POLICE BHAVAN KALABURAGI

POLICE BHAVAN KALABURAGI

07 April 2014

Gulbarga District Reported Crimes

ಹಲ್ಲೆ ಹಾಗು ಕಿರುಕಳ ಪ್ರಕರಣ :
ಕಮಲಾಪೂರ ಠಾಣೆ : ಶ್ರೀಮತಿ.ನಸಿಮಾಬೇಗಂ ಗಂಡ ಮಿರಾಜುದ್ದೀನ್ ಜಮಾದಾರ ಇವಳಿಗೆ 1997 ರಲ್ಲಿ ಮದುವೆ ಮಾಡಿದ್ದು  ಮಿರಾಜುದ್ದೀನನೊಂದಿಗೆ ಸುಮಾರು 6 ವರ್ಷ ಸಂಸಾರ ಮಾಡಿದ್ದು ನಂತರ ಗಂಡ ಮತ್ತು ಆತನ ಮನೆಯವರು ಕಿರುಕುಳ ನೀಡುತ್ತಿದ್ದರಿಂದ 2005 ನೇ ಸಾಲಿನಿಂದ ತನ್ನ ತವರು ಮನೆಯಾದ ಮರಗುತ್ತಿಗೆ ಬಂದು ತನ್ನ ತಂದೆಯ ಮನೆಯಲ್ಲಿ ವಾಸವಾಗಿರುತ್ತಾಳೆ. ಕಿರುಕುಳ ನೀಡಿದ ಬಗ್ಗೆ ಅವಳು ತನ್ನ ಗಂಡ ಮಿರಾಜುದ್ದೀನ್ ವಿರುದ್ದ ಜೀವನಾಂಶ ಕೇಳಿ ಮಾನ್ಯ ಕುಟುಂಬ ನ್ಯಾಯಾಲಯದಲ್ಲಿ ಕ್ರಿಮಿನಲ್ ಮಿಸಲೇನಿಯಸ್ ನಂ: 137/2005 ನೇದ್ದರಲ್ಲಿ ರ್ಜಿ ಹಾಕಿದ್ದು, ಮಾನ್ಯ ನ್ಯಾಯಾಲಯ ಫಿರ್ಯಾದುದಾರಳಿಗೆ ಜೀವನಾಂಶ ಕೊಡುವಂತೆ ಆದೇಶ ಮಾಡಿದ್ದು, ಫಿರ್ಯಾದುದಾರಳ ಎದುರಾಳಿದಾರರಾದ 1.ಮಿರಾಜುದ್ದೀನ್ ತಂದೆ ಸರದಾರಸಾಬ ಜಮಾದಾರ 2.ಸರದಾರಸಾಬ ತಂದೆ ಖಾಸಿಮಸಾಬ ಜಮಾದಾರ 3.ರುಕುಮಬೀ ಗಂಡ ಸರದಾರಸಾಬ 4. ಫರಜಾನಾಬೇಗಂ ಗಂಡ ಫತ್ರುಸಾಬ  5.ಮಸ್ತಾನಸಾಬ ತಂದೆ ಸರದಾರಸಾಬ ಸಾ; ಎಲ್ಲರೂ ಕಿಣ್ಣಿಸಡಕ ಗ್ರಾಮ ತಾ:ಜಿ: ಗುಲಬರ್ಗಾ  ಮತ್ತು 6.ನುಸರತಬೇಗಂ ಗಂಡ ಮಿರಾಜುದ್ದೀನ್ 7.ಖಯ್ಯುಮ್ 8.ನಯೀಮ್ 9.ಹನ್ನಿಬೇಗಂ 10.ರಫೀಕ 11.ನಾಸೀರ ಸಾ; ಎಲ್ಲರೂ ಬೀದರ ಇವರುಗಳ ವಿರುದ್ದ ಕ್ರಿಮಿನಲ್ ಮೊಕದ್ದಮೆ ಹೂಡಿದ್ದು, ಆರೋಪಿತರೆಲ್ಲರೂ ಕೂಡಿಕೊಂಡು ರ್ಜಿದಾರಳೊಂದಿಗೆ ರಾಜಿ ಪಂಚಾಯತಿ ಮಾಡಿಕೊಂಡಿದ್ದರಿಂದ ಕ್ರೀಮಿನಲ್ ಕೇಸ್ ಹಿಂದಕ್ಕೆ ಪಡೆದುಕೊಂಡಿರುತ್ತಾಳೆ. ಸದ್ಯ ಕೊಡಬೇಕಾದ ಹಣ ಕೇಳಲು ಹೋದಾಗ ಹಣ ಕೊಡದೇ ನಿನಗೆ ನಾವು ಮೋಸ ಮಾಡಿ ಕೇಸ್ ಹಿಂದಕ್ಕೆ ಪಡೆದುಕೊಳ್ಳುವಂತೆ ಮಾಡಿದ್ದೇವೆ ನಿನಗೆ ಯಾವ ಹಣ ಕೊಡುವುದಿಲ್ಲ ಇನ್ನೊಮ್ಮೆ ನಮ್ಮ ಕಡೆಗೆ ಬಂದರೆ ಜೀವ ಸಹಿತ ಬಿಡುವುದಿಲ್ಲ ಅಂತಾ ವಗೈರೆ ಹೆದರಿಸಿ ಮಿರಾಜುದ್ದೀನನ್ನು ಫಿರ್ಯಾದುದಾರಳ ಕಡೆಗೆ ಹೋಗಲು ಬಿಡದೇ ಫೋನಿನಲ್ಲಿ ಬೈಯ್ಯುತ್ತಾ ಮಾನಸಿಕ ಕಿರುಕುಳ ನೀಡಿದ್ದು ದಿನಾಂಕ: 10/02/2013 ರಂದು ಮಧ್ಯಾಹ್ನ 02-30 ಗಂಟೆ ಸುಮಾರಿಗೆ ರೋಡಕಿಣ್ಣಿ ಗ್ರಾಮಕ್ಕೆ ಹೋದಾಗ ಆರೋಪಿತರು ಸೇರಿಕೊಂಡು  ಅವಾಚ್ಯ ಶಬ್ದಗಳಿಂದ ಬೈದು ಕೈಯಿಂದ ಮತ್ತು ಕಲ್ಲಿನಿಂದ ಹೊಡೆದು ಕೊಲೆ ಮಾಡಲು ಪ್ರಯತ್ನ ಪಟ್ಟಿದ್ದು, ಆಗ ಗ್ರಾಮದವರು ಬಂದು ಬಿಡಿಸಿ ಕಳುಹಿಸಿರುತ್ತಾರೆ. ಮತ್ತೆ ದಿನಾಂಕ: 23/02/2013 ರಂದು ಆರೋಪಿತರು ಕೂಡಿಕೊಂಡು ಮರಗುತ್ತಿ ಗ್ರಾಮಕ್ಕೆ ಬಂದು ಅವಾಚ್ಯ ಶಬ್ದಗಳಿಂದ ಬೈಯ್ದು ಹೊಡೆ ಬಡೆ ಮಾಡಿ ಮಾನಸಿಕ ಮತ್ತು ದೈಹಿಕ ಕಿರುಕುಳ ನೀಡಿದ್ದು, ಆಗ ಆಕೆಯ ತಂದೆ-ತಾಯಿ ಮತ್ತು ಗ್ರಾಮದವರು ಬಂದು ಜಗಳ ಬಿಡಿಸಿ ಕಳುಹಿಸಿರುತ್ತಾರೆ. ದಿನಾಂಕ: 29/10/2013 ರಂದು ರಾತ್ರಿ 08-00 ಗಂಟೆ ಸುಮಾರಿಗೆ ಗಂಡ ಮಿರಾಜೋದ್ದೀನ್ ಈತನು ಮರಗುತ್ತಿ ಗ್ರಾಮಕ್ಕೆ ಬಂದು ನನಗೆ ಹೊಡೆ ಬಡೆ ಮಾಡಿ ಜೀವದ ಬೆದರಿಕೆ ಹಾಕಿ ಹೋಗಿರುತ್ತಾನೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಕಮಲಾಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಜಾತಿ ನಿಂದನೆ ಮಾಡಿ ಕಿರುಕಳ ನಿಡಿ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಪ್ರಕರಣ :
ಅಫಜಲಪೂರ ಠಾಣೆ : ಶ್ರೀಮತಿ ಶರಣಮ್ಮ ಗಂಡ ರಾಯಪ್ಪ ಚಾಂಬರ ಸಾ: ಅಫಜಲಪೂರ ರವರ ಮಗನಾದ ರಾಜು ತಂದೆ ರಾಯಪ್ಪ ಚಾಂಬರ ಮತ್ತು ಅವರ ಹೆಂಡತಿಯೊಂದಿಗೆ ಬಳೂಂಡಗಿ ಗ್ರಾಮದ ಮಲ್ಲಣಗೌಡ ಪಾಟೀಲ್ ಇವರ ಹೊಲದಲ್ಲಿ ಈಗೆ ಒಂದು ವರ್ಷದಿಂದ ಕೂಲಿ ಕೆಲಸಕ್ಕೆ ಇರುತ್ತಾರೆ. ಸದ್ಯ 2-3 ತಿಂಗಳಿಂದ ನನ್ನ ಮಗ ನನ್ನ ಮುಂದೆ ಹೇಳುತ್ತಿದ್ದುದ್ದೇನೆಂದರೆ ಮಲ್ಲಣಗೌಡ ಪಾಟೀಲ್ ಮತ್ತು ಶರಣಗೌಡ ಪಾಟೀಲ ರವರು ವಿನಾಕಾರಣ ನೀನು ಸರಿಯಾಗಿ ಕೆಲಸ ಮಾಡುತ್ತಿಲ್ಲ ಅಂತ ಮತ್ತು ಜಾತಿ ಎತ್ತಿ ಬೈಯುದು ಮಾಡುತ್ತಿರುತ್ತಾರೆ ಅಂತ ಹೇಳಿರುತ್ತಾನೆ. ಈ ಬಗ್ಗೆ ನಾನು ನನ್ನ ಗಂಡ ಕೂಡಿ ಸದರಿ ಮಲ್ಲಣಗೌಡ ರವರಿಗೆ ನನ್ನ ಮಗನಿಗೆ ವಿನಾಕಾರಣ ಬೈಯಬೇಡಿ ಅಂತ ಹೇಳಿರುತ್ತೇವೆ. ಇದೆ ಕಾರಣಕ್ಕಾಗಿ ನನ್ನ ಮಗ ತನ್ನ ಮನಸಿನ ಮೇಲೆ ಪರಿಣಾಮ ಮಾಡಿಕೊಂಡು ದಿನಾಂಕ: 04-04-2014 ರಂದು ಬೆಳಿಗ್ಗೆ 10:30 ಗಂಟೆಗೆ ಮಲ್ಲಣಗೌಡ ರವರ ಹೊಲದಲ್ಲಿ ಯಾವುದೊ ಕ್ರೀಮಿನಾಷಕ ಔಷದಿ ಸೇವಿಸಿದ್ದರಿಂದ ಉಪಚಾರ ಫಲಿಸದೆ ಇಂದು ದಿನಾಂಕ 06-04-2014 ರಂದು ಬೆಳಿಗ್ಗೆ 07:45 ಗಂಟೆಗೆ ಬಸವೇಶ್ವರ ಆಸ್ಪತ್ರೆಯಲ್ಲಿ ಮೃತಪಟ್ಟಿರುತ್ತಾನೆ  ಸದರಿಯವರ ಕಿರುಕುಳದಿಂದ ನನ್ನ ಮಗ ಯಾವುದೊ ವೀಷ ಸೇವನೆ ಮಾಡಿ ಮೃತ ಪಟ್ಟಿರುತ್ತಾನೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.