POLICE BHAVAN KALABURAGI

POLICE BHAVAN KALABURAGI

27 July 2012

GULBARGA DISTದೇವಲ ಗಾಣಗಾಪೂರ ಪೊಲೀಸ್ ರ ಕಾರ್ಯಚರಣೆ
 :: ಮೋಟಾರ ಸೈಕಲ ಕಳ್ಳರ ಬಂದನ  ::
 ಮಾನ್ಯ ಎಸ.ಪಿ ಸಾಹೇಬರಾದ ಶ್ರೀ ಪ್ರವೀಣ ಮಧುಕರ ಪವಾರ ಐಪಿಎಸ, ರವರು, ಮಾನ್ಯ ಅಪರ್ ಎಸ.ಪಿ ರವರಾದ ಶ್ರೀ ಕಾಶೀನಾಥ ತಳಕೇರಿ, ಮಾನ್ಯ ಶ್ರೀ ಡಿ.ಎಸ.ಪಿ ಆಳಂದ ಎಸ.ಬಿ.ಸಾಂಬಾ, ಮತ್ತು ಸಿಪಿಐ ಅಫಜಲಪೂರ ರವರಾದ ಶ್ರೀ ರಾಜೇಂದ್ರ ರವರ ಮಾರ್ಗದರ್ಶನದ ಮೇರೆಗೆ ದೇವಲ ಗಾಣಗಾಪೂರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿನ ಸ್ವತ್ತಿನ ಪ್ರಕರಣಗಳಲ್ಲಿಯ ಆರೋಪಿತರ ಮತ್ತು ಮಾಲು ಪತ್ತೆ ಕುರಿತು ದೇವಲ ಗಾಣಗಾಪೂರ ಪೊಲೀಸ್ ಠಾಣೆಯ ಪಿ.,ಎಸ.ಐ. ಮಂಜುನಾಥ ಎಸ. ಕುಸಗಲ್  ಮತ್ತು ಸಿಬ್ಬಂದಿ ಜನರಾದ  ತಸ್ಲೀಮ್, ಪ್ರಕಾಶ, ಸಂಜಯ ಪಾಟೀಲ್, ಗುರುರಾಜ, ಶಾಂತವೀರ, ಮಲ್ಲಣ್ಣ, ಚಂದ್ರಕಾಂತ, ಎಂ.ಡಿ. ರಪೀಕ್ ರವರನೊಳ್ಳಗೊಂಡ ತಂಡವು ರಚಿಸಿದ್ದು,  ಅಪಜಲಪೂರ ತಾಲೂಕಿನ ಚೌಡಾಪೂರ ಗ್ರಾಮದ ಶ್ರೀ ದತ್ತಾ ಹೋಟೆಲ್ ಪಂಪ ಹತ್ತಿರ ದಿನಾಂಕ: 26-07-2012 ರಂದು ಸಾಯಂಕಾಲ 4-00 ಗಂಟೆಗೆ ಸುಮಾರಿಗೆ ಅಪಜಲಪೂರ ರೋಡಿನ ಕಡೆಯಿಂದ ಚೌಡಾಪೂರ ಕಡೆಗೆ ಒಬ್ಬರ ಹಿಂದೆ ಒಬ್ಬರು ಇಬ್ಬರು ಮೋಟಾರ ಸೈಕಲ ಸವಾರರು ಬರುತ್ತಿದ್ದ ನಮ್ಮನ್ನು ನೋಡಿ ತಮ್ಮ ಮೋಟಾರ ಸೈಕಲಗಳನ್ನು ತಿರುಗಿಸಿಕೊಂಡು ಓಡಿ ಹೋಗಲು ಯತ್ನಿಸುತ್ತಿದ್ದಾಗ ಅವರನ್ನು ಹಿಡಿದುಕೊಂಡು ವಿಚಾರಣೆ ಮಾಡಿದಾಗ ಅವರ ಹೆಸರು ಪ್ರವೀಣ ತಂದೆ ಆಶೋಕ ಪವಾರ ವ|| 30 ವರ್ಷ ಸಾ|| ಸೋಲಾಪೂರ, ಶ್ರೀಶೈಲ್ ತಂದೆ ಬಸಣ್ಣ ಜಮಾದಾರ ವ|| 30 ವರ್ಷ ಸಾ|| ಗಣೇಶ ನಗರ ಗುಲಬರ್ಗಾ ಅಂತಾ ತಿಳಿದು ಬಂದಿರುತ್ತದೆ. ಸದರಿಯವರು 11 ಮೋಟಾರ ಸೈಕಲಗಳು ಅಂದಾಜು ಕಿಮ್ಮತ್ತು 2,50,000/- ರೂಪಾಯಿಗಳದ್ದು ವಶಪಡಿಸಿಕೊಂಡಿರುತ್ತಾರೆ. ಮಾನ್ಯ ಎಸಪಿ ಸಾಹೇಬರು ದೇವಲ ಗಾಣಗಾಪೂರ ಪೊಲೀಸ್ ಠಾಣೆಯ  ಅಧಿಕಾರಿ ಮತ್ತು ಸಿಬ್ಬಂದಿಯವರ ಪತ್ತೆ ಕಾರ್ಯ ಪ್ರಶಂಸಿರುತ್ತಾರೆ. 

GULBARGA DIST REPORTED CRIME


ಅಪಘಾತ ಪ್ರಕರಣ:
ಗುಲಬರ್ಗಾ ಗ್ರಾಮೀಣ ಠಾಣೆ:ದಿ: 25.07.2012 ರಂದು ರಾತ್ರಿ 2-30 ಗಂಟೆಯ ಸುಮಾರಿಗೆ ಕೆಎ/25-ಎ-5957 ನೇದ್ದರ ಟಾಟಾ ಸುಮೊ ಚಾಲಕ ನಿಂಗಯ್ಯ ಇತನು ಹುಮನಾಬಾದ ರಿಂಗರೋಡ ಕಡೆಯಿಂದ ಅತಿ ವೇಗ ಮತ್ತು ಅಲಕ್ಷತನದಿಂದ ನಡೆಸುತ್ತಾ ಹೊರಟಿದ್ದು, ಸೇಡಂ ರಿಂಗ ರೋಡ ಕಡೆಯಿಂದ ಕೆಎ-25 ಬಿ-1255 ನೇದ್ದರ ಲಾರಿ ಚಾಲಕ ಅಲ್ತಾಪ್ ಇತನು ಅತಿವೇಗ ಮತ್ತು ಅಲಕ್ಷತನದಿಂದ ನಡೆಸುತ್ತಾ ಬಂದು ಲಾರಿ ಚಾಲಕ ಬಲಭಾಗಕ್ಕೆ ಹೊರಳಿಸಿದ್ದರಿಂದ ಎರಡು ವಾಹನಗಳ ಚಾಲಕರು ತಮ್ಮ ವಾಹನಗಳನ್ನು ನಿರ್ಲಕ್ಷತನದಿಂದ ಚಲಾಯಿಸಿದ್ದರಿಂದ   ಮತ್ತು ಇಬ್ಬರು ವಾಹನ ಚಾಲಕರು  ತಮ್ಮ ತಮ್ಮ ಸೈಡಿಗೆ  ಡಿಗೆ ಹೋಗದೇ ಇದುದ್ದರಿಂದ ಒಂದಕ್ಕೊಂದ್ದು ಡಿಕ್ಕಿ ಹೊಡೆದಿದ್ದು ಡಿಕ್ಕಿ ಹೊಡೆದ ರಭಸಕ್ಕೆ ಬೆಂಕಿ ಉಂಟಾಗಿ ಎರಡು ವಾಹನಗಳು ಸುಟ್ಟಿದ್ದು ಅಲ್ಲದೆ ಲಾರಿಯಲ್ಲಿ ಸಾಗಿಸುತ್ತಿದ್ದ ಎಮ್ಮೆಗಳಲ್ಲಿ 3 ಎಮ್ಮೆಗಳು ಸ್ಥಳದಲ್ಲಿ ಸತ್ತಿದ್ದು. ಮತ್ತು 3 ಜನರಿಗೆ ಭಾರಿ ಸುಟ್ಟಗಾಯಗಳಾಗಿರುತ್ತವೆ, ಅಂತಾ ಸಂತೋಷ ಕುಮಾರ ತಂದೆ ಬಸವಣಪ್ಪಾ ಗುಂಡಪನವರ ಸಾ|| ಅಯ್ಯರವಾಡಿ ಅಂಬಭವಾನಿ ಗುಡಿ ಹತ್ತಿರ ಬಂಬೂ ಬಜಾರ ಗುಲಬರ್ಗಾ ರವರು ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ:246/2012 ಕಲಂ 279, 337, 338, 429 ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.