಂದ ಬೈದಿ ಜಾತಿ ನಿಂದನೆ ಮಾಡಿ ಕೈಯಿಂದ ಹೊಡೆದು ನನ್ನ ಹೆಂಡತಿ ರೇಣುಕಾ ಮತ್ತು ನನ್ನ ಮಗ ಮಂಜುನಾಥ ರವರಿಗೆ ಕ್ರೋಜರ ವಾಹನದಲ್ಲಿ ಅಪಹರಿಸಿಕೊಂಡು ಜೀವ ಭಯ ಹಾಕಿ ಹೋಗಿರುತ್ತಾರೆ. ಅಂತಾ ಸಲ್ಲಿಸಿದ ದೂರು ಸಾರಂಸದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪಘಾತ ಪ್ರಕರಣ :
ಹೆಚ್ಚುವರಿ ಸಂಚಾರಿ ಠಾಣೆ : ಗಾಯಾಳು ರೇವಣಸಿದ್ದಪ್ಪಾ ಇವರನ್ನು ವಿಚಾರಿಸಲು ಸದರಿಯವರು ಮಾತನಾಡಿ ಹೇಳಿಕೆ ನೀಡುವ ಸ್ಥಿತಿಯಲ್ಲಿ ಇರದ ಕಾರಣ ಅವರ ಜೊತೆಯಲ್ಲಿದ್ದ ಅವರ ಹೆಂಡತಿಯಾದ ಶ್ರೀಮತಿ ಮಹಾದೇವಿ ರವರನ್ನು ವಿಚಾರಿಸಿಲಾಗಿ  ದಿನಾಂಕ  21-02-2015 ರಂದು ಮದ್ಯಾಹ್ನ 3-45 ಗಂಟೆ ಸುಮಾರಿಗೆ ನನ್ನ ಗಂಡನಾದ ರೇವಣಸಿದ್ದಪ್ಪಾ ಇವರು ನಮ್ಮ ಮನೆಯ ಅಟೋರಿಕ್ಷಾ ನಂಬರ ಕೆಎ-32 -6684 ನೇದ್ದರಲ್ಲಿ ಪ್ರಯಾಣಿಕರನ್ನು ಕೂಡಿಸಿಕೊಂಡು  ಎಸ್.ವಿ.ಪಿ ಸರ್ಕಲ ಕಡೆಯಿಂದ ಕೇಂದ್ರ ಬಸ್ ನಿಲ್ದಾಣದ ಕಡೆಗೆ ಅಟೋರಿಕ್ಷಾ ಚಲಾಯಿಸಿಕೊಂಡು ಹೋಗುವಾಗ ದಾರಿ ಮದ್ಯ ಮಹಾದೇವಿ ಕೆಸರಟಗಿ ಇವರ ಸೊಪಾ ಸೇಟ ಅಂಗಡಿಯ ಎದುರಿನ ರೋಡ ಮೇಲೆ ಹಿಂದಿನಿಂದ ಮೋ/ಸೈಕಲ ನಂಬರ ಕೆಎ-33 ಆರ್-4068 ನೇದ್ದರ ಸವಾರನು ತನ್ನ ಮೋ/ಸೈಕಲನ್ನು ಅತೀವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ನನ್ನ ಗಂಡ ಚಲಾಯಿಸಿಕೊಂಡು ಹೋಗುತ್ತಿರುವ ಅಟೋರಿಕ್ಷಾ ವಾಹನಕ್ಕೆ ಡಿಕ್ಕಿ ಪಡಿಸಿ ಅಪಘಾತ ಮಾಡಿ ನನ್ನ ಗಂಡನಿಗೆ ಭಾರಿಗಾಯಗೊಳಿಸಿ ಮೋ/ಸೈಕಲ ಚಲಾಯಿಸಿಕೊಂಡು ಓಡಿ ಹೋಗಿರುತ್ತಾನೆ ಅಂತಾ ಸಲ್ಲಿಸಿದ ದುರು ಸಾರಂಸದ ಮೇಲಿಂದ ಹೆಚ್ಚುವರಿ ಸಂಚರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.