POLICE BHAVAN KALABURAGI

POLICE BHAVAN KALABURAGI

01 August 2018

KALABURAGI DISTRICT REPORTED CRIMES

ಕೊಲೆ ಪ್ರಕರಣ :
ಕಮಲಾಪೂರ ಠಾಣೆ : ಶ್ರೀಮತಿ ಸುಲೋಚನಾ ಗಂಡ ಅಶೋಕ  ಸಾ: ಕಾಳಮಂದರ್ಗಿ ಮತ್ತು ಸಂತೋಷ ತಂದೆ ಗಣಪತರಾವ ಬಿರಾದಾರ ಸಾ: ಕಾಳಮಂದರ್ಗಿ ಮಧ್ಯೆ ಕಾಳಮಂದರ್ಗಿ ಗ್ರಾಮದ ಹೋಲ ಸರ್ವೆ ನಂ 103/2012 ಮತ್ತು 195 ನೇದ್ದರ 22 ಎಕರೆ ಮತ್ತು 04 ಗುಂಟೆ ಹೋಲದ ವಿಷಯದಲ್ಲಿ ಜಗಳವಿದ್ದು. ಇದೆ ವಿಷಯದಲ್ಲಿ ದಿನಾಂಕ 05-02-2018 ರಂದು ರಾತ್ರಿ 11 ಗಂಟೆಯಿಂದ ದಿನಾಂಕ 06-2-2018 ರ ಮುಂಜಾನೆಯ ಮಧ್ಯದ ಅವಧಿಯಲ್ಲಿ ಕಾಳಮಂದರ್ಗಿ  ಗ್ರಾಮದ ಹೋಲ ಸರ್ವೆ  ನಂ 103/2012 ಮತ್ತು 195 ನೇದ್ದರ 22 ಎಕರೆ ಮತ್ತು 04 ಗುಂಟೆ ಹೋಲದಲ್ಲಿ ಬಂದವನೆ ಆರೋಪಿ ಸಂತೋಷ ತಂದೆ ಗಣಪತಿರಾವ ಬಿರಾದಾರ ಇವರು ನನ್ನ ಗಂಡನಾದ ಅಶೋಕ ತಂದೆ ಗಣಪತರಾವ ಬಿರಾದಾರ ಇವರಿಗೆ ಹೋಲದ ವಿಷಯದಲ್ಲಿ ಜಗಳ ಮಾಡುತ್ತಾ ನನ್ನ ಗಂಡನಾದ ಅಶೋಕನಿಗೆ ಆರೋಪಿ ಸಂತೋಷ ಇವನು ಹೊಡೆದು ಕೋಲೆ ಮಾಡಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಕಮಲಾಪೂರ ಠಾಂಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪಘಾತ ಪ್ರಕರಣ :
ಕಮಲಾಪೂರ ಠಾಣೆ : ಶ್ರೀಮತಿ ಸಾವಿತ್ರ ಗಂಡ ಸಿದ್ದಪ್ಪ ನರೋಣಿ ಮು:ಗೋಬ್ಬರವಾಡಿ ಗ್ರಾಮ ತಾ:ಜಿ:ಕಲಬುರಗಿ ರವರ ಗಂಡ ಸಿದ್ದಪ್ಪ ಇವರು ನಮ್ಮೂರ ಅಶೋಕ ಪಂಚಮಠ ಇವರ ಟ್ರಾಕ್ಟರ ನಂ.ಕೆಎ-32 ಟಿ.4823 ಟ್ರಾಲಿ ನಂ.ಕೆಎ.39 ಟಿ.5585 ನೇದ್ದರ ಮೇಲೆ ಕೂಲಿಕೆಲಸ ಮಾಡಿಕೊಂಡಿದ್ದು. ನನ್ನ ಗಂಡ ಪ್ರತಿ ದಿನ ಮುಂಜಾನೆ 09 ಗಂಟೆಗೆ ಮೇಲೆ ಹೇಳಿದ ಟ್ರಾಕ್ಟರ ಮೇಲೆ ಕೂಲಿ ಕೆಲಸ ಕುರಿತು ಹೋಗಿ ಸಾಯಂಕಾಲದ ವೇಳೆಯಲ್ಲಿ ಮನೆಗೆ ವಾಪಸ್ಸ ಬರುತ್ತಿದ್ದರು. ಹೀಗಿದ್ದು ಇಂದು ದಿನಾಂಕ:31-07-2018 ರಂದು ಮುಂಜಾನೆ 09.00 ಗಂಟೆಯ ಸೂಮಾರಿಗೆ ನನ್ನ ಗಂಡ ಸಿದ್ದಪ್ಪ ಇವರು ಎಂದಿನಂತೆ ಅಶೋಕ ಪಂಚಮಠ ಇವರ ಟ್ರಾಕ್ಟರ ನಂ. ಕೆಎ-32 ಟಿ.4823 ಟ್ರಾಲಿ ನಂ. ಕೆಎ.39 ಟಿ.5585 ನೇದ್ದರ ಮೇಲೆ ಕೂಲಿ ಕೆಲಸಕ್ಕೆ ಹೋಗುತ್ತೇನೆ ಅಂತಾ ಮನೆಯಲ್ಲಿ ಹೇಳಿ ಹೋಗಿದ್ದರು. ನಂತರ ಇಂದು ಮದ್ಯಾಹ್ನ 03 ಗಂಟೆಯ ಸೂಮಾರಿಗೆ ನಾನು ನನ್ನ ಮನೆಯಲ್ಲಿ ಇದ್ದಾಗ ನನ್ನ ಭಾವ ಬಸವರಾಜ ನರೋಣಿ ಇವರು ಗಾಬರಿಯಲ್ಲಿ ಬಂದು ನನಗೆ ತಿಳಿಸಿದ್ದೆನಂದರೆ. ಸೊಂತನಿಂದ ಚೆಂಗಟಾ ಗ್ರಾಮಕ್ಕೆ ಹೋಗುವ ರೋಡಿನ ಮಲ್ಲಣ್ಣ ಗೌಡರ ಹೋಲದ ಹತ್ತೀರ ರೋಡಿನ ಎಡಭಾಗದಲ್ಲಿ ಸಿದ್ದಪ್ಪ ನರೋಣಿ ಈತನು ಅಶೋಕ ಪಂಚಮಠ ಇವರ ಟ್ರಾಕ್ಟರನಲ್ಲಿ ಕುಳಿತು ಹೋಗುವಾಗ ಟ್ರಾಕ್ಟರ ಪಲ್ಟಿಯಾಗಿ ಬಿದ್ದು ಸ್ಥಳದಲ್ಲೆ ಮೃತಪಟ್ಟಿರುತ್ತಾನೆ ಅಂತಾ ನಮ್ಮೂರ ಸಿದ್ರಾಮಪ್ಪ ಕಾಮಶೆಟ್ಟಿ ಇವರು ಫೊನ ಮಾಡಿ ನನಗೆ ವಿಷಯ ತಿಳಿಸಿರುತ್ತಾರೆ ಅಂತಾ ಹೇಳಿದ್ದು. ನಂತರ ನಾನು ಗಾಬರಿಗೊಂಡು ನಾನು ಮತ್ತು ನನ್ನ ಭಾವ ಬಸವರಾಜ ನನ್ನ ಮೈದುನ ಹಣಮಂತ ಕೂಡಿಕೊಂಡು ಘಟನಾ ಸ್ಥಳಕ್ಕೆ ಹೋಗಿ ನೋಡಲು ಸಿದ್ರಾಮಪ್ಪ ಇವರು ನನ್ನ ಭಾವನಿಗೆ ಹೇಳಿದಂತೆ ಸೊಂತನಿಂದ ಚೆಂಗಟಾ ಹೋಗುವ ರೋಡಿನ ಮಲ್ಲಣ್ಣ ಗೌಡರ ಹೋಲದ ಹತ್ತೀರ ರೋಡಿನ ಎಡಭಾಗದಲ್ಲಿ ನನ್ನ ಗಂಡ ಪ್ರತಿ ದಿನ ಕೂಲಿ ಕೆಲಸಕ್ಕೆ ಹೋಗುತ್ತಿದ್ದ ಟ್ರಾಕ್ಟರ ಪಲ್ಟಿಯಾಗಿ ಬಿದ್ದಿದ್ದು. ಟ್ರಾಕ್ಟರ ಇಂಜಿನ ಕೆಳಗಡೆ ನನ್ನ ಗಂಡ ಸಿದ್ದಪ್ಪ ಇವರು ಬಾರಲೆಯಾಗಿ ಬಿದ್ದು ಸ್ಥಳದಲ್ಲೆ ಮೃತ ಪಟ್ಟಿದ್ದರು. ನಂತರ ಸ್ವಲ್ಪ ಹೋತ್ತಿನಲ್ಲಿ ನನ್ನ ಭಾವ ಹಾಗೂ ಮೈದುನ ಹಾಗೂ ಇತರರು ಕೂಡಿ ಟ್ರಾಕ್ಟರ ಇಂಜಿನ ಕೆಳಗೆ ಸಿಕ್ಕಿಬಿದ್ದ ನನ್ನ ಗಂಡನ ಶವ ಹೋರಗೆ ತೆಗೆದು ನೋಡಲು ನನ್ನ ಗಂಡನ ಸೊಂಟದ ಮೇಲೆ ಬೆನ್ನಿನ ಮೇಲೆ ಭಾರಿ ಗುಪ್ತಗಾಯವಾಗಿದ್ದು. ಎಡ ಹುಬ್ಬಿನ ಹತ್ತೀರ ರಕ್ತಗಾಯ ಬಲಗೈ ರಟ್ಟೆ ಹಾಗೂ ಮುಂಗೈ ಮೇಲೆ ಚರ್ಮ ಸುಲಿದು ಮೈತುಂಬಾ ಟ್ರಾಕ್ಟರನ ಆಯಿಲ್ ಚೆಲ್ಲಿ ಮೈಯಲ್ಲ ಹೋಲಸಾಗಿದ್ದು ಇರುತ್ತದೆ. ನಂತರ ಘಟನೆಯ ಬಗ್ಗೆ ಸಿದ್ರಾಮಪ್ಪ ಇವರಿಗೆ ವಿಚಾರ ಮಾಡಲು ಅವರು ತಿಳಿಸಿದ್ದೆನಂದರೆ. ಇಂದು ಮದ್ಯಾಹ್ನ ಸೊಂತ ಕಡೆಯಿಂದ ಮೇಲ್ಕಂಡ ಟ್ರಾಕ್ಟರನ ಎಡಭಾಗದಲ್ಲಿ ನಿನ್ನ ಗಂಡ ಸಿದ್ದಪ್ಪ ಈತನು ಕುಳಿತಿದ್ದು. ಅದರಂತೆ ಟ್ರಾಕ್ಟರ ಟ್ರಾಲಿ ಒಳಗಡೆ ಸಂಜುಕುಮಾರ ಶೆಳ್ಳಗಿ ಇವನು ಕುಳಿತು ಬರುತ್ತಿದ್ದಾಗ ಟ್ರಾಕ್ಟರನ್ನು ಅದರ ಚಾಲಕ ಪ್ರಕಾಶ @ ಕುಮ್ಮಣ್ಣ ಮಾಂಗ ಮು:ಗೋಬ್ಬರವಾಡಿ ಗ್ರಾಮ ಈತನು ಟ್ರಾಕ್ಟರನ್ನು ಅತಿವೇಗ ಹಾಗೂ ಅಲಕ್ಷತನದಿಂದ ನಡೆಸಿಕೊಂಡು ಬಂದು ಸೊಂತ ಮಲ್ಲಣ್ಣ ಗೌಡರ ಹೋಲದ ಹತ್ತೀರ ಪಲ್ಟಿ ಮಾಡಿದ್ದು. ನಿನ್ನ ಗಂಡ ಸ್ಥಳದಲ್ಲೆ ಮೃತಪಟ್ಟಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಕಮಲಾಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಲ್ಲೆ ಮಾಡಿ ಜಾತಿ ನಿಂದನೆ ಮಾಡಿದ ಪ್ರಕರಣ :
ರಾಘವೇಂದ್ರ ನಗರ ಠಾಣೆ : ಶ್ರೀ ರಾಜಶೇಖರ ತಂದೆ ಮಹಾದೇವಪ್ಪ ದೊಡ್ಡಮನಿ :ಯೋಜನ ಅಭಿಯಂತರರು ನಿರ್ಮಿತಿ ಕೇಂದ್ರ ಆಳಂದ ಕಾಲೋನಿ ಗುಲಬರ್ಗಾ ಇವರು ಗುಲಬರ್ಗಾ ನಿರ್ಮಿತಿ ಕೇಂದ್ರದಲ್ಲಿ 2007 ರಿಂದ ಇಲ್ಲಿಯವರೆಗೆ ನಿಷ್ಠೆಯಿಂದ ಕರ್ತವ್ಯ ನಿರ್ವಹಿಸುತ್ತಿರುವ ನನಗೆ ನಿರ್ಮಿತಿ ಕೇಂದ್ರದ ಯೋಜನಾ ವ್ಯವಸ್ಥಾಪಕ ಪಿ.ಜೆ ಏಕಾಂತಪ್ಪ ಮತ್ತು ಅಕೌಂಟೆಂಟ ಚಂದ್ರಶೇಖರ ಕಪಾಲೆಯವರಿಂದ ದುರುದ್ದೇಶ ಪೂರ್ವಕವಾಗಿ ಕಿರುಕುಳ, ಜಾತಿ ನಿಂದನೆ, ಮಾಸಿಕ ವೇತನ ನೀಡದೆ ನಿಂದನಾತ್ಮಕ ಮಾತುಗಳಿಂದ ಅವಮಾನ ಮಾಡುವುದು 2017 ಏಪ್ರೀಲ್ನಿಂದ ಶುರುವಾಗಿ ಇಂದಿನವರೆಗೆ ಮುಂದುವರೆದಿದೆ. ಮಹಾಗಾಂವ ಗ್ರಾಮದಲ್ಲಿನ ಕಾಲೇಜು ಕಟ್ಟಡದ ಹಣ ದುರ್ಬಳಕೆ ಮಾಡಲಾಗಿದೆ ಎಂದು ನನ್ನ ಮೇಲೆ ಮತ್ತು ಇಂಜಿನಿಯರ್ವೀರಪಕ್ಷರವರ ಮೇಲೆ ದಿನಾಂಕ: 06/04/2017 ರಂದು ಮಹಾಗಾಂವ ಪೊಲೀಸ ಠಾಣೆಯಲ್ಲಿ ಪಿ.ಜೆ ಏಕಾಂತಪ್ಪ ಸೇಡಿನ ಮನೋಭಾವನೆಯಿಂದ ಸುಳ್ಳು ಪ್ರಕರಣ ದಾಖಲಿಸಿದರು. ಕೂಲಂಕುಶವಾಗಿ ತನಿಖೆ ಮಾಡಿದ ಪೊಲೀಸರು ಇದೊಂದು ಸುಳ್ಳು ಪ್ರಕರಣವೆಂದು ಮಾನ್ಯ ನ್ಯಾಯಾಲಯಕ್ಕೆ ದಿನಾಂಕ : 25/11/2017 ರಂದುಬಿ ಅಂತಿಮ ವರದಿಯನ್ನು ಸಲ್ಲಿಸಿದ್ದಾರೆ. ಕ್ರಿಮೀನಲ್ಪ್ರಕರಣ ದಾಖಲಾಗಿದೆ ಎಂಬ ಉದ್ದೇಶದಿಂದ 2017 ಏಪ್ರೀಲ್ನಿಂದ ನನ್ನ ಮತ್ತು ವೀರಪಕ್ಷರವರ ಸಂಬಳವನ್ನು ತಡೆಹಿಡಿಯಲಾಗಿದೆ. ಮಕ್ಕಳ ಶಿಕ್ಷಣಕ್ಕೆ, ಕುಟುಂಬದ ಅಡಚಣೆಗಾಗಿ, ತಂದೆಯವರ ಆಸ್ಪತ್ರೆಯ ಖರ್ಚುಗಾಗಿ ಹಣವಿಲ್ಲದೆ ತೊಂದರೆಯನುಭವಿಸುತ್ತಿದ್ದೇನೆ. ದಯಮಾಡಿ ತಡೆ ಹಿಡಿದ ಸಂಬಳ ಬಿಡುಗಡೆ ಮಾಡಬೇಕೆಂದು ನಿರ್ಮಿತಿ ಕೇಂದ್ರದ ಪಿ.ಜೆ.ಏಕಾಂತಪ್ಪನಿಗೆ ಮನವಿ ಕೊಟ್ಟರೆ ನಿಮಗೆ ಯಾಕೆ ಶಿಕ್ಷಣ ವಯಸ್ಸಾದ ನಿಮ್ಮ ತಂದೆ ಸಾಯಲಿ ಬಿಡಿ, ಹೊಲೆಯ ಜಾತಿಗೆ ಸೇರಿದವನಾಗಿರುತ್ತಿ ಎಂದು ಜಾತಿ ಎತ್ತಿ ಬೈಯುವುದಲ್ಲದೇ ವ್ಯಂಗ ಮಾತುಗಳಿಂದ ಅವಮಾನ ಮಾಡುವುದು ಮಾಡುತ್ತಿದ್ದಾರೆ ಇವರಿಗೆ ಬೆಂಬಲವಾಗಿ ಅಕೌಂಟೆಂಟ್‌‌ ಚಂದ್ರಶೇಖರ ಕಪಾಲೆ ಕೂಡ ಇಂಥ ಕೀಳ ಜಾತಿ ಸುಳೆ ಮಕ್ಕಳು ನಮ್ಮಲ್ಲಿ ಇರಲೇಬಾರದು ತೊಂದರೆ ಕೊಟ್ಟರೆ ತಾವೇ ಓಡಿ ಹೋಗುತ್ತಾರೆಂದು ಕಛೇರಿಗೆ ಬಂದಾಗೊಮ್ಮೆ ಬೈದು ನೋವುಂಟು ಮಾಡುತ್ತಿದ್ದಾರೆ. ಜಿಲ್ಲಾಧಿಕಾರಿಗಳಿಗೆ ನನ್ನ ವಿರುದ್ದ ಸುಳ್ಳು ಮಾಹಿತಿ ಕೊಟ್ಟು 15 ತಿಂಗಳ ಸಂಬಳ ತಡೆಹಿಡಿದು ಅಟ್ಟಹಾಸ ಮರೆಯಿತ್ತಿರುವ ಪಿ.ಜೆ ಏಕಾಂತಪ್ಪ, ಚಂದ್ರಶೇಖರ ಕಪಾಲೆ, ಕಾನೂನು ಮೀರಿ ದೌರ್ಜನ್ಯವೆಸುಗುತ್ತಿದ್ದು ಅನಾರೋಗ್ಯದಿಂದ ಬಳಲುತ್ತಿರುವ ನಮ್ಮ ತಂದೆಯವರನ್ನು ನಿಮ್ಹಾನ್ಸ ಆಸ್ಪತ್ರೆಯಲ್ಲಿ ದಾಖಲಿಸಿದ್ದು ದುಡ್ಡಿನ ತೊಂದರೆಯಿದ್ದು ಹಣದ ಅಡಚಣೆಯಿಂದ ನಮ್ಮ ತಂದೆಯವರ ಜೀವಕ್ಕೆ ಏನಾದರೂ ಅಪಾಯವಾದರೆ ನಿರ್ಮಿತ ಕೇಂದ್ರದ ಜಾತಿವಾದಿಗಳೇ ಕಾರಣರಾಗುತ್ತಾರೆ.ದಿನಾಂಕ:23/07/18 ರಂದು ಮುಂಜಾನೆ 10.30 ನಿಮಿಷಕ್ಕೆ ನಾನು ಎಂದಿನಂತೆ ನಾನು ಕಛೇರಿಗೆ ಹೋಗಿ ಹಾಜರಿ ಪುಸ್ತಕದಲ್ಲಿ ಸಹಿ ಮಾಡಿ ಪಿ.ಜೆ ಏಕಾಂತಪ್ಪನವರ ಚೆಂಬರಿಗೆ ಹೋಗಿ ತಂದೆಯವರ ಆರೋಗ್ಯ ಸ್ಥಿತಿ ಹದಗೆಟ್ಟಿದೆ ಬೆಂಗಳೂರಿಗೆ ತೆಗೆದುಕೊಂಡು ಹೋಗಿದ್ದೆವೆ ದಯಮಾಡಿ ಪೇಮೆಂಟ್‌‌ ಮಾಡಿ ಎಂದು ಬೇಡಿಕೊಂಡಾಗ ಸುಳೆ ಮಗನೇ ನಿನ್ನ ಪಗಾರ ಮಾಡುವುದಿಲ್ಲ ಎನ್ಮಾಡ್ಕೋತಿಯೋ ಮಾಡಿಕೋ ಎಂದು ಬೈಯುತ್ತಿರುವಾಗ ಅಲ್ಲಿಗೆ ಬಂದಿದ ಫಿರೋಜ ಎಂಬ ಹೆಸರಿನ ವ್ಯಕ್ತಿ ಜಗಳ ಬಿಡಿಸಿರುತ್ತಾರೆ. ಅಂಥಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ರಾಘವೇಂದ್ರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.