POLICE BHAVAN KALABURAGI

POLICE BHAVAN KALABURAGI

01 July 2011

GULBARGA DISTRICT PRESS REPORT

ಪತ್ರಿಕಾ ಪ್ರಕಟಣೆ

        ನಿವೃತ ಪೊಲೀಸ್ ಅಧಿಕಾರಿಗಳ ಸಭೆಯನ್ನು ದಿನಾಂಕ: 03-07-2011 ರಂದು ಬೆಳಿಗ್ಗೆ 10-00 ಗಂಟೆಗೆ ಡಿ.ಎಸ.ಪಿ ಡಿ.ಎ.ಅರ್. ಗುಲಬರ್ಗಾ ರವರ ಕಛೇರಿ ಪಕ್ಕದ ಅವರಣದಲ್ಲಿ ಕರೆದಿದ್ದ ಸಭೆಯಲ್ಲಿ ಚರ್ಚಿಸಬೇಕಾದ ಎರಡು ಅಂಶಗಳ ಕುರಿತು ಈಗಾಗಲೇ ಪತ್ರಿಕಾ ಪ್ರಕಟಣೆ ಹೊರಡಿಸಲು ನಿಮಗೆ ದಿನಾಂಕ: 01-07-2011 ರಂದು ನಿವೃತ್ ಅಧಿಕಾರಿಗಳ ಸಂಘದ ಅದ್ಯಕ್ಷರು ಸಲ್ಲಿಸಿರುವ ಪ್ರಕಟಣೆಗೆ ಈ ಕೆಳಗಿನಂತೆ ಈ ಕಛೇರಿಯಿಂದ ಕ್ರಮ ಕೈಕೊಂಡ ಬಗ್ಗೆ ನಿವೃತ್ತ ಪೊಲೀಸ್ ಅಧಿಕಾರಿಗಳಿಗೆ ಈ ಮೂಲಕ ತಿಳಿಯಪಡಿಸಲಾಗುತ್ತಿದೆ .

  1. ನಿವೃತ್ತ ಪೊಲೀಸ್ ಅಧಿಕಾರಿಗಳು ಈಗಾಗಲೇ 57 ಅರ್ಜಿಗಳು ಸಹಾಯಧನ ಕೋರಿ ಅರ್ಜಿ ಸಲ್ಲಿಸಿರುತ್ಥಾರೆ ಅದರಲ್ಲಿ, 7 ನಿವೃತ್ತ ಅಧಿಕಾರಿಗಳಿಗೆ ಅವರು ಸಲ್ಲಿರುವ ಬಿಲ್ಲಗಳನ್ನು ಪರೀಲಿಸಿ ಸರ್ಕಾರಿ ಮಾನ್ಯತೆ ಪಡೆದ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದಕೊಂಡವರನ್ನು ಪರೀಶಿಲಿಸಿ, ಸಹಾಯ ಧನವನ್ನು ದಿನಾಂಕ: 08-06-2011 ರಂದು ಜರುಗಿದ ನಿವೃತ ಪೊಲೀಸ್ ಅಧೀಕಾರಿಗಳ ಸಭೆಯಲ್ಲಿ ಮಂಜೂರಿಸಿ ಚೆಕ್ಕಗಳನ್ನು ಅವರವರ ಹೆಸರಿನಲ್ಲಿ ವಿತರಿಸಲಾಗಿದೆ. ಉಳಿದ ನಿವೃತ್ತ ಅಧಿಕಾರಿಳು ಸಲ್ಲಿಸಿರುವ ಬಿಲ್ಲಗಳನ್ನು ಪರೀಶಿಲಿಸಲಾಗಿ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಕೊಂಡಿದ್ದರಿಂದ ಅವರು ಸಲ್ಲಿಸಿರುವ ಔಷದ ಬಿಲ್ಲುಗಳು ಅವರ ಖಾಯಿಲಿಗೆ ಸಂಬಂಧಪಟ್ಟಿದೆ ಎಂಬ ಬಗ್ಗೆ ಪರೀಶಿಲನೆ ಕುರಿತು ದಿನಾಂಕ; 17-06-2011 ರಂದು ಜಿಲ್ಲಾ ಸರ್ಕಾರಿ ಆಸ್ಪತ್ರೆ ಗುಲಬರ್ಗಾ ರವರಿಗೆ ಪತ್ರ ವ್ಯವಹಾರ ಮಾಡಲಾಗಿದೆ. ಮತ್ತು ಸಂಬಂಧಪಟ್ಟ ಅರ್ಜಿದಾರರಿಗೆ ಅರ್ಜಿಗಳನ್ನು ಕೊಟ್ಟು ಸರ್ಕಾರಿ ಆಸ್ಪತ್ರೆಗೆ ಹೋಗಿ ದೃಡಿಕರಿಸಿಕೊಂಡು ಈ ಕಾರ್ಯಲಯಕ್ಕೆ ಸಲ್ಲಿಸಿದ ನಂತರ ಸಹಾಯಧನದ ಚೆಕ್ಕಗಳನ್ನು ಕೊಡಲಾಗುವದೆಂದು ತಿಳಿಸಲಾಗಿದೆ. ಮತ್ತು 02-04-2010 ರಂದು ಧ್ವಜ ದಿನಾಚರಣೆಯ ಅಂಗವಾಗಿ ಸಾರ್ವಜನಕರಿಂದ ಸಂಗ್ರಹಿಸಿದ ಹಣವನ್ನು ಶೇಕಡಾ 25 ಭಾಗವನ್ನು ನಿವೃತ್ತ ಪೊಲೀಸ್ ಕಲ್ಯಾಣ ನಿಧಿಗೆ ಜಮಾ ಮಾಡಲಾಗಿದೆ ಎಂದು ಗುಲಬರ್ಗಾ ಜಿಲ್ಲೆ ನಿವೃತ್ತ ಪೊಲೀಸ್ ಅಧಿಕಾರಿಗಳಿಗೆ ಗಮನಕ್ಕೆ ತರಲಾಗಿದೆ.

2.    ನಿವೃತ್ತ ಪೊಲೀಸ್ ಅಧೀಕಾರಿಗಳ ಮಕ್ಕಳ ವಿದ್ಯಾಬ್ಯಾಸಕ್ಕಾಗಿ ಕೋರಿದ ಸಹಾಯಧನ ಅರ್ಜಿಗಳ ಬಗ್ಗೆ ಕೇಂದ್ರ ಕಛೇರಿ ಬೆಂಗಳೂರು ರವರಿಗೆ ದಿನಾಂಕ: 08-02-2011 &

07-05-2011 ರಂದು ಪತ್ರ ವ್ಯವಹಾರ ಮಾಡಿದ್ದು ಇರುತ್ತದೆ. ಕೇಂದ್ರ ಕಛೇರಿಯಿಂದ ಸ್ಪಷ್ಟಿಕರಣ ಬಂದ ನಂತರ ನಿಯಮಗಳ ಅನುಸಾರ ಸಹಾಯಧನ

ಮಂಜೂರಿಸಲಾಗುವದು .

ಮೇಲ್ಕಂಡ ಎರಡು ಅಂಶಗಳು ನಿವೃತ್ತ ಪೊಲೀಸ್ ಅಧಿಕಾರಿಗಳಿಗೆ ಗಮನಕ್ಕೆ ತರುತ್ತಾ ಈಗಾಗಲೇ ಕಾಲಕಾಲಕ್ಕೆ ಸಭೆಗಳನ್ನು ಕರೆದು ಇಲ್ಲಿಯವರೆಗೆ ಸಹಾಯಧನ

ಮಂಜೂರಿಸಿದ್ದು ಇರುತ್ತದೆ ಎಂದು ಈ ಮೂಲಕ ಪ್ರತಿಕಾ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

                                                                    

                                                                                                                                    ಜಿಲ್ಲಾ ಪೊಲೀಸ್ ಅಧಿಕ್ಷಕರು                                                                  ಗುಲಬರ್ಗಾ

GULBARGA DISTRICT REPORTED CRIMES

ಅಪಘಾತ ಪ್ರಕರಣ :
ಶಹಾಬಾದ ನಗರ ಠಾಣೆ:
ಶ್ರೀ ಮಹ್ಮದ ಅಲ್ಲಾವುದ್ದೀನ ತಂದೆ ಮಹೇಬೂಬ ಸಾಬ ರವರು ನಾನು ಮತ್ತು ನನ್ನ ತಮ್ಮನಾದ ಮಹಮದ ರಪೀಕ ಇತನು ಕೂಡಿಕೊಂಡು ಇಂದು ಬೆಳಿಗ್ಗೆ ಮೋಟಾರ ಸೈಕಲ್ ನಂ.ಕೆಎ-32 ಕ್ಯೂ- 6842 ಹೀರೊಹೊಂಡಾ ಸ್ಪೇಂಡರ ಪ್ಲಸಗೆ ಪೆಟ್ರೋಲ ಹಾಕಿಸಿಕೊಳ್ಳಲು ಭಂಕೂರ ಕ್ರಾಸ ಪೆಟ್ರೋಲ ಪಂಪಗೆ ಹೋಗುತ್ತಿರುವಾಗ ಎಬಿಎಲ್‌ ಸಣ್ಣಗೇಟ ಹತ್ತಿರ ಹೊಗುತ್ತಿದ್ದಾಗ ಎದರುಗಡೆಯಿಂದ ಒಂದು ಟಂ ಟಂ ನಂ.ಕೆಎ-32 ಎ-8737 ನೇದ್ದರ ಚಾಲಕ ಮಲ್ಲೇಶಿ ತಂದೆ ಶಂಕರಪ್ಪಾ ಸಾ:ಶಂಕರವಾಡಿ ಇತನು ಅತಿವೇಗವಾಗಿ ಮತ್ತು ನಿಷ್ಕಾಳಜಿತನದಿಂದ ನಡೆಯಿಸಿಕೊಂಡು ಬಂದು ಡಿಕ್ಕಿಹೊಡೆದು ರಕ್ತಗಾಯ ಪಡಿಸಿರುತ್ತಾನೆ. ಟಂ ಟಂ ಚಾಲಕನು ತನ್ನ ವಾಹನವನ್ನು ಅಲ್ಲಿಯೇ ಬಿಟ್ಟು ಓಡಿ ಹೋಗಿರುತ್ತಾನೆ ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮನುಷ್ಯ ಕಾಣೆಯಾದ ಪ್ರಕರಣ :
ಅಶೋಕ ನಗರ ಠಾಣೆ :
ಶ್ರೀಮತಿ. ಮಹಾದೇವಿ ಗಂಡ ಮರೇಪ್ಪಾ ಸುಗಂಧಿ ಸಾ: ಕಾಂತಾ ಕಾಲೋನಿ ಗುಲಬರ್ಗಾ ರವರು ನನ್ನ ಗಂಡನಾದ ಮರೇಪ್ಪಾ ಎನ್‌.ಸುಗಂಧಿ ಇವರು ಆಲಗೂಡ ಸ.ಹಿ.ಪ್ರಾ ಶಾಲೆಯಲ್ಲಿ ದೈಹಿಕ ಶಿಕ್ಷಕ ಅಂತಾ ಕೆಲಸ ಮಾಡುತ್ತಿರುತ್ತಾರೆ. ಪ್ರತಿ ದಿನ ಶಾಲೆಗೆ ಹೊಗಿ ಬರುತ್ತಿರುತ್ತಾರೆ. ದಿನಾಂಕ 01/06/2011 ರಂದು 8 ಎಎಂಕ್ಕೆ ತಾನು ಶಾಲೆಗೆ ಹೊಗುತ್ತೆನೆ ಅಂತಾ ಹೇಳಿ ಹೊದವರು ಇಲ್ಲಿಯ ವರೆಗೆ ಮನೆಗೆ ಬಂದಿರುವುದಿಲ್ಲಾ. ಎಲ್ಲಾ ಸಂಬಂಧಿಕರಿಗೆ, ಗೆಳೆಯರಿಗೆ, ವಿಚಾರಿಸಲು ಮತ್ತು ಶಾಲೆಯ ಮುಖ್ಯ ಗುರುಗಳಿಗೆ ಹೊಗಿ ವಿಚಾರಿಸಲು ದಿನಾಂಕ 01/06/2011 ರಂದು ಶಾಲೆಗೆ ಬಂದಿರುವುದಿಲ್ಲಾ. ಅಂತಾ ಹೇಳಿರುತ್ತಾರೆ. ಅನ್ನಪೂರ್ಣ ಭರತನೂರ ಅನ್ನುವವರು ನನ್ನ ಗಂಡನೊಂದಿಗೆ ಆಗ್ಗಾಗ್ಗೆ ಮಾತಾಡುತ್ತಿದ್ದಳು. ಅವಳು ಸಹ ಊರಲ್ಲಿ ಇರುವುದಿಲ್ಲಾ. ಎಂದು ತಿಳಿದು ಬಂದಿರುತ್ತದೆ. ನನ್ನ ಗಂಡನು ಹೊಗಿದ್ದರಿಂದ ಅವಳ ಮೇಲೆ ಸಂಶಯವಿರುತ್ತದೆ. ನನ್ನ ಗಂಡನ ಚಹರೆ ಪಟ್ಟಿ ವಯಸ್ಸು 56 ವರ್ಷ , ಎತ್ತರ 5'-6", ಗುಂಡು ಮುಖ, ಕಪ್ಪು ಮೈಬಣ್ಣ, ಕನ್ನಡ ಹಿಂದಿ ಮಾತನಾಡಲು ಬರುತ್ತದೆ., ಮನೆಯಿಂದ ಹೊಗುವಾಗ ಬಿಳಿ ಶರ್ಟ, ಬಿಳಿ ಪ್ಯಾಂಟ ಧರಿಸಿರುತ್ತಾರೆ . ವಯಸ್ಸು 56 ವರ್ಷ ಇರುತ್ತದೆ. ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಅಪಘಾತ ಪ್ರಕರಣ:
ಫರತಬಾದ ಠಾಣೆ :
ಶ್ರೀ
ಮಲ್ಲಿಕಾರ್ಜುನ ತಂದೆ ಸಿದ್ದಣ್ಣ ಕುಂಬಾರ ರಾಮ ಮೊಹಲ್ಲಾ ಶಹಾಬಾದ ಚಿತ್ತಾಪೂರ ರವರು ನಾನು ಮತ್ತು ಹೆಂಡತಿ ಮಕ್ಕಳೊಂದಿಗೆ ಇಂದು ದಿನಾಂಕ 1/7/2011 ರಂದು ಬೆಳಿಗ್ಗೆ ಅಮಸಾಸ್ಯೆ ಕುರಿತು ಶಹಾಬಾದಿಂದ ತಿಂಥಣಿ ಮೈನೇಶ್ವರ ದೇವಸ್ಥಾನಕ್ಕೆ ನಮ್ಮ ಹಿರೋ ಹೊಂಡಾ ಮೊ.ಸೈಕಲ ನಂಬರ ಕೆಎ-33 ಹೆಚ್.-9104 ನೇದ್ದರ ಮೇಲೆ ಹೋರಟಿದೆವು, ಹಸನಾಪೂರ ಕ್ರಾಸ ದಾಟಿ ಜೇವರ್ಗಿ ಕಡೆಗೆ ರಸ್ತೆಯ ಎಡ ಬದಿಗೆ ಹೋಗುತ್ತಿದಾಗ ನಮ್ಮ ಹಿಂದುಗಡೆಯಿಂದ ಒಬ್ಬ ಟಂಟಂ ವಾಹನದ ಚಾಲಕನು ತನ್ನ ವಾಹನವನ್ನು ಅತಿವೇಗ ಮತ್ತು ಅಲಕ್ಷತನದಿಂದ ನಡೆಸಿಕೊಂಡು ಬಂದು ಹಿಂದಿನಿಂದ ಡಿಕ್ಕಿ ಪಡಿಸಿ ತನ್ನ ವಾಹನ ನಿಲ್ಲಿಸದೆ ಓಡಿಸಿಕೊಂಡು ಹೋಗಿರುತ್ತಾನೆ. ಆಗ ನಾವು ಕೇಳಗೆ ಬಿದ್ದಿದರಿಂದ ನನ್ನ ಹೆಂಡತಿ ಶಂಕ್ರೆಮ್ಮಳಿಗೆ ತಲೆಗೆ ಮತ್ತು ಬೇನ್ನಿಗೆ ಮತ್ತು ಕಿವಿಯಿಂದ ರಕ್ತ ಸೋರಿ ಸ್ಥಳದಲ್ಲಿಯೆ ಮೃತ್ತ ಪಟ್ಟಿರುತ್ತಾಳೆ. ಮಕ್ಕಳಾದ ಭಾಗ್ಯ ಶ್ರಿ ಇವಳಿಗೆ ಹಣೆಗೆ ರಕ್ತಗಾಯವಾಗಿದ್ದು ಮೌನೇಶ ಇತನಿಗೆ ಬಲಗೈಗೆ ತರಚಿದ ರಕ್ತಗಾಯವಾಗಿರುತ್ತದೆ.ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.