POLICE BHAVAN KALABURAGI

POLICE BHAVAN KALABURAGI

21 June 2011

GULBARGA DISTRICT REPORTED CRIMES

ಅತ್ಯಾಚಾರ ಪ್ರಕರಣ :

ಫರತಾಬಾದ ಠಾಣೆ : ಕುಮಾರಿ ದಿವ್ಯಾ ತಂದೆ ಮಹಾದೇವ ಚವ್ಹಾಣ ರವರು ನನಗೆ ಶ್ಯಾಮ ತಂದೆ ಮೆಹರು ಪವಾರ ಸಾ|| ಹನುಮಾನ ತಾಂಡಾ ಗುಲಬರ್ಗಾ ದವನು ನನಗೆ ಎರಡು ತಿಂಗಳ ಹಿಂದೆ ಮಧ್ಯಾಹ್ನ ಶ್ರೀ ಗುರು ಶಾಲೆ ಖಣದಾಳದಲ್ಲಿ ನಾನು ಕೆಲಸದಲ್ಲಿದ್ದಾಗ ಶ್ಯಾಮ ಈತನು ನನಗೆ ಕರೆದು ಸಾಮಾನುಗಳಿವೆ ತೆಗೆದುಕೊಂಡು ಬರೋಣ ಅಂತಾ ಶಾಲೆಯ 3ನೇ ಅಂತಸ್ತಿನ ಬಾಥರೂಮಿನಲ್ಲಿ ಕರೆದುಕೊಂಡು ಹೋಗಿ ಬಾಗಿಲು ಕೊಂಡಿ ಹಾಕಿ ಜಬರಿ ಸಂಭೋಗ ಮಾಡಿ ಯಾರ ಮುಂದೆ ಹೇಳಬೇಡ, ಹೇಳಿದರೆ ನಿನ್ನ ಅಣ್ಣನಿಗೆ ಕೊಲೆ ಮಾಡುತ್ತೇನೆ. ಅಂತಾ ಹೇಳಿರುತ್ತಾನೆ ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮೋಸ ಪ್ರಕರಣ :

ಮಾದನ ಹಿಪ್ಪರಗಾ ಠಾಣೆ : ಶ್ರೀ ರವಿಂದ್ರ ಆರ. ಕುಂದರವಾಡ ಶಾಖಾಧಿಕಾರಿಗಳು ಎಸ.ಬಿ.ಐ ಬ್ಯಾಂಕ್ ಮಾದನ ಹಿಪ್ಪರಗಾ ರವರು ಶಾಂತಪ್ಪಾ ತಂದೆ ಈರಣ್ಣ ಕೋರೆ ಮತ್ತು ಈರಣ್ಣಾ ತಂದೆ ಶಾಂತಪ್ಪಾ ಕೋರೆ ಸಾ|| ಇಬ್ಬರೂ ಪಡಸಾವಳಿ ರವರು ನಮ್ಮ ಬ್ಯಾಂಕಿನ ಮೊಹರು ತಯಾರಿಸಿ ಮ್ಯಾನೆಜರ ರವರ ನಕಲು ಸಹಿ ಮಾಡಿ ಬ್ಯಾಂಕನಲ್ಲಿ ಟ್ರಾಕ್ಟರ ಪಡೆದುಕೊಂಡು ಬ್ಯಾಂಕಿಗೆ ಮೋಸ ಮಾಡಿರುತ್ತಾರೆ ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕಳ್ಳತನ ಪ್ರಕರಣ :

ಚೌಕ ಠಾಣೆ :
ಶ್ರೀ ಅರವಿಂದ ತಂದೆ ಮಹಾಲಿಂಗಪ್ಪಾ ಕೋರೆ ಸಾ|| ಕೈಲಾಸ ನಗರ ಆಳಂದ ರೋಡ ಗುಲಬರ್ಗಾ ರವರು ನಾನು ದಿನಾಂಕ: 18-06-2011 ರಂದು ರಾತ್ರಿ ಪೊರ್ಟ ರೋಡ ಮೂನ್ ಲೈಟ್ ಅಂಗಡಿ ಹತ್ತಿರ ಕೆಲಸವಿದ್ದ ಕಾರಣ ನನ್ನ ಹಿರೋ ಹೊಂಡಾ ಮೊಟಾರ ಸೈಕಲ್ ಕೆಎ- 32 ಎಸ-9909 ನೇದ್ದು ನಿಲ್ಲಿಸಿ ಕೆಲಸ ಮುಗಿಸಿಕೊಂಡು ಬರುವಷ್ಟರಲ್ಲಿ ಯಾರೋ ಕಳ್ಳರು ಮೋಟಾರ ಸೈಕಲ್ ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


GULBARGA DISTRICT REPORTED CRIME

ಅಲಕ್ಷತನ ಪ್ರಕರಣ :

ಸೇಡಂ ಠಾಣೆ:
ಶ್ರೀ ಸುಭಾಷಚಂದ್ರ ತಂದೆ ವೀರಪ್ಪಾ ಕಾಳಗಿ ಸಾ|| ಬ್ರಾಹ್ಮಣ ಗಲ್ಲಿ ಸೇಡಂ ರವರು ನನಗೆ ಶಾಂತಾಬಾಯಿ ಅಂತಾ ಅಕ್ಕ ಇದ್ದು, ಸೇಡಂ ಪಟ್ಟಣದ ವಿಠಲ ತಂದೆ ವಿಶ್ವಾನಾಥ ಐನಾಪೂರ ರವರ ಪಾಂಡುರಂಗ ದಾಲಮೀಲದಲ್ಲಿ ಕುಲಿ ಕೆಲಸ ಮಾಡಿಕೊಂಡು ಹೋಗುತ್ತಿದ್ದಳು
ಎಂದಿನಂತೆ ದಿನಾಂಕ: 20-06-2011 ರಂದು ಮುಂಜಾನೆ ಪಾಂಡುರಂಗ ಹೆಸರಿನ ದಾಲಮಿಲಕ್ಕೆ ಕೆಲಸಕ್ಕೆ ಹೊಗಿ ದಾಲಮೀಲದಲ್ಲಿ ಕೆಲಸ ಮಾಡುವಾಗ ದಾಲ ಮಿಲ್ ದ ಬೇಲ್ಟನಲ್ಲಿ ಸಿಕ್ಕಿಬಿದ್ದು ಮೃತ ಪಟ್ಟಿರುತ್ತಾಳೆ. ಪಾಂಡುರಂಗ ದಾಲಮೀಲದ ಮಾಲಿಕರಾದ ವಿಠಲ ತಂದೆ ವಿಶ್ವಾನಾಥ ಐನಾಪೂರ, ಅನೀಲಕುಮಾರ ತಂದೆ ಸುರೇಶ ಐನಾಪೂರ ಸೇಡಂ ರವರು, ದಾಲಮೀಲದಲ್ಲಿ ಕೆಲಸ ಮಾಡುವ ಲೇಬರಗಳಿಗೆ ಯಾವುದೆ ಸುರಕ್ಷಿತ ಸಲಕರಣೆಗಳನ್ನು ನೀಡದೇ ಅಲಕ್ಷತನ ತೋರಿಸಿರುತ್ತಾರೆ ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.