POLICE BHAVAN KALABURAGI

POLICE BHAVAN KALABURAGI

13 June 2012

GULBARGA DIST REPORTED CRIMES


ಅಪಘಾತ ಪ್ರಕರಣ:
ಮಾದನ ಹಿಪ್ಪರಗಾ ಪೊಲೀಸ್ ಠಾಣೆ:ಶ್ರೀ.ಗುರುನಾಥ ರೆಡ್ಡಿ ತಂದೆ ರಾಮಣಗೌಡ ಚಿಕ್ಕಮೇಟಿ ಸಾ:ಬಸವೇಶ್ವರ ನಗರ   ಶಹಾಪೂರ ಜಿ||ಯಾದಗೀರ ರವರು ನಾನು ದಿನಾಂಕ:11/06/2012 ರಂದು ಬೆಳಿಗ್ಗೆ 9-00 ಗಂಟೆಯ ಸುಮಾರಿಗೆ ನನ್ನ ಗೆಳೆಯನಾದ ಪ್ರಶಾಂತ ಸಾಸನೂರ ಶಹಾಪೂರ ಇವರಿಗೆ ಆರಾಮವಿಲ್ಲದ ಕಾರಣ ಅವರ ಸ್ವಂತ ಕಾರ ನಂ: ಕೆಎ 33 ಎಮ್ 2352 ನೇದ್ದರಲ್ಲಿ ಕುಳಿತುಕೊಂಡು ಶಹಾಪೂರ ದಿಂದ ಸೋಲಾಪೂರಕ್ಕೆ ಬೀನಿತ್ ಆಸ್ಪತ್ರೆಗೆ ಉಪಚಾರ ಸಲುವಾಗಿ ಹೋರಟಾಗ  ಕಾರ ನನ್ನ ಗೆಳೆಯನಾದ ಪ್ರಶಾಂತ ಇತನು ಚಲಾಯಿಸುತ್ತಿದ್ದನು. ರಾತ್ರಿ ಸೋಲಾಪೂರದಲ್ಲಿ ಉಳಿದುಕೊಂಡು ದಿನಾಂಕ:12/06/2012 ರಂದು ಬೆಳಿಗ್ಗೆ 7-00 ಗಂಟೆಯ ಸುಮಾರಿಗೆ ಸೋಲಾಪೂರ ದಿಂದ ಶಹಾಪೂರಕ್ಕೆ ಹೊರಟಾಗ ಕಾರ ಚಾಲಕನಾದ ಪ್ರಶಾಂತ ಇತನು ಸರಸಂಬಾ ಗ್ರಾಮದ ಸಮೀಪ ಶಿವಶರಣಪ್ಪ ಖೇಡ ಇವರ ಹೊಲದ ಹತ್ತಿರ ಅತೀವೇಗದಿಂದ, ಅಲಕ್ಷತನದಿಂದ ನಡೆಯಿಸಿಕೊಂಡು ಬಂದು ಒಮ್ಮಲೇ ಬ್ರೇಕ್ ಹಾಕಿದಾಗ ಕಾರ ಪಲ್ಟಿಯಾಗಿರುತ್ತದೆ. ಸದರಿ ಕಾರ ಜಖಂಗೊಂಡಿರುತ್ತದೆ. ಅಂತ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ 28/2012 ಕಲಂ 279 ಐ.ಪಿ.ಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡಿರುತ್ತಾರೆ.
ಅಪಘಾತ ಪ್ರಕರಣ:
ಮಾದನ ಹಿಪ್ಪರಗಾ ಪೊಲೀಸ್ ಠಾಣೆ: ಶ್ರೀ ಚಂದ್ರಕಾಂತ ತಂದೆ ಬಸಣ್ಣಾ ದೇಶೆಟ್ಟಿ ಸಾ: ಸರಸಂಬಾ ರವರು ನಾನು ದಿನಾಂಕ: 09/06/2012 ರಂದು ಸಾಯಂಕಾಲ 4-30 ಗಂಟೆ ಸುಮಾರಿಗೆ ಹೊಲದಲ್ಲಿ ಗಳ್ಯಾ  ಹೊಡೆಯುತ್ತಿದ್ದಾಗ ಸಿದ್ದಣ್ಣಾ ತಂದೆ ಭಾರತ ಪೂಲಾರೆ, ಮಲ್ಲಮ್ಮಾ ಗಂಡ ತುಕಾರಾಮ ದೇಶೆಟ್ಟಿ, ಲಕ್ಷ್ಮೀಣ ತಂದೆ ಚನ್ನಬಸಪ್ಪಾ ಪಾಟೀಲ ಸಾ:ಎಲ್ಲರೂ ಸರಸಂಬಾ ಹಾಗೂ ಇನ್ನೂ 3 ಜನರು  ಹೆಸರು ವಿಳಾಸ ಗೊತ್ತಿಲ್ಲಾ. ಇವರಲ್ಲಿ ಇಬ್ಬರು ಪೊಲೀಸ್ ಸಮವಸ್ತ್ರ ಹಾಕಿಕೊಂಡಿದ್ದು ಇನ್ನೂಬ್ಬ ಸಾದಾ ಉಡುಪು ಧರಿಸಿದ್ದನು. ಇವರು ನನ್ನ ಹತ್ತಿರ ಬಂದು ನಿನ್ನ ಮೇಲೆ ಸಿಮೆಂಟ ಕೇಸ್ ಆಗಿದೆ, ಅಂತಾ ಅಂದವರೆ ನನ್ನನೂ ಕೈ ಕಾಲು ಕಟ್ಟಿ ಜೀಪ್ ನಲ್ಲಿ ಹಾಕಿಕೊಂಡು ಮಹಾರಾಷ್ಟ್ರ ರಾಜ್ಯದ ಬೋಳೆಗಾಂವ ಗ್ರಾಮಕ್ಕೆ ತಂದು, ನನ್ನನೂ ಕೈಯಿಂದ ಕಾಲಿನಿಂದ ಒದ್ದು ಅವಾಚ್ಯ ಶಬ್ದಗಳಿಂದ ನಿಂದಿಸಿರುತ್ತಾರೆ. ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ:29/2012 ಕಲಂ 416,363,342,323, 504,506,ಸಂಗಡ 149 ಐ.ಪಿ.ಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.  
ಕಳ್ಳತನ ಪ್ರಕರಣ:
ಅಫಜಲಪೂರ ಪೊಲೀಸ್ ಠಾಣೆ :ದಿನಾಂಕ 02.06.12 ರಂದು ಶಿವಶರಣಪ್ಪ ತಂದೆ ಚಂದಪ್ಪ ಕೊಗನೂರ ಸಾ|| ಕರಜಗಿ ಇವರ ಹೊಲದಲ್ಲಿ ಕೂಡಿಸಿದ ಆರು (6)  ವಿಧ್ಯುತ್ತ್ 6 ಕಂಬಗಳಿಗೆ  ಹಾಕಿದ ಅಲ್ಯುಮಿನಿಯಂ ವಾಯರ ಅಂಧಾಜು ಕಿಮ್ಮತ್ತು 18,000/- ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ಅಂತಾ ಶ್ರೀ ಮಳಸಿದ್ದಪ್ಪ ತಂದೆ ಸಾಯಿಬಣ್ಣ ನೀಲೂರ ಉ|| ಶಾಖಾಧಿಕಾರಿ ಕೆಇಬಿ ಕರಜಗಿ ತಾ||ಅಫಜಲಪೂರ ರವರು ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ 103/12 ಕಲಂ 379 ಐ ಪಿ ಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಹಲ್ಲೆ ಪ್ರಕರಣ:

ರಾಘವೇಂದ್ರ ನಗರ ಪೊಲೀಸ್ ಠಾಣೆ: ಶ್ರೀ ಶರಣು ತಂದೆ ಶಿವಕುಮಾರ ಹಿರೇಮಠ ವ|| 21 ಸಾ|| ಯಂಕವ್ವ ಮಾರ್ಕೆಟ್ ಬ್ರಹ್ಮಪೂರ ಗುಲಬರ್ಗಾರವರು     ದಿನಾಂಕ 12-06-2012 ರಂದು ಸಾಯಂಕಾಲ 4-30 ಗಂಟೆಯ ಸುಮಾರಿಗೆ ನಾನು  ಹಾಗು ನನ್ನ  ಗೆಳೆಯ ವಿಶಾಲ ತಂದೆ ಪ್ರಕಾಶ ಸಿಂದೆ ಇಬ್ಬರೂ ಕೂಡಿಕೊಂಡು ಯಂಕವ್ವ ಮಾರ್ಕೆಟನಲ್ಲಿರುವ ರಟಕಲ್ ಹೊಟೆಲ್ ಹತ್ತಿರದಿಂದ ಮಾತಾಡುತ್ತಾ ಹೋಗುತ್ತಿರುವಾಗ ನಮ್ಮ ಎದುರಿಗೆ ಬಂದ ಸಂತೋಷ ಬೀದರ, ಸಂಗು, ನಾಗು ಹಡಗಿಲ್  ಈ ಮೂರು ಜನರು  ಕೂಡಿಕೊಂಡು ಸಂತೋಷ ಬೀದರ ಈತನು ಕೈಯಲ್ಲಿ  ಹಾಕಿ ಸ್ಟಿಕ್ ಹಿಡಿದುಕೊಂಡು ನನಗೆ ಎದೆಯ ಮೇಲಿನ ಅಂಗಿ ಹಿಡಿದು ಅವಾಚ್ಯವಾಗಿ ಬೈದು ಈ ಏರಿಯಾದಲ್ಲಿ ಬಹಳ ದಾದಾಗಿರಿ ಆಗಿದೆ ಅಂತ ಅಂದವನೆ ಅವನ ಕೈಯಲ್ಲಿದ್ದ ಹಾಕಿ ಸ್ಟಿಕ್ ದಿಂದ ಹೊಡೆದನು, ಆ ಏಟು ನನ್ನ ಎಡಗಣ್ಣಿನ ಮೇಲೆ ಬಿದ್ದು ರಕ್ತಗಾಯವಾಗಿದೆ. ಅದೇ ಹಾಕಿ ಸ್ಟಿಕ್ ದಿಂದ ಎಡಗಾಲಿನ ಮೇಲೆ ಹೊಡೆದು ರಕ್ತಗಾಯಗೊಳಿಸಿದರು. ನನ್ನ ಜೊತೆಗಿದ್ದ ವಿಶಾಲ ಈತನಿಗೆ ಸಂಗು ಇವನು ಒಂದು ಜಾಲಿ ಬಡಿಗೆಯಿಂದ ಹೊಡೆದು ರಕ್ತಗಾಯಗೊಳಿಸಿದನು. ಹಾಗು ನಾಗು ಹಡಗಿಲ್ ಈತನು ಕೈಯಿಂದ ಕಪಾಳಕ್ಕೆ ಹೊಡೆದಿರುತ್ತಾನೆ. ವಿನಾಃಕಾರಣ ನನಗೆ ಹಾಗು ನನ್ನ ಗೆಳೆಯನಿಗೆ ಹೊಡೆದಿರುತ್ತಾರೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: ನಂ 41/12 ಕಲಂ 341, 323, 324, 504 ಸಂಗಡ 34 ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ