POLICE BHAVAN KALABURAGI

POLICE BHAVAN KALABURAGI

14 May 2012

GULBARGA DIST REPORTED CRIMES


ಮುಂಜಾಗ್ರತೆ ಕ್ರಮ:
ಬ್ರಹ್ಮಪೂರ ಪೊಲೀಸ್ ಠಾಣೆ: ದಿನಾಂಕ: 14/05/2012 ರಂದು ಮಧ್ಯಾಹ್ನ  1300 ಗಂಟೆಗೆ ಶ್ರೀ.ಸುಧಾಕರ ಸಿಪಿಸಿ ಬ್ರಹ್ಮಪೂರ ಪೊಲೀಸ ಠಾಣೆ ಗುಲಬರ್ಗಾರವರು ನಾಣು ದಿನಾಂಕ: 14/05/2012 ರಂದು ನಾನು ಪೆಟ್ರೋಲಿಂಗ ಕುರಿತು ಸುಪರ ಮಾರ್ಕೆಟದಿಂದ ತಹಶೀಲ ಆಫೀಸ ಹತ್ತಿರ ಹೋದಾಗ ಅಲ್ಲಿ ಒಬ್ಬ ವ್ಯಕ್ತಿ ಸಾರ್ವಜನಿಕರಿಗೆ ಬೈಯುವದು, ಹೊಡೆಯಲ್ಲಿಕೆ ಹೋದಂತೆ ಮಾಡುವದು, ಮಾಡಿ ಭಯಾನಕ ರೀತಿಯಿಂದ ರೌಡಿ-ಗುಂಡಾನಂತೆ ವರ್ತಿಸುತ್ತಿದ್ದು ಸಾರ್ವಜನಿಕ ಶಾಂತತೆಯನ್ನು ಹಾಳು ಮಡುವುದನ್ನು ಕಂಡು ಅವನನ್ನು ಹಿಡಿದು ಹೆಸರು ವಿಚಾರಿಸಲಾಗಿ ಜಗಧೀಶ ತಂದೆ ದಾನಯ್ಯ ಸ್ವಾಮಿ, ವಯ|| 36 ವರ್ಷ,|| ಪೇಟಿಂಗ ಕೆಲಸ, ಸಾ|| ಗೋರಟಾ ತಾ|| ಬಸವ ಕಲ್ಯಾಣ, ಹಾ|||| ಅಲಗೂಡರ ಮನೆ ಶಹಾಬಜಾರ ಗುಲಬರ್ಗಾ ಅಂತಾ ಹೇಳಿದ್ದು ಸ್ಥಳದಲ್ಲಿ ಯಾಗೇಯೆ ಬಿಟ್ಟಲ್ಲಿ ಯಾವುದಾದರೊಂದು ಸಂಜ್ಞೆಯ ಅಪರಾಧ ವೆಸಗಬಹುದೆಂದು ಅಂತಾ ಮುಂಜಾಗೃತೆ ಕ್ರಮದ ಅಡಿಯಲ್ಲಿ ವರದಿ ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 61/2012 ಕಲಂ: 110(ಇ) (ಜಿ) ಸಿ.ಅರ್.ಪಿ.ಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಅಪಘಾತ ಪ್ರಕರಣ:
ಸಂಚಾರಿ ಪೊಲೀಸ್ ಠಾಣೆ:ಶ್ರೀ ಜಯಾನಂದ ತಂದೆ ನೀಲಕಂಠ @ ಕಂಠೆಪ್ಪ ನರೋಣ, ಉಃ ಅಟೋ ಚಾಲಕ ಸಾ: ಕೆರೆಬೋಸಗಾ ಗುಲಬರ್ಗಾರವರು ನಾನು ದಿನಾಂಕ 14-05-2012 ರಂದು ಮಧ್ಯಾಹ್ನ ಅಟೋ ರಿಕ್ಷಾ ನಂ : ಕೆಎ 32-9535 ನೇದ್ದರಲ್ಲಿ ಪ್ರಯಾಣಿಕರನ್ನು ಕೂಡಿಸಿಕೊಂಡು ಶಹಾಬಜಾರ ನಾಕಾ ದಿಂದ ಮದನ ಟಾಕೀಜ್ ಕಡೆಗೆ ಬರುವಾಗ ಮಾರ್ಗ ಮದ್ಯದಲ್ಲಿರುವ ಸಾ ಮಿಲ್  ಮುಂದಿನ ರೋಡಿನಲ್ಲಿ ಲಾರಿ ನಂ ಎಮ್.ಹೆಚ್. 13 ಆರ್ 4868 ನೇದ್ದರ ಚಾಲಕನು ತನ್ನ ವಾಹನ ಅತಿವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ಅಟೋಕ್ಕೆ ಡಿಕ್ಕಿ ಪಡಿಸಿದ್ದರಿಂದ  ನನಗೆ ಭಾರಿಗಾಯವಾಗಿದ್ದು, ಮತ್ತು ಅಟೋದಲ್ಲಿದ್ದ ಪ್ರಯಾಣಿಕರಿಗು ಸಹ ಸಣ್ಣ ಪುಟ್ಟ ಗಾಯಗಳಾಗಿರುತ್ತವೆ ಲಾರಿ ಚಾಲಕನು ತನ್ನ ವಾಹನ ಬಿಟ್ಟು ಓಡಿ ಹೋಗಿರುತ್ತಾನೆ ಅಂತ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 26/2012 ಕಲಂ 279, 337, 338 ಐ.ಪಿ.ಸಿ ಸಂಗಡ 187 ಐ.ಎಮ್.ವಿ ಆಕ್ರ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.

GULBARGA DIST REPORTED CRIMES

ಪೊಲೀಸ್ ಕರ್ತವ್ಯಕ್ಕೆ ಅಡೆ ತಡೆ ಮಾಡಿದ ಬಗ್ಗೆ:
ಅಶೋಕ ನಗರ ಪೊಲೀಸ್ ಠಾಣೆ: ಶ್ರೀಮತಿ ಲಾಲಬಿ ಮಹಿಳಾ ಪೊಲೀಸ್ ಸಬ್ - ಇನ್ಸಪೇಕ್ಟರ ಮಹಿಳಾ ಪೊಲೀಸ್ ಠಾಣೆ ಗುಲಬರ್ಗಾ ರವರು ದಿನಾಂಕ 04/05/2012 ರಂದು 6-15 ಪಿ.ಎಂ.ಕ್ಕೆ  ದತ್ತ ನಗರಕ್ಕೆ ಹೋಗಿ ಅಶೋಕ ನಗರ ಠಾಣಾ ವ್ಯಾಪ್ತಿಯಲ್ಲಿ ಇರುವುದ್ದರಿಂದ ಪಿ.ಐ ಅಶೋಕ ನಗರ  ರವರಿಗೆ ಸ್ಥಳಕ್ಕೆ ಕರೆಯಿಸಿಕೊಂಡು ಜೊತೆಯಲ್ಲಿಯೇ ಇರುವಂತ ಪ್ರಕರಣದ ಪಿರ್ಯಾಧಿ ಹಾಗು ಮಗಳು ಮಾನಸಾ ಇವರು ಹಾಜರಿದ್ದು ಪಂಚನಾಮೆ ಕೈಕೊಳ್ಳಬೇಕಾಗಿರುವದರಿಂದ ಆ ವೇಳೆಗೆ ಮನೆಯಲ್ಲಿ ಅನಿಲೇಟಸ್ ಗಂಡ ಅರ್ಜುನ ಹತಗುಂದಿ ಇವರು ಮನೆಯ ಗೇಟ ತೆಗೆದು ಹೊರಗಡೆ ಬಂದು ನಮ್ಮ ಜೊತೆಯಲ್ಲಿದ್ದ  ಸುಶೀಲಾಬಾಯಿಗೆ ಅವಾಚ್ಯವಾಗಿ ಬೈಯುತ್ತಿದ್ದು ನಾವು ಸಮಾಧಾನ ಹೇಳುವಾಗ ಅವಳು ನಮಗೆ ಸುಶೀಲಾಬಾಯಿ ದಾಖಲಿಸಿದ ಪ್ರಕರಣ ಸುಳ್ಳು ಇದೆ ಪಂಚನಾಮೆ ಮಾಡುವದಕ್ಕೆ ಬಿಡುವದಿಲ್ಲ ಅಂತಾ ತನಿಖೆಯ ಕೆಲಸಕ್ಕೆ ಅಡತಡೆ ಮಾಡಿದ್ದರಿಂದ ಪ್ರಕರಣದ ತನಿಖೆ ಸ್ಥಗಿತಗೊಂಡಿದ್ದರಿಂದ  ಸದರಿಯವಳ ವಿರುದ್ದ ಕಾನೂನು ಕ್ರಮ ಜರೂಗಿಸುವ ಸಲುವಾಗಿ ಪಿ.ಎಸ.ಐ ಶ್ರೀಮತಿ ಲಾಲಬಿ ರವರು ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ. 41/2012 ಕಲಂ. 186 ಐಪಿಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಮಧ್ಯದ ಬಾಡಲಿಗಳು ಜಪ್ತಿ ಮಾಡಿಕೊಂಡ ಬಗ್ಗೆ:
ಶಹಾಬಾದ ನಗರ ಪೊಲೀಸ ಠಾಣೆ :ದಿನಾಂಕ:13/05/2102 ರಂದು ಮಧ್ಯಾಹ್ನ 1.30 ಪಿಎಂಕ್ಕೆ ಮರತೂರ ಗ್ರಾಮದಲ್ಲಿ ಅಣ್ಣಾರಾಯ ತಂದೆ ಭೀಮರಾಯ ಕಾಳನೂರ ಇವನು ತನ್ನ ಪಾನಶಾಪದಲ್ಲಿ ಸರಾಯಿ ಕ್ವಾಟರ ಬಾಟಲಿಗಳು ಅನಧಿಕೃತವಾಗಿ ಲೈಸನ್ಸಯಿಲ್ಲದೆ ತಂದು ಮಾರಾಟ ಮಾಡುತ್ತಿದ್ದಾನೆ ಅಂತಾ ಬಾತ್ಮಿ ಬಂದ ಮೇರೆಗೆ ಪೊಲೀಸ್ ಇನ್ಸಪೇಕ್ಟರ ಹಾಗೂ ಸಿಬ್ಬಂದಿಯವರಾದ ಹುಸೇನಸಾಬ, ಗುಂಡಪ್ಪಾ, ಬಸವರಾಜ, ಹಾಗೂ  ಜೀಪ ಚಾಲಕ ಹಣಮಂತರಾಯ ಹೋಗಿ ದಾಳಿ ಮಾಡುತ್ತಿರುವಾಗ ಅಣ್ಣಾರಾಯ ಇವನ ಪಾನ ಶಾಪ ಹತ್ತಿರದಿಂದ ಓಡಿ ಹೋದನು. ಪಾನಶಾಪ ಚೆಕ್‌ ಮಾಡಲಾಗಿ ಎರಡು ಬಾಕ್ಸ ನಾಕೌಟ 330 ಎಂಎಲ್‌ದ 48 ಬೀರ ಬಾಟಲಿಗಳಿದ್ದು ಅದರ ಅ.ಕಿ.3360/-ರೂ ಮತ್ತು ಒಂದು ಬಾಕ್ಸ್‌ ಓರಿಜನಲ್‌ ಚೋಯಿಸ 180 ಎಂಎಲ್‌ದ ಸರಾಯಿ ಕ್ವಾಟರ ಬಾಟಲಿಗಳಿದ್ದು ಅದರಲ್ಲಿ 48 ಬಾಟಲಿಗಳು ಅದರ ಅ.ಕಿ.2880/-ರೂ ಹೀಗೆ ಒಟ್ಟು 6240/-ರೂ. ನೇದ್ದು ಅನಧಿಕೃತವಾಗಿ ಲೈಸೆನ್ಸ್ ಇಲ್ಲದೇ ಮಾರಾಟ ಮಾಡುತ್ತಿದ್ದು ಸದರಿಯವುಗಳಲ್ಲಿ ಮೂರು ಬಾಕ್ಸ್‌ಗಳಲ್ಲಿ ಒಂದೊಂದು ಬಾಟಲಿಗಳನ್ನು ಶಾಂಪಲ್ ಕುರಿತು ತೆಗೆದುಕೊಂಡಿದ್ದು ಉಳಿದ ಬಾಟಲಿಗಳು ಪಂಚರ ಸಮಕ್ಷಮ ಜಪ್ತಿ ಮಾಡಿಕೊಂಡಿದ್ದು ಮತ್ತೊಮ್ಮೆ ಓಡಿ ಹೋದವನ ಬಗ್ಗೆ ವಿಚಾರಿಸಲು ಅಣ್ಣಾರಾಯ ತಂದೆ ಭೀಮರಾಯ ಕಾಳನೂರ ವ:40 ಜಾ:ಲಿಂಗಾಯತ ಉ:ಪಾನಶಾಪ ಅಂಗಡಿ ಸಾ:ಮರತೂರ ಅಂತಾ ತಿಳಿದಿದ್ದರಿಂದ ಠಾಣೆ ಗುನ್ನೆ ನಂ:61/2012 ಕಲಂ: 32,34 ಕೆಇ ಆಕ್ಟ್‌  ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಅಪಘಾತ ಪ್ರಕರಣ:
ಶಹಾಬಾದ ನಗರ ಪೊಲೀಸ ಠಾಣೆ: ಕು. ಯೂನುಸ ತಂದೆ ಹುಸೇನಸಾಬ ವಯಸ್ಸಯ :12 ಸಾ:ಹಳೆ ಶಹಾಬಾದ ಇತನು ನಾನು ಸೈಕಲ ಮೇಲೆ ಹಳೆ ಶಹಾಬಾದ ದಿಂದ ಶಹಾಬಾದ ಕ್ಕೆ ಜಮೀಲ ಸಾಹೇಬರ ಮಗನ ವಲೀಮಾ ಇದ್ದ ಕಾರಣ ಊಟ ಮಾಡಿಕೊಂಡು ಹಳೆ ಶಹಾಬಾದ ಕ್ಕೆ ಬರುವಾಗ ಸಿಬರ ಕಟ್ಟಾ ಹತ್ತಿರ ರೋಡಿನ ಮೇಲೆ ನನ್ನ ಸೈಲಕ್ಕೆ ಯಾವುದೋ ಒಂದು ಮೋಟಾರ ಸೈಕಲ ಸವಾರರನು ಅತೀವೇಗ ಮತ್ತು ನಿಷ್ಕಾಳಜಿತನದಿಂದ ನಡೆಸಿ ಡಿಕ್ಕಿ ಹೊಡೆದಿದ್ದರಿಂದ ನನ್ನ ತುಟಿ ಹರಿದು ಮೂಗಿಗೆ ಹಣೆಗೆ ಪೆಟ್ಟಾಗಿ ರಕ್ತ ಗಾಯವಾಗಿರುತ್ತದೆ. ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 62/2012 ಕಲಂ: 279 337 338 ಐಪಿಸಿ ಸಂ:187 ಐಎಮ್‌ವಿ ಆಕ್ಟ್‌ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಜೂಜಾಟ ಪ್ರಕರಣ:
ಗುಲಬರ್ಗಾ ಗ್ರಾಮೀಣ ಪೊಲೀಸ ಠಾಣೆ: ದಿನಾಂಕ 13/5/12 ರಂದು ಮಧ್ಯಾಹ್ನ 2:30 ಪಿಎಮ ಕ್ಕೆ ಸುಮಾರಿಗೆ ಸುಲ್ತಾನಪೂರ ಸಿಮೇಯ ಚೆಕ್ಕ ಡಿರ್ಟಜೆಂಟ್‌ ಸಾಬೂನ ಫ್ಯಾಕ್ಟರಿ  ಹಿಂದಿನ ಖುಲ್ಲಾ ಜಾಗೆಯಲ್ಲಿ ಹಣ ಪಣಕ್ಕೆ ಹಚ್ಚಿ ಇಸ್ಪೇಟ ಜೂಜಾಟವಾಡುತ್ತಿದ್ದಾರೆ ಅಂತಾ ವಿಶೇಷ ಭಾತ್ಮಿಯಿಂದ ಶ್ರೀ ಹೆಚ್‌‌ ತಿಮ್ಮಪ್ಪ ಡಿವೈಎಸ್‌‌ಪಿ ಗ್ರಾಮಾಂತರ ಉಪ-ವಿಭಾಗ ಗುಲ್ಬರ್ಗಾ ರವರು ದಾಳಿ ಮಾಡಿ ಮಹಿಪಾಲರೆಡ್ಡಿ ತಂದೆ ಮಹೇಶರೆಡ್ಡಿ  ಸಾ: ಮಿಲ್ಲನ ಚೌಕ ಗುಲಬರ್ಗಾ,ಸಿದ್ದು ತಂದೆ ದೇವಿಂದ್ರಪ್ಪ ಸಾ:ಮಕ್ತಂಪೂರ ಗುಲ್ಬರ್ಗಾ,ರಮೇಶ ತಂದೆ ಶಿವಶರಣಪ್ಪ ಮಾನಸ ಸಾ: ಮಕ್ತಂಪೂರ ಗುಲ್ಬರ್ಗಾ, ಶಿವಾನಂದ ತಂದೆ ದೇವಿಂದ್ರಪ್ಪ  ಕಣ್ಣಿ ಸಾ: ಮಕ್ತಂಪೂರ ಗುಲ್ಬರ್ಗಾ  ರವರನ್ನು ದಸ್ತಗಿರಿ  ಮಾಡಿ ಅವರು ಜೂಜಾಟಕ್ಕೆ ಬಳಸಿದ ನಗದು ಹಣ 5750 /- ರೂ  ಇಸ್ಪೇಟ ಎಲೆಗಳನ್ನು ವಶಪಡಿಸಿಕೊಂಡಿದ್ದರಿಂದ ಠಾಣೆ ಗುನ್ನೆ ನಂ: 150/2012 ಕಲಂ 87 ಕೆಪಿ ಆಕ್ಟ್‌‌ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಜೂಜಾಟ ಪ್ರಕರಣ:
ಗುಲಬರ್ಗಾ ಗ್ರಾಮೀಣ ಪೊಲೀಸ ಠಾಣೆ:ದಿನಾಂಕ 13/5/12 ರಂದು ಸಾಯಂಕಾಲ ಅವರಾದ (ಬಿ) ಗ್ರಾಮದ ಸಿಮೇಯ ಸ್ವಾಮಿ ಸಮರ್ಥ ಗುಡ್ಡದ ಖುಲ್ಲಾ ಜಾಗೆಯಲ್ಲಿ ಹಣ ಪಣಕ್ಕೆ ಹಚ್ಚಿ ಇಸ್ಪೇಟ ಜೂಜಾಟ ಆಡುತ್ತಿದ್ದಾರೆ ಅಂತಾ ತಿಳಿದಿದ್ದರಿಂದ ಮಹಾಂತೇಶ ತಂದೆ ಶಿವರಯ ಹರಳಯ್ಯ ಸಾ: ಅವರಾದ (ಬಿ),ಮರಲಿಂಗಯ್ಯ ತಂದೆ ಮಲಕಯ್ಯ ಗುತ್ತೆದಾರ ಸಾ: ನಂದೂರ ,ಲೋಕೇಶ ತಂದೆ ಅಂಬಾರಾಯ ತಳವಾರ ಸಾ: ಕಡಣಿ ತಾ; ಇಂಡಿ ಹಾ: ವ: ಶಹಾಬಜಾರ ತಾಂಡಾ ಗುಲಬರ್ಗಾ,ಸಿದ್ದಲಿಂಗ ತಂದೆ ಶರಣಪ್ಪ ಸಕ್ರಿ ಸಾ: ಗಾಜಿಪೂರ ಮರಗಮ್ಮನ ಗುಡಿ ಹತ್ತಿರ  ಗುಲಬರ್ಗಾ, ವಾಮನ ತಂದೆ ತುಕಾರಾಮ ಜಾಧವ ಸಾ; ಶಹಾಬಜಾರ ತಾಂಡಾ ಗುಲ್ಬರ್ಗಾ, ಅರ್ಜುನ ತಂದೆ ಬಸವರಾಜ ಇಂಚಗೇರಿ ಸಾ: ಅವರಾದ (ಬಿ), ಶಾಂತಪ್ಪ ತಂದೆ ಬಂಗಾರಪ್ಪ ಕವಲದಾರ ಸಾ: ಶಿವಶಕ್ತಿನಗರಗುಲಬರ್ಗಾರವರನ್ನು ದಸ್ತಗಿರಿ  ಮಾಡಿ ನಗದು ಹಣ 6400 /- ರೂ  ಇಸ್ಪೇಟ ಎಲೆಗಳನ್ನು ವಶಪಡಿಸಿಕೊಂಡಿದ್ದರಿಂದ  ಠಾಣೆ ಗುನ್ನೆ ನಂ: 151/2012 ಕಲಂ 87 ಕೆಪಿ ಆಕ್ಟ್‌‌ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಬಾವಿಯಲ್ಲಿ ಮುಳಗಿ ಸಾವು:
ಗುಲಬರ್ಗಾ ಗ್ರಾಮೀಣ ಠಾಣೆ: ಶ್ರೀ ಜಯನಂದ ತಂ/ ರಾಣಪ್ಪ ಕೋಳ್ಳುಕರ್‌ ವ: 51 ವರ್ಷ ಜಾ: ಎಸ್‌ಸಿ ಉ: ಕೆಎಸ್‌‌ಆರ್‌ಟಿಸಿಯಲ್ಲಿ ಮೇಕ್ಯಾನಿಕ ಜೇವರ್ಗಿ ಘಟಕ ಸಾ: ಮ ನಂ 11-845/1 ಬಸವ ನಗರ ಗುಲಬರ್ಗಾರವರು ನನ್ನ ಮಗನಾದ ಪ್ರಮೋದಕುಮಾರ ಇತನು ದಿನಾಂಕ 13/5/12 ರಂದು 11:30 ಎಎಮಕ್ಕೆ  ಸುಲ್ತಾನಪೂರ ಗ್ರಾಮದ ಸೀಮೇಯಲ್ಲಿ ಬರುವ ಶ್ರೀಪಾಲ ಕಟಂಬಲೇ  ಇವರ  ತೋಟದ ಭಾವಿಯಲ್ಲಿ ಈಜಾಡಲು ಗೆಳೆಯರೊಂದಿಗೆ ಹೋಗಿ ಭಾವಿಯಲ್ಲಿ ಮುಳಗಿ ಮೃತಪಟ್ಟಿರುತ್ತಾನೆ ಇತನಿಗೆ ಇಜಲು ಬರುತ್ತಿರಲಿಲ್ಲ, ಅಲ್ಲದೆ ಮುಖದ ಮೇಲೆ ರಕ್ತಗಾಯಗಳಾಗಿದ್ದರಿಂದ ಮಗನ ಮರಣದಲ್ಲಿ ಸಂಶಯ ವ್ಯಕ್ತಪಡಿಸಿ ವಿಚಾರಣೆ ಮಾಡಿ ಕ್ರಮ ಕೈಕೊಳ್ಳುವಂತೆ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ:14/2012 ಕಲಂ 174 (ಸಿ) ಸಿಆರ್‌‌ಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.