POLICE BHAVAN KALABURAGI

POLICE BHAVAN KALABURAGI

26 November 2014

Kalaburagi District Reported Crimes

ದ್ವೀಚಕ್ರ ವಾಹನ ಕಳವು ಪ್ರಕರಣ :
ಅಶೋಕ ನಗರ ಠಾಣೆ : ಶ್ರೀ ಸೋಮಶೇಖರ ತಂದೆ ವಿರುಪಾಕ್ಷಪ್ಪ ಪಡಶೇಟ್ಟಿ ಸಾ: ಮಾನಕರ ಲೇಔಟ ಕರುಣೇಶ್ವರ ನಗರ ಕಲಬುರಗಿ ರವರು ದಿನಾಂಕ  09/11/2014 ರಂದು ನಾನು ನನ್ನ ಕೆಲಸ ಮುಗಿಸಿಕೊಂಡು ಮೋಟಾರ ಸೈಕಲ್ ತೆಗೆದುಕೊಂಡು ಮನೆಗೆ ಬಂದು ರಾತ್ರಿ ಮನೆಯ ಮುಂದೆ ನಿಲ್ಲಿಸಿ ಕೀಲಿ ಹಾಕಿಕೊಂಡು ಮನೆ ಒಳಗೆ ಹೋಗಿದ್ದು ಮರುದಿವಸ ಮುಂಜಾನೆ 10/11/2014 ರಂದು ಎದ್ದು ನೋಡಲು ನನ್ನ ಮೋಟಾರ ಸೈಕಲ್ ಇಟ್ಟ ಸ್ಥಳದಲ್ಲಿ ಇರಲಿಲ್ಲಾ. ಈ ಬಗ್ಗೆ ನಾನು ಬಡಾವಣೆ ಮತ್ತು ಇತರೆ ಸ್ಥಳ ಎಲ್ಲಾ ಕಡೆ ಹುಡುಕಾಡಿದ್ದು ನನ್ನ ಮೋಟಾರ ಸೈಕಲ್ ಪತ್ತೆಯಾಗಿರುವುದಿಲ್ಲಾ ನನ್ನ ಮೋಟಾರ ಸೈಕಲ್ ನಂ. ಕೆ.ಎ-32 ಕ್ಯೂ- 3330  ಇಂಜನ್ ನಂ. 04C08M16637 ಚೆಸ್ಸಿ ನಂ. 04CO9C16457 ರ ಮಾಡಲ್ ನಂ. 2004 ,ಸೀಲ್ವರ  ಬಣ್ಣದ್ದು  ಅ.ಕಿ. 25,000/- ರೂ ಬೇಲೆ ಬಾಳುವುದು ಯಾರೋ ಕಳ್ಳರು ಮನೆಯ ಮುಂದೆ ಇಟ್ಟಿದ್ದು ಕಳುವು ಮಾಡಿಕೊಂಡು ಹೋಗಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಸದ ಮೇಲಿಂದ ಅಶೋಕ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇಸ್ಪೀಟ ಜೂಜಾಟದಲ್ಲಿ ನಿರತ ವ್ಯಕ್ತಿಗಳ ಬಂಧನ :
ಅಫಜಲಪೂರ ಠಾಣೆ : ದಿನಾಂಕ  25-11-2014 ರಂದು ಅಫಜಲಪೂರ ಪಟ್ಟಣದ ವೆಂಕಟರಮಣ ಗುಡಿಯ ಮುಂದೆ ಸಾರ್ವಜನೀಕ ಸ್ಥಳದಲ್ಲಿ ಕೆಲವು ಜನರು ಪಣಕ್ಕೆ ಹಣ ಹಚ್ಚಿ ಇಸ್ಪೆಟ ಎಲೆಗಳ ಸಹಾಯದಿಂದ ಅಂದರ ಬಾಹರ ಎಂಬ ಇಸ್ಪೇಟ ಜೂಜಾಟ ಆಡುತ್ತಿದ್ದಾರೆ ಅಂತಾ ಬಾತ್ಮಿ ಬಂದ ಮೇರೆಗೆ ಪಿ.ಎಸ್. ಅಫಜಲಪೂರ ಪೊಲೀಸ್ ಠಾಣೆ ಹಾಗು ಸಿಬ್ಬಂದಿಯವರಾದ ರಮೇಶ ಪಿಸಿ-596, ಆನಂದ ಪಿಸಿ 1258, ಚಂದ್ರಶಾ ಪಿಸಿ-903, ಚಿದಾನಂದ ಪಿಸಿ-1225 ರವರನ್ನು ಮತ್ತು ಪಂಚರೊಂದಿಗೆ ಸ್ಥಳಕ್ಕೆ ಹೋಗಿ ದಾಳಿ ಮಾಡಿ ಜೂಜಾಡುತ್ತಿದ್ದ 03 ಜನರನ್ನು ಹಿಡಿದು ಹೆಸರು ವಿಳಾಸ ವಿಚಾರಿಸಿ  ಅಂಗ ಶೋಧನೆ ಮಾಡಲಾಗಿ 1. ಕಿರಣ ತಂದೆ ಭೀಮಶಾ ಜಮಾದಾರ ಸಾ|| ಅಂಬಿಗರ ಚೌಡಯ್ಯ ನಗರ ಅಫಜಲಪೂರ 2. ಜಂಗಪ್ಪ ತಂದೆ ಸಿದ್ದಪ್ಪ ಗೊಲ್ಲರ ಸಾ|| ಅಫಜಲಪೂರ 3. ಬಸವರಾಜ ತಂದೆ ಈರಣ್ಣ ಅಳ್ಳಗಿ ಸಾ|| ರೇವಣಸಿದ್ದೇಶ್ವರ ಕಾಲೋನಿ ಅಫಜಲಪೂರ ಅಂತಾ ತಿಳಿಸಿದ್ದು ಸದರಿಯವರ ವಶದಿಂದ ನಗದು ಹಣ 740/- ರೂ ಮತ್ತು 52 ಇಸ್ಪೆಟ ಎಲೆಗಳನ್ನು ಜಪ್ತಿಮಾಡಿಕೊಂಡು ಮರಳಿ ಅಫಜಲಪೂರ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.