POLICE BHAVAN KALABURAGI

POLICE BHAVAN KALABURAGI

17 November 2011

Gulbarga Dist Reported Crimes

ಮಟಕಾ ಪ್ರಕರಣ:
ದೇವಲ ಗಾಣಗಾಪೂರ ಠಾಣೆ : ಶ್ರೀ ಮಂಜುನಾಥ.ಎಸ್.ಕುಸುಗಲ್ ಪಿ.ಎಸ್.ಐ ದೇವಲಗಾಣಗಾಪೂರ ಪೊಲೀಸ ಠಾಣೆ. ರವರು ದಿನಾಂಕ: 16-11-2011 ರಂದು ಮದ್ಯಾಹ್ನ 4:00 ಗಂಟೆಗೆ ಠಾಣೆಯಲ್ಲಿದ್ದಾಗ ಚಿಣಮಗೇರಿ ಗ್ರಾಮದಲ್ಲಿ ವಿರಭದ್ರೇಶ್ವರ ದೇವರ ಗುಡಿಯ ಮುಂದೆ ಸಾರ್ವಜನಿಕ ಸ್ಥಳದಲ್ಲಿ ಒಬ್ಬನು ಜನರಿಂದ ಹಣ ಪಡೆದು ಅವರಿಗೆ ಅಂಕಿ ಸಂಖ್ಯೆ ಬರೆದ ಚೀಟಿಗಳನ್ನು ಕೊಟ್ಟು ಮಟಕಾ ಜೂಜಾಟ ನಡೆಸುತಿದ್ದಾನೆ ಅಂತಾ ಭಾತ್ಮಿ ಬಂದ ಮೇರೆಗೆ ಪಿ.ಎಸ.ಐ ಮತ್ತು ಸಿಬ್ಬಂದಿಯವರು ಸದರಿ ಸ್ಥಳಕ್ಕೆ ಹೋಗಿ ದಾಳಿ ಮಾಡಿ ಜೂಜಾಟ ನಡೆಸುತಿದ್ದವನನ್ನು ಹಿಡಿದುಕೊಂಡು ಹೆಸರು ವಿಳಾಸ ವಿಚಾರಿಸಲಾಗಿ ತನ್ನ ಹೆಸರು ಮರೇಪ್ಪ ತಂದೆ ನಾಗಪ್ಪ ತಳಕೇರಿ ವಯ: 41 ವರ್ಷ ಜಾ: ಹರಿಜನ ಉ: ಕೂಲಿ ಸಾ ಚಿಣಮಗೇರಾ ಅಂತಾ ತಿಳಿಸಿದ್ದು, ಅವನ ಹತ್ತಿರದಿಂದ ನಗದು ಹಣ 575=00 ರೂಪಾಯಿ, ಮಟಕಾ ಚೀಟಿ, ಪಂಚರ ಸಮಕ್ಷಮ ಜಪ್ತಿ ಮಾಡಿಕೊಂಡಿದ್ದರಿಂದ ಠಾಣೆ ಗುನ್ನೆ ನಂಬರ:112/2011 ಕಲಂ.78(3) ಕೆ.ಪಿ.ಆಕ್ಟ ಪ್ರಕಾರ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಳ್ಳಲಾಗಿದೆ.
ದರೋಡೆ ಪ್ರಕರಣ:
ಅಶೋಕ ನಗರ ಠಾಣೆ : ಶ್ರೀಮತಿ. ರೇವತಿ ಗಂಡ ಹಣಮಂತ ಮಮದಾಪೂರ ಸಾ: ವಿದ್ಯಾನಗರ ಅಲಿಬಾಗ ಜಿ: ರಾಯಬಾಗ (ಮಹಾರಾಷ್ಟ್ರ ರಾಜ್ಯ) ರವರು ನನ್ನ ಅಕ್ಕನ ಮಗ ಪ್ರತೀಕನ ಮದುವೆಗಾಗಿ ಗುಲಬರ್ಗಾಕ್ಕೆ ಬಂದಿದ್ದು ದಿನಾಂಕ 16/11/2011 ರಂದು ಸಾಯಂಕಾಲ 7:00 ಗಂಟೆಗೆ ನಾನು ಮತ್ತು ನನ್ನ ಅತ್ತಿಗೆ ರಂಜನಾ ಇಬ್ಬರೂ ಮಾರ್ಕೆಟಕ್ಕೆ ಹೋಗಿ ಬಜಾರ ಮಾಡಿಕೊಂಡು ವೆಂಕಟಗೀರಿ ಹೊಟೇಲ ಹತ್ತಿರ ಇಳಿದು ನಡೆದುಕೊಂಡು ಮಾಕಾ ಲೇಔಟ ಕಡೆಗೆ ಬರುತ್ತಿರುವಾಗ ರಾತ್ರಿ 8:45 ಗಂಟೆ ಸುಮಾರಿಗೆ ವಿಜಯ ಘಾಟಗೆ ರವರ ಮನೆಯ ಹತ್ತಿರ ತೆಗ್ಗಿನಲ್ಲಿ ರಸ್ತೆ ಮೂಲಕ ಹೊಗುತ್ತಿರುವಾಗ ಎದರುಗಡೆಯಿಂದ ಒಬ್ಬ ಬೈಕ ಸವಾರನು ಬಂದು ನನ್ನ ಕೊರಳಲ್ಲಿ ಕೈ ಹಾಕಿ ಒಂದು ಬಂಗಾರದ ಮಂಗಳಸೂತ್ರ ಹಾಗು ಎರಡು ಬಂಗಾರದ ಜೈನಗಳನ್ನು ಕಿತ್ತಿಕೊಂಡಾಗ ನಾನು ಕೈ ಹಿಡಿದ್ದಿದ್ದರಿಂದ ಅದರಲ್ಲಿ ಸ್ವಲ್ಪ ಭಾಗ ತುಕಡಿ ಉಳಿದಿರುತ್ತದೆ. ಆ ವೇಳೆಯಲ್ಲಿ ರಸ್ತೆಯಲ್ಲಿ ಬೀದಿ ದೀಪ ಇರಲಿಲ್ಲ ಕತ್ತಲು ಇತ್ತು ಆದ್ದರಿಂದ ಆ ಬೈಕಿನ ನಂಬರ ಹಾಗು ಆ ಬೈಕ ಸವಾರನ ಮುಖ ಕಾಣಿಸಿರುವುದಿಲ್ಲಾ ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ. 123/2011 ಕಲಂ. 392 ಐಪಿಸಿ ಪ್ರಕಾರ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಳ್ಳಲಾಗಿದೆ.
ಮಟಕಾ ಪ್ರಕರಣ:
ನಿಂಬರ್ಗಾ ಪೊಲೀಸ ಠಾಣೆ: ಶ್ರೀ ದೇವಿಂದ್ರಪ್ಪ ಎ.ಎಸ್.ಐ ನಿಂಬರ್ಗಾ ಠಾಣೆ ರವರು ವರದಿ ಮತ್ತು ಜಪ್ತಿ ಪಂಚನಾಮೆ ಹಾಗು ಅರೋಪಿಯನ್ನು ಹಾಜರ ಪಡಿಸಿದ್ದರಿಂದ ಸಾರಂಶದವೆನೆಂದರೆ, ದಿನಾಂಕ 16/11/2011 ರಂದು ಮಧ್ಯಾಹ್ನ 2-00 ಗಂಟೆಯ ಸುಮಾರಿಗೆ ದುತ್ತರಗಾಂವ ಗ್ರಾಮದ ಗ್ರಾಮ ಪಂಚಾಯತ ಮುಂದುಗಡೆ ಬಸವೇಸ್ವರ ಕಟ್ಟೆಯ ಮೇಲೆ ಸಾರ್ವಜನಿಕ ಸ್ಥಳದಲ್ಲಿ ಮಲ್ಲಿಕಾರ್ಜುನ ತಂದೆ ಅಮೃತ ಜಮಾದಾರ 27 ವರ್ಷ, ಜಾ ಕಬ್ಬಲಿಗೆರ, ಉ ಕೂಲಿ ಕೆಲಸ ಮತ್ತು ಸಿದ್ದಾರೂಢ ತಂದೆ ಈರಣ್ಣಾ ಪೊಲೀಸ ಪಾಟೀಲ ವ 37 ವರ್ಷ, ಜಾ ಲಿಂಗಾಯತ, ಉ ಕೂಲಿಕೆಲಸ ಇಬ್ಬರೂ ಸಾ ದುತ್ತರಗಾಂವ ತಾ ಆಳಂದ ರವರು ಸಾರ್ವಜನಿಕರಿಗೆ ಮೋಸ ಮಾಡುತ್ತ 1 ರೂಪಾಯಿಗೆ 80 ರೂಪಾಯಿ ಗೆಲ್ಲಿರಿ ಅಂತ ಜನರಿಗೆ ಹೇಳುತ್ತಾ ಹಣ ಪಡೆದು ಮಟಕಾ ಜೂಜಾಟ ನಡೆಸುತ್ತಿದ್ದಾಗ ಎ.ಎಸ.ಐ ಹಾಗು ಸಿಬ್ಬಂಧಿ ಜನರಾದ ಶಿವರಾಯ, ನಜಮೊದ್ದೀನ, ಮಸ್ತಾನ ರವರು ದಾಳಿ ಮಡಿ ಅವರಿಂದ ನಗದು ಹಣ 280/- ರೂ, ಮಟಕಾ ಚೀಟಿ ವಶಪಡಿಸಿಕೊಂಡು ವರದಿ ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ. 121/2011 ಕಲಂ 78(3) ಕೆ.ಪಿ ಆಕ್ಟ ಮತ್ತು 420 ಐಪಿಸಿ ಪ್ರಕಾರ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಳ್ಳಲಾಗಿದೆ.
ಕಳ್ಳತನ ಪ್ರಕರಣ:
ಬ್ರಹ್ಮಪೂರ ಪೊಲೀಸ್ ಠಾಣೆ : ಶ್ರೀ ಚಂದ್ರಶೇಖರ ತಂ ಗುರುನಾಥರಾವ ಸೂತ್ರಾವೆ ವಯ 31 ವರ್ಷ ಉಃ ಬಟ್ಟೆ ವ್ಯಾಪಾರ ಸಾಃ ಮನೆ ನಂ 1/13-4 ವಿವೇಕಾನಂದ ನಗರ ಖೂಬಾ ಪ್ಲಾಟ ಗುಲಬರ್ಗಾ ರವರು ನಮ್ಮ ಅಂಗಡಿಗೆ ದಿನಾಂಕ 12.11.2011 ರಂದು ಮದ್ಯಾಹ್ನ 4 ಪಿ.ಎಂದಿಂದ 5.40 ಪಿ.ಎಂದ ಮಧ್ಯದ ಅವಧಿಯಲ್ಲಿ ಯಾರೋ ಅಪರಿಚಿತ 4 ಜನ ಹೆಣ್ಣು ಮಕ್ಕಳು ಹಾಗೂ 2 ಜನ ಗಂಡು ಮಕ್ಕಳು ಗ್ರಾಹಕರಂತೆ ನಟಿಸುತ್ತ ಅಂಗಡಿಯಲ್ಲಿ ಇದ್ದ ಬೆಲೆಬಾಳುವ 45-50 ರೇಷ್ಮೆ ಸೀರೆಗಳು ಅಃಕಿಃ 4 ಲಕ್ಷದಿಂದ 4.5 ಲಕ್ಷ ಬೆಲೆಯುಳ್ಳ ಸೀರೆಗಳು ನಮಗೆ ಗೊತ್ತಾಗದ ಹಾಗೆ ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆಯ ಗುನ್ನೆ ನಂ 211/2011 ಕಲಂ 380 ಐಪಿಸಿ ನೇದ್ದರ ಪ್ರಕಾರ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಳ್ಳಲಾಗಿದೆ.