POLICE BHAVAN KALABURAGI

POLICE BHAVAN KALABURAGI

17 June 2014

Gulbarga District Reported Crimes

ಅಪಘಾತ ಪ್ರಕರಣಗಳು:
ಗ್ರಾಮೀಣ ಠಾಣೆ : ದಿನಾಂಕ:- 16-06-2014 ರಂದು ಸಾಯಾಂಕಾಲ 06:45 ಗಂಟೆ ಸುಮಾರಿಗೆ ಮಲ್ಲಿಕಾರ್ಜುನ ತಂದೆ ಯಶ್ವಂತರಾಯ ಬನ್ನೂರಕರ ಇತನು ತನ್ನ ಮೋಟಾರ ಸೈಕಲ ನಂ ಕೆಎ-32 ಇ.ಸಿ-7897 ನೇದ್ದರ ಮೇಲೆ ಗುಲಬರ್ಗಾದಿಂದ ತಮ್ಮೂರಿಗೆ ಹೋಗುವಾಗ ಹಿಂದಿನಿಂದ ಟಾಟಾ ಇಂಡಿಕಾ ಕಾರ ನಂ ಕೆಎ-22 ಎಂ-7062 ನೇದ್ದರ ಚಾಲಕನು ತನ್ನ ಕಾರನ್ನು ಅತೀವೇಗ ಮತ್ತು ಅಲಕ್ಷತನದಿಂದ ಚಲಾಯಿಸಿ ಮುಂದೆ ಹೋಗುತ್ತಿದ್ದ ಮೋಟಾರ ಸೈಕಲಕ್ಕೆ ಡಿಕ್ಕಿ ಹೊಡೆದು ಅಪಘಾತ ಪಡಿಸಿದ್ದರಿಂದ ತಲೆಗೆ ಮತ್ತು ಇತರೇ ಭಾಗಕ್ಕೆ ಭಾರಿ ರಕ್ತಗಾಯವಾಗಿ ರಕ್ತಸ್ರಾವವಾಗಿ ಸ್ಥಳದಲ್ಲಿಯೇ ಮೃತಪಟ್ಟಿದ್ದು ಎದುರಿಗೆ ಬರುತ್ತಿದ್ದ ಹಿರೋ ಹೊಂಡಾ ಮೋಟಾರ ಸೈಕಲ ನಂ ಕೆಎ-29 ಕೆ-5192 ನೇದ್ದಕ್ಕೆ ಕಾರ ಚಾಲಕನು ಡಿಕ್ಕಿ ಹೊಡೆದು ಅಪಘಾತ ಪಡಿಸಿದ್ದರಿಂದ ಉಮಾಕಾಂತ ತಂದೆ ಬಸವಣ್ಣಪ್ಪ ಚಿತ್ತಕೋಟಿ ಮತ್ತು ಶಿವರಾಜ ತಂದೆ ಸೋಮಣ್ಣಾ ಲಗ್ಗಶೆಟ್ಟಿ ಇವರಿಗೆ ಸಾದಾ ಮತ್ತು ಭಾರಿ ಸ್ವರೂಪದ ಗಾಯಗಳಾಗಿರುತ್ತವೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಳಖೇಡ ಠಾಣೆ : ದಿನಾಂಕ 16.06.14 ರಂದು 02:10 ಪಿ.ಎಮ್ ಕ್ಕೆ ಟಾಟಾ ಸುಮೋ ವಾಹನ ನಂ ಎಮ್.ಹೆಚ್ 12 ವೈ.ಎ-588 ನೇದ್ದರ ಚಾಲಕನು ಅಪಘಾತಪಡಿಸಿ ಭಾರಿ ಗಾಯಗೋಳಿಸಿ ಒಡಿ ಹೋಗಿದ್ದರಿಂದ ಮಹಾದೇವ ತಂದೆ ಶಾಂತಪ್ಪಾ ಸಂಗಾ ಈತನು ಮೃತಪಟ್ಟಿರುತ್ತಾರೆ ಅಂತಾ ಶ್ರೀ ಮಲ್ಲಿನಾಥ ತಂದೆ ಶಾಂತಪ್ಪ ಸಂಗಾ ಇವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಳಖೇಡ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಲ್ಲೆ ಪ್ರಕರಣ :
ಮಾಹಾತ್ಮಾ ಬಸವೇಶ್ವರ ನಗರ ಠಾಣೆ : ಶ್ರೀ ರಾಜು ತಂದೆ ಗಿರಿಮಲ್ಲಪ್ಪ ಹುಗ್ಗಿ ಸಾಃ ಶಕ್ತಿ ನಗರ ಗುಲಬರ್ಗಾ ಇವರು ದಿನಾಂಕಃ 16-06-2014 ರಂದು 03:10 ಪಿ.ಎಂ. ಸುಮಾರಿಗೆ ನನ್ನ ತಂಗಿಯಾದ (ಚಿಕ್ಕಮ್ಮನ ಮಗಳು) ರೋಹಿಣಿ ಇವಳಿಗೆ ಆರಾಮವಿಲ್ಲದ ಕಾರಣ ಬಸವೇಶ್ವರ ಆಸ್ಪತ್ರೆಯಲ್ಲಿ ಉಪಚಾರ ಪಡಿಸಿ ಬಸವೇಶ್ವರ ಆಸ್ಪತ್ರೆಯ ಕ್ಯಾಂಟಿನಗೆ ಹೋಗಿ ಚಹಾ ಕುಡಿಯುತ್ತಿರುವಾಗ ತೋನಸನಳ್ಳಿ ಗ್ರಾಮದ ಸಂತೋಷ ಹುಗ್ಗಿ ಮತ್ತು ಸಂಜು ಹುಗ್ಗಿ ಇವರ ಸಂಗಡ 04 ಜನರು ಬಂದವರೇ ನನಗೆ ತಡೆದು ನಿಲ್ಲಿಸಿ ರಂಡಿ ಮನಗೆ ನನ್ನ ವಿರುದ್ದ ಕೋರ್ಟಿ ನಲ್ಲಿ ಸಾಕ್ಷಿ ಹೇಳುತ್ತೀಯಾ ಅಂತಾ ಕೈಯಿಂದ ಎದೆಯ ಮೇಲೆ ಬೆನ್ನಿನ ಮೇಲೆ, ಹೊಟ್ಟೆಯಲ್ಲಿ ಮತ್ತು ಬೆನ್ನಿನ ಮೇಲೆ ಹೊಡೆದು ಗಾಯಪಡಿಸಿದ್ದು, ಅಷ್ಟರಲ್ಲಿ ನನ್ನ ಗೆಳೆಯನಾದ ಈಶ್ವರಾಜ ಇತನು ಜಗಳ ನೋಡಿ ಬಿಡಿಸಿಕೊಂಡರು. ನಂತರ ಸದರಿಯವರು ಇವತ್ತು ನೀನು ಉಳಿದಿ ಮಗನೆ ಇಲ್ಲದಿದ್ದರೆ ನಿನಗೆ ತಲ್ವಾರದಿಂದ ಖಲಾಸ ಮಾಡುತ್ತಿದ್ದೇ ಅಂತಾ ಜೀವದ ಬೆದರಿಕೆ ಹಾಕಿರುತ್ತಾರೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಾಹಾತ್ಮಾ ಬಸವೇಶ್ವರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನಿಂದನೆ ಪ್ರಕರಣ :
ಅಸೋಕ ನಗರ ಠಾಣೆ : ಶ್ರೀ ಅರುಣಕುಮಾರ @ ಅರವಿಂದ ತಂದೆ ಅಂಬರಾಯ ಕಮಲಾಪೂರ ಸಾ: ಮನೆ ನಂ 11-678/3  ಬಸವನಗರ ಗುಲಬರ್ಗಾ  ರವರು ದಿನಾಂಕ 16-06-2014  ರಂದು ಮದ್ಯಾಹ್ನ 1 ಗಂಟೆಗೆ  ಮಹಾನಗರ ಪಾಲಿಕೆ ಆಫೀಸ ಹತ್ತಿರ ಇದ್ದಾಗ ನಮ್ಮ ಓಣಿಯ ಲಕ್ಷ್ಮಣ @ ಧೋನಿ  ರವರು ನನಗೆ ಫೋನ ಮಾಡಿ ಹಿರಾಪೂರದ ಮುಸ್ಲಿಂ ಹುಡುಗರು ನಮ್ಮ ಓಣಿಯಲ್ಲಿ ಬಂದಿದ್ದಾರೆ. ಎಂದು ಹೇಳಿದ ತಕ್ಷಣ ನಾನು ಮತ್ತು  ಆಕಾಶ ತಳವಾರ ಇಬ್ಬರು ನಮ್ಮ ಪಲ್ಸರ ಗಾಡಿಯ ಮೇಲೆ  ಬಸವನಗರ ಕಮೀಟಿ  ಹಾಲ ಮುಲಿ ಹತ್ತಿರ ಬಂದಾಗ  1 ಪಿಎಂಕ್ಕೆ ಹಿರಾಪೂರ ಗ್ರಾಮದ  ಸುಮಾರು 10-15 ಜನ ಮುಸ್ಲಿಂ ಹುಡುಗರು ಬಂದು ಚಿರಾಡುತ್ತಾ  “ ಕಹಾ ಹೈ ಓ ಪರಶ್ಯಾ”  ಎಂದು ಕೇಳುತ್ತಿದ್ದರು. ಆಗ ನಾನು  ಏರಿಯಾ ಉಪಾಧ್ಯಕ್ಷ ಇದ್ದೆನ ಏನಾಗಿದೆ ಎಂದು ಕೇಳಲು ಹೊದಾಗ  ಅವರಲ್ಲಿ ಇರ್ಫಾನ ಹಿರಾಪೂರ ಇತನು ಏ ಢೇಡ ಲೊಗೊಂಕಾ ಬಹುತ  ಹೊಗಯ್ಯಾಎಂದು ಜಾತಿ ಎತ್ತಿ ಬೈದವನೇ ತನ್ನ ಕೈಯಲ್ಲಿದ್ದ ತಲವಾರದಿಂದ ನನ್ನ ತಲೆಯ  ಮೇಲೆ ಹೊಡೆದನು. ಮತ್ತು ಅವನ ಜೋತೆಯಲ್ಲಿದ್ದ ಹುಡುಗರು ರಾಡ ಮತ್ತು ಕ್ರಿಕೇಟ ಸ್ಟಂಪನಿಂದ ಹೊಡೆದಿರುತ್ತಾರೆ. ಇದರಿಂದ ನನ್ನ ತಲೆಗೆ ಭಾರಿ ರಕ್ತಗಾಯ ಮತ್ತು ಎಡ ಭೂಜಕ್ಕೆ  ಬೆನ್ನಿಗೆ ಭಾರಿ  ಒಳಪೆಟ್ಟಾಗಿದೆ.  ಆಗ ಬಿಡಿಸಲು ಬಂದಿದ್ದ  ಶಿವರಾಜ ತಂದೆ ರಾಜೇಂದ್ರ ಶಿನ್ನೂರ  ಇತನಿಗೂ ತಲವಾರ ರಾಡನಿಂದ ಹೊಡೆದು ಮರಣಾಂತಿಕ ಹಲ್ಲೆ ಮಾಡಿರುತ್ತಾರೆ.  ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಶೋಕ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.