POLICE BHAVAN KALABURAGI

POLICE BHAVAN KALABURAGI

14 April 2019

KALABURAGI DISTRICT REPORTED CRIMES

ಹಲ್ಲೆ ಪ್ರಕರಣಗಳು :
ರಾಘವೇಂದ್ರ ನಗರ ಠಾಣೆ : ಶ್ರೀ ಮಹ್ಮದ ಉಸ್ಮಾನ ತಂದೆ ಹುಸೇನಸಾಬ ಮುಜಾವರ ಸಾ: ಮಹೀಬೂಬಸುಬಾನಿ ಚಿಲ್ಲಾ ಝಂಡಾಗಲ್ಲಿ ಎಮ್.ಎಸ್.ಕೆ.ಮೀಲ್ ಕಲಬುರಗಿ ರವರು  ದಿನಾಂಕ 11.04.2019 ರಂದು ಕಲಬುರಗಿ ಲೊಕಸಭಾ ಕ್ಷೇತ್ರ-5 ನೇದ್ದರ ಕಾಂಗ್ರೇಸ ಪಕ್ಷದ ಅಭ್ಯರ್ಥಿಯಾದ ಸನ್ಮಾನ್ಯ ಶ್ರೀ ಮಲ್ಲಿಕಾರ್ಜುನ ಖರ್ಗೇ ರವರ ಪರವಾಗಿ ಚುನಾವಣೆ ಪ್ರಚಾರ ಕುರಿತು ನನ್ನ ಅಟೊ ನಂ ಕೆಎ 32 ಸಿ 2486 ನೇದ್ದಕ್ಕೆ ಮೈಕ ಸಟ್ ಮುಂಖಾತ ಪ್ರಚಾರ ಮಾಡಲು ಚುನಾವಣಾಧಿಕಾರಿಗಳು ಪರವಾನಿಗೆ ನೀಡಿದ್ದು ಅದರಂತೆ ಇಂದು ದಿನಾಂಕ 13.04.2019 ರಂದು ಬೆಳ್ಳಿಗ್ಗೆ 11:00 ಗಂಟೆಯಿಂದ ಕಲಬುರಗಿ ಲೊಕಸಭಾ ಕ್ಷೇತ್ರ-5 ನೇದ್ದರ ಕಾಂಗ್ರೇಸ್ಸ ಪಕ್ಷದ ಅಭ್ಯರ್ಥಿಯಾದ ಸನ್ಮಾನ್ಯ ಶ್ರೀ ಮಲ್ಲಿಕಾರ್ಜುನ ಖರ್ಗೇ ರವರ ಪರವಾಗಿ ಚುನಾವಣೆ ಪ್ರಚಾರ ಕುರಿತು ನನ್ನ ಅಟೊ ನಂ ಕೆಎ 32 ಸಿ 2486 ನೇದಕ್ಕೆ ಮೈನ ಸಟ್ ಅಳವಡಿಸಿ ಕಾಂಗ್ರೇಸ್ ಪಕ್ಷದ ದ್ವಜವನ್ನು ಅಟೊಕ್ಕೆ ಕಟ್ಟಿ, ಕಾಂಗ್ರೇಸ್ ಪಕ್ಷದ ಬ್ಯಾನರನ್ನು ಅಟೊಕ್ಕೆ ಸುತ್ತುವರೆದು ಕಟ್ಟಿ ಬೆಳ್ಳಿಗ್ಗೆ 11:00 ಗಂಟಗೆ ಯಿಂದ ಆಡಿಯೋ ಮುಖಾಂತರ ಕಾಂಗ್ರೇಸ್ ಪಕ್ಷದ ಅಭ್ಯರ್ಥಿಗೆ ಮತ ಹಾಕಬೇಕು ಅಂತ ಪ್ರಚಾರ ಮಾಡುತ್ತಾ ಸುಪರ ಮಾರ್ಕೇಟ, ಖರ್ಗೇ ಪೆಟ್ರೋಲ ಪಂಪ, ಮಹೀಬೂಬ ನಗರ, ಹುಮನಾಬಾದ ರಿಂಗ್ ರೋಡ, ಮುಸ್ಲಿಂ ಸಂಘ, ಆಳಂದ ಚೆಕ್ಕ ಪೊಸ್ಟ ಮಾರ್ಗವಾಗಿ ಮಧ್ಯಾನ 3:00 ಗಂಟೆಯ ಸುಮಾರಿಗೆ ದೇವಿ ನಗರ ಕಮಾನ ಹತ್ತಿರ ಬಂದಾಗ ಅಲ್ಲಿ ಸಂಚಾರಿ ದಟ್ಟಣೆಯಾಗಿದ್ದು ಸಂಚಾರಿ ದಟ್ಟಣೆಯಿಂದ, ಸಂಚಾರಿ ದಟ್ಟಣೆ ಇದ್ದ ಪ್ರಯುಕ್ತ ದೇವಿ ನಗರ ಕಮಾನದಿಂದ ಖಾದ್ರಿ ಚೌಕ ಕಡೆಗೆ ಹೋಗುವ ಕುರಿತು ಜಬ್ಬಾರ ಪೇಟ್ರೋಲ ಪಂಪ ಹತ್ತಿರ ರಸ್ತೆಯ ಮೇಲೆ ಮಧ್ಯಾನ 3:15 ಗಂಟೆಯ ಸುಮಾರಿಗೆ ನನ್ನ ಅಟೊ ತೆಗೆದುಕೊಂಡು ಆಡಿಯೋ ಮುಖಾಂತರ ಕಾಂಗ್ರೇಸ್ ಪಕ್ಷದ ಅಭ್ಯರ್ಥಿಗೆ ಮತ ಹಾಕಬೇಕು ಅಂತ ಪ್ರಚಾರ ಮಾಡುತ್ತಾ ಮುಂದೆ ಹೊಗುತ್ತಿದ್ದಾಗ ಜಬ್ಬಾರ ಪೇಟ್ರೊಲ ಪಂಪ ಎದರುಗಡೆ ರಸ್ತೆಯ ಮೇಲೆ ಸುಮಾರು 15-20 ಜನರು ಮೊದಿ, ಮೊದಿ ಅಂತ ಕೂಗುತ್ತಾ ನನ್ನ ಅಟೊದ ಹತ್ತಿರ ಬಂದು ಕಾಂಗ್ರೇಸ ಪಕ್ಷದ ಪ್ರಚಾರ ಬಂದು ಮಾಡು ಅಂತ ಹೇಳಿ ನನ್ನ ಅಟೊದ ಗ್ಲಾಸ ಒಡೆದು, ಅದರಲ್ಲಿ ಕೆಲವರು ನನಗೆ ಅಟೊದಿಂದ ಹೊರಗೆ ಎಳೆದುಕೊಂಡು ತಮ್ಮ ಕೈಗಳಿಂದ ನನ್ನ ಮುಖದ ಮೇಲೆ ಮೈ ಮೇಲೆ ಹೊಡೆದು ಗುಪ್ತಗಾಯ ಪಡಿಸಿದ್ದು, ನಂತರ ಸದರಿಯವರು ನನ್ನ ಅಟೊಕ್ಕೆ ಕಟ್ಟಿದ ಕಾಂಗ್ರೇಸ್ ಪಕ್ಷದ ಬ್ಯಾನರ ಹರಿದು ಹಾಕಿದ್ದು, ಅಟೊಕ್ಕೆ ಕಟ್ಟಿದ ಕಾಂಗ್ರೇಸ್ ಪಕ್ಷದ ದ್ವಜಾ ಕಿತ್ತು ಹಾಕಿದ್ದು, ಮತ್ತು ಪ್ರಚಾರ ಕುರಿತು ಅಟೊಕ್ಕೆ ಕಟ್ಟಿದ ಬುಂಗಾ (ಸ್ಪೀಕರ) ಕಿತ್ತು ಹಾಕಿ ಬುಂಗಾ ನೇಲಕ್ಕೆ ಹೊಡೆದು ಅದರ ಯುನಿಟ ಮುರಿದು ಅಟೊದ ಗ್ಲಾಸ, ಸ್ಪೀಕರ ಬುಂಗಾ ಒಡೆದು ಅಂದಾಜ 9,000/-ರೂ ನನಗೆ ಹಾನಿ ಮಾಡಿದ್ದು ಇರುತ್ತದೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ರಾಘವೇಂದ್ರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ರಾಘವೇಂದ್ರ ನಗರ ಠಾಣೆ : ಶ್ರೀ ಮಹ್ಮದ ಮೌಲಾ ತಂದೆ ಗುಡುಸಾಬ ಮುತಾವಲ್ಲಿ ಸಾ: ಮೌಲಾಲಿ ದರ್ಗಾ ಶೇಟ್ಟಿ ಕಾಂಪ್ಲೇಕ್ಸ್ ಹತ್ತಿರ ಆಳಂದ ರೋಡ ಕಲಬುರಗಿ ರವರು ದಿನಾಂಕ: 13/04/2019 ರಂದು 4-00 ಪಿ.ಎಂ ಸುಮಾರಿಗೆ ನಾನು ಶೇಟ್ಟೆ ಕಾಂಪ್ಲೇಕ್ಸ್ ಹತ್ತಿರ ನಿಂತಿರುವಾಗ ನನ್ನ ಗೆಳೆಯನಾದ ಸೈಯದ ತಂದೆ ಮಹ್ಮದ ಸಲೀಂ ಮಗರಿಬಸಾಬ ಇತನು ತನ್ನ ಮೋಟಾರ ಸೈಕಲ ನಂ. ಕೆಎ-39 ಕ್ಯೂ-7309 ನೇದ್ದನ್ನು ತೆಗೆದುಕೊಂಡು ನನ್ನ ಹತ್ತಿರ ಬಂದನು. ಆಗ ನಾನು ಸೈಯದ ಇತನಿಗೆ ನನ್ನ ಗೆಳೆಯನಾದ ವೇಂಕಟ ಇತನು ಗದಲೇಗಾಂವ ಕಲ್ಯಾಣ ಮಂಟಪದ ಹತ್ತಿರ ಇರುತ್ತಾನೆ. ಅವನ ಹತ್ತಿರ ಹೋಗಿ ಬರೋಣ ಅಂತಾ ಹೇಳಿದೆನು. ಆಗ ಸೈಯದ ಮೋಟಾರ ಸೈಕಲ ಚಾಲು ಮಾಡಿದಾಗ ಅವನ ಹಿಂದೆ ನಾನು ಕುಳಿಕೊಂಡು ಗದಲೇಗಾಂವ ಕಲ್ಯಾಣ ಮಂಟಪ ಹತ್ತಿರ ಹೋದೆವು. ಅಲ್ಲಿ ಹೋಗಿ ನೊಡಲು ವೇಂಕಟ ಇತನು ಇರಲಿಲ್ಲ. ಕಲ್ಯಾಣ ಮಂಟಪದ ಹಿಂದಿನ ಗೇಟ ಹತ್ತಿರ 4-15 ಪಿ.ಎಂ ಸುಮಾರಿಗೆ ಹೋಗಿ ನೊಡಲು ಸುಮಾರು 15-20 ಜನರು ಅಲ್ಲಿ ಕುಳಿತುಕೊಂಡಿದ್ದರು. ಆಗ ನಾವು ಅವರಲ್ಲಿ ವೇಕಂಟ ಇತನು  ಕುಳಿತುಕೊಂಡಿರಬಹುದು ಅಂತಾ ಅವರ ಹತ್ತಿರ ಹೋಗಿ ನೊಡಲು ಅಲ್ಲಿ ವೇಂಕಟ ಇರಲಿಲ್ಲ. ಆಗ ಆ ಗುಂಪಿನಲ್ಲಿದ್ದ ಒಬ್ಬನು  ಏ ಬೊಸಡಿ ಮಕ್ಕಳಾ ನಮಗೇನು ದುರುಗುಟ್ಟಿ ನೋಡುತ್ತಿದ್ದಿರಿ  ಅಂತಾ ಅಂದನು. ಆಗ ನಾನು ಯಾಕೆ ಬೈಯುದ್ದಿರಿ ನಮ್ಮ ಸ್ನೇಹಿತ ವೇಂಕಟ ಇತನು ಇದ್ದಾನೆನೋ ಅಂತಾ ನೋಡುತ್ತಿದ್ದೇವೆ ಅಂತಾ ಅಂದಾಗ ಆತನು ನಮಗೆ ಎದುರು ಮಾತನಾಡುತ್ತಿಯಾ ಬೋಸಡಿಕೆ ಅಂತಾ ಅಂದವನೇ ತನ್ನ ಕೈಯಲ್ಲಿದ್ದ ಬಿಯರ್ ಬಾಟಲಿ ತೆಗೆದುಕೊಂಡು ನನ್ನ ತಲೆಯ ಹಿಂಬಾಗಕ್ಕೆ ಹೊಡೆದು ಭಾರಿ ರಕ್ತಗಾಯಗೊಳಿಸಿದನು. ಅವರಲ್ಲಿದ್ದ ಇನ್ನೊಬ್ಬನು ಜಾಸ್ತಿ ಎದುರು ಮಾತಾಡುತ್ತಿಯಾ ಅಂತಾ ಅಂದು ಕಲ್ಲಿನಿಂದ ನನ್ನ ಬಲಗಾಲ ಮೊಳಕಾಲ ಮೇಲೆ ಹೊಡೆದು ರಕ್ತಗಾಯ ಗೊಳಿಸಿದನು. ಉಳಿದವರೆಲ್ಲ ಬೈಯುತ್ತಾ ಕೈಯಿಂದ ನನ್ನ ಮೈಕೈಗೆ ಹೊಡೆದು ಗುಪ್ತಗಾಯ ಪಡಿಸಿದರು. ನನಗೆ ಹೊಡೆಯುದನ್ನು ಬಿಡಿಸಿಕೊಳ್ಳಲು ಬಂದ ನನ್ನ ಗೆಳೆಯನಾದ ಸೈಯದ ತಂದೆ ಮಹ್ಮದ ಸಲೀಂ ಇತನಿಗೂ ಸಹ ಅವರೆಲ್ಲರೂ ಕೂಡಿ ಕೈಯಿಂದ ಹೊಡೆಬಡೆ ಮಾಡಿದರು. ಆಗ ನಾವು ಚಿರಾಡ ಹತ್ತಿದ್ದಾಗ ನಮಗೆ ಹೊಡೆಯುವುದನ್ನು ಬಿಟ್ಟು ಹೋಗಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ರಾಘವೇಂದ್ರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕುಂಚಾವರಂ ಠಾಣೆ : ದಿನಾಂಕ 13-04-2019 ರಂದು 12.30 ಪಿ.ಎಮ್ ಗಂಟೆಗೆ ಶ್ರೀಮತಿ ಶೋಭಾರಾಣಿ ಗಂಡ ಶೇಖರ ಮಂಗಲಿ ಸಾ : ಕುಂಚಾಚರಂ ರವರು  ನೀರನ್ನು ತುಂಬಿಕೊಂಡು ಮನೆಗೆ ಬರುತ್ತಿರುವಾಗ  ರಾಮಲು ತಂದೆ ಪಪಾಯ ಸಂಗಡ ಇನ್ಒಬ್ಬ ಸಾ : ಕೊಂಚಾವರಂ ಕುಡಿಕೊಂಡು ಫಿರ್ಯಾದಿಗೆ  ತಡೆದು ನಿಲ್ಲಿಸಿ ಅವಾಚ್ಯವಾಗಿ ರಂಡಿ ಬೋಸಡಿ ಅಂತಾ ಬೈದು ಕೈಯಿಂದ ಮತ್ತು ಕಾಲಿನ ಚಪ್ಪಲಿಯಿಂದ ಕಪಾಳಕ್ಕೆ ಹೊಡೆದನು ಮತ್ತು ಸದರಿಯವಳ ಹೊಟ್ಟೆಗೆ ಹೊಡೆದು ಜೀವದ ಬೆದರಿಕೆ ಹಾಕಿ ಹೋಗಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಕೊಂಚಾವರಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.