POLICE BHAVAN KALABURAGI

POLICE BHAVAN KALABURAGI

03 October 2013

ಅತ್ಯಾಚಾರ ಪ್ರಕರಣ :
ಫರತಾಬಾದ ಠಾಣೆ : ಶ್ರೀ ಬಿರಣ್ಣಾ ತಂದೆ ನಾಗಪ್ಪ ಬಂಗರಗಿ ಸಾ:ರಾಜವಾಳ ತಾ:ಆಳಂದ ಹಾ:ವ:ಗರೂರ (ಬಿ) ಇವರ ಮಗಳಾದ ಕುಮಾರಿ ಇವಳು  ದಿನಾಂಕ: 28-9-2013  ಮಧ್ಯಾಹ್ನ 2-00 ಗಂಟೆಯ ಸುಮಾರಿಗೆ ಮನೆಯಲ್ಲಿದ್ದಾಗ ಮನೆಯ ಹಿಂದಿನ ಹಣಮಂತರಾಯ ತಳಕೇರಿ ಇವರ ಮಗ ಸಂತೋಷ ಈತನು ನಮ್ಮ ಮನೆಗೆ ಬಂದು ಕುಡಿಯಲಿಕೆ ನೀರು ಕೊಡು ಅಂತಾ ಕೇಳಿದಾಗ ನಾನು ನೀರು ತರಲು ಹೋದಾಗ ನನ್ನ ಹಿಂದೆ ಸಂತೋಷನು ಬಂದು ನನಗೆ ತೆಕ್ಕೆಯಲ್ಲಿ ಒತ್ತಿ ಹಿಡಿದು ಒಳಗಡೆ  ನೆಲಕ್ಕೆ ಕೆಡವಿ ಜಬರಿ ಸಂಬೋಗ ಮಾಡಿ ಇದನ್ನು ಯಾರಿಗಾದರು ಹೆಳಿದರೆ ನಿನಗೆ ಖಲಾಸ ಮಾಡುತ್ತೆನೆ  ಅಂತಾ ಹೇಳಿ ಓಡಿಹೋಗಿರುತ್ತಾನೆ ನಾನು ಅಳುತ್ತಾ ಮನೆಯಲ್ಲಿ ಕುಳಿತಾಗ ನನ್ನ ಮನಸ್ಸಿನ ಮೇಲೆ ಪರಿಣಾಮ ಮಾಡಿಕೊಂಡು ಈ ವಿಷಯ ಹೇಗೆ ಹೇಳುವದು ಅಂತಾ ತಿಳಿದು ಮನೆಯಲ್ಲಿ ಇಟ್ಟಿದ್ದ ಕ್ರಿಮಿನಾಶಕ ಔಷಧವನ್ನು ಮದ್ಯಾಹ್ನ 3-30ಗಂಟೆಯ ಸುಮಾರಿಗೆ ಕುಡಿದಿರುತ್ತೇನೆ. ಅಂತಾ ತಿಸಿದ ಮೇರೆಗೆ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಫರತಾಬಾದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕೊಲೆ ಪ್ರಕರಣ :
ನೆಲೋಗಿ ಠಾಣೆ : ಶ್ರೀ ಶಿವಲಿಂಗ ತಂದೆ ಮಹಾದೇವಪ್ಪ ಹಳ್ಳಿ ಸಾ: ಸೊನ್ನ ರವರು ದಿನಾಂಕ: 02-10-2013 ರಂದು ಸಂಜೆ 05.00 ಗಂಟೆಗೆ ಸೊನ್ನದಿಂದ ಜೇವರ್ಗಿಗೆ ಅನುಭವ ದರ್ಶನ ಪ್ರವಚನ ಪ್ರಯುಕ್ತ ಹೊರಟಿದ್ದೇನು. ನಮ್ಮೂರಿನಿಂದ 3 ಕಿ,ಮೀ ದೂರದ ಸೀಮೆ ಹಳ್ಳದ ಬ್ರಿಡ್ಜ ಬಳಿ ಜನರು ನಿಂತಿದ್ದರು. ಏನೆಂದು ನೋಡಲಾಗಿ ಹಳ್ಳದಲ್ಲಿ ಗಂಡಸಿನ ಶವ ತೇಲುತ್ತಿತ್ತು. ರಕ್ತ ನೀರಿನಲ್ಲಿ ಕಾಣಿಸುತ್ತಿತ್ತು. ಯಾರೋ ತಲೆಗೆ ಹೊಡೆದಿದ್ದು, ರಕ್ತ ಗಾಯವಾಗಿರುತ್ತದೆ. ಶವದ ವಯಸ್ಸು: 30 ವರ್ಷ ಇರಬಹುದು. ಹಳ್ಳದಿಂದ 5ಮೀಟರ್ ದೂರದಲ್ಲಿ ರಸ್ತೆಯ ಬದಿಯಲ್ಲಿ ಸಿಗ್ನಲ್ ರಾಡಿಗೆ ರಕ್ತವಾಗಿದ್ದು,ಸದರಿ ರಾಡನ್ನು ಕಿತ್ತಿ ತಲೆಗೆ ಹೊಡೆದಿದ್ದು, ಗಾಯ ಮಾಡಿ ಸಾಯಿಸಿರುತ್ತಾರೆ. ಈ ಬಗ್ಗೆ ಅಲ್ಲಿದ್ದ ಜನರು ಮಾತನಾಡುತ್ತಿದ್ದು, ರಕ್ತ ಬಿದ್ದಿದ್ದು ನೋಡಿದರೆ ನಿನ್ನೆ ರಾತ್ರಿ 01-10-2013 ರಂದು ಘಟನೆ ನಡೆದಿರಬಹುದು ಎಂದು ಮೇಲ್ನೋಟಕ್ಕೆ   ಕಾಣಿಸುತ್ತದೆ. ಯಾರೋ ಅಪರಿಚಿತ ದಷ್ಕರ್ಮಿಗಳು ಯಾವುದೋ ದುರುದ್ದೇಶದಿಂದ ತಲೆಗೆ ಹೊಡೆದು ವ್ಯಕ್ತಿಯನ್ನು ಕೊಲೆ ಮಾಡಿದ್ದು, ಅದನ್ನು ಮುಚ್ಚಿ ಹಾಕಲು ಹಳ್ಳದ ನೀರಿನಲ್ಲಿ ಎಸೆದು ಹೋಗಿರುತ್ತಾರೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ನೆಲೋಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಲ್ಲೆ ಪ್ರಕರಣ :
ಕಮಲಾಪೂರ ಠಾಣೆ : ಶ್ರೀಮತಿ ಮಾಹಾದೇವಿ ಗಂಡ ಸುರೇಶ ಪಾಟೀಲ ಇವರು ದಿನಾಂಕ:01-10-2013 ರಂದು ಸಂಜೆ 7-00 ಗಂಟೆ ಸುಮಾರಿಗೆ ರವರ ದನಗಳು ನಿಂಗಮ್ಮ ಗಂಡ ಶಿವಪುತ್ರ ವಳದೊಡ್ಡಿ ಇವರ ಹೊಲದಲ್ಲಿನ ಬೆಳೆ ತಿಂದಿರುವ ವಿಷಯದಲ್ಲಿ ಜಗಳ ತೆಗೆದು ಮನೆ ಹೊಕ್ಕು ನಿಮ್ಮ ದನಗಳು ನಮ್ಮ ಹೊಲದಲ್ಲಿ ಬಿಟ್ಟು ನನ್ನ ಹೆಂಡತಿ ಮಕ್ಕಳಿಗೆ ಬೈಯ್ದಿರಿ ರಂಡಿ ಅಂತಾ ಅವಾಚ್ಯ ಶಬ್ದಗಳಿಂದ ಬೈಯುತ್ತಿದ್ದಾಗ ನಿಂಗಮ್ಮ ಇವಳು ಬಡಿಗೆಯಿಂದ ಎಡಗೈ ರಟ್ಟೆ ಮೇಲೆ ಹೊಡೆದಳು ಸಿದ್ದಪ್ಪನು ಕಾಲಿನಿಂದ ನನ್ನ ಹೊಟ್ಟೆಯಲ್ಲಿ ಒದ್ದನು.ಕುಸುಮಾ ಇವಳು ಕೈಯಿಂದ ಎದೆಯ ಮೇಲೆ ಬೆನ್ನಲ್ಲಿ ಹೊಡೆದಾಗ ನಾವು ಚಿರಾಡುವುದು ಕೇಳಿ ನಮ್ಮೂರ ಮಾಣಿಕ ಉಪ್ಪಿನ ಮತ್ತು ವೈಜನಾಥ ಸ್ವಾಮಿ ಬಂದು ಘಟನೆ ನೋಡಿ,ಬಿಡಿಸಿ, ಹೋಗುತ್ತಿರುವಾಗ ಈಗ ಉಳಿದಿದ್ದಿರಿ ನಿಮಗೆ ಬಿಡುವುದಿಲ್ಲಾ ಜೀವ ಹೊಡೆಯುತ್ತೇವೆ ಅಂತಾ ಜೀವ ಬೆದರಿಕೆ ಹಾಕಿ ಹೋಗಿರುತ್ತಾರೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಕಮಲಾಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಿರುಕಳ ಪ್ರಕರಣ :
ಕಮಲಾಪೂರ ಠಾಣೆ  ಶ್ರೀಮತಿ ಜಯಲಕ್ಷ್ಮೀ ಗಂಡ ರಾಜಕುಮಾರ ಭೋಗನ ಸಾಃ ಕಾಳಮಂದರಗಿ ತಾಃಗುಲಬರ್ಗಾ ಇವರಿಗೆ ಗಂಡನಾದ  ರಾಜಕುಮಾರ ತಂದೆ ಅಂಬಣ್ಣಾ ಭೋಗನ ದಿನಾಲು ಕುಡಿಯಲು ಹಣ ಕೊಡುವ ಅಂತಾ ದೈಹಿಕ ಮತ್ತು ಮಾನಸಿಕವಾಗಿ ಕಿರುಕುಳ ಕೊಡುತ್ತಾ ಬಂದಿದ್ದು.  ದಿಃ 01-10-13 ರಂದು 20-30 ಗಂಟೆ ಸುಮಾರಿಗೆ ಈ ವಿಷಯಕ್ಕೆ ಸಂಬಂದಿಸಿದಂತೆ ಫಿರ್ಯಾದಿಯೊಂದಿಗೆ ಜಗಳ ತೆಗೆದು ಕೈಯಿಂದ ಮತ್ತು ಕಲ್ಲಿನಿಂದ ಹೊಡೆದು ಗಾಯಗೊಳಿಸಿ ಮಾನಸಿಕ ಮತ್ತು ದೈಹಿಕ ಕಿರುಕುಳ ನೀಡಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಕಮಲಾಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.