POLICE BHAVAN KALABURAGI

POLICE BHAVAN KALABURAGI

24 January 2017

Kalaburagi District Reported Crimes

ಕೊಲೆ ಪ್ರಕರಣ :
ವಾಡಿ ಠಾಣೆ : ಶ್ರೀ ನೀಲಸಿಂಗ ತಂದೆ ಬಾಬು ಪವಾರ   ಸಾ: ಲಕ್ಷ್ಮಿಪೂರ ವಾಡಿ  ನನ್ನ  ಅಣ್ಣ ದೇವಿದಾಸ ಅಂತಾ ಇದ್ದು  ಅನಿತಾ ಅಂತಾ ಹೆಂಡತಿ ಇರುತ್ತಾಳೆ. ಅವರಿಗೆ ವಿಜಯಕುಮಾರ, ವಿಮಲ, ವೈಶಾಲಿ ಹಾಗೂ ವಿಶಾಲ ಅಂತಾ ಎರಡು ಗಂಡು ಮತ್ತು ಎರಡು ಹೆಣ್ಣು ಮಕ್ಕಳಿರುತ್ತಾರೆ. ನನ್ನ ಅಣ್ಣ ಕಳೆದ 3-4 ವರ್ಷಗಳ ಹಿಂದೆ ಅನಾರೊಗ್ಯದಿಂದ ಮರಣ ಹೊಂದಿರುತ್ತಾರೆ.  ಮನೆಯಲ್ಲಿ ನನ್ನ ಅಣ್ಣನ ಮಕ್ಕಳಾದ ವಿಜಯಕುಮಾರ, ವಿಶಾಲ ಹಾಗೂ ವೈಶಾಲಿ ಇವರು ಇರುತ್ತಾರೆ.  ನನ್ನ ಅತ್ತಿಗೆಯಾದ ಅನಿತಾ ಇವಳು ಕಳೆದ 2-3 ವರ್ಷಗಳಿಂದ ಬೇರೆಯವನೊಂದಿಗೆ ಅನೈತಿಕ ಸಂಬಂದ ಹೊಂದಿದ್ದು ಈ ವಿಷಯದ ಸಂಬಂದವಾಗಿ ನನ್ನ ಅಣ್ಣನ ಮಗನಾದ ವಿಜಯಕುಮಾರ ಇತನು ತನ್ನ ತಾಯಿಗೆ ಹಲವಾರು ಬಾರಿ ಹೀಗೆ ಮಾಡಬೇಡ ನಮ್ಮ ಮರ್ಯಾದೆ ಹೊಗುತ್ತದೆ ಅಂತಾ ಬುದ್ದಿವಾದ ಹೇಳಿದರೂ ಕೂಡಾ ನನ್ನ ಅತ್ತಿಗೆ  ಅನೈತಿಕ ಸಂಭಂದ ಮುಂದುವರೆಸಿಕೊಂಡು ಬಂದಿರುತ್ತಾಳೆ. ದಿನಾಂಕ: 23/01/2017 ರಂದು 9.45 ಪಿಎಮ್ ಸುಮಾರಿಗೆ ನಾನು ಮತ್ತು ನನ್ನ ತಂದೆ ಬಾಬು ಪವಾರ ಹಾಗೂ ನನ್ನ ತಮ್ಮ ಸಂಜಯಕುಮಾರ ಕೂಡಿ ನಮ್ಮ  ಮನೆಯಲ್ಲಿದ್ದಾಗ ನನ್ನ ಅಣ್ಣನ ಮಗಳಾದ ವೈಶಾಲಿ ಇವಳು ಮನೆಗೆ ಗಾಬರಿಯಾಗಿ ಅಳುತ್ತಾ ಬಂದು  ನಮಗೆ ಹೇಳಿದ್ದೇನೆಂದರೆ, ನನ್ನ ತಾಯಿ ಅನಿತಾ ಇವಳಿಗೆ ನನ್ನ ಅಣ್ಣ ವಿಜಯಕುಮಾರ ಇತನು ಏ ರಂಡಿ  ನಾನು ನಿನಗೆ ಎಷ್ಟು ಸಲ ಹೇಳಿದರೂ ಕೂಡಾ ನೀನು ನಿನ್ನ ಚಟ ಬಿಡುವದಿಲ್ಲಾ. ನಮ್ಮ ಮನೆತನದ ಮಾನ ಮರ್ಯಾದೆ ಹಾಳು ಮಾಡುತ್ತಿದ್ದಿ. ನಿನ್ನ ಕೆಟ್ಟ ಚಟ ಮುಂದುವರೆಸಿಕೊಂಡು ಬಂದಿದ್ದಿ ರಂಡಿ ಅಂತಾ ಅಂದಾಗ ಆಗ ನನ್ನ ತಾಯಿ ನನ್ನ ಅಣ್ಣನಿಗೆ ಏ ವಿಜಯ ನಾನು ಹೀಗೆ ಮಾಡುತ್ತೇನೆ ನೀನು ನನ್ನ ಮನೆಯಲ್ಲಿ ಇದ್ದರೇ ಇರು ಇಲ್ಲಾಂದರೆ ನೀನು ಮನೆ ಬಿಟ್ಟು ಹೋಗು ಅಂತಾ ಅಂದಿದ್ದಕ್ಕೆ ನನ್ನ ಅಣ್ಣ ಸಿಟ್ಟಿಗೆ ಬಂದು ನಿನ್ನನ್ನು ಇವತ್ತು ಬಿಡುವದಿಲ್ಲಾ. ನಿನ್ನನ್ನು ಖಲಾಸ ಮಾಡಿಯೇ ಬಿಡುತ್ತೇನೆ ರಂಡಿ ಮಗಳೆ ಅಂತಾ ಅಂದು ಕೊಲೆ ಮಾಡುವ ಉದ್ದೇಶದಿಂದ ಮನೆಯಲ್ಲಿದ್ದ ಚಾಕುವನ್ನು ತೆಗೆದುಕೊಂಡು ನನ್ನ ತಾಯಿಯ ಕುತ್ತಿಗೆ ಹಿಡಿದು ಕರಕರನೇ ಕೊಯ್ದು ರಕ್ತಗಾಯ ಮಾಡಿ ಓಡಿ ಹೊದನು. ಆಗ ನನ್ನ ತಾಯಿ ಬಿಕ್ಕುತ್ತಾ  ನೆಲದ ಮೇಲೆ ಬಿದ್ದು ಒದ್ದಾಡಿ ಸತ್ತಳು ಆಗ ಅಂದಾಜು 9.30 ಪಿಎಮ್ ಸುಮಾರು ಆಗಿತ್ತು ಅಂತಾ ಗಾಭರಿಯಾಗಿ ನನ್ನ ಅಣ್ಣನ ಮಗಳಾದ ವೈಶಾಲಿ ಇವಳು ಹೇಳಿದಾಗ ನಾವು ಗಾಬರಿಯಾಗಿ ನಾನು ಮತ್ತು ನನ್ನ ತಂದೆ ಬಾಬು ಹಾಗೂ ನನ್ನ ತಮ್ಮ ಸಂಜಯಕುಮಾರ ಕೂಡಿ ನನ್ನ ಅಣ್ಣನ ಮನೆಗೆ ಹೋಗಿ  ನೋಡಲಾಗಿ ನನ್ನ ಅತ್ತಿಗೆಯಾದ ಅನಿತಾ ಇವಳು ತನ್ನ ಮನೆಯಲ್ಲಿ ನೆಲದ ಮೇಲೆ ಅಂಗಾತವಾಗಿ ಬಿದ್ದಿದ್ದು ನೊಡಲಾಗಿ ಅವಳ ಕುತ್ತಿಗೆಯ ಭಾಗದಲ್ಲಿ ಭಾರಿ ರಕ್ತಗಾಯವಾಗಿ ರಕ್ತಸ್ರಾವದಿಂದ ಸ್ಥಳದಲ್ಲಿಯೇ  ಮೃತ ಪಟ್ಟಿರುತ್ತಾಳೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ವಾಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಸ್ವಾಭಾವಿಕ ಸಾವು ಪ್ರಕರಣ :
ಫರತಾಬಾದ ಠಾಣೆ : ಶ್ರೀ ನಿಂಗಮ್ಮ ಗಂಡ ಚಂದ್ರಕಾಂತ ಬರ್ಮಾ  ಸಾ: ಬಸವಪಟ್ಟಣ್ಣ  ತಾ; ಜಿ: ಕಲಬುರಗಿ ಇವರ ತವರೂರು ನಂದಿಕೂರ ಗ್ರಾಮ ಇದ್ದು. ನನ್ನ ತಂದೆ ತಾಯಿಗಳು ನನಗೆ  ನನ್ನ ಸೋದರ ಮಾವನಾದ ಚಂದ್ರಕಾಂತ ತಂದೆ ಕೋತಲಪ್ಪ ಬರ್ಮಾ  ಸಾ: ಬಸವಪಟ್ಟಣ್ಣ ಇವರೊಂದಿಗೆ ಮದುವೆ ಮಾಡಿಕೊಟ್ಟಿರುತ್ತಾರೆ. ನನಗೆ ಈಗ 12 ವರ್ಷದ ಶ್ರೀಶೈಲ ಹಾಗೂ 10 ವರ್ಷ ಮಹೇಶ ಎಂಬ ಎರಡು ಮಕ್ಕಳಿರುತ್ತಾರೆ. ನನ್ನ ಗಂಡ ಚಂದ್ರಕಾಂತ ಇವರು  ಈಗ ಸುಮಾರು 08 ವರ್ಷಗಳ ಹಿಂದೆ ಸಾಲ ಮಾಡಿ ನಮಗಿರುವ 2 ಎಕರೆ 20 ಗುಂಟೆ ಹೊಲ ಮಾರಾಟ ಮಾಡಿ ಸಾಲ ತೀರಿಸಿ  ಇದೇ ವೇಳೆ ನಡೆದ ಗ್ರಾಮ ಪಂಚಾಯತಿ ಚುನಾವಣೆಗೆ ನಿಂತು ಗೆದ್ದು ಗ್ರಾಮ ಪಂಚಾಯತಿ ಸದಸ್ಯನಾಗಿ 5 ವರ್ಷ ಸಮಾಜಸೇವೆ ಮಾಡಿರುತ್ತಾನೆ. ಈ ವೇಳೆಗೆ ನನ್ನ ಗಂಡನಿಗೆ ಸುಮಾರು 20 ಲಕ್ಷ ರೂಪಾಯಿ ಸಾಲವಾಗಿದ್ದು ನನ್ನ ಗಂಡ ಚಂದ್ರಕಾಂತ ಇವರು ಈ ಸಾಲ ಹೇಗೆ ಮುಟ್ಟಿಸಬೇಕು ಅಂತಾ ಸದಾ ಅದೇ ಚಿಂತಿಯಲ್ಲಿ ಇರುತ್ತಿದ್ದರು. ನಾನು ನನ್ನ ಗಂಡನಿಗೆ ಹೇಗಾದರು ಮಾಡಿ ಮಾಡಿರುವ ಸಾಲ ತೀರಿಸಿದರಾಯಿತು ಅಂತಾ ಸಮಾಧಾನ ಹೇಳುತ್ತಿದ್ದನು. ದಿನಾಂಕ 23/01/2017 ರಂದು ಸಾಯಂಕಾಲ 05 ಗಂಟೆ ಸುಮಾರಿಗೆ  ಹೊರಗಡೆ ಹೋಗಿ ಬರುತ್ತೇನೆ ಅಂತಾ ನನಗೆ ಹೇಳಿ ಮನೆಯಿಂದ ಹೊರಗೆ ಹೋಗಿದ್ದು ಸ್ವಲ್ಪ ಸಮಯದ ನಂತರ 6 ಪಿಎಮ ಸುಮಾರಿಗೆ ನನ್ನಗಂಡ  ಚಂದ್ರಕಾಂತ ಇವನು ನಮ್ಮ  ಅಣ್ಣತಮ್ಮಕೀಯ ಸಂಬಂದಿಕರಾದ  ಶಿವಶರಣಪ್ಪಾ ಬರ್ಮಾ ಇವರು ಹೊಲದಲ್ಲಿ  ಬೇವಿನ ಗಿಡಕ್ಕೆ ನೇಣು ಹಾಕಿಕೊಂಡು ಮೃತಪಟ್ಟಿರುತ್ತಾನೆ ಅಂತಾ ಜನರು ಅಂದಾಡುವದನ್ನು ಕೇಳಿ  ನಾನು ನಮ್ಮೂರಿನ ಕೆಲವು ಜನರೊಂದಿಗೆ ಹೋಗಿ ನೋಡಲಾಗಿ  ನನ್ನ ಗಂಡ ಚಂದ್ರಕಾಂತ ಬರ್ಮಾ ಇವರು ನಮ್ಮ ಅಣ್ಣತಮ್ಮಕೀಯ ಪೈಕಿ ಸಂಬಂದಿಕರಾದ ಶಿವಶರಣಪ್ಪಾ ಬರ್ಮಾ ಇವರು ಹೊಲದಲ್ಲಿನ  ಬಂದಾರಿಯಲ್ಲಿರುವ ಬೇವಿನ ಗಿಡಕ್ಕೆ ನೇಣು ಹಾಕಿಕೊಂಡು ಮೃತಪಟ್ಟಿರುತ್ತಾನೆ. ನನ್ನ ಗಂಡ ಮಾಡಿರುವ ಸಾಲ ಹೇಗೆ ತೀರಸ ಬೇಕೆಂದು ಚಿಂತೆ ಮಾಡಿ ಅದೇ ಚಿಂತೆಯಿಂದ  ಇಂದು ದಿನಾಂಕ 23./01/2017 ರಂದು ಸಾಯಾಂಕಾಲ 5 ಪಿಎಮ ದಿಂದ 6 ಪಿಎಮದ  ನಡುವಿನ ಅವಧಿಯಲ್ಲಿ ಹಗ್ಗದಿಂದ ನೇಣು ಹಾಕಿಕೊಂಡು ಮೃತಪಟ್ಟಿರುತ್ತಾನೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಫರತಾಬಾದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ಅಪಹರಿಸಿಕೊಂಡು ಹೋಗಿ ಅತ್ಯಾಚಾರ ಮಾಡಿದ ಪ್ರಕರಣ :
ಯಡ್ರಾಮಿ ಠಾಣೆ : ಶ್ರೀ ಕುಮಾರ ಇವರ ಮಗಳಾದ ಕುಮಾರಿ ಇವಳು ದಿನಾಂಕ 17-01-2017 ರಂದು ಬೆಳಿಗ್ಗೆ 05;00 ಗಂಟೆಗೆ ಬೈಹಿರ ದೇಸೆಗೆ ಹೋಗಿ ಬರುತ್ತೇನೆ ಅಂತಾ ಹೇಳಿ ಹೋಗಿರುತ್ತಾಳೆ, ನಂತರ ಮಗಳು ಮರಳಿ ಮನೆಗೆ ಬರಲಿಲ್ಲಾ, ಆಗ ನನ್ನ ಹೆಂಡತಿ ಬೈಹಿರದೆಸೆಗೆ ಹೋದ ಸ್ಥಳದಲ್ಲಿ ಹೋಗಿ ಹುಡಕಾಡಿದರು ನಮ್ಮ ಮಗಳು ಸಿಗಲಿಲ್ಲಾ, ನಂತರ ನಾನು ಮತ್ತು ನನ್ನ ಹೆಂಡತಿ, ನನ್ನ ಮಗ ಹಾಗು ನಮ್ಮ ತಮ್ಮ ಕೂಡಿ ನಮ್ಮ  ಮಗಳಿಗೆ ಊರಲ್ಲಿ ಮತ್ತು ಜೇವರ್ಗಿಯಲ್ಲಿ ಹುಡಕಾಡಿದರು ಸಿಗಲಿಲ್ಲಾ, ನಂತರ ಮದ್ಯಾಹ್ನ ನಮ್ಮೂರ ಸಿದ್ದಪ್ಪ ತಂದೆ ನಾಗಪ್ಪ ಗೋಳೆ ಇವನು ನನ್ನ ಮಗ ಮೂಬೈಲಿಗೆ ಫೋನ ಮಾಡಿ ನಿಮ್ಮ ತಂಗಿಗೆ ನಾನು ಇಂದು ಬೆಳಿಗ್ಗೆ ಕಿಡ್ನಾಪ ಮಾಡಿಕೊಂಡು ಹೋಗಿದ್ದೇನೆ, ನಿವು ಏನು ಮಾಡಕೋತಿರಿ ಮಾಡಕೋರಿ ಅಂತಾ ಅಂದು ಫೋನ ಕಟ್ಟ ಮಾಡಿರುತ್ತಾನೆ. ಅಪ್ರಾಪ್ತ ವಯಸ್ಸಿನ ನನ್ನ ಮಗಳನ್ನು ನಮ್ಮೂರ ಸಿದ್ದಪ್ಪ ತಂದೆ ನಾಗಪ್ಪ ಗೋಳೆ ಇವನು ಯಾವುದೋ ದುರುದ್ದೇಶದಿಂದ ದಿನಾಂಕ 17-01-2017 ರಂದು ಬೆಳಿಗ್ಗೆ 05;00 ಗಂಟೆಯಿಂದ 05;30 ಗಂಟೆ ಮದ್ಯದಲ್ಲಿ ನನ್ನ ಮಗಳು ಬೈಹಿರದೇಸೆಗೆ ಹೋದಾಗ ಅಪಹರಣ ಮಾಡಿಕೊಂಡು ಹೋಗಿರುತ್ತಾನೆ, ಅಂಥಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಯಡ್ರಾಮಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು  ತನಿಖೆ ಕಾಲಕ್ಕೆ  ಆರೋಪಿ ಮತ್ತು ಅಪಹರಣಕ್ಕೊಳಗಾದ ಕುಮಾರಿ  ಪತ್ತೆ ಕುರಿತು ಶ್ರೀ ಸಿದರಾಯ ಬಳೂರ್ಗಿ ಪಿ.ಎಸ್.  ಯಡ್ರಾಮಿ ಪೊಲೀಸ್ ಠಾಣೆ  ಹಾಗು ಸಿಬ್ಬಂದಿ ರವರು  ದಿನಾಂಕ 23-01-2017 ರಂದು ಬೆಳಿಗ್ಗೆ ಪ್ರಕರಣದಲ್ಲಿ ಅಪಹರಣಕ್ಕೊಳಗಾದ ಕುಮಾರಿ ಹಾಗು ಆರೋಪಿ ಸಿದ್ದಪ್ಪ ತಂದೆ ನಾಗಪ್ಪ ಗೋಳೆ ರವರಿಗೆ ಬಿಜಾಪೂರದ ಆನಂದ ಲಾಡ್ಜನಲ್ಲಿ ವಶಕ್ಕೆ ಪಡೆದುಕೊಂಡು ಮರಳಿ ಠಾಣೆಗೆ ಬಂದು ನಂತರ  ಜೇವರ್ಗಿ ಠಾಣೆಯ ಜೋತಿ ಎ.ಎಸ್.ಐ ರವರಿಂದ ಸಂತ್ರಸ್ತೆಯನ್ನು ವಿಚಾರಿಸಿದ್ದು ಅವರ ಮುಂದೆ ಹೇಳಿಕೆ ನೀಡಿದ್ದೇನೆಂದರೆ, ಈಗ ಸುಮಾರು 3 ವರ್ಷಗಳಿಂದ ನಮ್ಮೂರ ಸಿದ್ದಪ್ಪ ತಂದೆ ನಾಗಪ್ಪ ಗೋಳೆ ಇತನೊಂದಿಗೆ ಪ್ರಿತಿಸುತ್ತಿರುತ್ತೇನೆ, ನಾವಿಬ್ಬರು ಆಗಾಗ ನಮ್ಮ ಮನೆ ಹಿಂದೆ ಇರುವ ಶಿವಪ್ಪ ಪೂಜಾರಿ ಇವರ ಹೊಲದಲ್ಲಿ ಬೇಟಿಯಾಗುತ್ತಿದ್ದು, ಆ ಸಮಯದಲ್ಲಿ ಸಿದ್ದಪ್ಪ ಈತನು ನನಗೆ ಸಂಬೋಗ ಮಾಡುತ್ತಿದ್ದನು, ದಿ: 16-1-17 ರಂದು ಸಾಯಂಕಾಲ ಸಮಯದಲ್ಲಿ ನನಗೆ ಸಿದ್ದಪ್ಪನು ಊರಲ್ಲಿ ಸಿಕ್ಕಾಗ ನಾಳೆ ಬೆಳಿಗ್ಗೆ ನೀನು ಶಿವಪ್ಪ ಪೂಜಾರಿ ಇವರ ಹೊಲದ ಕಡೆಗೆ ಬಾ ನಿನಗೆ ಬಿಜಾಪೂರಕ್ಕೆ ಕರೆದುಕೊಂಡು ಹೋಗುತ್ತೇನೆ ಅಂತಾ ರಂಬಿಸಿ ಹೇಳಿದನು. ಆಗ ನಾನು ಅವನ ಮಾತಿಗೆ ಒಪ್ಪಿ ಆಯಿತು ಬೆಳಿಗ್ಗೆ ಬರುತ್ತೇನೆ ಅಂತಾ ಹೇಳಿದ್ದು ಆದರಂತೆ ಮರುದಿನ ದಿನಾಂಕ 17-01-2017 ರಂದು ಬೆಳಿಗ್ಗೆ 05;00 ಗಂಟೆಗೆ ನಾನು ಬೈಹಿರ ದೇಸೆಗೆ ಹೋಗುತ್ತೇನೆ ಅಂತಾ ನಮ್ಮ ಮನೆಯಲ್ಲಿ ಹೇಳಿ ಶಿವಪ್ಪ ಪೂಜಾರಿ ಇವರ ಹೊಲದ ಕಡೆಗೆ ಹೋಗಿದ್ದೇನು. ಅಷ್ಟರಲ್ಲಿ ಅಲ್ಲಿಗೆ ಸಿದ್ದಪ್ಪನು ಕೂಡಾ ಬಂದಿದ್ದನು. ಆಗ ಸಿದ್ದಪ್ಪನು ನನಗೆ ಹೊಲದಲ್ಲಿಯೇ ಸಂಬೋಗ ಮಾಡಿ ಆ ಮೇಲೆ ಅವನ ಟಂ ಟಂ ಅಟೋದಲ್ಲಿ ಕೂಡಿಸಿಕೊಂಡು ಚಾಮನಾಳ ತನಕ ಕರೆದುಕೊಂಡು ಹೋಗಿ ಅಲ್ಲಿಂದ ಬಸ್ಸಿನಲ್ಲಿ ತಾಳಿಕೊಟಿಗೆ ಕರೆದುಕೊಂಡು ಹೋಗಿರುತ್ತಾನೆ. ತಾಳಿಕೋಟದಲ್ಲಿ ಒಂದು ಮಠದಲ್ಲಿ ಎರಡು ದಿನ ಇದ್ದು ನಂತರ ಅಲ್ಲಿಂದ ಬಸವನ ಭಾಗೇವಾಡಿಗೆ ಹೋಗಿ ಅಲ್ಲಿ ಎಲ್ಲಾ ಕಡೆ ಸುತ್ತಾಡಿ ಅಲ್ಲಿಂದ ದಿನಾಂಕ 21-01-2017 ರಂದು ಬಿಜಾಪೂರಕ್ಕೆ ಕರೆದುಕೊಂಡು ಹೋಗಿದ್ದನು. ಒಂದು ದಿನ ರಾತ್ರಿ ಬಿಜಾಪೂರ ಬಸ್ಸ ನಿಲ್ದಾಣದಲ್ಲಿ ಮಲಗಿದ್ದೇವು. ನಿನ್ನೆ ದಿ: 22-1-17 ರಂದು ಸಿದ್ದಪ್ಪನು ಬಿಜಾಪೂರ ಬಸ್ಸ ನಿಲ್ದಾಣದ ಮುಂದೆ ಇದ್ದ ಆನಂದ ಲಾಡ್ಜನಲ್ಲಿ ಬಾಡಿಗೆ ರೂಮ ಹಿಡಿದಿದ್ದು ನಾವಿಬ್ಬರೂ ಲಾಡ್ಜನಲ್ಲಿದ್ದಾಗ ನಿನ್ನೆ ರಾತ್ರಿ ನನಗೆ ಸಂಭೋಗ ಮಾಡಿರುತ್ತಾನೆ. ಇಂದು ಬೆಳಗ್ಗೆ ಬಿಜಾಪೂರಕ್ಕೆ ಪೊಲೀಸ್ ನವರು ಬಂದು ನಮ್ಮಿಬ್ಬರನ್ನು ಹಿಡಿದುಕೊಂಡು ಯಡ್ರಾಮಿ ಠಾಣೆಗೆ ಕರೆತಂದಿರುತ್ತಾರೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಯಡ್ರಾಮಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.