POLICE BHAVAN KALABURAGI

POLICE BHAVAN KALABURAGI

28 August 2013

ಅಪಘಾತ ಪ್ರಕರಣ :

ಕಮಲಾಪೂರ ಠಾಣೆ : ಶ್ರೀಮತಿ ಅರ್ಚನ ಗಂಡ ಸಿದ್ದಾರ್ಥ ಬೋಮಡ್ಯಾ ಸಾ; ಪ್ಲಾಟ ನಂ.102 ಅನುಶಾರೆಡ್ಡಿ  ಮ್ಯಾಮಿಶನ್ ಬೋಡುಪಲ್ ಜಿಲ್ಲಾ ರಂಗಾರೆಡ್ಡಿ ಹೈದ್ರಾಬಾದ ಇವರು ತಮ್ಮ ಸ್ವಂತ ಹುಂಡೆ ವಿವಾ ಕಾರ್ ನಂ. ಎಪಿ-29 ಎಕ್ಸ್-2199 ನೇದ್ದರಲ್ಲಿ ಗಂಡ ಸಿದ್ಧಾರ್ಥ ಬೋಮಡ್ಯೆ ಹಾಗು ತಮ್ಮ ಅಭಿಶೇಕ್ ಇವರು ಕುಡಿಕೊಂಡು ಹೈದ್ರಾಬಾದದಿಂದ–ಬೀಜಾಪೂರಕ್ಕೆ ಬರುತ್ತಿರುವಾಗ ಸಿದ್ಧಾರ್ಥ ಬೋಮಡ್ಯೆ ಇವರು ಕಾರ ಚಲಾಯಿಸುತ್ತಿದ್ದು, ತನ್ನ ಕಾರನು ಅತಿವೇಗದಿಂದ ಚಲಾಯಿಸುತ್ತಾ ಮುಂದೆ ಬರುವ ವಾಹನಗಳಿಗೆ ಕಟ್ ಹೋಡೆಯುತ್ತಾ ಹೋಗುತ್ತಿರುವಾಗ ನಾವು ನಿಧಾನವಾಗಿ ಚಲಾಯಿಸುವಂತೆ ಹೇಳಿದರು ಕೂಡಾ ಕೇಳದೆ ಹಾಗೆ ಮುಂದುವರಿಸಿ, ದಿನಾಂಕ 27-08-2013 ರಂದು ರಾತ್ರಿ 12-15 ಗಂಟೆ ಸುಮಾರಿಗೆ ಹುಮನಾಬಾದ ಗುಲಬರ್ಗಾ ರಾಷ್ರೀಯ ಹೆದ್ದಾರಿ-218 ರ ಕುದರೆ ಮುಖ ಇಳುಕಿನಲ್ಲಿ ಹೋಗುತ್ತಿರುವಾಗ ಎದುರಿನಿಂದ ಯಾವುದೋ ಒಂದು ವಾಹನ ಬರುತ್ತಿದ್ದು ಅದರ ಫೋಕಶ್ ಲೈಟಿನ ಬೆಳಕಿಗೆ ವಾಹನ ಚಲಾಯಿಸುತ್ತಿದ್ದ ನನ್ನ ಗಂಡನಿಗೆ ದಾರಿ ಕಾಣದೆ ರಸ್ತೆ ಬಲಬದಿಗೆ ಕಟ್ ಹೊಡೆದು ಪಲ್ಟಿ ಮಾಡಿ, ಅಪಘಾತ ಪಡಿಸಿದ್ದರಿಂದ, ಕಾರಿನಲ್ಲಿದ್ದ ಸಿದ್ಧಾರ್ಥನಿಗೆ ತೆಲೆಗೆ, ಗದಕ್ಕೆ ರಕ್ತಗಾಯವಾಗಿ ಸೂಂಟಕ್ಕೆ ಗುಪ್ತಗಾಯಾಗಿದ್ದು, ಅಭಿಶೇಕ್ ಈತನಿಗೆ ನೋಡಲು ತೆಲೆಗೆ ಭಾರಿ ರಕ್ತಗಾಯವಾಗಿ ಸ್ಥಳದಲ್ಲೆ ಮೃತಪಟ್ಟಿದ್ದು, ನಂತರ 108 ಅಂಬುಲೆನ್ಸ್ ಮುಖಾಂತರ ನನ್ನ ಗಂಡನಿಗೆ ಬಸವೇಶ್ವರ ಆಸ್ಪತ್ರೆ ಗುಲಬರ್ಗಾಕ್ಕೆ ತಂದು ಸೇರಿಕೆ ಮಾಡಿದ್ದು , ಕಾರ ಚಾಲಕನ ವಿರುದ್ಧ ಕಾನೂನು ಕ್ರಮ ಕೈಕೊಳ್ಳಬೇಕು ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲೆಂದ ಕಮಲಾಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.