POLICE BHAVAN KALABURAGI

POLICE BHAVAN KALABURAGI

19 February 2012

GULBARGA DIST REPORTED CRIME

ಅಪಘಾತ ಪ್ರಕರಣ:
ಹೆಚ್ಚುವರಿ ಸಂಚಾರಿ ಪೊಲೀಸ್ ಠಾಣೆ :
ಶ್ರೀ ಅಬ್ದುಲ ಸತ್ತಾರ ತಂದೆ ಅಬ್ದುಲ ಕರೀಮ ಸಾ: ಖದೀರ ಚೌಕ ಜಿಲಾನಾ ಬಾದ ಎಮ್.ಎಸ್.ಕೆ.ಮಿಲ್ ಗುಲಬರ್ಗಾರವರು ನಾನು ದಿನಾಂಕ 26-1-2012 ರಂದು ರಾತ್ರಿ 10=30 ಗಂಟೆಗೆ ಸಂತೋಷ ಟಾಕೀಜ ಹತ್ತಿರ ಪಾನ ಡಬ್ಬಾ ಮುಚ್ಚಿಕೊಂಡು ಮನೆಗೆ ಹೋಗುತ್ತಿದ್ದಾಗ ಕಪೀಲಾ ಲಾಡ್ಜ ಎದುರು ರೋಡಿನ ಮೇಲೆ ಆಟೋರಿಕ್ಷಾ ನಂ ಕೆಎ-32 ಎ-3592 ನೇದ್ದರ ಚಾಲಕ ಅತೀವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ಹಿಂದಿನಿಂದ ಡಿಕ್ಕಿ ಪಡಿಸಿ ಭಾರಿಗಾಯ ಗೊಳಿಸಿ ತನ್ನ ಆಟೋರಿಕ್ಷಾ ಸಮೇತ ಹೊರಟು ಹೋಗಿರುತ್ತಾನೆ.ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 26/2012 ಕಲಂ: 279,338 ಐ.ಪಿ.ಸಿ ಸಂ 187 ಐ,ಎಮ್,ವಿ ಆಕ್ಟ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.

GULBARGA DIST REPORTED CRIMES

ಹಲ್ಲೆ ಪ್ರಕರಣ:
ಬ್ರಹ್ಮಪೂರ ಪೊಲೀಸ ಠಾಣೆ:
ಶ್ರೀ.ಅಂಬಣ್ಣ ತಂದೆ ಹಣಮಯ್ಯ ಭಾವಗಿ, ಸಾ ಕಲಬೇನ್ನೂರ ತಾ ಜಿ ಗುಲಬರ್ಗಾ ರವರು ನಾವು 5 ಜನ ಅಣ್ಣ ತಮ್ಮಂದಿರರು ಇದ್ದು, ಎಲ್ಲರೂ ಬೇರೆ ಬೇರೆಯಾಗಿರುತ್ತೇವೆ. ಹೊಲ ಮನೆ ಆಸ್ತಿ ಹಂಚಿಕೊಂಡಿರುವದಿಲ್ಲ. ನಾನು ಕೂಲಿ ಕೆಲಸ ಮಾಡಿಕೊಂಡು ಪೂನಾದಲ್ಲಿ ಇದ್ದು, ಆಗಾಗ ಹೊಲ ಮನೆ ನೋಡಲು ನಮ್ಮ ಊರಿಗೆ ಬಂದು ಹೋಗುವದು ಮಾಡುತ್ತೇನೆ. ಕೆಲವು ದಿವಸಗಳ ಹಿಂದೆ ಹೊಲ ಮನೆ ನೋಡಲು ನಮ್ಮ ಊರಿಗೆ ಬಂದಿದ್ದು, ನನ್ನ ತಮ್ಮ ವಿಠಲ ಇವನು ಗುಲಬರ್ಗಾದ ಗಾಜೀಪುರ ಬಡಾವಣೆಯಲ್ಲಿ ಇರುವದರಿಂದ ತೊಗರಿ ಮಾರುವ ವಿಷಯ ಸಂಬಂಧ ಅವರ ಮನೆಗೆ ಬಂದಿದ್ದು ಅವರು ಮನೆಯಲ್ಲಿ ಇರದ ಕಾರಣ ಮನೆಯ ಹೊರಗಡೆ ನಿಂತಿದ್ದೇನು. ಸಾಯಂಕಾಲ 4:30 ಗಂಟೆಗೆ ನನ್ನ ಇನ್ನೊಬ್ಬ ತಮ್ಮನಾದ ಪಾಂಡುರಂಗ ಇವನು ಮತ್ತು ಆತನ ಹೆಂಡತಿಯಾದ ಶೋಭಾ ಇವಳೊಂದಿಗೆ ಗಾಜೀಪುರ ಬಡಾವಣೆಯಲ್ಲಿರುವ ನಮ್ಮ ತಮ್ಮ ವಿಠಲ ಇವರ ಮನೆಯ ಮುಂದೆ ಬಂದು ನನಗೆ ತೊಗರಿ ಮಾರಲು ಅಡತಿಗೆ ಹೋಗೋಣ ಅಂತಾ ಕೇಳಿದನು. ಆಗ ನಾನು ಬರುವದಿಲ್ಲ ನೀನೆ ಹೋಗು ಅಂತಾ ಹೇಳಿದಕ್ಕೆ ಅವಾಚ್ಯ ಶಬ್ದಗಳಿಂದ ಬೈದು, ಕೈಯಿಂದ ಎದೆಯ ಮೇಲೆ ಹೊಡೆದು, ಎರಡು ಕಾಲುಗಳನ್ನು ಹಿಡಿದು ಎಳೆದಿದ್ದರಿಂದ ನಾನು ಕೆಳಗೆ ಬಿದ್ದು ನನ್ನ ಬಲಗೈಯ ಮೊಣಕೈ ಹತ್ತಿರ ಒಳಪೆಟ್ಟಾಗಿ ಉಬ್ಬಿದಂತೆ ಆಗಿರುತ್ತದೆ. ನನ್ನ ಅಣ್ಣನ ಹೆಂಡತಿ ಶೋಭಾ ಇವಳು ಕಾಲಿನಿಂದ ಬೆನ್ನ ಮೇಲೆ ಒದ್ದಿರುತ್ತಾಳೆ. ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಗುನ್ನೆ ನಂ: 27/2012 ಕಲಂ: 323, 324, 504 ಸಂಗಡ 34 ಐ.ಪಿ.ಸಿ ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಅಪಘಾತ ಪ್ರಕರಣ:
ಆಳಂದ ಪೊಲೀಸ ಠಾಣೆ:
ಹುಚ್ಚಣ್ಣ ತಂದೆ ಫಕೀರಪ್ಪ ಹರಳಯ್ಯ ಸಾ;- ಕೊಡಲಹಂಗರಗಾ ತಾಆಳಂದರವರು ನಾನು 2 ವರ್ಷದಿಂದ ಆಳಂದ ಖಜೂರಿ ರೋಡಿನಲ್ಲಿರುವ ಚಂದುಲಾಲ ಸೇಠಜಿ ರವರ ಹೊಲದಲ್ಲಿ ಒಕ್ಕಲೂತನದ ಕೆಲಸ ಮಾಡಿಕೊಂಡಿರುತ್ತೆನೆ. ದಿನಾಂಕ 18/02/2012 ರಂದು ಬೆಳ್ಳಿಗ್ಗೆ ನನಗೆ ಆರಾಮ ಇಲ್ಲದ ಕಾರಣ ಆಳಂದ ಆಸ್ಪತ್ರೆಗೆ ಹೋಗಿ ತೋರಿಸಿ ಉಪಚಾರ ಪಡೆದುಕೊಂಡು ಮಧ್ಯಾನ ನಾನು ಮತ್ತು ನನ್ನ ಹೆಂಡತಿ ಇಬ್ಬರು ಕುಡಿಕೊಂಡು ನಮ್ಮ ಮಾಲಕರ ಹೊಲಕ್ಕೆ ಹೋಗುತ್ತಿದ್ದಾಗ ಮುಗುಟ ಕಟಗಿ ಅಡ್ಡಾದ ಎದುರಿಗೆ ರೋಡಿನ ಎಡಬದಿಯಿಂದ ಹೋಗುತ್ತಿದ್ದಾಗ ಒಬ್ಬ ಟ್ಯಾಂಕರ ಬಲ್ಕರ ಎಂ,ಹೆಚ್ 24-3522 ನೇದ್ದರ ಚಾಲಕನು ತನ್ನ ಟ್ಯಾಂಕರನ್ನು ಆಳಂದ ಕಡೆಯಿಂದ ಅತೀ ವೇಗದಿಂದ ಮತ್ತು ಅಜಾಗರುಕತೆಯಿಂದ ಚಲಾಯಿಸಿಕೊಂಡು ಬಂದವನೇ ತನ್ನ ಟ್ಯಾಂಕರ ಎಡಬದಿಯಿಂದ ನನಗೆ ಡಿಕ್ಕಿ ಹೊಡೆದಿದ್ದರಿಂದ ನಾನು ಪುಟಿದು ರೋಡಿನ ಮೇಲೆ ಬಿದ್ದು ಬಿಟ್ಟೆನು ಅಷ್ಟರಲ್ಲಿ ಶ್ರೀ ದಾಭಾದ ಹತ್ತಿರ ನಿಂತಿದ್ದ 3-4 ಜನರು ಬಂದು ನನಗೆ ಎಬ್ಬಿಸಿ ನೋಡಲಿ ನನ್ನ ತೆಲೆಗೆ ಮಖಕ್ಕೆ ,ಗದ್ದಕ್ಕೆ,ತುಟಿಗೆ,ಮೂಗಿಗೆ,ಎದೆಗೆ,ನಾಲಿಗೆಗೆ,ಬಲಗೈ ಮೋಳಕೈಗೆ ರಕ್ತಗಾಯವಾಯಿತು ಟ್ಯಾಂಕರ ಚಾಲಕನು ತನ್ನ ಟ್ಯಾಂಕರ ನಿಲ್ಲಿಸದೇ ವಾಹನವನ್ನು ಓಡಿಸಿಕೊಂಡು ಹೋಗಿರುತ್ತಾನೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 38/2012 ಕಲಂ. 279.337. ಐಪಿಸಿ 187. ಐಎಮ್.ವಿ ಆಕ್ಟ್ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.