POLICE BHAVAN KALABURAGI

POLICE BHAVAN KALABURAGI

12 April 2012

GULBARGA DIST REPORTED CRIME

ವಂಚನೆ ಪ್ರಕರಣ:

ಸ್ಟೇಷನ ಬಜಾರ ಪೊಲೀಸ ಠಾಣೆ: ಮಾನ್ಯ ಪ್ರಿನ್ಸಿಪಾಲ್ ಜೆ.ಎಮ್.ಎಫ್.ಸಿ ಕೊರ್ಟ ಗುಲಬರ್ಗಾರವರ ಆದೇಶ ಪತ್ರ ನಂ:1501/2012 ದಿನಾಂಕ:09/04/2012 ಪಿ.ಸಿ ನಂ 90/12 ನೇದ್ದನ್ನು ಕೊರ್ಟ ಕರ್ತವ್ಯದ ಕಾನ್ಸಟೇಬಲ್ ಮುಖಾಂತರ ಖಾಸಗಿ ದೂರು ದಿನಾಂಕ:12-04-2012 ರಂದು ವಸೂಲಾಗಿದ್ದರ ಸಾರಂಶವೆನೆಂದರೆ, ಶ್ರೀ ಯಲ್ಲಪ್ಪಾ ತಂದೆ ಶಿವಶರಣಪ್ಪಾ ನಾಯಿಕೊಡಿ ಸಾ|| ಪಿಲ್ಟರ್ ಬೆಡ್ ರೋಡ ಎಕಲವ್ಯ ಸ್ಟೋರ ತಾಕ ಸುಲ್ತಾನಪೂರ ಗುಲಬರ್ಗಾರವರು ಆರೋಪಿಗಳಾದ ಕಲ್ಯಾಣರಾದ ತಂದೆ ಯಶ್ವಂತರಾವ ಗನ್ನೂರೆ ನಿಟಾ ಎಂಟ್ರಪ್ರೇಜೆಸ್ ಸುಪರ ಮಾರ್ಕೆಟ ಗುಲಬರ್ಗಾ ಮತ್ತು ಇವರ ಸಂಗಡ ಇನ್ನೂ 4 ಜನರು ವಂಚನೆ ಮಾಡಿರುತ್ತಾರೆ ಅಂತಾ ಯಲ್ಲಪ್ಪಾ ರವರು ಮಾನ್ಯ ನ್ಯಾಯಾಲಯದಲ್ಲಿ ಖಾಸಗಿ ದೂರು ಸಲ್ಲಿಸಿದ್ದ ಸಾರಂಶದ ಮೇರೆಗೆ ಮಾನ್ಯ ನ್ಯಾಯಾಲಯವು ಕಲಂ 156 (3) ಸಿ.ಆರ್.ಪಿ.ಸಿ ಯ ಪ್ರಕಾರ ತನಿಖೆ ಕೈಕೊಂಡು ವರದಿ ಸಲ್ಲಿಸುವಂತೆ ಆದೇಶಿಸಿದ್ದರಿಂದ ಠಾಣೆ ಗುನ್ನೆ ನಂ 50/2012 ಕಲಂ 419, 420,ಸಂ 149 ಐ.ಪಿ.ಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಳ್ಳಲಾಗಿದೆ.

GULBARGA DIST REPORTED CRIMES

ಲಾಟರಿ ಬಹುಮಾನ ಬಂದಿದೆ ಅಂತಾ ಪೋನ ಮಾಡಿ 1, 37, 800/- ರೂ. ಗಳು ವಂಚನೆ ಮಾಡಿದ ಪ್ರಕರಣ:
ಶಹಾಬಾದ ನಗರ ಪೊಲೀಸ ಠಾಣೆ:
ಶ್ರೀ ರಾಜು ತಂದೆ ರಾಮು ರಾಠೋಡ ಸಾ:ತರಿತಾಂಡ ಭಂಕೂರ ತಾ ಚಿತ್ತಾಪೂರ ರವರು ನನ್ನ ಮೋಬೈಲ ನಂ 9901594480 ನೇದ್ದಕ್ಕೆ ದಿನಾಂಕ 01/04/2012 ರಂದು ಮೋಬೈಲ ನಂ 00923035777990 ರ ಮುಖಾಂತರ ಸಂಪರ್ಕ ಮಾಡಿ ನಿಮಗೆ ಲಾಟರಿ ಬಹುಮಾನ ರೂ 25,00,000=00 ಬಂದಿರುತ್ತದೆ. ಕಾರಣ ನೀವು ನಮ್ಮ ಖಾತೆಗೆ ರೂಪಾಯಿ 1,37,800=00 ಪಾವತಿ ಮಾಡಲು ತಿಳಿಸಿರುತ್ತಾರೆ. ಅದರಂತೆ ನಾನು ಎಸ್.ಬಿ.ಐ ಬ್ಯಾಂಕ ಭಂಕೂರನಲ್ಲಿ ದಿನಾಂಕ: 03-04-2012 ರಂದು ಖಾತೆ ನಂ 1) 20115181589 ರೂ 20,100/- 2] 31411922702 ರೂ 15,200/- 3] 32220923985 ನೇದ್ದಕ್ಕೆ 22,500/- 4] 32219225012 ನೇದ್ದಕ್ಕೆ 20,100/- ರೂ ಜಮಾ ಮಾಡಿರುತ್ತೆನೆ. ದಿನಾಂಕ: 05-04-2012 ರಂದು ಖಾತೆ ನಂ 1] 30701839059 ನೇದ್ದಕ್ಕೆ 25,000/- 2] 31469368845 ನೇದ್ದಕ್ಕೆ 10,000/- ಹಾಗೂ 3] 31733929154 ನೇದ್ದಕ್ಕೆ 25,000/- ರೂ ಹೀಗೆ ಒಟ್ಟು 1,37,800 =00 ರೂ ಜಮಾ ಮಾಡಿರುತ್ತೆನೆ. ಮತ್ತೆ ನನಗೆ ಪೋನ ಮಾಡಿ ಇನ್ನೂ 85,000/- ರೂ ಗಳು ಪಾವತಿ ಮಾಡಲು ಖಾತೆ ಸಂಖ್ಯೆ 32219227950 ನೇದ್ದಕ್ಕೆ ಜಮಾ ಮಾಡಲು ತಿಳಿಸಿದ್ದರಿಂದ ಸಂಶಯ ಬಂದು ವಿಚಾರಿಸಲಾಗಿ ಮೋಸ ಮಾಡಿದ ಬಗ್ಗೆ ಗೋತ್ತಾಗಿರುತ್ತದೆ. ಕಾರಣ ಮೇಲ್ಕಂಡ ಖಾತೆದಾರರು ನನಗೆ ವಂಚನೆ ಮಾಡಿರುತ್ತಾರೆ ಅಂತಾ ರಾಜು ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ : 38/2012 ಕಲಂ 420 ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.