POLICE BHAVAN KALABURAGI

POLICE BHAVAN KALABURAGI

27 October 2015

KALABURAGI DISTRICT REPORTED CRIMES.

ಗ್ರಾಮೀಣ ಠಾಣೆ : ದಿನಾಂಕ 26-10-15 ರಂದು ಬೆಳಿಗ್ಗೆ 10-00 ಗಂಟೆಗೆ  ಆರೋಪಿ ಸಾಯಿ ಇತನು ತನ್ನ ಮೋಟಾರ ಸೈಕಲ ಕೆಎ 32 ಇಸಿ 2923 ನೇದ್ದರ ಹಿಂದೆ ವೈಷ್ಣವಿ ಮತ್ತು ತನ್ನ ತಾಯಿ ಲಕ್ಷ್ಮೀಬಾಯಿ ಇವರಿಗೆ ಕೂಡಿಸಿಕೊಂಡು ದೇವಲಗಾಣಗಾಪೂರ ಮತ್ತು ಘತ್ತರಗಿ ದೇವರ ದರ್ಶನ ಕುರಿತು ತನ್ನ ಜೊತೆಯಲ್ಲಿ ಸುನೀಲ, ಸಂತೋಷ ಇವರಿಬ್ಬರು ಒಂದು ಮೋಟಾರ ಸೈಕಲ ಮೇಲೆ ಮತ್ತು  ರಾಜು, ಕಮಲಾಬಾಯಿ ಇವರಿಬ್ಬರು ಒಂದು ಮೋಟಾರ ಸೈಕಲ ಮೇಲೆ  ಕರೆದುಕೊಂಡು ಕರೆದುಕೊಂಡು ಹೋಗಿದ್ದು, ದೇವರ ದರ್ಶನ ಮುಗಿಸಿಕೊಂಡು,ಅದೇ ಮೋಟಾರ ಸೈಕಲ ಮೇಲೆ ಕುಳಿತುಕೊಂಡು  ಸಂಜೆ 5-00 ಗಂಟೆ ಸುಮಾರಿಗೆ  ಘತ್ತರಗಿಯಿಂದ ಊರ ಕಡೆ ಅತಿವೇಗದಿಂದ ನಡೆಸುತ್ತಾ ಹೊರಟಿದ್ದು,ಸಂಜೆ 7-30 ಗಂಟೆ ಸುಮಾರಿಗೆ ಅತಿವೇಗದಿಂದ ಮತ್ತು ನಿಷ್ಕಾಳಿಜಿತನದಿಂದ ನಡೆಸುತ್ತಾ ಹುಮನಾಬಾದ- ಕಲಬುರಗಿ ಮುಖ್ಯ ರಸ್ತೆಯ ಸ್ವಾಮಿ ಸಮರ್ಥ ಗುಡಿ ಹತ್ತಿರ ಬಂದಾಗ ಆರೋಪಿ ಸಾಯಿ ಕಣ್ಣಲ್ಲಿ ಯಾವುದೋ ಒಂದು ಸಣ್ಣ ಹುಳು ಬೀಳಲು ಅತಿವೇಗದಿಂದ ನಡೆಸುತ್ತಿದ್ದ  ತನ್ನ ಮೋಟಾರ ಸೈಕಲದ ವೇಗದ ಆಯ ತಪ್ಪಿ ರೋಡಿನ ಎಡ ಬದಿಯಲ್ಲಿ ಇರುವ ಗೂಟಕಲ್ಲಿಗೆ ಡಿಕ್ಕಿ ಹೊಡೆದು ಅಪಘಾತಪಡಿಸಿದಾಗ,  ಮೂವರು ಮೋಟಾರ ಸೈಕಲ ಮೇಲಿಂದ ರೋಡ ಬದಿಯಲ್ಲಿ ಬಿದ್ದೇವು. ಇದರಿಂದಾಗಿ ಆರೋಪಿ ಸಾಯಿ ಮತ್ತು ವೈಷ್ಣವಿ  ಹಾಗೂ ತಾಯಿ ಲಕ್ಷ್ಮೀಬಾಯಿ ಮೂವರಿಗೆ ರಕ್ತಗಾಯಗಳಾಗಿದ್ದು, ಲಕ್ಷ್ಮೀಬಾಯಿ ಇವಳಿಗೆ ಉಪಚಾರ ಕುರಿತು 108 ಅಂಬುಲೈನ್ಸ ಗಾಡಿಯಲ್ಲಿ  ಸರಕಾರಿ ದವಾಖಾನೆ ರಾತ್ರಿ 8-50 ಗಂಟೆಗೆ ತಂದಾಗ ವೈದ್ಯರು ನೋಡಿ ಈಗಾಗಲೇ ಮೃತಪಟ್ಟಿರುತ್ತಾಳೆ. ಅಂತಾ ಫಿರ್ಯಾದಿಗೆ ಅವನ ಮಗ ಮತ್ತು ವೈಷ್ಣವಿ ಮತ್ತು ಪ್ರತ್ಯಕ್ಷ ಸಾಕ್ಷಿದಾರಾದ ಸುನೀಲ ಮತ್ತು ಸಂತೋಷ ಇವರಿಂದ ಕೇಳಿ ಗೊತ್ತಾಗಿರುತ್ತದೆ. ಈ ಬಗ್ಗೆ  ನನ್ನ ಮಗ ಸಾಯಿ @ ಸಾಯಿನಾಥನ ಮೇಲೆ ಕಾನೂನು ಕ್ರಮ ಜರುಗಿಸಿ ಅಂತ್ಯಕ್ರಿಯೆ ಕುರಿತು ನನ್ನ ಹೆಂಡತಿ  ಶವ ಒಪ್ಪಿಸಬೇಕೆಂದು ಕೊಟ್ಟ ಹೇಳಿಕೆ  ಫಿರ್ಯಾದಿ ಅರ್ಜಿ ಸಾರಾಂಶದ ಮೇಲಿಂದ ಗುನ್ನೆ ದಾಖಲಾಗಿರುತ್ತದೆ. 
ಅಶೊಕ ನಗರ ಠಾಣೆ : ದಿನಾಂಕ: 26/10/2015 ರಂದು ಮದ್ಯಾಹ್ನ 3 ಗಂಟೆಗೆ ಶ್ರೀ ರೊದ್ದಮ್‌ ರಮೇಶಬಾಬು ತಂದೆ ರೊದ್ದಮ್‌ ಸತ್ಯನಾರಾಯಣ ವಯ||35 ವರ್ಷ ಉ|| ಬ್ಯಾಂಕ್‌ ಮ್ಯಾನೇಜರ್‌ ಸಾ|| ಕರ್ನೂಲ ಹಾ|||| ಕರುಣೇಶ್ವರ ನಗರ ಕಲಬುರಗಿ ಇವರು ಠಾಣೆಗೆ ಹಾಜರಾಗಿ ಕೊಟ್ಟ ಫಿರ್ಯಾದಿ ಅರ್ಜಿಯ ಸಾರಾಂಶವೇನಂದರೆ, ನಾನು ಕಳೆದ 4 ತಿಂಗಳಿಂದ ಎಸ್‌ಬಿಐ ಬ್ಯಾಂಕ ಕಪನೂರ ಇಂಡಸ್ತ್ರೀಯಲ್‌ ಎಸ್ಟೆಟ್ ಕಲಬುರಗಿ ಶಾಖೆಯಲ್ಲಿ ಮ್ಯಾನೇಜರ ಅಂತಾ ಕೆಲಸ ಮಾಡಿಕೊಂಡು ವಾಸವಾಗಿರುತ್ತೆನೆ. ನಾನು ಕರುಣೇಶ್ವರ ನಗರದ ಡಾ||ವಿ.ಕೆ ದೇಶಪಾಂಡೆ ಇವರ ಮನೆಯಲ್ಲಿ ಬಾಡಿಗೆಯಿಂದ ವಾಸವಾಗಿರುತ್ತೆನೆ. ನಮ್ಮ ಹತ್ತಿರ ಕೆಲವು ಬಂಗಾರದ ಆಭರಣಗಳು ಇದ್ದು ಅವುಗಳನ್ನು ನಾವು ಕಳ್ಳರ ಭಯದಿಂದ ಒಂದು ಪ್ಲಾಸ್ಟಿಕ್‌ ಡಬ್ಬಿಯಲ್ಲಿ ಹಾಕಿ ಒಂದು ವಾರ ಆಲಮಾರಿಯಲ್ಲಿ ಮತ್ತೊಂದು ವಾರ ಕೀಚನ್‌ ರೂಮಿನ ಕಪಾಟಿನಲ್ಲಿ ಹೀಗೆ ಬೇರೆ-ಬೇರೆ ಸ್ಥಳಗಳಲ್ಲಿ ಇಡುತ್ತಾ ಬಂದಿರುತ್ತೆವೆ. ಹೀಗಿದ್ದು ದಿನಾಂಕ:24/10/2015 ರಂದು ರಾತ್ರಿ 11:30 ಗಂಟೆಯ ವರೆಗೆ ನಾನು ಮತ್ತು ನನ್ನ ಹೆಂಡತಿಯಾದ ರೊದ್ದಮ್ ಸುಜಾತ ಇಬ್ಬರು ಕೂಡಿ ಊಟ ಮಾಡಿ ಮಲಗಿಕೊಂಡಿರುತ್ತೆವೆ. ಮರುದಿವಸ ಅಂದರೆ ದಿನಾಂಕ:25/10/2015 ಬೆಳಗ್ಗೆ 5 ಗಂಟೆಗೆ ನನ್ನ ಹೆಂಡತಿಯಾದ ರೊದ್ದಮ್‌ ಸುಜಾತ ಇವಳು ಎದ್ದು ನೋಡಲಾಗಿ ನಮ್ಮ ಮನೆಯ ಹಿಂದಿನ ಬಾಗಿಲು ತೆರೆದಿದ್ದು ಕಂಡು ಗಾಬರಿಯಾಗಿ ನನ್ನ ಹತ್ತಿರ ಬಂದು ನನಗೆ ಎಬ್ಬಸಿ ನಮ್ಮ ಹಿಂದಿನ ಬಾಗಿಲು ತೆರೆದಿರುತ್ತದೆ ಅಂತಾ ಹೇಳಿದಾಗ ನಾನು ಕೂಡಾ ಎದ್ದು ನೋಡಲಾಗಿ ಬಾಗಿಲು ತೆರೆದಿದ್ದು ನಂತರ ಇಬ್ಬರು ಕೂಡಿ ಮನೆಯ ಹಾಲ್‌ನ ಕಪಾಟದಲ್ಲಿ ಬಂಗಾರ ಆಭರಗಳು ಇಟ್ಟಿದ ಪ್ಲಾಸ್ಟಿಕ್‌ಡಬ್ಬಿ  ನೋಡಲು ಕಾಣಲಿಲ್ಲ. ಪುನಃ ನಾವು ಡಬ್ಬಿಯನ್ನು ಬೇರೆ ಸ್ಥಳದಲ್ಲಿ ಇಟ್ಟಿರಬಹುದು ಅಂತಾ ತಿಳಿದು ಮನೆಯ ಎಲ್ಲಾ ಕಡೆಗೆ ಹುಡಕಾಡಿದರೂ ಕೂಡಾ ಬಂಗಾರದ ಆಭರಣಗಳಿದ್ದ ಡಬ್ಬಾ ಸಿಕ್ಕಿರುವದಿಲ್ಲ. ಅಲ್ಲದೆ ಡೈನಿಂಗ್‌ ಟೆಬಲ್‌ ಮೇಲಿಟ್ಟಿದ ನನ್ನ ಸ್ಯಾಮಸಂಗ್‌ ಕಂಪನಿಯ ಮೋಬೈಲ್‌ ಫೊನ್‌ ಸಿಮ್‌ ನಂ 9449875532,9448998488 ಅಂ:ಕಿ:3000/-ನೇದ್ದು ಮತ್ತು ಮೋಬೈಲ್‌ ಪಕ್ಕದಲ್ಲಿ ಇಟ್ಟಿದ್ದ ನನ್ನ ಹೆಂಡತಿಯ ಪರ್ಸನಲ್ಲಿಟ್ಟಿದ್ದ ನಗದು 1500/- ರೂಗಳು ಕಾಣಲಿಲ್ಲ. ಪ್ಲಾಸ್ಟಿಕ್‌ ಡಬ್ಬಿಯಲ್ಲಿ ಈ ಕೆಳಕಂಡ ಬಂಗಾರದ ಆಭರಣಗಳು ಇದ್ದಿದ್ದು ಇರುತ್ತವೆ. 1)    8 ಗ್ರಾಂನ ಒಂದು ಬಂಗಾರದ ಉಂಗುರು ಅಂ:ಕಿ:20,000/-ರೂಪಾಯಿ. 2)   6 ಗ್ರಾಂನ ಎರಡು ಬಂಗಾರದ ಉಂಗುರುಗಳು ಅ:ಕಿ:30,000/- ರೂಪಾಯಿ.3)   56 ಗ್ರಾಂನ 7 ಜೋತೆ ಬಂಗಾರದ ಕೀವಿಯ ಹೂಗಳು ಅ:ಕಿ:1,40,000/- ರೂಪಾಯಿ.4)   20 ಗ್ರಾಂನ ಒಂದು ಬಂಗಾರದ ಚಂಪಾಸರ ಅಂ:ಕಿ:50,000/- ರೂಪಾಯಿ.5)   15 ಗ್ರಾಂನ ಬಂಗಾರದ ಬಿಂದಿ ಅ:ಕಿ: 37,000/- ರೂಪಾಯಿ. 6)   16 ಗ್ರಾಂನ ಒಂದು ಬಂಗಾರದ ಬ್ರಾಸ್‌ಲೆಟ್‌ ಅ:ಕಿ:40,000/- ರೂಪಾಯಿ.7)   8 ಗ್ರಾಂನ ಒಂದು ಬಂಗಾರದ ಬ್ರಾಸ್‌ಲೆಟ್‌ ಅ:ಕಿ:20,000/- ರೂಪಾಯಿ.8)   5 ಗ್ರಾಂನ ಎರಡು ಬಂಗಾರ ನಾಣ್ಯಗಳು ಅ:ಕಿ:25,000/- ರೂಪಾಯಿ. ಹೀಗೆ ಒಟ್ಟು ನಗದು ಹಣ ಸೇರಿ3,66,500/-ರೂಪಾಯಿ ನೇದ್ದವುಳನ್ನು ದಿನಾಂಕ:24/10/2015 ರಂದು ರಾತ್ರಿ 11:30 ಗಂಟೆಯಿಂದ ದಿನಾಂಕ:25/10/2015 ರಂದು ಬೆಳಗಿನ 5 ಗಂಟೆಯ ಅವದಿಯಲ್ಲಿ ಯಾರೋ ಕಳ್ಳರು ನಮ್ಮ ಮನೆಯ ಮುಂದಿನ ಬಾಗೀಲು ಅಷ್ಟೋಂದು ಭದ್ರ ಇರದ ಕಾರಣ ಮುಂದಿನ ಬಾಗಿಲಿನಿಂದ ಮನೆಯ ಒಳಗೆ ಪ್ರವೇಶ ಮಾಡಿ ಮನೆಯಲ್ಲಿದ್ದ ಮೇಲೆ ನಮೂದಿಸಿದ ಬಂಗಾರದ ಆಭರಣಗಳು, ಮೋಬೈಲ್‌ ಫೊನ್‌ ಮತ್ತು ನಗದು ಹಣ ಯಾರೋ ಕಳವು ಮಾಡಿಕೊಂಡು ಹಿಂದಿನ ಬಾಗಿಲ ಮುಖಾಂತರ ಹೋಗಿರುತ್ತಾರೆ.ಈ ಬಗ್ಗೆ ನಾನು ಮನೆಯಲ್ಲಿ ಹುಡಕಾಡಿ,ವಿಚಾರ ಮಾಡಿ ಇಂದು ತಡವಾಗಿ ಠಾಣೆಗೆ ಬಂದು ದೂರು ಸಲ್ಲಿಸಿದ್ದು ಇರುತ್ತದೆ. ಕಾರಣ ಮಾನ್ಯರು ಕಳ್ಳರನ್ನು ಪತ್ತೆ ಮಾಡಿ ಅವರ ವಿರುದ್ದ ಕಾನೂನು ಕ್ರಮ ಜರುಗಿಸಲು ವಿನಂತಿ ಅಂತಾ ಇತ್ಯಾದಿ ಫಿರ್ಯಾದಿ ಅರ್ಜಿಯ ಸಾರಾಂಶದ ಮೇಲಿಂದ ಅಶೋಕ ನಗರ ಪೋಲಿಸ್‌ ಠಾಣೆ ಗುನ್ನೆ ನಂ.132/15 ಕಲಂ 457,380 ಐಪಿಸಿ ನೇದ್ದರಡಿಯಲ್ಲಿ ಪ್ರಕರಣ ದಾಖಲಾಗಿರುತ್ತದೆ.