POLICE BHAVAN KALABURAGI

POLICE BHAVAN KALABURAGI

21 March 2015

Kalaburagi District Reported Crimes

ಹಲ್ಲೆ ಪ್ರಕರಣಗಳು  :
ನಿಂಬರ್ಗಾ ಠಾಣೆ : ಶ್ರೀಮತಿ ನಿರ್ಮಲಾ ಗಂಡ ಚಂದ್ರಕಾಂತ ನಿಂಬಾಳ  ಸಾ|| ಕವಲಗಾ ಇವರಿಗೆ  ಹಾಗೂ ತನ್ನ ಗಂಡನಾದ ಚಮದ್ರಕಾಂತನಿಗೆ ಮೈದುನನಾದ ಲಕ್ಷ್ಮಿಪುತ್ರನಿಗೆ ನಗೇಣಿಯವರಾದ ಜ್ಯೋತಿ ಮತ್ತು ಸವಿತಾ ಇವರೆಲ್ಲರಿಗೂ ದಿನಾಂಕ 19/03/2015 ರಂದು 1630 ಗಂಟೆಗೆ ಫೀರ್ಯಾಧಿಯ ಮನೆಯ ಮುಂದೆ ಆರೋಪಿತರಾದ 01] ಕಲ್ಯಾಣಿ ತಂದೆ ಶ್ರೀಮಂತ ನಿಂಬಾಳ, 02] ಶರಣಮ್ಮ ಗಂಡ ಶ್ರೀಮಂತ ನಿಂಬಾಳ, 03] ಶಿವಮ್ಮಾ ತಂದೆ ಶ್ರಿಮಂತ ನಿಂಬಾಳ ಸಾ|| ಎಲ್ಲರೂ ಕವಲಗಾ ಇವರು ಬಟ್ಟೆ ತೋಳೆಯುವ ನೀರು ಆಕಸ್ಮಿಕವಾಗಿ ಸಿಡಿದಿದ್ದರಿಂದ ಮತ್ತು ಹೊಟ್ಟ ಕಿಚ್ಚು ಸ್ವಭಾವದಿಂದ ಜಗಳ ತೆಗೆದು ಅವಾಚ್ಯ ಬೈದು ಕೈಯಿಂದ ಹೊಡೆ ಬಡೆ ಮಾಡಿ ಕೊಯಿತಾ ತೋರಿಸಿ ಜೀವ ಭಯಪಡಿಸಿರುತ್ತಾರೆ ಅಂಥಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ನಿಂಬರ್ಗಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವಿಶ್ವವಿದ್ಯಾಲಯ ಠಾಣೆ : ಶ್ರೀ ರೇವಣಸಿದ್ದಪ್ಪ ತಂದೆ ಅಂಬಣ್ಣ ಪುಜಾರಿ ಇವರಿಗೆ ಸೇರಿದ ಇಟಗಾ ಅಹ್ಮದಾಬಾದ ಗ್ರಾಮದ ಹೊಲ ಸರ್ವೆ ನಂ 23/ಎ ವಿಶ್ತೀರ್ಣ 2 ಎಕರೆ ನೇದ್ದರಲ್ಲಿ ಆರೋಪಿತರಾ 1) ಬಾಬಾ ತಂದೆ ಮಶಾಕ ಪಟೇಲ 2) ಖಾಜಾ 3) ಲಾಲಪಾಶಾ 4) ಜುಬೇದಾ ಬೀ 5) ಗೋರಿಬೀ ಇವರೆಲ್ಲರೂ ಸೇರಿಕೊಂಡು ಅತಿಕ್ರಮ ಪ್ರವೇಶ ಮಾಡಿ ಹೊಲದಲ್ಲಿ ಬೆಳದ ನಿಂತ ಬೇಳೆಯನ್ನು ಪುನಃ ನೇಗಿಲು ಹೊಡೆಯುತ್ತಿದ್ದಾಗ,  ಯಾಕೆ ನನ್ನ ಹೊಲದಲ್ಲಿನ ಬೆಳೇ ನಾಶ ಮಾಡುತ್ತಿದ್ದೀರಿ ಅಂತ ಕೇಳಿದಕ್ಕೆ  ಎಲ್ಲರು ಸೇರಿಕೊಂಡು ಹೊಡೆ ಬಡೆ ಮಾಡಿ ಜೀವದ ಬೇದರಿಕೆ ಹಾಕಿ  ಗುಪ್ತಗಾಯ ಪಡಿಸಿ ಹೊಲದಲ್ಲಿನ ಬೇಳೆಯನ್ನು ನಾಶ ಮಾಡಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಸದ ಮೇಲಿಂದ ವಿಶ್ವವಿದ್ಯಾಲಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.