POLICE BHAVAN KALABURAGI

POLICE BHAVAN KALABURAGI

20 June 2017

Kalaburagi District Reported Crimes

ಹೆಣ್ಣುಮಕ್ಕಳು  ಕಾಣೆಯಾದ ಪ್ರಕರಣಗಳು  :
ಅಫಜಲಪೂರ ಠಾಣೆ : ಶ್ರೀ ಹುಸೇನಸಾಬ ತಂದೆ ಇಮಾಮಸಾಬ ಶೇಖ ಸಾ||ಅಳ್ಳಗಿ(ಬಿ) ಹಾ|||| ಉಸ್ಮಾನಿಯಾ ಕಾಲೋನಿ ಅಫಜಲಪೂರ  ಇವರು ದಿನಾಂಕ 18/05/2017 ರಂದು ನಮ್ಮ ಪರಿಚಯಸ್ಥರ ಮದುವೆ ಅಫಜಲಪೂರ ಪಟ್ಟಣದ ಸಿದ್ದರಾಮೆಶ್ವರ ಗುಡಿಯಲ್ಲಿ ಇದ್ದಿದ್ದರಿಂದ ಬೆಳಿಗ್ಗೆ 11.00 ಗಂಟೆ ಸುಮಾರಿಗೆ ನಾನು ನನ್ನ ಹೆಂಡತಿ ಇಬ್ಬರು ಕೂಡಿ ನಮ್ಮ ಹಿರಿಯ ಮಗಳಾದ ಕುಮಾರಿ ಸನಾ  ಇವಳಿಗೆ ಮನೆಯಲ್ಲಿಯೇ ಬಿಟ್ಟು ಉಳಿದ 4 ಜನ ಮಕ್ಕಳಿಗೆ ನಮ್ಮ ಜೋತೆ ಕರೆದುಕೊಂಡು ಮದುವೆಗೆ ಹೋಗಿ ಮರಳಿ ಮನೆಗೆ 1.00 ಪಿಎಮ್ ಕ್ಕೆ ಬಂದು ನೋಡಲಾಗಿ ನಮ್ಮ ಮನೆಯಲ್ಲಿ ನನ್ನ ಮಗಳಾದ ಸನಾ ಇವಳು ಇರಲಿಲ್ಲಾ ನಂತರ ನಾನು ನನ್ನ ಹೆಂಡತಿ ಇಬ್ಬರು ಕೂಡಿ ನಮ್ಮ ಓಣಿಯಲ್ಲಿ ವಿಚಾರಿಸಿದಾಗ ಯಾವುದೇ ಮಾಹಿತಿ ಸಿಕ್ಕಿರುವುದಿಲ್ಲ ನಂತರ ನಮ್ಮ ಓಣಿಯ ಮೋಸಿನ್ ತಂದೆ ಹಬೀಬ ಪಠಾಣ, ಫಾರುಕ ತಂದೆ ಇಲಾಯಿ ಶೇಖ ಮೂರು ಜನರು ಕೂಡಿ ನಮ್ಮ ಸ್ವಂತ ಗ್ರಾಮವಾದ ಅಳ್ಳಗಿ(ಬಿ) ಹಾಗು ನಮ್ಮ ಸಂಬಂಧಿಕರ ಊರಗಳಾದ ಸೇಡಂ ತಾಲೂಕಿನ ಸೋಮಪಲ್ಲಿ, ಇಂಡಿ, ಸೋಲಾಪೂರ, ಬಾಂಬೆಗಳಿಗೆ ಹೋಗಿ ನನ್ನ ಮಗಳಾದ ಸನಾಳ ಬಗ್ಗೆ ವಿಚಾರಿಸಿರುತ್ತೇವೆ. ಹಾಗೂ ನಮ್ಮ ಪರಿಚಯಸ್ಥರಿಗೆ ಪೋನ ಮಾಡಿ ವಿಚಾರಿಸಿರುತ್ತೇವೆ. ನಮ್ಮ ಮಗಳು ಎಲ್ಲಿಯೂ ಸಿಕ್ಕಿರುವುದಿಲ್ಲ. ಅಂತಾ ಸಲ್ಲಿಸಿದ ದೂರು ಸಾರಾಂಶದ ,ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ಫರತಾಬಾದ ಠಾಣೆ : ಶ್ರೀ ಚಂದ್ರಶಾ ತಂದೆ ಶಾಂತಪ್ಪಾ ಬಿರಾದಾರ ಸಾ:ಮಿಣಜಗಿ ತಾ:ಜಿ:ಕಲಬುರಗಿ ಇವರ ಮೊಮ್ಮಗಳಾದ ಶಿವಲಿಲಾ ಇವಳಿಗೆ ಹುನುಗುಂಟಾದ ಶಿವಪ್ಪಾ ಎಂಬುವರೊಂದಿಗೆ ಈಗ ಒಂದು ತಿಂಗಳ ಹಿಂದೆ ಮದುವೆ ಮಾಡಿಕೊಟ್ಟಿರುತ್ತೇವೆ. ನಮ್ಮೂರಿನಲ್ಲಿ ಸಂಬದಿಕರ ಮದುವೆ ಇದ್ದ ಕಾರಣ ಮೋಮ್ಮಗಳಿಗೆ ಗಂಡನ  ಮನೆಯಿಂದ ಕರೆದು ಕೊಂಡುಬಂದಿರುತ್ತೇವೆ  ಹೀಗಿದ್ದು ದಿನಾಂಕ 16/06/2017 ರಂದು ಸಂಬಂದಿಕರ ಮದುವೆ ಫರತಾಬಾದದ ಶರಣಬಸವೇಶ್ವ ದೇವಸ್ಥಾನದಲ್ಲಿದ ಕಾರಣ ನಾನು ಮೋಮ್ಮಗಳಾದ ಶಿವಲಿಲಾ ಹಾಗು ಮಗ ಅಪ್ಪಾಸಾಬ ,ಸೋಸೆ ಲಲಿತಾಬಾಯಿ ಎಲ್ಲರೂ ಫರತಾಬಾದಕ್ಕೆ ಬಂದು ಮದುವೆ ಕಾರ್ಯಕ್ರಮ ಮುಗಿಸಿಕೊಂಡು ಸಾಯಾಂಕಾಲ ಮನೆಗೆ ಬಂದು ರಾತ್ರಿ ಊಟಮಾಡಿ ಮಲಗಿಕೊಂಡೆವು ನಂತರ ನಾನು ರಾತ್ರಿ 10 ಗಂಟೆಗೆ  ಮೂತ್ರ ವಿರ್ಸಜನೆಗೆ ಎದ್ದಾಗ ಮೋಮ್ಮಗಳಾದ ಶಿವಲಿಲಾ ಇವಳು ಮನೆಯಲ್ಲಿ ಕಾಣಲಿಲ್ಲಾ ನಾನು ಗಾಭರಿಗೊಂಡು ಮಗ ಅಪ್ಪಾಸಾಬ ಸೊಸೆಗೆ ಎಬ್ಬಿಸಿ ಎಲ್ಲರೂ ಕೊಡಿ ಹುಡುಕಾಡಿದರು ಮೋಮ್ಮಗಳ ಪತ್ತೆಯಾಗಿರುವುದಿಲ್ಲಾ ಇಸ್ಟು ದಿವಸ ನಮ್ಮ ಎಲ್ಲಾ ಸಂಭದಿಕರ ಹತ್ತಿರ ಹೋಗಿ ವಿಚಾರಿಸಲಾಗಿ ಅವಳ ಪತ್ತೆಯಾಗಿರುವುದಿಲ್ಲಾ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಫರತಾಬಾದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.