POLICE BHAVAN KALABURAGI

POLICE BHAVAN KALABURAGI

01 July 2016

Kalaburagi District Reported Crimes

ದರೋಡೆಗೆ ಹೊಂಚು ಹಾಕಿದವರ ಬಂಧನ:
ಗ್ರಾಮೀಣ ಪೊಲೀಸ್ ಠಾಣೆ : ದಿನಾಂಕ: 30/06/2016 ರಂದು ಕಲಬುರಗಿಯಿಂದ-ಜಂಬಗಾ (ಬಿ) ಕ್ರಾಸ ಕಡೆಗೆ ಹೋಗುವ ತಾಜ ಸುಲ್ತಾನಪುರ ಸಿಮಾಂತರದ ಗಡ್ಡೆಪ್ಪ ಮುತ್ಯಾನ ಗುಡಿಯ ಮರೆಯಲ್ಲಿ ಕೆಲವು ಜನರು ತಮ್ಮ ಮುಖಕ್ಕೆ ಬಟ್ಟೆ ಕಟ್ಟಿಕೊಂಡು ನಿಂತು ಸದರ ರೋಡಿಗೆ ಹೋಗಿ ಬರುವ ವಾಹನ ಸವಾರರಿಗೆ ಹಾಗೂ ಸಾರ್ವಜನಿಕರಿಗೆ ತಡೆದು ನಿಲ್ಲಿಸಿ ಅವರಿಗೆ ಮಾರಕಾಸ್ರ್ತಗಳನ್ನು ತೋರಿಸಿ ಬೆದರಿಕೆ ಹಾಕಿ  ದರೋಡೆ ಮಾಡಲು  ಹೊಂಚು ಹಾಕುತ್ತಿರುವ ಬಗ್ಗೆ ಬಾತ್ಮಿ ಬಂದ ಮೇರೆಗೆ  ಶ್ರೀ ಉದಂಡಪ್ಪ ಪಿ.ಎಸ್.ಐ. ಗ್ರಾಮೀಣ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಸ್ಥಳಕ್ಕೆ ಹೋಗಿ ನೋಡಲಾಗಿ 05 ಜನರು ಮುಖಕ್ಕೆ ದೊಡ್ಡ ದಸ್ತಿಗಳನ್ನು ಕಟ್ಟಿಕೊಂಡು ತಮ್ಮ ತಮ್ಮ ಕೈಯಲ್ಲಿ ಚಾಕು, ಬಡಿಗೆ, ಹಗ್ಗ್ಗ ಖಾರದ ಪುಡಿ ಹಿಡಿದುಕೊಂಡು ನಿಂತಿದ್ದನ್ನು ಖಚಿತ ಪಡಿಸಿಕೊಂಡು ದಾಳಿ ಮಾಡಿ ಅವರಲ್ಲಿ 3 ಜನರನ್ನು ಹಿಡಿದುಕೊಂಡಿದ್ದು 2 ಜನ ಓಡಿ ಹೋಗಿದ್ದು ಹಿಡಿದುಕೊಂಡವರ ಹೆಸರು ವಿಚಾರಿಸಲು 1)ನಾಗರಾಜ @ ಬೆಂಗಳೂರೆ ತಂದೆ ಚನ್ನಮಲ್ಲಪ್ಪ ಬೆಡಪಳ್ಳಿ ರಾಮನಗರ  ಕಲಬುರಗಿ. 2)ರಾಜು ತಂದೆ ಮಲ್ಕಣ್ಣಾ ನಾಟೀಕಾರ. 3) ವೀರತಾ ತಂ ವಿಠಲ ಪ್ರಸಾದ ಪೂಜಾರಿ ಸಾ: ಆಂಜನೇಯ ನಗರ ಕಲಬುರಗಿ. ಎಂದು ತಿಳಿಸಿದ್ದು ಓಡಿ ಹೋದವರ ಹೆಸರು ವಿಚಾರಿಸಲಾಗಿ ಅವರ ಹೆಸರು 4) ಗುರುರಾಜ ತಂ. ದೇವಿಂದ್ರಪ್ಪ ಧಮ್ಮಿ ಸಾ: ಧಮ್ಮೂರ. 5) ಚನ್ನಬಸಪ್ಪ @ ಚನ್ನು ಡಾನ್ ತಂ. ಕೆಂಚಪ್ಪ ನಾಯಕೋಡಿ ಸಾ: ಬಸವನಗರ ಕಲಬುರಗಿ ಅಂತಾ ತಿಳಿಸಿದ್ದು.  ಸದರಿಯವರ ಹತ್ತಿರ ಇದ್ದ ಮುಖಕ್ಕೆ ಕಟ್ಟಿಕೊಂಡಿದ್ದ ಕಪ್ಪು ಬಟ್ಟೆಗಳು, ಖಾರದ ಪುಡಿ, ಬಡಿಗೆ, ಒಂದು ಚಾಕು, ಹಗ್ಗ , ಇವುಗಳನ್ನು ಪಂಚರ ಸಮಕ್ಷಮ ಜಪ್ತಿಮಾಡಿಕೊಂಡು ಸದರಿಯವರ ವಿರುದ್ದ ಗುಲಬರ್ಗಾ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ.
ಕಳವು ಪ್ರಕರಣ
ಸ್ಟೇಷನ್ ಬಜಾರ ಪೊಲೀಸ್ ಠಾಣೆ: ದಿನಾಂಕ; 30/06/2016 ರಂದು ಶ್ರೀ ಶಶಿಕಾಂತ ತಂದೆ ವಿಶ್ವನಾಥ ಪಂಚಾಳ ಸಾ||ಎಸ್.ಬಿ.ಎಂ ಬ್ಯಾಂಕ್ ಎದುರುಗಡೆ ಹಳೇ ಜೇವರ್ಗಿ ರಸ್ತೆ ಕಲಬುರಗಿರವರು ಠಾಣೆಗೆ ಹಾಜರಾಗಿ ಪಡಿಸಿದ್ದು  ದಿ:29/06/16 ರಂದು ರಾತ್ರಿ ತನ್ನ ನನ್ನ ಹೊಂಡಾ ಆಕ್ಟಿವಾ 3ಜಿ ಸ್ಕೂಟಿ ನಂ. KA-32-EJ-9085 ಚೆಸ್ಸಿನಂ.ME4JF504EFT341189 , ಇ.ನಂ. JF50ET2342174 ಅ,ಕಿ|| 35,000/- ರೂ ನೇದ್ದು ಮನೆಯ ಮುಂದೆ ನಿಲುಗಡೆ ಮಾಡಿದ್ದು. ದಿನಾಂಕ; 30/06/2016 ರಂದು ಬೆಳಿಗ್ಗೆ ಎದ್ದು ನೋಡಲಾಗಿ ಸದರಿ ನನ್ನ ಹೊಂಡಾ ಆಕ್ಟಿವಾ 3ಜಿ ಸ್ಕೂಟಿ ಇರಲಿಲ್ಲ ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿದ್ದು .ಸದರಿ ಸ್ಕೂಟಿಯಲ್ಲಿನ ಡಿಕ್ಕಿಯಲ್ಲಿ ನನ್ನ ಹೆಂಡತಿ ಶ್ರೀಮತಿ ಪಲ್ಲವಿ ಇವರ ಎಸ್.ಎಸ್.ಎಲ್.ಸಿ  ಟಿ.ಸಿ ಮತ್ತು ಮಾರ್ಕ್ಸ ಕಾರ್ಡದ ಮೂಲ ಪ್ರತಿಗಳು ಇದ್ದವು ಕಾರಣ ಸ್ಕೂಟಿ ಮತ್ತು ದಾಖಲಾತಿಗಳು ಪತ್ತೆ ಮಾಡಿ ಕಳ್ಳತನ ಮಾಡಿದವರ ಮೇಲೆ ಕಾನೂನು ಕ್ರಮ ಕೈಗೊಳ್ಳುವಂತೆ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಸ್ಟೇಷನ್ ಬಜಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ.
ಕಳವು ಪ್ರಕರಣ
ಸ್ಟೇಷನ್ ಬಜಾರ ಪೊಲೀಸ್ ಠಾಣೆ: ದಿನಾಂಕ 30/06/2016 ರಂದು ಶ್ರೀ ಮಹ್ಮದ ನಿಜಾಮ್ ಸಾ: ಮಿಲ್ಲತ ನಗರ ಕಲಬುರಗಿ ರವರು ಠಾಣೆಗೆ ಹಾಜರಾಗಿ ದಿನಾಂಕ. 03/02/2016 ರಂದು 11.00 ಎ.ಎಂ. ಸುಮಾರಿಗೆ ನಾನು ನನ್ನ ಸ್ಪೇಂಡರ ಪ್ಲಸ್ ಮೊಟಾರ ಸೈಕಲ ನಂ. KA-35 S-0329 ಚೆಸ್ಸಿನಂ. MBLHA10EE8HM24280, ಇ.ನಂ. HA10EA8HM43773, ,ಕಿ|| 25,000/-ರೂ  ನೇದ್ದು ಕೋರ್ಟ ಆವರಣದಲ್ಲಿ ನಿಲ್ಲುಗಡೆ ಮಾಡಿ ನನ್ನ ಮನೆಯ ಕಾಗದ ಪತ್ರದ ನೋಟರಿ ಕೆಲಸಕ್ಕೆ ಒಳಗಡೆ ಹೋಗಿ 11-45 ಎ.ಎಂ.ಕ್ಕೆ ಮರಳಿ ಬಂದು ನೋಡಲಾಗಿ ಮೊಟಾರ ಸೈಕಲ ಇರಲಿಲ್ಲ ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿದ್ದು ಇಲ್ಲಿಯವರೆಗೂ ಹುಡುಕಾಡಿದರು ಸಿಕ್ಕಿರುವುದಿಲ್ಲ ಮೊಟಾರ ಸೈಕಲ ಪತ್ತೆ ಮಾಡಿ ಕಳ್ಳತನ ಮಾಡಿದವರ ಮೇಲೆ ಕಾನೂನು ಕ್ರಮ ಕೈಗೊಳ್ಳುವಂತೆ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಸ್ಟೇಷನ್ ಬಜಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ
ಅಪಘಾತ ಪ್ರಕರಣ:
ಎಮ್.ಬಿ ನಗರ ಪೊಲೀಸ್ ಠಾಣೆ: ದಿನಾಂಕ 30/06/2016 ರಂದು 9.00 ಎ.ಎಮಕ್ಕೆ ಗ್ರೀನ ಹಿಲ್ಸ ಕಾಲೋನಿಯ ನೇಹರು ಸಿಂಗ್ ಇವರ ಮನೆಯ ಹತ್ತಿರದ ರೋಡಿನ ಮೇಲೆ ಕ್ರೂಜರ ನಂ ಕೆಎ-32 ಬಿ-8248 ನೇದ್ದರ ಚಾಲಕನಾದ ಪ್ರಕಾಶ ಪೂಜಾರಿ ಈತನು ತನ್ನ ಕ್ರೂಜರನ್ನು ಅತೀವ ನಿಷ್ಕಾಜಿತನದಿಂದ ಒಮ್ಮೇಲೆ ರಿವರ್ಸ ತೆಗೆದುಕೊಂಡು ರೋಡಿನ ತನ್ನ ಮಗಳಾದ ಆರತಿಗೆ ಅಪಘಾತ ಪಡಿಸಿದ ಪರಿಣಾಮ ಆಕೆಯ ಬಲಗಡೆ ಮೇಲಕಿಗೆ ಭಾರಿ ರಕ್ತಗಾಯವಾಗಿ ಕಿವಿಯಿಂದ ಮತ್ತು ಮೂಗಿನಿಂದ ರಕ್ತ ಬಂದಿದ್ದು, ಉಪಚಾರ ಕುರಿತು ಬಸವೇಶ್ವರ ಆಸ್ಪತ್ರೆಗೆ ತೆಗೆದುಕೊಂಡು ಹೋದಾಗ ಅಲ್ಲಿನ ವೈದ್ಯರು ಪರೀಕ್ಷಿಸಿ ಮೃತಪಟ್ಟಿರುತ್ತಾಳೆ ಅಂತಾ ತಿಳಿಸಿರುತ್ತಾರೆ.  ಕಾರಣ ಸದರಿ ಕ್ರೂಜರ ನಂ ಕೆಎ-8248 ನೇದ್ದರ ಚಾಲಕನಾದ ಪ್ರಕಾಶ ಈತನ ವಿರುದ್ದ ಸೂಕ್ತ ಕಾನೂನು ರೀತಿ ಕ್ರಮ ಜರೂಗಿಸುವಂತೆ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ  ಎಮ್.ಬಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ.
ರೈತ ಆತ್ಮ ಹತ್ಯೆ ಪ್ರಕರಣ:
ಆಳಂದ ಪೊಲೀಸ್ ಠಾಣೆ:ದಿನಾಂಕ:29/06/2016 ರಂದು ಶ್ರೀಮತಿ.ಮಹಾನಂದ ಗಂಡ ಸುರೇಶ ಜಮಾದಾರ ಮು: ರುದ್ರವಾಡಿ ತಾ: ಆಳಂದ ಇವರು ಠಾಣೆಗೆ ಹಾಜರಾಗಿ  ತಾನು ತನ್ನ ಗಂಡ ಮತ್ತು ಮಕ್ಕಳೊಂದಿಗೆ ರುದ್ರವಾಡಿ ಗ್ರಾಮದಲ್ಲಿ ವಾಸವಾಗಿದ್ದು ನನ್ನ ಗಂಡನ ಹೆಸರಿನಲ್ಲಿ ರುದ್ರವಾಡಿ ಸೀಮಾಂತರದ ಸರ್ವೆ ನಂ:88 ರಲ್ಲಿ ಒಂದು ವರೆ ಎಕರೆ ಜಮೀನು ಇದ್ದು ಅಲ್ಲದೇ ಬೇರೆಯವರ ಹೊಲ ಕಡಿದು ಹಾಕಿಕೊಂಡು ಸಾಗುವಳಿ ಮಾಡುತ್ತಾ ಬಂದಿರುತ್ತೇವೆ. ಕಳೆದ ವರ್ಷ ಮಳೆ ಬರದೇ ಬರಗಾಲ ಬಿದ್ದಿರುವುದರಿಂದ ಹೊಲಕ್ಕೆ ಸಾಲ ಮಾಡಿ ಹಾಕಿದ ಗೊಬ್ಬರ , ಬೀಜ ಹಾಗು ಹೊಲ ಕಡಿದು ಹಾಕಿಕೊಂಡು ಮಾಲಕರಿಗೆ ದುಡ್ಡು ಕೊಟ್ಟು ನನ್ನ ಗಂಡನಿಗೆ 4-5 ಲಕ್ಷ ರೂಪಾಯಿ ಸಾಲವಾಗಿದ್ದು ಬ್ಯಾಂಕಗಳಿಂದ ಪಡೆದ ಸಾಲವನ್ನು ತಿರಿಸುವುದು ಹೇಗೆ ಅಂತಾ ಚಿಂತಿಸುತ್ತಾ ಮನೆಯಲ್ಲಿ ಒಬ್ಬನೆ ಒಬ್ಬಂಟಿಗನಾಗಿ ಇರುತ್ತಿದ್ದ. ಹೀಗಿದ್ದು ದಿನಾಂಕ:29/06/2016 ರಂದು ಬೇಳಿಗ್ಗೆ ಎಂದಿನಂತೆ ಹೊಲಕ್ಕೆ ಹೋಗಿ ಹೊಲದಲ್ಲಿ ಕೆಲಸ ಮಾಡುವಾಗ ನನ್ನ ಗಂಡನಿಗೆ ಮಾತನಾಡಿಸಿದರು ಕೂಡಾ ಸರಿಯಾಗಿ ಮಾತನಾಡದೇ ಮನಸ್ಸಿನಲ್ಲಿ ಏನೋ ಚಿಂತೆ ಮಾಡುತ್ತಾ ಇದ್ದಾಗ ನಾನು ಯಾಕೇ ಹೀಗೆ ಇದ್ದಿರಿ ಅಂತಾ ಕೇಳಿದಕ್ಕೆ ಮಾಡಿದ ಸಾಲ ಹೇಗೆ ತೀರಿಸಬೇಕು ಹೋದ ವರ್ಷ ಯಾವುದೇ ಬೆಳೆ ಬಂದಿಲ್ಲಾ ಸಾಲ ಕೊಡುವದು ಜಾಸ್ತಿಯಾಗಿದೆ ಕೊಟ್ಟವರು ಕೇಳುತ್ತಿದ್ದಾರೆ ಏನು ಮಾಡಬೇಕು ತಿಳಿಯುತ್ತಿಲ್ಲಾ ಅಂತಾ ಮನಸ್ಸಿನಲ್ಲಿ ಕೊರಗುತ್ತಿದ್ದರು. ಸಾಯಂಕಾಲ ನಾನು ಹೊಲದಲ್ಲಿದ್ದಾಗ ನನ್ನ ಗಂಡನು ನನ್ನೊಂದಿಗೆ ಮಾತನಾಡದೆ ನೇರವಾಗಿ ನಡೆದುಕೊಂಡು ಹೊಲದ ಬಂದಾರಿ ಕಡೆಗೆ ಹೋದವನೇ ಬಂದಾರಿ ಮೇಲೆ ಇರುವ ಕರೆಂಟ್ ವಾಯರಿಗೆ ಹಿಡಿದನು. ಒಮ್ಮಲೇ ಕರೆಂಟ ವಾಯರ್ ಬೆಂಕಿ ಕಾರಿ ನನ್ನ ಗಂಡನು ನೆಲಕ್ಕೆ ಬಿದ್ದನು. ನಾನು ಗಾಬರಿಯಿಂದ ಹತ್ತಿರ ಹೋಗಿ ನೋಡಲು ನನ್ನ ಗಂಡನು ಕೈಯಲ್ಲಿ ಕರೆಂಟ್ ವಾಯರ್ ಹಿಡಿದು ಸತ್ತು ಬಿದ್ದಿದನು. ಅವನಿಗೆ ನೋಡಲಾಗಿ ಬಲಗೈ ಹೆಬ್ಬರಳಿಗೆ ಅಂಗೈಗೆ ಬಲ ಕಪ್ಪಾಳಕ್ಕೆ ಎಡಗೈ ಮಧ್ಯದ ಬೆರಳಿಗೆ ಕರೆಂಟ್ ಹತ್ತಿ ಸುಟ್ಟಗಾಯವಾಗಿ ಮೃತಪಟ್ಟಿದ್ದು ಇರುತ್ತದೆ. ನನ್ನ ಗಂಡನು ಕೈಗಡವಾಗಿ ಪಡೆದ ಸಾಲ & ಬ್ಯಾಂಕದಿಂದ ಪಡೆದ ಸಾಲ ಹೇಗೆ ತಿರಿಸುವದು ಅಂತಾ ಚಿಂತಿಸಿ ಮನನೊಂದು ಮನಸ್ಸಿನ ಮೇಲೆ ಪರಿಣಾಮ ಮಾಡಿಕೊಂಡು ಕರೆಂಟ್ ಹಿಡಿದು  ಮರಣ ಹೊಂದಿದ್ದು. ಮುಂದಿನ ಕ್ರಮ ಜರುಗಿಸುವ ಕುರಿತು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಆಳಂದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ.