POLICE BHAVAN KALABURAGI

POLICE BHAVAN KALABURAGI

05 January 2016

Kalaburagi District Reported Crimes

ಆತ್ಮ ಹತ್ಯೆ ಮಾಡಿಕೊಳ್ಳಲು ಪ್ರಚೋದನೆ ಮಾಡಿದ ಪ್ರಕರಣ :
ಕಮಲಾಶಪೂರ ಠಾಣೆ : ಶ್ರೀ ಸಂತೋಷ ತಂದೆ ಕಮಲಾಕರ  ಇಟ್ಟಗಿ ಸಾ: ಡೊಂಗರಗಾಂವ ತಾ:ಜಿ: ಕಲಬುರಗಿ ಇವರ ತಂದೆಯವರ ಹೆಸರಿನಲ್ಲಿ  ಕಾಳಮಂದರಗಿ ಸೀಮಾಂತರದಲ್ಲಿ ಸರ್ವೇನಂ 114  ನೇದ್ದರಲ್ಲಿ 3 ಎಕರೆ 4 ಗುಂಟೆ ಹೊಲ ಇದ್ದು ಸದರಿ  ಹೊಲವನ್ನು ಕಾಳಮಂದರಗಿ  ಗ್ರಾಮದ ನಮ್ಮ ಸಂಬಂಧಿಕರಾದ ಶಂಬು ಬಾಪೂರೆ ಮತ್ತು ಪರಮೇಶ್ವರ  ಬಾಪೂರೆ ಇವರಿಗೆ ತಲಾ 1 1/2  ಎಕರೆಯಂತೆ ಹೊಲ ಕಡತಿಗೆ ಹಾಕಿದ್ದು, ಸುಮಾರು 3 ವರ್ಷಗಳ ಹಿಂದೆ ನನ್ನ ತಮ್ಮನ ಮದುವೆಯ ಕಾಲಕ್ಕೆ ನನ್ನ ತಂದೆ  ಶಂಬು ಬಾಪೂರೆ ಇವರ ಹತ್ತಿರ 5,೦೦೦ ಸಾವಿರ ಸಾಲ ಪಡೆದುಕೊಂಡಿದ್ದು,  1 ವರ್ಷದ ನಂತರ 1,೦೦೦ ಸಾಲ ಶಂಬು ಇವರಿಗೆ ಮರಳಿ  ಕೊಟ್ಟಿದ್ದು  ಇನ್ನೂ 4,೦೦೦ ಸಾಲ ಕೊಡುವುದು ಬಾಕಿಯಿದ್ದು,  ಉಳಿದ ಸಾಲ ಕೊಡುವಂತೆ ಶಂಬುಲಿಂಗ ಬಾಪೂರೆ ಅವನ ಮಕ್ಕಳಾದ ಶಿವನಂದ ಹಾಗೂ ಜಗನ್ನಾಥ  ಇವರು  ಪದೆ ಪದೆ ಒತ್ತಾಯ  ಮಾಡುತ್ತಾ ಬಂದಿರುತ್ತಾರೆ. ಈಗ 3-4  ತಿಂಗಳ ಹಿಂದೆ ಒಂದು ದಿವಸ ನಮ್ಮ ತಂದೆ ಹೊಲಕ್ಕೆ ಹೋಗುವ ಸಮಯದಲ್ಲಿ ಶಂಬು  ಬಾಪೂರೆ ಅವನ ಮಕ್ಕಳು ಶಿವಾನಂದ ಹಾಗೂ ಜಗನಾಥ ಕೊಡಿಕೊಂಡು ನಮ್ಮ ತಂದೆಗೆ  ಗೊತ್ತಾಗದ ಹಾಗೆ  ಅವರ ಹೆಸರಿಗೆ  ಇದ್ದ ಹೊಲ  ಶಂಬು ಬಾಪೂರೆ ತನ್ನ  ಹೆಸರಿಗೆ  ಮಾಡಿಕೊಂಡಿದ್ದು ಈ ವಿಷಯ  ನಮ್ಮಗೆ ತಿಳಿದಾಗ  ನಾವು  ಹೊಲದ  ವಿಷಯದಲ್ಲಿ  ಸಿವಿಲ್  ನ್ಯಾಯಾಲಯದಲ್ಲಿ  ಖಾಸಗಿ  ದಾವೆ ಹೊಡಿರುತ್ತೇವೆ. ನಂತರ  ನಾನು ನಮ್ಮ ತಂದೆ  ಹಾಗೂ  ತಮ್ಮ ಮಹೇಶ ಕೊಡಿ  ಶಂಬು ಬಾಪೂರೆ ಇವರಿಗೆ ವಿಚಾರಿಸಿದ್ದಾಗ ಅವರು ತಿಳಿಸಿದೇನೆಂದರೆ ನನಗೆ ಕೊಡಬೇಕಾದ ಸಾಲದ  ಹಣದಲ್ಲಿ  ಹೊಲ ನನ್ನ  ಹೆಸರಿಗೆ ಮಾಡಿಕೊಂಡಿದೇನೆ ಅಂತಾ ತಿಳಿಸಿದ್ದು, ಆಗ ನಾವು  ಸಾಲದ ಹಣವನ್ನು ನಿಮಗೆ ವಾಪಸ ಕೊಡುತ್ತೇವೆ ನಮ್ಮ ಹೊಲ ನಮಗೆ ಬಿಟ್ಟುಕೊಡುವಂತೆ ಕೇಳಿದ್ದು, ಅದಕ್ಕೆ  ಅವರು ಒಪ್ಪಿರುವುದಿಲ್ಲಾ. ನಾವು ಹೊಲದ ವಿಷಯದಲ್ಲಿ  ಕೋರ್ಟನಲ್ಲಿ  ಕೇಸ ಹಾಕಿದ್ದರಿಂದ  ಶಂಬು ಬಾಪೂರೆ  ಮತ್ತು ಅವನ ಇಬ್ಬರು  ಮಕ್ಕಳು ಕೇಸ ಹಿಂಪಡೆಯುವಂತೆ ನನ್ನ ತಂದೆ  ಸಂಗಡ ಪದೇ  ಪದೇ ಜಗಳ ಮಾಡುತ್ತಾ  ಬಂದಿದ್ದರಿಂದ  ದಿನಾಂಕ:03-01-2016   ರಂದು ಬೆಳಗ್ಗೆ 6-೦೦  ಗಂಟೆ ಸುಮಾರಿಗೆ  ನನ್ನ  ತಂದೆ ಮೈಗೆ ಬೆಂಕಿ ಹಚ್ಚಿಕೊಂಡಿದ್ದು. ನಂತರ ನಾವು ಬೆಂಕಿಯನ್ನು ಆರಿಸಿ ನಮ್ಮ ತಂದೆಗೆ ವಿಚಾರ ಮಾಡಲು  ಹೊಲದ ವಿಷಯದಲ್ಲಿ ಕೋರ್ಟನಿಂದ ಕೇಸ ಹಿಂಪಡೆಯುವಂತೆ ಶಂಬು ಬಾಪೂರೆ ಮತ್ತು ಅವನ  ಮಕ್ಕಳು ನನಗೆ  ಮಾನಸಿಕ  ಕಿರುಕುಳ ಕೊಡುತ್ತಿದ್ದು ಅದನ್ನು  ತಾಳದೇ  ನಾನು  ಮೈಗೆ  ಬೆಂಕಿ ಹಚ್ಚಿಕೊಂಡಿರುತ್ತೇನೆ  ಅಂತಾ ತಿಳಿಸಿದ್ದು, ನಂತರ ನಾವು 108 ಅಂಬುಲೇನ್ಸ್ ನಲ್ಲಿ  ಉಪಚಾರ ಕುರಿತು  ನನ್ನ ತಂದೆಗೆ ಕಲಬುರಗಿ ಸರ್ಕಾರಿ ಆಸ್ಪತ್ರೆಗೆ  ತಂದು ಸೇರಿಕೆ  ಮಾಡಿದ್ದು ಇಂದು 11-೦೦ ಗಂಟೆಗೆ  ಉಪಚಾರ ಫಲಿಸದೇ ನನ್ನ ತಂದೆ ಆಸ್ಪತ್ರೆಯಲ್ಲಿ ಮೃತಪಟ್ಟಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಕಮಲಾಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಳವು ಪ್ರಕರಣಗಳು :
ಜೇವರ್ಗಿ ಠಾಣೆ : ದಿನಾಂಕ 03.01.16 ರಂದು ರಾತ್ರಿ 11.30 ಗಂಟೆಯಿಂದ ದಿ: 04.01.16 ರಂದು ಬೆಳಿಗ್ಗೆ 05.00 ಗಂಟೆಯ ಅವದಿಯಲ್ಲಿ ಯಾರೋ ಕಳ್ಳರು ಜೇವರಗಿ ಪಟ್ಟಣದ ವಿದ್ಯಾನಗರದಲ್ಲಿರುವ ಫಿರ್ಯಾದಿ ಶ್ರೀ ವಿಶ್ವನಾಥ ಕಿರಣಗಿ ಇವರ ಮನೆಯ ಕೀಲಿ ಮುರಿದು ಮನೆಯೊಳಗೆ ಪ್ರವೇಶ ಮಾಡಿ ಅಲಮಾರದಲ್ಲಿದ್ದ 1) 45 ಗ್ರಾಂ ಬಂಗಾರದ ಆಭರಣಗಳು ಅ.ಕಿ 1,12,000/- ರೂ 2) ನಗದು ಹಣ 90.000/- ರೂ 3) 200 ಗ್ರಾಂ  ಬೆಳ್ಳಿ ಆಭರಣಗಳು ಅ.ಕಿ 8.000/-ರೂ ಹೀಗೆ ಒಟ್ಟು 2,10,000/-ರೂ ಕಿಮ್ಮತಿನವುಗಳು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಜೇವರ್ಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಜೇವರ್ಗಿ ಠಾಣೆ : ದಿನಾಂಕ 02.01.16 ರಂದು ರಾತ್ರಿ 11.30 ಗಂಟೆಯಿಂದ 04.01.16 ರಂದು ಬೆಳಿಗ್ಗೆ 05.00 ಗಂಟೆಯ ಅವದಿಯಲ್ಲಿ ಯಾರೋ ಕಳ್ಳರು ಜೇವರಗಿ ಪಟ್ಟಣದ ವಿದ್ಯಾನಗರದಲ್ಲಿರುವ ಫಿರ್ಯಾದಿ ಶ್ರೀ ಯಲ್ಲಪ್ಪ ನಡುವಿನಕೇರಿ ಸಾ: ವಿದ್ಯಾನಗರ ಇವರ ಮನೆಯ ಬಾಗಿಲು ಕೀಲಿ ಮುರಿದು ಮನೆಯೊಳಗೆ ಪ್ರವೇಶ ಮಾಡಿ ಅಲಮಾರದಲ್ಲಿದ್ದ   1) ನಗದು ಹಣ 2000/-ರೂ 2)  ಸೊನಾಟಾ ಕೈ ಗಡಿಯಾರ ಅ.ಕಿ 1500/-ರೂ ಹೀಗೆ ಒಟ್ಟು 3,500/- ರೂ ಕಿಮ್ಮತಿನವುಗಳು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಜೇವರ್ಗಿ ಠಾಣೆಯಲ್ಲಿ ಪ್ರಕರಣ ಧಾಖಲಾಗಿದೆ.