POLICE BHAVAN KALABURAGI

POLICE BHAVAN KALABURAGI

26 August 2011

GULBARGA DIST REPORTED CRIME

ಮಟಾಕ ಪ್ರಕರಣ :

ಫರಹತಾಬಾದ ಠಾಣೆ: ದಿನಾಂಕ: 26/8/2011 ರಂದು ಬೆಳಗ್ಗೆ  ಸುಮಾರಿಗೆ ಪಿರೋಜಾಬಾದ ಗ್ರಾಮದಲ್ಲಿ ಮಟಕಾ ಬರೆದುಕೊಳ್ಳುತ್ತಿದ್ದಾರೆ ಅಂತಾ ಮಾಹಿತಿ ಬಂದ ಮೇರೆಗೆ ಶ್ರೀ ಪವನ ನೆಜ್ಜೂರ ಡಿ.ಎಸ್.ಪಿ (ಪ್ರೋ) ರವರು ಹಾಗೂ ಸಿಬ್ಬಂದಿಯವರಾದ ಬಿ. ಆರ್ ರಾಠೋಡ ಪಿ,ಎಸ್,ಐ,  ದೇವಿಂದ್ರಪ್ಪಾ, ಜಮೀಲ ಅಹ್ಮದ ಪಿಸಿ ರವರು ಕೂಡಿಕೊಂಡು ಫಿರೋಜಾಬಾದ ಗ್ರಾಮಕ್ಕೆ ಹೋಗಿ ರಾಮಲಿಂಗ ದೇವರ ಗುಡಿಯ ಪಕ್ಕದಲ್ಲಿರುವ ಸಾಹೇಬಗೌಡ ಇವರ ಕಿರಾಣಿ ಅಂಗಡಿಯ ಮುಂದೆ ಸಾಹೇಬಗೌಡ ತಂದೆ ಶಿವಲಿಂಗಪ್ಪಾ ಮಮ್ಮಾಣಿ ಮತ್ತು ಗುಂಡಪ್ಪಾ ತಂದೆ ಬಸವರಾಜ ಶಿರೂರ ರವರು ಮಟಕಾ ಚೀಟಿ ಬರೆದುಕೊಳ್ಳುತ್ತಿದ್ದನು ದೃಡಪಡಿಸಿಕೊಂಡು ಅವರನ್ನು ವಶಕ್ಕೆ ತೆಗೆದುಕೊಂಡು ಅವರಿಂದ ನಗದು ಹಣ 8225=00 ರೂ,  ಎರಡು ಕಾಲ್ಯೂಕೇಟರ,   ಮಟಕಾ ಚೀಟಿಗಳು, ಮೊಬೈಯಲ್,  ಜಪ್ತಿ ಪಡಿಸಿಕೊಂಡಿದ್ದರಿಂದ ಮೇರೆಗೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ .

GULBARGA DIST REPORTED CRIMES

ಹಲ್ಲೆ ಪ್ರಕರಣ :

ಬ್ರಹ್ಮಪೂರ ಪೊಲೀಸ್ ಠಾಣೆ : ಶ್ರೀ.ಮಾರುತಿ ತಂದೆ ಚಂದಪ್ಪ ಹೋಟ್ಕರ, ಸಾ|| ಸುಂದರ ನಗರ ಗುಲಬರ್ಗಾ ರವರು ನಾನು ನಿನ್ನೆ ದಿನಾಂಕ: 24/08/2011 ರಂದು ಸಾಯಂಕಾಲ ಸುಮಾರಿಗೆ ನಾನು ಮತ್ತು ನನ್ನ ಹೆಂಡತಿಯಾದ ಶಾರದಾಬಾಯಿ ಇಬ್ಬರೂ ಕುಡಿ ಕಿರಣಾ ಅಂಗಡಿಯ ಹತ್ತಿರ ಕುಳಿತ್ತಿರುವಾಗ ನಮ್ಮ ಮಕ್ಕಳಾದ ಪ್ರಕಾಶ ಮತ್ತು ಪ್ರವೀಣ ಇವರು ಹೊರಗಿನಿಂದ ಬಂದು ನನ್ನೊಂದಿಗೆ ಜಗಳಕ್ಕೆ ಬಿದ್ದು ನೀನು ಮಾಂಗರವಾಡಿಯ ಓಣಿಯಲ್ಲಿ ಹೋಗಿ ಸಿಂಧಿ ಕುಡಿದು ಮನೆಗೆ ಬಂದು ಮನೆ ಹಾಳು ಮಾಡುತ್ತಿ ಅಂತಾ ಅವಾಚ್ಯ ಶಬ್ದಗಳಿಂದ ಬೈದು, ಕೈಯಿಂದ ಬೆನ್ನ ಮೇಲೆ ಹೊಡೆದು ಗುಪ್ತ ಗಾಯ ಪಡಿಸಿದ್ದು ಇರುತ್ತದೆ ಅಂತಾ ದೂರು ಸಲ್ಲಿಸಿದ ಮೇರೆಗೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕೊಲೆಗೆ ಪ್ರಯತ್ನ ಪ್ರಕರಣ :
ಅಶೋಕ ನಗರ ಪೊಲೀಸ್ ಠಾಣೆ
: ಶ್ರೀ ರಾಜಕುಮಾರ ತಂದೆ ಚಂದ್ರಕಾಂತ ಕಾಂಬಳೆ ಪ್ರೇರಣಾ ಎಜೂಕೇಷನ್ ಟ್ರಸ್ಟ ಅಧ್ಯಕ್ಚ ಸಾ: ಶಕ್ತಿ ನಗರ ಗುಲಬರ್ಗಾ ರವರು ನಾನು ನನ್ನ ಮನೆಯ ಮುಂದೆ ದಿನಾಂಕ 25/08/2011 ರಂದು ಬೆಳಿಗ್ಗೆ 5 ಗಂಟೆಗೆ ವಾಕಿಂಗ ಮಾಡುತ್ತಿರುವಾಗ ವಿ.ಎಲ್. ಗುಡಿಯಪ್ಪ ಮತ್ತು ಸಂಗನಗೌಡ ಪಾಟೀಲ ಇನ್ನೂ 4 ಜನರು ಕೈಯಲ್ಲಿ ಬಡಿಗೆ ಮತ್ತು ರಾಡು ಹಿಡಿದುಕೊಂಡು ಅದರಲ್ಲಿ ವಿ.ಎಲ್. ಗುಡಿಯಪ್ಪ ಇತನು ಜಾತಿ ಏತ್ತಿ ಬೈದು ನಮಗೆ ನೀನು ಸಪ್ಸೆಂಡ್ ಮಾಡಿದಿಯಾ ಅಂತಾ ರಾಡಿನಿಂದ ಹೊಡೆದು ಕೊಲೆ ಮಾಡಲು ಪ್ರಯತ್ನಿಸಿರುತ್ತಾರೆ ಅಂತಾ ದೂರು ಸಲ್ಲಿಸಿದ ಮೇರೆಗೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಯು.ಡಿ.ಅರ್. ಪ್ರಕರಣ :

ಗ್ರಾಮೀಣ ಠಾಣೆ: ಶ್ರೀಮತಿ ಹೇಮಾಬಾಯಿ ಗಂಡ ಬಸವರಾಜ @ ಬಸಣ್ಣ ಬೋರಖಡೇ ಸಾ: ಸೈಯದ ಚಿಂಚೋಳಿ ತಾ: ಗುಲಬರ್ಗಾ ರವರು ಬಸವರಾಜ ಇತನು ದಿನಾಂಕ 24/8/11 ರಂದು ರಾತ್ರಿ ಸುಮಾರಿಗೆ ಮನೆಯ ಸಿಡಿಗಳನ್ನು ಏರುವಾಗ ಆಕಸ್ಮಿಕವಾಗಿ ಕಾಲು ಜಾರಿ ಬಿದ್ದು ತಲೆಗೆ ಬಾರಿ ಪೆಟ್ಟಾಗಿ ಉಪಚಾರ ಕುರಿತು ಜಿಲ್ಲಾ ಸರಕಾರಿ ಆಸ್ಪತ್ರೆಗ ಸೇರಿಕೆಯಾಗಿದ್ದು ಉಪಚಾರದಲ್ಲಿ ಗುಣಮುಖವಾಗದೆ ದಿನಾಂಕ 25/8/11 ರಂದು ಸಾಯಂಕಾಲ ಮೃತ ಪಟ್ಟಿರುತ್ತಾನೆ ಅಂತಾ ದೂರು ಸಲ್ಲಿಸಿದ ಮೇರೆಗೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮುಂಜಾಗ್ರತೆ ಪ್ರಕರಣ :

ಗ್ರಾಮೀಣ ಠಾಣೆ: ಪಿ.ಎಸ.ಐ ರವರು ದಿನಾಂಕ 25/8/11 ರಂದು ಉದನೂರ ಗ್ರಾಮಕ್ಕೆ ಬೇಟಿ ನೀಡಿದಾಗ ಗ್ರಾಮದಲ್ಲಿ ರಾಮು ಚವಾಣ ಇತನು ತನ್ನ ಸಂಗಡ ಇನ್ನೂ 9 ಜನರನ್ನು ಗುಂಪು ಕಟ್ಟಿಕೊಂಡು ಜೈಬೀಮ ಕೋರಳ್ಳಿ ಇತನ ಗುಂಪಿನ ಮೇಲೆ ದ್ವೇಷವನ್ನು ಬೆಳಸಿಕೊಂಡು ಗುಂಪು ಕಟ್ಟಿಕೊಂಡು ತಿರುಗಾಡುತ್ತಿದ್ದು ಎರಡು ಪಾರ್ಟಿ ಜನರು ಎದುರು ಬದರು ಆದಲ್ಲಿ ಗ್ರಾಮದಲ್ಲಿ ಗಲಾಟೆ ಸಂಭವಿಸಿ ಸಾರ್ವಜನಿಕ ಶಾಂತತೆಗೆ ಭಂಗವುಂಟಾಗುವ ಸಾದ್ಯತೆ ಕಂಡು ಬಂದಿದ್ದರಿಂದ ಅವರುಗಳ ಮೇಲೆ ಮುಂಜಾಗ್ರತೆ ಅಡಿಯಲ್ಲಿ ಕ್ರಮ ಗುನ್ನೆ ದಾಖಲ ಮಾಡಿಕೊಂಡು ತನಿಖೆ ಕೈಕೊಳ್ಳಲಾಗಿದೆ.