POLICE BHAVAN KALABURAGI

POLICE BHAVAN KALABURAGI

13 December 2011

Gulbarga Dist Reported Crimes

ದರೋಡೆ ಪ್ರಕರಣ:
ಚಿತ್ತಾಪೂರ ಠಾಣೆ :
ಶ್ರೀ ಹುಸೇನಿ ತಂದೆ ಮಹಿಬೂಬ ಮುಲ್ಲಾ ಸಾ ಇಂಗಳಗಿ ತಾ ಸಿಂದಗಿ ಜಿ ವಿಜಾಪುರ ರವರು ನಾನು ಮತ್ತು ನಮ್ಮ ಕ್ಲೀನರ ಶ್ರೀಶೈಲ ಇಬ್ಬರು ಕೂಡಿಕೊಂಡು ಸಿಮೆಂಟ ಲೋಡ ತರುವ ಕುರಿತು ಲಾರಿ ನಂ ಕೆಎ-01/ಎಎ6294 ನೇದ್ದನ್ನು ತೆಗೆದುಕೊಂಡು ವಿಜಾಪುರದಿಂದ ಮಳಖೇಡದ ರಾಜಶ್ರೀ ಸಿಮೆಂಟ ಕಂಪನಿಗೆ ಹೋಗುತ್ತಿದ್ದೆವು. ದಿನಾಂಕ 12/12/2011 ರಂದು ಮಧ್ಯರಾತ್ರಿ 1-30 ರ ಸುಮಾರಿಗೆ ದಂಡೋತಿ ಕ್ರಾಸದ ಹತ್ತಿರ ಹಾದು ಹೋಗುತ್ತಿರುವಾಗ ನಮ್ಮ ಲಾರಿಯ ಹಿಂದಿನಿಂದ ಒಬ್ಬ ಮೋಟರ ಸೈಕಲ ಸವಾರನು ಗಾಡಿಯ ಮೇಲೆ ಜೋರಾಗಿ ನಡೆಸುತ್ತಾ ಬಂದು ನಮ್ಮ ಲಾರಿಯ ಮುಂದುಗಡೆ ಬಂದು ನಿಂತು ತನ್ನ ಮೋಟರ ಸೈಕಲ ಬಂದ ಮಾಡಿ ಏ ಭೋಸಡಿ ಮಗನೆ ನಮಗೆ ಕಟ್ ಹೊಡೆದು ಮುಂದೆ ಬಂದಿಯಾ ಮಗನೆ ಅಂತ ಬೈಯುತ್ತಾ ಒಂದು ಕಲ್ಲಿನಿಂದ ನಮ್ಮ ಲಾರಿಯ ಲೈಟಿಗೆ ಹೊಡೆದನು. ಅದರಿಂದ ಬಲಗಡೆಯ ಒಂದು ಹೆಡ್ಲೈಟ ಒಡೆದು ಹೋಯಿತು. ಮತ್ತೆ ಅವನು ಏ ಮಕ್ಕಳೆ ಲಾರಿಯಿಂದ ಕೆಳಗೆ ಇಳಿಯುತ್ತೀರೋ ಇಲ್ಲವೋ ಇಲ್ಲದಿದ್ದರೆ ನಿಮ್ಮ ಪರಿಸ್ಥಿತಿ ನೆಟ್ಟಗಾಗಲಿಕ್ಕಿಲ್ಲಾ ಅಂತ ಹೆದರಿಸಿದನು. ಆಗ ನಾನು ಮತ್ತು ನಮ್ಮ ಕ್ಲೀನರ ಹೆದರಿ ಲಾರಿಯಿಂದ ಕೆಳಗೆ ಇಳಿದು ನಿಂತೆವು. ಅವನು ತನ್ನ ಮೋಟರ ಸೈಕಲನ್ನು ಸೈಡಿಗೆ ಹಚ್ಚಿ ನಮ್ಮ ಲಾರಿಯ ಮೇಲೆ ಹತ್ತಿ ಲಾರಿ ಚಾಲು ಮಾಡಿಕೊಂಡು ದಂಡೋತಿ ಕಡೆಗೆ ಹೋದನು. ನಾವಿಬ್ಬರೂ ನಮ್ಮ ಲಾರಿಯ ಲೈಟಿನ ಬೆಳಿಕಿನಲ್ಲಿ ಅವನಿಗೆ ನೋಡಿರುತ್ತೇವೆ. ಅವನು ಲಾರಿ ತೆಗೆದುಕೊಂಡು ಹೋದ ನಂತರ ಅಲ್ಲಿ ಇದ್ದ ಮೋಟರ ಸೈಕಲ ನೋಡಲಾಗಿ ಅದು ಹಿರೊಹೊಂಡಾ ಫ್ಯಾಶನ ಪ್ಲಸ್ ಹಳೆ ಗಾಡಿ ಇದ್ದು ಅದಕ್ಕೆ ಹಿಂದೆ ಮುಂದೆ ನಂಬರ ಪ್ಲೇಟ ಇದ್ದಿರಲಿಲ್ಲಾ. ನಾನು ಅವನಿಗೆ ಅಂಜಿಕೊಂಡು ರಾತ್ರಿ ವೇಳೆಯಲ್ಲಿ ಮಳಖೇಡಕ್ಕೆ ನಡೆದುಕೊಂಡು ಹೋದೆನು. ನಮ್ಮ ಲಾರಿ ಕ್ಲೀನರ ಎಲ್ಲಿ ಹೋಧನು ಗೊತ್ತಿಲ್ಲಾ ನಾನು ಮಳಖೇಡದಿಂದ ಸೇಡಂ ಮತ್ತು ಗುಲಬರ್ಗಾ, ಬಸವ ಕಲ್ಯಾಣದ ಕಡೆಗೆ ಹೋಗಿ ಲಾರಿ ನೋಡಲಾಗಿ ಎಲ್ಲಿಯೂ ಇದ್ದಿರಲಿಲ್ಲಾ. ಈ ಬಗ್ಗೆ ನಾನು ನಮ್ಮ ಮಾಲಿಕರಿಗೆ ಫೋನ ಮುಖಾಂತರ ವಿಜಾಪುರಕ್ಕೆ ಫೋನ ಮಾಡಿ ವಿಷಯ ತಿಳಿಸಿದ್ದು ಲಾರಿಯ ಕ್ಲೀನರ ಕೂಡಾ ಚಿತ್ತಾಪೂರಕ್ಕೆ ಬಂದಿರುತ್ತೆವೆ ನಮ್ಮ ಲಾರಿಯು 18 ಟೈರಿನದಿದ್ದು ಅದರ ಅಂದಾಜು ಕಿಮ್ಮತ್ತು 30,00000/-ರೂ ಆಗಬಹುದು ಅದನ್ನು ಪತ್ತೆ ಹಚ್ಚಿ ಅವನ ಮೇಲೆ ಕಾನೂನು ಪ್ರಕಾರ ಕ್ರಮ ಕೈಗೊಳ್ಳಬೇಕಾಗಿ ಅಂತ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 120/2011 ಕಲಂ 392 ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಕಳ್ಳತನ ಪ್ರಕರಣ:
ಸ್ಟೇಷನ ಬಜಾರ ಪೊಲೀಸ ಠಾಣೆ:
ಶ್ರೀ ಸಂಜೀವ ತಂದೆ ಸಿದ್ರಾಮ ಐರೆಡ್ಡಿ ಸಾ:ಮ.ನಂ.61 ಉಮಾ ಕಾಟೇಜ್ ಶಾಂತಿನಗರ ಗುಲಬರ್ಗಾ ರವರು ನಾನು ದಿನಾಂಕ:12.12.2011 ರಂದು ರಾತ್ರಿ 10.30 ಗಂಟೆಗೆ ತಿಮ್ಮಾಪೂರ ಸರ್ಕಲಗೆ ಕೆಲಸದ ನಿಮಿತ್ತ ಬಂದು ಸರ್ಕಲ್ ಹತ್ತಿರ ಕೆಎ-28 ಆರ್-0080 ಹಿರೋ ಹೋಂಡಾ ಮೋಟಾರ ಸೈಕಲ ನಿಲ್ಲಿಸಿ ಮರಳಿ ರಾತ್ರಿ 10.45 ಗಂಟೆಗೆ ನೋಡಲು ನಿಲ್ಲಿಸಿದ ಸ್ಥಲದಲ್ಲಿ ಮೋಟಾರ್ ಸೈಕಲ್ ಇರಲಿಲ್ಲಾ. ಯಾರೋ ಕಳ್ಳರು ಕಳುವು ಮಾಡಿಕೊಂಡು ಹೋಗಿರುತ್ತಾರೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣಾ ಗುನ್ನೆ ನಂ.211/2011 ಕಲಂ. 379 ಐ.ಪಿ.ಸಿ. ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.

GULBARGA DIST REPORTED CRIMES

ಹಲ್ಲೆ ಪ್ರಕರಣ:
ಫರಹತಾಬಾದ ಪೊಲೀಸ್ ಠಾಣೆ :
ಶ್ರೀ ಬಲಭೀಮ ತಂದೆ ದವಲಪ್ಪಾ ಕರಪೆ ರವರು ನಾನು ಮತ್ತು ನನ್ನ ಕಾಕನ ಮಗನಾದ ಮಾಳಪ್ಪಾ ತಂದೆ ಲಕ್ಷಪ್ಪಾ ಕರ್ಪೆ ಇಬ್ಬರು ಕೂಡಿಕೊಂಡು ಹೇರೂರ (ಬಿ) ಗ್ರಾಮದ ಗುರುನಾಥ ಸುಂಟ್ಯಾಣ ಇವರ ಹೊಲದಲ್ಲಿ ಕುರಿ ಮೈಯಿಸುತ್ತಿದ್ದಾಗ ಬಾಜು ಹೊಲದಲ್ಲಿ ಕುರಿ ಮೈಯಿಸುತ್ತಿದ್ದ ಬೀರಪ್ಪಾ ಪುಕಳೆ, ಅಂಬಾಜಿ ಪಾವನೆ, ಮಾಯಪ್ಪಾ ಬೀಸ್ಯಾ, ಶಂಕರೆಪ್ಪಾ ಮಾವನೆ ಇವರೆಲ್ಲರೂ ಕೂಡಿ ನನ್ನ ಕಾಕನ ಮಗನಾದ ಮಾಳಪ್ಪಾ ಇತನಿಗೆ ಅವಾಚ್ಯವಾಗಿ ಬೈದು ಕುರಿಗಳನ್ನು ತೆಗೆದುಕೊಂಡು ನಮ್ಮ ಹಿಂದೆ ಯಾಕೆ ಬೆನ್ನು ಹತ್ತುತ್ತಿದ್ದಿರಿ ಅಂತ ಅವಾಚ್ಯ ಶಬ್ದಗಳಿಂದ ಬೈದು ಹೊಡೆ ಬಡೆ ಮಾಡಿರುತ್ತಾರೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 217/2011 ಕಲಂ 323, 326, 504, 506 ಸಂಗಡ 34 ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಳ್ಳಲಾಗಿದೆ.
ಜೂಜಾಟ ಪ್ರಕರಣ:
ಗ್ರಾಮೀಣ ಠಾಣೆ :
ದಿನಾಂಕ 12/12/2011 ರಂದು ಮದ್ಯಾಹ್ನ ಸುಮಾರಿಗೆ ರಾಮನಗರ ಬಡಾವಣೆಯ ಲಕ್ಷ್ಮಿ ಗುಡಿಯ ಹತ್ತಿರ ಖುಲ್ಲಾ ಜಾಗೆಯಲ್ಲಿ ಕೆಲವು ಜನರು ಇಸ್ಪೇಟ ಜೂಜಾಟ ಆಡುತ್ತಿದ್ದಾರೆಂದು ಬಾತ್ಮಿ ಬಂದ ಮೇರೆಗೆ ಪಿ.ಎಸ.ಐ ರವರು ಮತ್ತು ಸಿಬ್ಬಂದಿ ಹಾಗೂ ಪಂಚರ ಸಮಕ್ಷಮ ದಾಳಿ ಮಾಡಿ ಇಸ್ಪೇಟ ಜೂಜಾಟ ಆಡುತ್ತಿದ್ದ ಸುಬಾಷ ತಂದೆ ಲಕ್ಷ್ಮಣ ಚೌಕಲೇ ಸಾ: ರಾಮನಗರ ಗುಲಬರ್ಗಾ ಇನ್ನೂ 6 ಜನರು ವಸಕ್ಕೆ ತೆಗೆದುಕೊಂಡು ಅವರಿಂದ ನಗದು ಹಣ 42,400/- ರೂ ಜೂಜಾಟದ ಎಲೆಗಳು ವಶಪಡಿಸಿಕೊಂಡಿದ್ದರಿಂದ ಠಾಣೆ ಗುನ್ನೆ ನಂ: 368/2011 ಕಲಂ 87 ಕೆ.ಪಿ ಆಕ್ಟ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಳ್ಳಲಾಗಿದೆ.
ಜೂಜಾಟ ಪ್ರಕರಣ:
ಗ್ರಾಮೀಣ ಠಾಣೆ :
ದಿನಾಂಕ 12/12/2011 ರಂದು ಸಾಯಂಕಾಲ ಇಂಡ್ರಸ್ಟ್ರಿಯಲ್‌ ಏರಿಯಾದ ವಿಜಯಕುಮಾರ ಚಿಂಚೋಳಿ ಇವರ ಹೊಲದಲ್ಲಿಯ ಗಿಡಿದ ಕೆಳಗೆ ಇಸ್ಪೇಟ ಜೂಜಾಟ ಆಡುತ್ತಿದ್ದಾರೆಂದು ಬಾತ್ಮಿ ಬಂದ ಮೇರೆಗೆ ಪಿ.ಎಸ.ಐ ರವರು ಮತ್ತು ಸಿಬ್ಬಂದಿಯವರು ಪಂಚರ ಸಮಕ್ಷಮ ದಾಳಿ ಮಾಡಿ ಇಸ್ಪೇಟ ಜೂಜಾಟ ಆಡುತ್ತಿದ್ದ ಸುಬಾಷ ತಂದೆ ತುಳಜಪ್ಪ ಹಂಗರಗಿ ಸಾ ಕಪನೂರ ಇನ್ನೂ 4 ಜನ ಸಾ: ಕಪನೂರ ಗುಲ್ಬರ್ಗಾ ಜನರನ್ನು ಹಿಡಿದು ಅವರಿಂದ ನಗದು ಹಣ ಇಸ್ಪೇಟ ಜೂಜಾಟಕ್ಕೆ ಬಳಸಿದ ವಸ್ತುಗಳು ಹೀಗೆ ಒಟ್ಟು 47,350/- ರೂ ಕಿಮ್ಮತ್ತಿನವುಗಳನ್ನು ವಶಪಡಿಸಿಕೊಂಡಿದ್ದರಿಂದ ಠಾಣೆ ಗುನ್ನೆ ನಂ: 369/2011 ಕಲಂ 87 ಕೆ.ಪಿ ಆಕ್ಟ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಳ್ಳಲಾಗಿದೆ.
ಹಲ್ಲೆ ಪ್ರಕರಣ:
ಮಳಖೇಡ:
ಶ್ರೀ ಮಲಕಣ್ಣ ತಂದೆ ದ್ಯಾವಣ್ಣ ತಳವಾರ ವಯಾ 23 ವರ್ಷ ಸಾ ಹಂಗನಳ್ಳಿ ತಾ ಸೇಡಂ ರವರು ನಾನು ಕೂಲಿ ಕೆಲಸ ಮಾಡಿಕೊಂಡು ರಾತ್ರಿ 8 ಗಂಟೆಗೆ ಸುಮಾರಿಗೆ ಮನೆಗೆ ಬರುತ್ತಿದ್ದಾಗ ನಮ್ಮ ಮನೆಯ ಮುಂದೆ ನಮ್ಮ ಕಾಕನಾದ ತಿಪ್ಪಣ್ಣ ಇತನಿಗೆ ನನ್ನ ಪಾಲಿಗೆ ಬರಬೇಕಾಗಿದ್ದ ಹೋಲದ ಪಾಲನ್ನು ನಮಗೆ ಕೋಡಿರಿ ಅಂತ ಕೇಳಿದೆ ತಿಪ್ಪಣ್ಣ ಕಾಕ ಇತನು ಮಗನೆ ನಿನ್ನ ಪಾಲಿಗೆ ಹೋಲ ಎಲ್ಲಿ ಬರುತ್ತೆ ಅಂತ ಹೇಳಿ ಕೈಯಿಂದ ಮತ್ತು ಅಲ್ಲೆ ಬಿದ್ದಿದ್ದ ಕಟ್ಟಿಗೆ ಯಿಂದ ನನ್ನ ತಲೆಗೆ ಹೋಡೆದು ರಕ್ತ ಗಾಯ ಮಾಡಿರುತ್ತಾನೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ. 105/2011 ಕಲಂ 323.324.504.506 ಐಪಿಸಿ ನೇದ್ದರ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಳ್ಳಲಾಗಿದೆ.
ಅಪಹರಣ ಪ್ರಕರಣ:
ಅಶೋಕ ನಗರ ಪೊಲೀಸ್ ಠಾಣೆ :
ಶ್ರೀ ರಾಮುಲು ತಂದೆ ವೆಂಕಪ್ಪ ಸಾ ಆಶ್ರಯ ಕಾಲೋನಿ ಗುಲಬರ್ಗಾ ರವರು ನನ್ನ ಮಗಳಾದ ಕು ಪ್ರಿಯಾಂಕ ವಯ : 16 ವರ್ಷ ಎಸ್.ಎಸ್.ಎಲ್.ಸಿ ಓದುತ್ತಿದ್ದು ದಿನಾಂಕ 21/11/2011 ರಂದು ತನ್ನ ಗೆಳತಿ ವಿದ್ಯಾನಗರದಲ್ಲಿದ್ದು ಅವಳು ಮತ್ತು ನಾನು ಟೈಪಿಂಗ ಕಲಿಯಲು ಹೆಸರು ನೊಂದಾಯಿಸಿಕೊಂಡು ಬರುತ್ತೆನೆಂದು ಮನೆಯಿಂದ ಮುಂಜಾನೆ 9 ಗಂಟೆಗೆ ವಿದ್ಯಾನಗರಕ್ಕೆ ಹೊಗಿದ್ದು ಮರಳಿ ಬಂದಿದ್ದಿಲ್ಲ ದಿನಾಂಕ09/12/2011 ರಂದು ನಮ್ಮ ಊರಾದ ವಂಟಿಚಿಂತಾದಿಂದ ಮೊಬೈಲ ಮುಖಾಂತರ ಮಾಹಿತಿ ಬಂದಿದ್ದೆನೆಂದರೆ ಮಗಳಾದ ಪ್ರಿಯಾಂಕ ಇವಳಿಗೆ ಶಂಕರ ತಂದೆ ಶಿವರಾಮ ವಿಭೂತಿ ಸಾ ಕೊಂಚಾವರಂ ಸದ್ಯ ಶಹಾಪೂರ ತಾಲೂಕಿನ ಸ್ಪಂದನಾ ಪೈನಾನ್ಸದಲ್ಲಿ ಕೆಲಸ ಮಾಡುವವನು ನನ್ನ ಮಗಳನ್ನು ಪುಸಲಾಯಿಸಿ ಗುಲಬರ್ಗಾ ಕೇಂದ್ರ ಬಸ್ ನಿಲ್ದಾಣದಿಂದ ಅಪಹರಣ ಮಾಡಿಕೊಂಡು ಹೊಗಿರುತ್ತಾನೆ ಸದರಿ ವಿಷಯ ಗೊತ್ತಾಗಿರುವದರಿಂದ ಹುಡುಗನ ತಂದೆಯಾದ ಶಿವರಾಮ ಮತ್ತು ತಾಯಿಯಾದ ವೆಂಕಮ್ಮ ಇವರಿಗೆ ವಿಚಾರಿಸಲಾಗಿ ಅವರು "ನಾವೆ ನನ್ನ ಮಗನಿಗೆ ನಿನ್ನ ಮಗಳನ್ನು ತೆಗೆದುಕೊಂಡು ಹೊಗು ಎನಾಗುತ್ತೆ ನೊಡಿಕೊಳ್ಳುತ್ತೆವೆಂದು ತಿಳಿಸಿದ್ದೆವೆ" ನೀವು ಎನ್ ಬೆಕಾದ್ರು ಮಾಡ್ಕೊಳ್ಳಿ ಎಂದು ತಿಳಿಸಿದರು ನಂತರ ನಾನು ಊರಿನ ಜನರನ್ನು ಕೂಡಿಸಿ ತಿಳಿಹೇಳಲು ಪ್ರಯತ್ನಿಸಿದ್ದು ಮತ್ತು ನನ್ನ ಮಗಳನ್ನು ನನ್ನ ತಾಬೆಗೆ ಕೊಡು ಅಂತಾ ಕೇಳಿದ್ದಕ್ಕೆ ನನ್ನ ವಿರುದ್ಧವೆ ಕೇಸು ಮಾಡುತ್ತೆವೆಂದು ಹೆದರಿಸಿರುತ್ತಾರೆ. ಆದ್ದರಿಂದ ನನ್ನ ಅಪ್ರಾಪ್ತ ವಯಸ್ಸಿನ ಮಗಳನ್ನು ಪತ್ತೆ ಹಚ್ಚಿಕೊಡಲು ಮತ್ತು ಅಪಹರಣ ಮಾಡಿದ ಶಂಕರ ಆತನಿಗೆ ಪ್ರಚೊದನೆ ನೀಡಿದ ತಂದೆ ತಾಯಿಯ ವಿರುದ್ಧ ಕಾನೂನಿನ ಕ್ರಮ ಕೈಕೊಳ್ಳಬೆಕು ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ. 133/2011 ಕಲಂ 366 (ಎ), 109, 506 ಸಂ. 34 ಐ.ಪಿ.ಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಳ್ಳಲಾಗಿದೆ.
ಹಲ್ಲೆ ಪ್ರಕರಣ:
ಶಹಾಬಾದ ನಗರ ಪೊಲೀಸ ಠಾಣೆ:
ಶ್ರೀಮತಿ ಸೋನಾಬಾಯಿ ಗಂಡ ಸುಭಾಸ ರಾಠೋಡ ಸಾ:ಮಡ್ಡಿ ನಂ.2 ರವರು ನನ್ನ ಮಗಳಾದ ಬಿನಾರ ಇವಳು ಕಿಶೋರ ಇತನ ಮನೆಯ ಹತ್ತಿರ ಬಂದಾಗ ಕೀಶೋಋ ಇತನು ಅವಾಚ್ಯ ಶಬ್ದಗಳಿಂದ ಬೈದಿದ್ದರಿಂದ ನಾನು ಹೋಗಿ ಯಾಕೆ ನನ್ನ ಮಗಳಿಗೆ ಸುಮ್ಮನೆ ಬೈಯುತ್ತಿ ಅಂತಾ ಕೇಳಿದ್ದಕ್ಕೆ ಸದರಿಯವನು ನನಗೆ ಕಲ್ಲಿನಿಂದ ತಲೆಗೆ ಹೊಡೆದು ರಕ್ತಗಾಯ ಪಡಿಸಿರುತ್ತಾನೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 193/2011 ಕಲಂ 324, 504 ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಳ್ಳಲಾಗಿದೆ.
ಶಹಾಬಾದ ನಗರ ಪೊಲೀಸ ಠಾಣೆ:
ಶ್ರೀಮತಿ ಅನುಸುಯಾ ಗಂಡ ಚಂದ್ರಕಾಂತ ನಂದಿ ಸಾ: ಲಕ್ಷ್ಮಿ ಗಂಜ್ ಶಹಾಬಾದರವರು ನಾನು ನನ್ನ ಗಂಡನಿಗೆ ಊಟ ಕೊಟ್ಟು ಕಿರಾಣಿ ಅಂಗಡಿಯಿಂದ ಮನೆಗೆ ಬಂದು ನನಗೆ ಅಯಾಸವಾಗಿದ್ದರಿಂದ ಮನಯಲ್ಲಿ ಮಂಚದ ಮೇಲೆ ಮಲಗಿದೇನು. ಸ್ವಲ್ಪ ಹೊತ್ತಿನ ನಂತರ ನನಗೆ ಎಚ್ಚರವಾದಾಗ ಮನೆಯಲ್ಲಿ ನನ್ನ ಎದುರಿಗೆ ಒಬ್ಬ ಅಪರಿಚಿತನು ಕೈಯಲ್ಲಿ ಚಾಕು ಹಿಡಿದುಕೊಂಡಿದ್ದನ್ನು ನಾನು ನೋಡಿ ಗಾಬರಿಯಾಗಿ ಚೀರಾಡಿದಾಗ ಸದರಿಯವನು ಕುತ್ತಿಗಿಗೆ ಚುಚ್ಚಿ ಸದರಿ ಚಾಕು ನನ್ನ ಕೈಯಲ್ಲಿ ಕೊಟ್ಟು ಓಡಿ ಹೋಗಿರುತ್ತಾನೆ ಅಪರಿಚಿತನು ಮುಖಕ್ಕೆ ಟಾವೆಲ ಕಟ್ಟಿಕೊಂಡು ಮೈಮೇಲೆ ನೀಲಿ ಶರ್ಟ, ನೀಲಿ ಜೀನ ಪ್ಯಾಂಟ್ ಧರಿಸಿದ್ದು ವಯಸ್ಸು ಅಂದಾಜು. 20-25 ಇರಬಹುದ. ನನಗೆ ಕುತ್ತಿಗೆಗೆ ರಕ್ತಗಾಯವಾಗಿರುತ್ತದೆ. ಸದರಿ ಅಪರಿಚಿತನು ನನ್ನ ಮನೆಯ ಬಾಗಿಲು ತೆರೆದಿದ್ದರಿಂದ ಕಳವು ಮಾಡಲು ಬಂದಿದ್ದು ನನಗೆ ನಿದ್ರೆ ಎಚ್ಚರವಾಗಿ ನೋಡುತ್ತಿರುವಾಗ ಯಾಕೆ ಎಂದು ಚಿರಾಡಿದಾಗ ಚಾಕುವಿನಿಂದ ನನ್ನ ಕುತ್ತಿಗಿಗೆ ಚುಚ್ಚಿ ರಕ್ತಗಾಯ ಪಡಿಸಿ ಓಡಿ ಹೋಗಿರುತ್ತಾನೆ. ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 195/2011 ಕಲಂ:380, 382. 511 ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಳ್ಳಲಾಗಿದೆ.