POLICE BHAVAN KALABURAGI

POLICE BHAVAN KALABURAGI

01 March 2014

Gulbarga District Reported Crimes

ಸುಲಿಗೆ ಪ್ರಕರಣ :
ಮುಧೋಳ ಠಾಣೆ : ಶ್ರೀಮತಿ ದೇವಮ್ಮ ಗಂಡ ರಾಮಚಂದ್ರರೆಡ್ಡಿ ಗದ್ವಾಲ ಸಾ : ವೇಮಲಾ ಮಂಡಲ : ಅಡ್ಡಾಕಲ ತಾ : ದೇವರಕದರಾ ಜಿ|| ಮಹೇಬೂಬನಗರ ಇವರು ದಿನಾಂಕ: 27-02-14 ರಂದು ಗುಲಬರ್ಗಾ ಜಿಲ್ಲೆಯ ಸೇಡಂ ತಾಲೂಕಿನಲ್ಲಿ ಬರುವ ಯಾನಾಗುಂದಿ ಬೆಟ್ಟದಲ್ಲಿ ಮಹಾಶಿವರಾತ್ರಿಯ ಹಬ್ಬದಂದು ಶ್ರೀ ಮಾತಾಮಾಣಿಕೇಶ್ವರಿ ದಿವ್ಯ ದರ್ಶನ ಇದ್ದ ಕಾರಣ ನಾನು ಹಾಗೂ ನಮ್ಮೂರಿನವರಾದ ಪೆದ್ದುಲ್ಲಾ ಕೌಶಲ್ಯ ಗಂಡ ಯುಗೇಂದ್ರರೆಡ್ಡಿ ಸಾ|| ವೇಮಲಾ ಹಾಗೂ ಕುಮಾರಆಂಜನೇಯಲು ತಂದೆ ರಾಮಣ್ಣ ಸಾ|| ವೇಮಲಾ ಇವರು ಕೂಡಿ ಒಂದು ಅಟೋದಲ್ಲಿ ಕುಳಿತು ನಮ್ಮೂರದಿಂದ ಬಂದು ದಿನಾಂಕ: 27-02-14  ರಂದು  ಮುಂಜಾನೆ 10:30 ಗಂಟೆಗೆ ಯಾನಾಗುಂದಿ ಬೆಟ್ಟಕ್ಕೆ ಬಂದೇವು. ಸದರಿ ದಿವಸದಂದು ಮತಾ ಮಾಣಿಕೇಶ್ವರಿ ರವರು ಬೆಟ್ಟದ ಹಿಂಬಾಗಕ್ಕೆ ದರ್ಶನ ನೀಡಿದ್ದರಿಂದ ನಾವು ಬೆಟ್ಟದ ಹಿಂದುಗಡೆ ಹೋಗಿ ದರ್ಶನವನ್ನು ಪಡೆದುಕೊಂಡು ಅಲ್ಲಿಂದ ಮರಳಿ ಆ ದಿವಸ ಮದ್ಯಾಹ್ನ 12:30 ಗಂಟೆ ಬೆಟ್ಟದಿಂದ ಇಳಿಯುತ್ತಿದ್ದೇವು. ಈ ಸಮಯದಲ್ಲಿ ಲಕ್ಷಾಂತರ ಜನರು ಸೇರಿದ್ದರು. ಆಗ ನಾನು ಬೆಟ್ಟವನ್ನು ಇಳಿಯುವ ಕಾಲಕ್ಕೆ ನಮ್ಮ ಹಿಂದಿನಿಂದ ಒಬ್ಬ ವ್ಯಕ್ತಿಯು ಬಂದು ತನ್ನ ಕೈಯನ್ನು ನನ್ನ ಕೊರಳಿಗೆ ಹಾಕಿ ನನ್ನ ಕೊರಳಲ್ಲಿದ್ದ ಎರಡು ಬಂಗಾರದ ತಾಳಿ ಪತ್ತಿ ಹಾಗೂ 5 ಬಂಗಾರದ ಗುಂಡುಗಳು ಇರುವ ಒಟ್ಟು 3 ತೊಲ5 ಗ್ರಾಂಮದ ಒಟ್ಟು ಅ ಕಿ 1,10,000/- ರೂ ಕಿಮ್ಮತ್ತಿನ ಬಂಗಾರದ ತಾಳಿ ಸರವನ್ನು ಕೊರಳಿನಿಂದ ದೋಚಿಕೊಂಡು ಸುಲೀಗೆ ಮಾಡಿಕೊಂಡು ಓಡಿಹೊಗಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮುಧೋಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ಹಲ್ಲೆ ಪ್ರಕರಣ
ಅಫಜಲಪೂರ ಠಾಣೆ : ಸಿದ್ರಾಮಯ್ಯ ಡಿ ಹೀರೆಮಠ ಸಾ : ಮಣೂರ ಗ್ರಾಮ ಇವರು ದಿನಾಂಕ 05.11.13 ರಂದು ಫಿರ್ಯಾದಿ ತನ್ನ ಹೊಲ ಸರ್ವೇ ನಂ 440 ನೇದ್ದರ ಹೊಲಕ್ಕೆ ಹೋದಾಗ ಮಗ್ಗಲಿನ ಹೊಲದವರಾದ ಮಹಾದೇವ ತಂದೆ ಆನಂದಪ್ಪ ಅಲ್ಲಾಪೂರ ಇವನು ಹೊಲದ ಬಾಂದರಿನ ವಿಷಯ ಮುಂದು ಇಟ್ಟುಕೊಂಡು  ಫಿರ್ಯಾದಿ ಹೊಲದಲ್ಲಿ ಅತಿಕ್ರಮ ಮಾಡಿ ಹೊಸದಾಗಿ ಕಲ್ಲು ಹಾಕಿ ಬೆಳೆಗೂ ಹಾನಿ ಮಾಡಿ ಫಿರ್ಯಾದಿಗೆ ಮಹಾದೇವ ಹಾಗೂ ಅವರ ಮಕ್ಕಳಾದ ಬಸವರಾಜ, ಶಿವಪುತ್ರ ಇವರು ಅವಾಚ್ಯ ಬೈದು ಜೀವ ಬೇದರಿಕೆ ಹಾಕಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪಘಾತ ಪ್ರಕರಣ :
ಸಂಚಾರಿ ಠಾಣೆ : ದಿನಾಂಕ 28-02-2014 ರಂದು 11-45 ಪಿ.ಎಮ್ ಕ್ಕೆ ಆರೋಪಿ ಪರಮೇಶ್ವರ ಇತನು ತನ್ನ ಕಾರ ನಂ. ಕೆ.ಎ  03 ಎಮ್. ಬಿ4909 ನೇದ್ದನ್ನು ಅತಿವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ಯಾದುಲ್ಲಾ ಕಾಲೂನಿಯಲ್ಲಿರು ಫಿರ್ಯಾದಿ ಮನೆಯ ಕಂಪೌಂಡ ಗೊಡೆಗೆ ಡಿಕ್ಕಿ ಹೊಡೆದು ಅಪಘಾತ ಪಡಿಸಿ ತನ್ನ ಕಾರ ಅಲ್ಲಿಯೆ ಬಿಟ್ಟು ಓಡಿ ಹೋಗಿದ್ದು ಅಪಘಾತದಿಂದ ಕಂಪೌಂಡ ಗೋಡೆ ಬಿದ್ದು ಹಾನಿ ಆಗಿರುತ್ತದೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

Gulbarga District Reported Crimes

ಕೊಲೆ ಪ್ರಕರಣ ;
ಚೌಕ ಠಾಣೆ : ದಿನಾಂಕ 28-02-2014 ರಂದು ನರೇಂದರ ಮೋದಿ ಭಾಷಣ ಕೇಳಲು ಶ್ರೀ  ಶೇಖರ ತಂದೆ ಪ್ರದೀಪ ನಾಯಕ ಸಾ :  ತಾಜಸುಲ್ತಾನಪೂರ ಗುಲಬರ್ಗಾ  ನನ್ನ ಸ್ನೇಹಿತರಾದ ಮೃತ ಹಣಮಂತ ಶ್ರೀಚಂದ ಮತ್ತು ದಿಲೀಪ ಕೂಡಿಕೊಂಡು ಮೋಟಾರ ಸೈಕಲ್ ಮೇಲೆ ಎಲ್.ಐ.ಸಿ. ಆಫೀಸಿ ಮುಂದಿನ ರೋಡಿನ  ಮೇಲೆ ಹೋಗುತ್ತಿರುವಾಗ ಸಂಗಮ ಸತೀಷ ಮತ್ತು ಆತನ ಸಂಗಡಿಗರಾದ ಸ್ಮಾಟನಾಗ 3. ಸಚೀನ ಮೇಹತಾರ 4.  ಸಂದೀಪ ಹಾಗೂ ಇತರೆ 12 ಜನರು ಕೂಡಿಕೊಂಡು ನಮ್ಮ ಮೋಟಾರ ಸೈಕಲನ್ನು ತಡೆದು ಸತ್ಯಾ ಇತನು ನಮ್ಮೇಲ್ಲರಿಗೆ ಮನೆಯಲ್ಲಿ ಕರೆದುಕೊಂಡು ಹೋಗಿ ನಮ್ಮಗೆ ಹೊಲೆಯ, ಮಾದೀಗ ಸೂಳೆ ಮಕ್ಕಳೆ ನಿಮ್ಮದು ಬಹಳ ಆಗಿದೆ ಮೋಟಾರ ಸೈಕಲ್ ಮೇಲೆ ಭೀಮ ಚಕ್ರ ಹಾಕಿಕೊಂಡು ತಿರುಗಾಡಿದರೆ ಇದೆ ಗತಿ ಮಾಡುತ್ತೇನೆ ಅಂತ ಬೈದು ಬಟ್ಟಿ ಬಿಚ್ಚಿಸಿ ಕೈಗಳಿಂದ, ಕಟ್ಟಿಗೆ ಮತ್ತು ಫೈಬರ ಪೈಪಿನಿಂದ ಹೊಡೆಯುತ್ತಿದ್ದಾಗ ಮೃತ ಹಣಮಂತ ಇತನು ಬೇವುಸಾಗಿ ಬಿದ್ದದ್ದರಿಂದ ಹಣಮಂತ ಸತ್ತಿದ್ದಾನೆ ಇತನಿಗೆ ದವಾಖಾನೆಗೆ ಕರೆದುಕೊಂಡು ಹೋಗಿರಿ ಅಂತ ಹೊರಗೆ ಹಾಕಿದಾಗ ಅವರಲ್ಲಿ ಒಬ್ಬನು ಒಂದು ಅಟೋ ತಗೆದುಕೊಂಡು ಬಂದನು.  ಆಗ ನಾನು ಮತ್ತು ದೀಲಿಪ ಮೃತ ಹಣಮಂತನಿಗೆ ಅಟೋದಲ್ಲಿ ಹಾಕಿಕೊಂಡು ಕಾಮರಡ್ಡಿ ದವಾಖಾನಗೆ ಉಪಚಾರ ಕುರಿತು ಕರೆದುಕೊಂಡು ಹೋದಾಗ ಅವರು ಬಸವೇಶ್ವರ ಆಸ್ಪತ್ರೆಗೆ ಕರೆದುಕೊಂಡು ಹೋಗಲು ತಿಳಿಸಿದ ಮೇರೆಗೆ ಬಸವೇಶ್ವರ ಆಸ್ಪತ್ರೆಗೆ ಕರೆದುಕೊಂಡು ಹೋದಾಗ ಅಲ್ಲಿಯ ವೈದರು ಪರೀಕ್ಷಿಸಿ ಹಣಮಂತ ಇತನು ಮೃತಪಟ್ಟಿರುತ್ತಾನೆ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಲು ತಿಳಿಸಿದ ಮೇರೆಗೆ ಸದರಕಾರಿ ಆಸ್ಪತ್ರೆಗೆ ಬಂದೇವು.  ವಿನಾಕಾರಣ ನಮಗೆ ಜಾತಿ ನಿಂದನೆ ಮಾಡಿ ಕೈಗಳಿಂದ, ಕಟ್ಟಿಗೆಯಿಂದ ಮತ್ತು ಫೈಬರ ಪೈಪಿನಿಂದ ಹೊಡೆಬಡೆ ಮಾಡಿ ಗುಪ್ತಗಾಯ, ರಕ್ತಗಾಯ ಮತ್ತು ಕೊಲೆ ಮಾಡಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಚೌಕ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪಘಾತ ಪ್ರಕರಣಗಳು :
ಮಾಹಾಗಾಂವ ಠಾಣೆ : ಶ್ರೀಮತಿ ರೇಣುಕಾ ಗಂಡ ಸುಧಾಕರ ನಾಮನೂರ ಸಾ: ಮುರಡಿ ತಾ: ಆಳಂದ ರವರ ಗಂಡನಾದ ಸುಧಾಕರ ಇವರು ದಿನಾಂಕ 27-02-2014 ರಂದು  ರಾತ್ರಿ 08-30 ಗಂಟೆ ಸುಮಾರಿಗೆ ಮೃತ ಸುಧಾಕರ ಇತನು ಸಿಡಿ ಡೌನ ಹಿರೋ ಹೊಂಡಾ ನಂಬರ ಕೆಎ 32 ಎಲ್ 9060  ನೇದ್ದರ ಮೇಲೆ ಒಬ್ಬನೇ ಕುಳಿತುಕೊಂಡು ನಡೆಸುತ್ತಾ ನಾವದಗಿ ಅಥವಾ ಕಮಲಾಪೂರದಿಂದ ವಾಪಸ್ಸು ಊರಿಗೆ ಸಿದ್ದ ಭಾರತಿ ಶಾಲೆ ಹತ್ತಿರದಿಂದ ಬರುತ್ತಿದ್ದಾಗ, ಯಾವುದೋ ಒಬ್ಬ ವಾಹನ ಚಾಲಕನು  8-30 ಪಿ.ಎಂ.ಕ್ಕೆ ಹಿಂದಿನಿಂದ ಅಥವಾ ಮುಂದಿನಿಂದ  ಅತಿವೇಗ ಮತ್ತು ಅಲಕ್ಷತನದಿಂದ  ಚಲಾಯಿಸಿಕೊಂಡು  ತನ್ನ ಗಂಡನಿಗೆ ಡಿಕ್ಕಿ ಹೊಡೆದು ಅಪಘಾತಪಡಿಸಿ ಓಡಿ ಹೋಗಿರುತ್ತಾನೆ. ಇದರಿಂದಾಗಿ ಸುಧಾಕರನಿಗೆ  ಹಣೆಗೆ, ಎಡಗಣ್ಣಿನ ಮೇಲೆ,ಎಡ ಮೇಲಕಿನ ಹತ್ತಿರ, ಎಡ ತುಟಿಗೆ ಭಾರಿ ರಕ್ತಗಾಯಗಳಾಗಿ ಹರಿದಂತೆ ಆಗಿದ್ದು, ಎದೆ, ಹೊಟ್ಟೆಗೆ, ಭಾರಿ ತರಚಿದ ರಕ್ತಗಾಯಗಳಾಗಿದ್ದು, ಟೊಂಕಕ್ಕೆ ಹಿಂದೆ  ಬಲಗಾಲಿಗೆ ಪಾದದ ಮೇಲೆ  ಹಾಗೂ ಎಡಗಾಲ ಪಾದದ ಮೇಲೆ  ಭಾರಿ ರಕ್ತಗಾಯಗಳಾಗಿ, ಅಪಘಾತದಲ್ಲಿ ಆದ ಗಾಯದಿಂದ ನನ್ನ ಗಂಡ ಸ್ಥಳದಲ್ಲಿಯೇ ಮೃತಪಟ್ಟಿರುತ್ತಾನೆ. ಅಪಘಾತ ಪಡಿಸಿ ಓಡಿ ಹೋಗಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಾಹಾಗಾಂವ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹೆಚ್ಚುವರಿ ಸಂಚಾರಿ ಠಾಣೆ : ಶ್ರೀ ಅಪ್ಪಣ್ಣ ತಂದೆ ಶಂಕರ ರಾವ ಪೊದ್ದಾರ ಸಾ : ಗಾಜಿಪೂರ ಗುಲಬಗಾ್ ರವರು ದಿನಾಂಕ: 28-02-2014 ರಂದು  ರಾತ್ರಿ 8-30 ಗಂಟೆಗೆ ಕೆಬಿಎನ್ ಕಾಂಪ್ಲೆಕ್ಸನಲ್ಲಿರುವ ವಸಂತ ಮೆಡಿಕಲ ಸ್ಟೋರಿಗೆ ಹೋಗಿ ಗುಳಿಗೆಗಳನ್ನು ತೆಗೆದುಕೊಂಡು ವಾಪಸ್ಸ ಪ್ಲೋರ ಹೋಟಲ ಕಡೆಗೆ ನಡೆದುಕೊಂಡು ರಸ್ತೆ ದಾಟುತ್ತಿರುವಾಗ ಜಗತ ಸರ್ಕಲ ಕಡೆಯಿಂದ ಮೋಟಾರ ಸೈಕಲ ನಂಬರ ಕೆಎ-33 ಎಲ್-0415 ನೇದ್ದರ ಸವಾರ ರೋಹಿತ ಇತನು ತನ್ನ ಮೋಟಾರ ಸೈಕಲನ್ನು ಅತಿವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ನಡೆದುಕೊಂಡು ಹೋಗುತ್ತಿದ್ದ ಫಿರ್ಯಾದಿಗೆ ಡಿಕ್ಕಿ ಪಡಿಸಿ ಅಪಘಾತ ಮಾಡಿ ಭಾರಿಗಾಯಗೊಳಿಸಿ  ತಾನು ಸಹ ಗಾಯಹೊಂದಿದ್ದು ಇರುತ್ತದೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಹೆಚ್ಚುವರಿ ಸಂಚಾರಿ ಠಾಣೆಯಲ್ಲಿ ಪ್ರಕರಣ  ದಾಖಲಾಗಿದೆ.
ರಟಕಲ ಠಾಣೆ : ಶ್ರೀ ಜಗನ್ನಾಥ ತಂದೆ ಅಂಬಣ್ಣ ಸಾ||ಪಂಗರಗಾ ಇವರು ದಿನಾಂಕ 27.02.2014 ರಂದು ನಾನು ಮತ್ತು ನನ್ನ ತಮ್ಮ ನಾಗು ಶ್ರೀಧರ ಕೂಡಿ ಚೆಂಗಟಾಕ್ಕೆ ಹೋಗಿ ಮರಳಿ ಪಂಗರಗಾಕ್ಕೆ ಹೋಗುವಾಗ ತಾನು ಚಲಾಯಿಸುತ್ತಿರುವ ದ್ವೀಚಕ್ರ ವಾಹನ ಅತಿವೇಗದಿಂದ ಚಲಾಯಿಸುವಾಗ ಎದುರಿನಿಂದ ಬರುತ್ತಿರುವ ವಾಹನವು ಅತಿವೇಗದಿಂದ ಬರುತ್ತಿರುವುದನ್ನು ಗಮನಿಸಿ ನಾನು ಹೇಳಿದರು ಕೇಳದೆ ಹಾಗೆ ಓಡಿಸಿದಾಗ ಮುಖಾಮುಖಿ ಡಿಕ್ಕಿಯಾಗಿದ್ದರಿಂದ ನಮಗೂ ಮತ್ತು ಎದುರಿನಿಂದ ಬಂದ ದ್ವೀಚಕ್ರವಾಹನದವರಿಗೂ ಗಾಯವಾಗಿದ್ದು ಸದರಿ ಅಪಘಾತಕ್ಕೆ  ಎರಡುವಾಹನದ ಚಾಲಕರ ಅತಿವೇಗ ಮತ್ತು ನಿಷ್ಕಾಳಜಿತನವೆ ಕಾರಣವಾಗಿರುತ್ತದೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ರಟಕಲ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಲ್ಲೆ ಪ್ರಕರಣಗಳು :
ಆಳಂದ ಠಾಣೆ : ಶ್ರೀ ಶಿವಾನಂದ ತಂದೆ ರೇವಪ್ಪಾ ಕಟ್ಟಿಕೇರೆ ಸಾ: ರುದ್ರವಾಗಿ ಗ್ರಾಮ ರವರು ದಿನಾಂಕ 22-02-2014 ರಂದು ಸಾಯಾಂಕಾಲ 5 ಗಂಟೆ ಸುಮಾರಿಗೆ ನಾನು ಮತ್ತು ನನ್ನ ಹೆಂಡತಿ ಮಕ್ಕಳು ನಮ್ಮ ಹೋಲ ಸರ್ವೆ ನಂ 10  ರಲ್ಲಿ ನಮ್ಮ ಹೋಲದಲ್ಲಿ  ಇದ್ದಾಗ ನಮ್ಮ ಅಣ್ಣಂದಿರಾದ ಬಸವರಾಜ ತಂದೆ ರೇವಪ್ಪಾ ಕಟ್ಟಿಕೇರಿ , ಶಿವಶರಣಪ್ಪಾ ತಂದೆ ರೇವಪ್ಪಾ ಕಟ್ಟಿಕೇರಿ, ಬಾಬುರಾವ ತಂದೆ ರೇವಪ್ಪಾ ಕಟ್ಟಿಕೇರಿ , ಮಹೇಶ ತಂದೆ ಬಸವರಾಜ  ಕಟ್ಟಿಕೇರಿ ಎಲ್ಲರೂ ಕೂಡಿ ಬಂದವರೇ ಬಸವರಾಜನು ತನ್ನಹೊಲ ಬೇರೆಯವರಿಗೆ ಹಚ್ಚಬೇಕು ಎಂದು ಸರ್ವೆ ಮಾಡುತ್ತಿದ್ದಾಗ ನಾನು ನನಗೆ ಕೊಡಬೇಕಾಗಿದ್ದ ಜಮೀನು ಅಥವಾ ಹಣ ಕೊಡು ಅಂತಾ ಕೇಳಿದಕ್ಕೆ ಅವಾಚ್ಯ ಶಬ್ದಗಳಿಂದ ಬೈದು ಕಟ್ಟಿಗೆಯಿಂದ ನನ್ನ ಎಡಗೈ ಮುಂಗೈ ಮೇಲೆ ಹೊಡೆದು ಗುಪ್ತಗಾಯ ಮಾಡಿದ್ದು ,ಶಿವಶರಣ ಕಟ್ಟಿಗೇರಿ ಇತನು ನನಗೆ ಒತ್ತಿ ಹಿಡಿದಾಗ ಬಾಬುರಾವ ಇತನು ಹೊಲವನ್ನು ಅಳಿಸುತ್ತೇನೆ ನೀನು ಏನು ಕೇಳುತ್ತಿ ಅಂತಾ ಅಂದವನೇ ಕಟ್ಟಿಯಿಂದ ಮಳಕಾಲಿಗೆ ಹೊಡೆದು ರಕ್ತಗಾಯ ಮಾಡಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಆಳಂದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮುಧೋಳ ಠಾಣೆ : ಶ್ರೀಮತಿ ಶಾರುಬಾಯಿ ಗಂಡ ಕಾನು ನಾಯಕ ಚವಾಣ ಸಾ:ಕೊಲಕುಂದಾ ದೊಡ್ಡ ತಾಂಡಾ ಇವರು ದಿನಾಂಕ  27.02.2014 ರಂದು ಸಾಯಂಕಾಲ 1630 ಗಂಟೆ ಸುಮಾರಿಗೆ ನಮ್ಮ ಮನೆಯ ಮುಂದಿನ ರಸ್ತೆಯಿಂದ ನಮ್ಮ ಹೊಲದ ಕಡೆಯಿಂದ ಬರುತ್ತಿದ್ದಾಗ ನನಗೆ ನಮ್ಮ ಅಣ್ಣತಮಕಿಯವರಾದ 1. ರೂಮ್ಯಾ ನಾಯಕ ತಂದೆ ಹಾಜ್ಯಾ ನಾಯಕ ಚವಾಣ ಇವನು ಮತ್ತು ಇವರ ಮನೆಯವರು ತಡೆದು ನಿಲ್ಲಿಸಿ, ಅವಾಚ್ಯ ಶಬ್ದಗಳಿಂದ ಬೈದು  ನಮ್ಮ ಹೊಲದಲ್ಲಿ, ನಿಮ್ಮ ದನಗಳು ಬಿಟ್ಟು, ತಿರುಗಿ ನಮಗೆ ಬೈಯುತ್ತಿ, ಅಂತಾ ಕೈಯಿಂದ ಎಲ್ಲರೂ ಕೂಡಿ, ಬೆನ್ನ ಮೇಲೆ ಹೊಡೆದು, ಗುಪ್ತಗಾಯ ಖಲಾಸ ಮಾಡುತ್ತೇವೆ ಅಂತಾ ಜೀವದ ಬೇದರಿಕೆ ಹಾಕಿ ಹೊಗಿರುತ್ತಾರೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮುಧೋಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.